ಕೋವಿಡ್ ಲಸಿಕೆ ಪ್ರಮಾಣಪತ್ರದಿಂದ ಮೋದಿ ಫೋಟೋ ತೆಗೆಯುವಂತೆ ಚುನಾವಣಾ ಆಯೋಗ ಸೂಚನೆ

ಚುನಾವಣೆ ನಡೆಯಲಿರುವ ಐದು ರಾಜ್ಯಗಳಲ್ಲಿ ನೀಡಲಾಗುವ ಕೋವಿಡ್ ವ್ಯಾಕ್ಸಿನ್ ಸರ್ಟಿಫಿಕೇಟ್​ನಲ್ಲಿ ನಮೂದಾಗಿರುವ ಪ್ರಧಾನಿ ಮೋದಿ ಅವರ ಫೋಟೋವನ್ನು ತೆಗೆಯುವಂತೆ ಆರೋಗ್ಯ ಇಲಾಖೆಗೆ ಚುನಾವಣಾ ಆಯೋಗ ಮನವಿ ಮಾಡಿದೆ.

ನರೇಂದ್ರ ಮೋದಿ

ನರೇಂದ್ರ ಮೋದಿ

 • News18
 • Last Updated :
 • Share this:
  ನವದೆಹಲಿ(ಮಾ. 06): ಕೋವಿಡ್ ಲಸಿಕೆ ಪಡೆದುಕೊಳ್ಳುವಾಗ ನೀಡುವ ಸರ್ಟಿಫಿಕೇಟ್​ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಇರುವುದಕ್ಕೆ ಚುನಾವಣಾ ಆಯೋಗ ಆಕ್ಷೇಪಿಸಿದೆ. ಮುಂದೆ ಐದು ರಾಜ್ಯಗಳಲ್ಲಿ ಚುನಾವಣೆಗಳಿರುವ ಹಿನ್ನೆಲೆಯಲ್ಲಿ ಈ ರೀತಿ ಮೋದಿ ಫೋಟೋ ಬಳಕೆಯಿಂದ ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆಯಾಗುತ್ತದೆ ಎಂಬುದು ಆಯೋಗದ ವಾದ. ಈ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆಯ ಪ್ರಮಾಣಪತ್ರದಲ್ಲಿರುವ ಪ್ರಧಾನಿಗಳ ಚಿತ್ರವನ್ನು ತೆಗೆದುಹಾಕುವಂತೆ ಆರೋಗ್ಯ ಇಲಾಖೆಗೆ ಚುನಾವಣಾ ಆಯೋಗ ಮನವಿ ಮಾಡಿದೆ.

  ಏಪ್ರಿಲ್-ಮೇ ತಿಂಗಳಲ್ಲಿ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಮ್, ಕೇರಳ ಮತ್ತು ಪುದುಚೇರಿ ರಾಜ್ಯಗಳಲ್ಲಿ ಮಾತ್ರ ಇದು ಅನ್ವಯ ಆಗುತ್ತದೆ. ಬೇರೆ ಕಡೆ ಕೋವಿಡ್ ಲಸಿಕೆ ಪ್ರಮಾಣ ಪತ್ರದಲ್ಲಿ ಮೋದಿ ಫೋಟೋ ಮಾಮೂಲಿಯಂತೆ ನಮೂದಾಗಿರಲಿದೆ.

  ಇದನ್ನೂ ಓದಿ: Tamil Nadu Elections - ತಮಿಳುನಾಡು ಚುನಾವಣೆ: ಬಿಜೆಪಿ ಪಾಲಿಗೆ 20 ಸೀಟು; ಕನ್ಯಾಕುಮಾರಿಗೂ ಕಮಲ

  ಕೊರೋನಾ ವೈರಸ್ ಸರ್ಟಿಫೀಕೇಟ್​ನಲ್ಲಿ ಪ್ರಧಾನಿ ಮೋದಿ ಫೋಟೋ ಹಾಕಿರುವುದು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಪಕ್ಷ ಆಕ್ಷೇಪಿಸಿ ಚುನಾವಣಾ ಆಯೋಗಕ್ಕೆ ದೂರು ಕೊಟ್ಟಿತ್ತು. ವೈದ್ಯರು, ದಾದಿಯರು ಮೊದಲಾದ ಫ್ರಂಟ್​ಲೈನ್ ಕಾರ್ಯಕರ್ತರಿಗೆ ಸಿಗಬೇಕಾದ ಶ್ರೇಯಸ್ಸನ್ನು ಪ್ರಧಾನಿ ಕಿತ್ತುಕೊಳ್ಳುತ್ತಿದ್ದಾರೆ ಎಂದೂ ಟಿಎಂಸಿ ಆಕ್ರೋಶ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ಆರೋಗ್ಯ ಇಲಾಖೆಗೆ ನೋಟೀಸ್ ನೀಡಿ ಉತ್ತರ ಅಪೇಕ್ಷಿಸಿದೆ.
  Published by:Vijayasarthy SN
  First published: