Pralhad Joshi: ಅಮಾನತುಗೊಂಡ ಸಂಸದರು ಗಾಂಧಿ ಪ್ರತಿಮೆ ಎದುರು ಚಿಕನ್ ತಿನ್ನುತ್ತಿದ್ದಾರೆ; ಪ್ರಹ್ಲಾದ್ ಜೋಶಿ

ಕಾಂಗ್ರೆಸ್ ನಾಯಕರು ಧರಣಿ ಹೆಸರಿನಲ್ಲಿ ಗಾಂಧೀಜಿ ಪ್ರತಿಮೆ ಕೆಳಗೆ ಕೂತು ಕೋಳಿ ಮಾಂಸ ತಿನ್ನುತ್ತಿದ್ದಾರೆ ಎಂದು ಪ್ರಹ್ಲಾದ್ ಜೋಶಿ ಆರೋಪಿಸಿದ್ದಾರೆ.

ಪ್ರತಿಭಟನಾ ನಿರತ ಸಂಸದರು, ಪ್ರಹ್ಲಾದ್​ ಜೋಶಿ

ಪ್ರತಿಭಟನಾ ನಿರತ ಸಂಸದರು, ಪ್ರಹ್ಲಾದ್​ ಜೋಶಿ

  • Share this:
ನವದೆಹಲಿ: ಸದನದಿಂದ ಅಮಾನತುಗೊಂಡಿರುವ ಪ್ರತಿಪಕ್ಷಗಳ ಸಂಸದರು (Suspended MPs) ಗಾಂಧಿ ಪ್ರತಿಮೆ (Gandhis statue) ಎದುರು ರಾತ್ರಿ-ಹಗಲು ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಇವರ ವಿರುದ್ಧ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ತೀವ್ರ (Pralhad Joshi) ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ನಾಯಕರು ಧರಣಿ ಹೆಸರಿನಲ್ಲಿ ಗಾಂಧೀಜಿ ಪ್ರತಿಮೆ ಕೆಳಗೆ ಕೂತು ಕೋಳಿ ಮಾಂಸ ತಿನ್ನುತ್ತಿದ್ದಾರೆ (Eating chicken) ಎಂಬ ಸುದ್ದಿ ಇದೆ ಎಂದು ಪ್ರಹ್ಲಾದ್ ಜೋಶಿ ಹೇಳಿದರು. ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡದೆ, ದೇಶದ ಮಹಾನ್ ವ್ಯಕ್ತಿಗಳನ್ನು ಅವಮಾನಿಸುವುದು ಕಾಂಗ್ರೆಸ್‌ನ ಅಭ್ಯಾಸವಾಗಿದೆ ಎಂದು ಆರೋಪಿಸಿದರು. ಮಾಹಿತಿಯ ಪ್ರಕಾರ, ಧರಣಿ ಮುಗಿಸಿದ ನಂತರ, ಅಮಾನತುಗೊಂಡ ಸಂಸದರು ವಿಜಯ್ ಚೌಕ್ ಕಡೆಗೆ ಮೆರವಣಿಗೆಯಲ್ಲಿ ಬಂದರು. ಅಮಾನತುಗೊಳಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳ ಸಂಸದರು 50 ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.

ಅಮಾನತು ವಿರುದ್ಧ ಪ್ರತಿಭಟನೆ

ಪ್ರತಿಪಕ್ಷಗಳ ಸಂಸದರ ಅಮಾನತು ವಿರೋಧಿಸಿ ಬುಧವಾರದಿಂದ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ಆರಂಭಿಸಿದ್ರು. ಆದರೆ ಮಳೆಯಿಂದಾಗಿ ಪ್ರತಿಭಟನಾ ಸ್ಥಳವನ್ನು ಸ್ಥಳಾಂತರಿಸಬೇಕಾಯಿತು. ಅಮಾನತುಗೊಂಡ ವಿರೋಧ ಪಕ್ಷದ ಸಂಸದರು ಸಂಸತ್ತಿನ ಪ್ರವೇಶ ದ್ವಾರದ ಬಳಿ ಧರಣಿ ನಡೆಸುತ್ತಿದ್ದಾರೆ. ಸೊಳ್ಳೆಗಳ ಕಾಟದ ಮಧ್ಯೆಯೇ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಸಿಬಿಪಿ) ಯ ಸಂತೋಷ್ ಕುಮಾರ್ ಮತ್ತು ಆಮ್ ಆದ್ಮಿ ಪಕ್ಷದ (ಎಎಪಿ) ಸಂಜಯ್ ಸಿಂಗ್ ಸೇರಿದಂತೆ ಐದು ಅಮಾನತುಗೊಂಡ ಸಂಸತ್ತಿನ ಸದಸ್ಯರು ಸಂಸತ್ತಿನ ಸಂಕೀರ್ಣದಲ್ಲಿರುವ ಗಾಂಧಿ ಪ್ರತಿಮೆಯ ಬಳಿ ರಾತ್ರಿ ಕಳೆದರು. ಟಿಎಂಸಿಯ ಡೋಲಾ ಸೇನ್ ಮತ್ತು ಶಂತನು ಸೇನಾ ಮಧ್ಯರಾತ್ರಿಯವರೆಗೂ ಅಲ್ಲಿದ್ದರು.

ಇದನ್ನೂ ಓದಿ: Smriti Irani ಮಗಳ ವಿರುದ್ಧ ಅಕ್ರಮ ಬಾರ್ ಆರೋಪ ಮಾಡಿದ್ದ ಕಾಂಗ್ರೆಸ್ ನಾಯಕರಿಗೆ ಸಮನ್ಸ್ ಜಾರಿ

ಗಾಂಧಿ ಪ್ರತಿಮೆ ಬಳಿಯೇ ಚಿಕನ್​ ಸೇವನೆ ಬೇಕಿತ್ತಾ?

ಇದಕ್ಕೂ ಮುನ್ನ ಬಿಜೆಪಿ ಮುಖಂಡ ಶಹಜಾದ್ ಪೂನವಾಲಾ ಕೋಳಿ ತಿಂದಿದ್ದಕ್ಕೆ ವಾಗ್ದಾಳಿ ನಡೆಸಿದ್ದರು. ವಾಸ್ತವವಾಗಿ, ಮಾಧ್ಯಮ ವರದಿಗಳ ಪ್ರಕಾರ, ಸಂಸತ್ತಿನ ಗಾಂಧಿ ಪ್ರತಿಮೆಯ ಮುಂದೆ ಪ್ರತಿಭಟನೆ ನಡೆಸುತ್ತಿದ್ದ ಕೆಲವು ಅಮಾನತುಗೊಂಡ ಸಂಸದರು ತಂದೂರಿ ಚಿಕನ್ ಸೇವಿಸಿದ್ದಾರೆ. ಈ ಬಗ್ಗೆ ಬಿಜೆಪಿ ಮುಖಂಡ ಶಹಜಾದ್ ಪೂನವಾಲ ಮಾತನಾಡಿ, ಪ್ರಾಣಿ ಹತ್ಯೆ ಬಗ್ಗೆ ಗಾಂಧೀಜಿ ನಿಲುವು ಹೊಂದಿದ್ದರು ಎಂಬುದು ಎಲ್ಲರಿಗೂ ಗೊತ್ತು. ಇದು ಪ್ರತಿಭಟನೆಯೇ ಅಥವಾ ಪ್ರಹಸನವೇ ಎಂದು ಹಲವರು ಕೇಳುತ್ತಿದ್ದಾರೆ. ಸಂಸದರು ಅಲ್ಲಿಗೆ ವಿಹಾರಕ್ಕೆ ಹೋಗಿದ್ದಾರಾ ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಟಿಎಂಸಿ ನಾಯಕಿ ಸುಶ್ಮಿತಾ ದೇವ್ ಅವರು ಶಹಜಾದ್ ಪೂನಾವಾಲಾ ವಿರುದ್ಧ ವಾಗ್ದಾಳಿ ನಡೆಸಿದ್ದು, ಪ್ರತಿಪಕ್ಷಗಳ ಏಕತೆಗೆ ಬಿಜೆಪಿ ಹೆದರುತ್ತಿದೆ ಎಂದು ಹೇಳಿದ್ದಾರೆ.

ಸಂಸದರು ಅಮಾನತುಗೊಂಡಿರುವುದು ಏಕೆ? 

ಅಧಿವೇಶನಕ್ಕೆ ಅಡ್ಡಿ ಪಡಿಸಿದ ಆರೋಪದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆ ಸಂಸದರನ್ನು 1 ವಾರಗಳ ಕಾಲ ಸದನದಿಂದ ಅಮಾನತು ಮಾಡಲಾಗಿದೆ. ಸದನದ ಒಳ ಪ್ರವೇಶಿಸಿ ಘೋಷಣೆ ಕೂಗಿದ ದುರ್ವರ್ತನೆಗಾಗಿ ಒಟ್ಟು 19 ಪ್ರತಿಪಕ್ಷ ರಾಜ್ಯಸಭಾ ಸಂಸದರನ್ನು ವಾರದ ಉಳಿದ ಭಾಗಕ್ಕೆ ಅಮಾನತುಗೊಳಿಸಲಾಗಿದೆ. ಟಿಎಂಸಿ ಸಂಸದರಾದ ಸುಶ್ಮಿತಾ ದೇವ್, ಡಾ ಸಂತಾನು ಸೇನ್, ಡೋಲಾ ಸೇನ್ ಸೇರಿದಂತೆ ಇತರ ರಾಜ್ಯಸಭಾ ಸಂಸದರು ಅಮಾನತುಗೊಂಡಿದ್ದಾರೆ. ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಟಿಎಂಸಿ ಸಂಸದ ಡೆರೆಕ್ ಒಬ್ರೇನ್, ಮೋದಿ ಮತ್ತು ಶಾ ಪ್ರಜಾಪ್ರಭುತ್ವವನ್ನು ಅಮಾನತುಗೊಳಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ರಾಜ್ಯಸಭೆಯಲ್ಲಿ ಪ್ರತಿಪಕ್ಷದ ಸಂಸದರು ಕಳೆದ ಹಲವು ದಿನಗಳಿಂದ ಬೆಲೆ ಏರಿಕೆ ಮತ್ತು ಜಿಎಸ್‌ಟಿ ಹೆಚ್ಚಳದಂತಹ ವಿಷಯಗಳ ಕುರಿತು ತುರ್ತು ಚರ್ಚೆಗೆ ಒತ್ತಾಯಿಸಿದ್ದರು. ಇದು ಸದನದಲ್ಲಿ ತೀವ್ರ ಗದ್ದಲಕ್ಕೆ ಕಾರಣವಾಯಿತು.
Published by:Kavya V
First published: