ಅಫ್ಘಾನಿಸ್ತಾನದಲ್ಲಿ ಭೂ ಕಂಪನ, ದೆಹಲಿಯಲ್ಲಿಯೂ ಕಂಪಿಸಿದ ಭೂಮಿ

ದೆಹಲಿಯಲ್ಲಿ ಒಂದು ನಿಮಿಷಗಳ ಕಾಲ ಭೂಮಿ ಕಂಪಿಸಿದೆ ಎನ್ನಲಾಗಿದೆ. ಕೆಲವು ಕಡೆ ಕಟ್ಟಡದ ಟ್ಯೂಬ್​ಲೈಟ್​, ಫ್ಯಾನ್​ಗಳು ಕಂಪಿಸಿರುವ ದೃಶ್ಯಗಳನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ.

Seema.R | news18-kannada
Updated:December 20, 2019, 5:54 PM IST
ಅಫ್ಘಾನಿಸ್ತಾನದಲ್ಲಿ ಭೂ ಕಂಪನ, ದೆಹಲಿಯಲ್ಲಿಯೂ ಕಂಪಿಸಿದ ಭೂಮಿ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಡಿ.20): ದೇಶದ ರಾಜಧಾನಿ ಸೇರಿದಂತೆ ಉತ್ತರ ಭಾರತದ ಹಲವೆಡೆ ಭೂಮಿ ಇಂದು ಕಂಪಿಸಿದ್ದು, ಅಫ್ಘಾನಿಸ್ತಾನದ ಹಿಂದೂಕುಶ್​ ಪ್ರದೇಶದಲ್ಲಿ 6.3ರ ತೀವ್ರತೆಯಲ್ಲಿ ಭೂ ಕಂಪನ ಉಂಟಾಗಿದೆ.

ಅಫ್ಘಾನಿಸ್ತಾನದಲ್ಲಿ ಸಂಜೆ 5.09ಕ್ಕೆ ಭೂಮಿ ಕಂಪಿಸಿದ್ದು, ಇದರ ಪರಿಣಾಮ ಉತ್ತರ ಪ್ರದೇಶದ ಅನೇಕ ಕಡೆ ಅನುಭವವಾಗಿದೆ.

ದೆಹಲಿಯಲ್ಲಿ ಒಂದು ನಿಮಿಷಗಳ ಕಾಲ ಭೂಮಿ ಕಂಪಿಸಿದೆ ಎನ್ನಲಾಗಿದೆ. ಕೆಲವು ಕಡೆ ಕಟ್ಟಡದ ಟ್ಯೂಬ್​ಲೈಟ್​, ಫ್ಯಾನ್​ಗಳು ಕಂಪಿಸಿರುವ ದೃಶ್ಯಗಳನ್ನು ಟ್ವಿಟರ್​ನಲ್ಲಿ ಹಂಚಿಕೊಳ್ಳಲಾಗಿದೆ.

ಭೂಮಿ ಕಂಪಿಸಿದ ಹಿನ್ನೆಲೆ ರಾಜಧಾನಿಯಲ್ಲಿ ಜನರು ಮನೆಯಿಂದ ಹೊರ ಬಂದಿದ್ದಾರೆ. ಯಾವುದೇ ಹಾನಿಯಾದ ಬಗ್ಗೆ ದಾಖಲಾಗಿಲ್ಲ.

ಇದನ್ನು ಓದಿ: ದೆಹಲಿಯಲ್ಲಿ ಹೆಚ್ಚಿದ ಪ್ರತಿಭಟನೆ ಕಿಚ್ಚು; ಜಾಮಿಯಾ ಮಸೀದಿ ಎದುರು ಬೃಹತ್​ ಜಾಥಾ

ದೆಹಲಿ, ಗುರುಗಾವ್​, ನೋಯ್ಡಾ, ರಾಜಸ್ಥಾನದ ರಾಜಧಾನಿ ಜೈ ಪುರನಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.
Published by: Seema R
First published: December 20, 2019, 5:53 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading