ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಮತ್ತೆ ಲಘು ಭೂಕಂಪ

ದೆಹಲಿಯಲ್ಲಿ ಇಂದು ಲಘು ಭೂಕಂಪನ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 2.2 ತೀವ್ರತೆ ದಾಖಲಾಗಿದೆ.

news18-kannada
Updated:May 15, 2020, 2:54 PM IST
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂದು ಮತ್ತೆ ಲಘು ಭೂಕಂಪ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ (ಮೇ 15): ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಇಂದು ಮತ್ತೆ ಲಘು ಭೂಕಂಪನವಾಗಿದೆ. ಏಪ್ರಿಲ್ 12ರ ಬಳಿಕ 4ನೇ ಬಾರಿಗೆ ಇಲ್ಲಿನ ಭೂಮಿ ಕಂಪಿಸಿದೆ. ಇಂದು ಬೆಳಗ್ಗೆ 11.28ರ ಸುಮಾರಿಗೆ ಲಘು ಭೂಕಂಪನವಾಗಿದೆ ಎಂದು ರಾಷ್ಟ್ರೀಯ ಭೂಕಂಪ ಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ.

ದೆಹಲಿಯಲ್ಲಿ ಇಂದು ಲಘು ಭೂಕಂಪನ ಉಂಟಾಗಿದ್ದು, ರಿಕ್ಟರ್ ಮಾಪಕದಲ್ಲಿ 2.2 ತೀವ್ರತೆ ದಾಖಲಾಗಿದೆ. ಉತ್ತರ ದೆಹಲಿಯ ಪೀತಾಂಪುರದಲ್ಲಿ ಈ ಲಘು ಭೂಕಂಪ ದಾಖಲಾಗಿದೆ. 8 ಕಿ.ಮೀ. ಆಳದವರೆಗೆ ಭೂಕಂಪ ಸಂಭವಿಸಿದೆ ಎಂದು ಎನ್​ಸಿಎಸ್​ ತಿಳಿಸಿದೆ.
ಇದೇ ತಿಂಗಳು 10ರಂದು ಕೂಡ ದೆಹಲಿಯಲ್ಲಿ ಲಘು ಭೂಕಂಪನ ಸಂಭವಿಸಿತ್ತು. ಹಾಗೇ ಏಪ್ರಿಲ್ 12, 13ರಂದು ಕೂಡ ಇಂದು ಭೂಕಂಪನ ಉಂಟಾದ ಸ್ಥಳದಲ್ಲೇ ಲಘು ಭೂಕಂಪನವಾಗಿತ್ತು.
First published: May 15, 2020, 2:54 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading