ಗುಜರಾತ್: ನರ್ಮದಾ ನದಿಯ (Narmada River) ತಟದಲ್ಲಿರುವ ಸರ್ದಾರ್ ವಲ್ಲಭಬಾಯಿ ಪಟೇಲರ (Sardar Vallabhabhai Patel) ಏಕತಾ ಪ್ರತಿಮೆ (Statue of Unity) ಬಳಿ ಭೂಮಿ ಕಂಪಿಸಿದ (Earth Quake) ಬಗ್ಗೆ ವರದಿಯಾಗಿದೆ. ಗುಜರಾತ್‌ನ (Gujarat) ನರ್ಮದಾ ಜಿಲ್ಲೆಯ (Narmada District) ಕೆವಾಡಿಯಾ ಗ್ರಾಮದ ಬಳಿ 3.1 ತೀವ್ರತೆಯ ಭೂಕಂಪನ ದಾಖಲಾಗಿದೆ. ಆದರೆ ಯಾವುದೇ ಪ್ರಾಣ ಹಾನಿ ಅಥವಾ ಆಸ್ತಿ ಹಾನಿಯ ವರದಿಯಾಗಿಲ್ಲ. ಕಂಪನದ ಕೇಂದ್ರಬಿಂದು ಕೆವಾಡಿಯಾದಿಂದ ಪೂರ್ವ-ಆಗ್ನೇಯಕ್ಕೆ 12 ಕಿಮೀ ದೂರದಲ್ಲಿದೆ ಎಂದು ಗಾಂಧಿನಗರ ಮೂಲದ ಭೂಕಂಪನ ಸಂಶೋಧನಾ ಸಂಸ್ಥೆ (ISR) ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ರಾತ್ರಿ ವೇಳೆ ಭೂಕಂಪನದ ಅನುಭವ
ಕೆವಾಡಿಯಾ ಗ್ರಾಮದ ಬಳಿ 182 ಮೀಟರ್ ಎತ್ತರದ ಏಕತಾ ಪ್ರತಿಮೆಯಿದೆ. ಸೋಮವಾರ ರಾತ್ರಿ ಕಂಪನ ದಾಖಲಾಗಿದೆ. ಪ್ರಬಲ ಭೂಕಂಪಗಳು ಮತ್ತು ಚಂಡಮಾರುತಗಳನ್ನು ತಡೆದುಕೊಳ್ಳುವ ರೀತಿಯಲ್ಲಿ ನಿರ್ಮಿಸಲಾದ ಏಕತಾ ಪ್ರತಿಮೆಗೆ ಯಾವುದೇ ಹಾನಿಯಾಗಿಲ್ಲ ಎಂದು ಸ್ಮಾರಕದ ಸಾರ್ವಜನಿಕ ಸಂಪರ್ಕ ಅಧಿಕಾರಿ ರಾಹುಲ್ ಪಟೇಲ್ ಹೇಳಿದ್ದಾರೆ.
3.1ರಷ್ಟು ತೀವ್ರತೆ ದಾಖಲು
ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಏಕತಾ ಪ್ರತಿಮೆ ಸುತ್ತಮುತ್ತ ಭೂಮಿ ಕಂಪಿಸಿದ ಅನುಭವ ಆಗಿದೆ. ಕಂಪನದ ಕೇಂದ್ರ ಬಿಂದು ಕೆವಾಡಿಯಾದಿಂದ ಪೂರ್ವ-ಆಗ್ನೇಯಕ್ಕೆ 12 ಕಿಮೀ ದೂರದಲ್ಲಿದೆ ಎಂದು ಗಾಂಧಿನಗರ ಮೂಲದ ಭೂಕಂಪನ ಸಂಶೋಧನಾ ಸಂಸ್ಥೆ ಐಎಸ್‌ಆರ್ ಹೇಳಿದೆ.
ಇದನ್ನೂ ಓದಿ: conversation: ಮುಖ 9 ಡಿಗ್ರಿ ತಿರುಗಿಸಿ ಮಾತನಾಡಿದರೆ ಕೊರೋನಾ ಹರಡುವುದಿಲ್ಲವಂತೆ! ವರದಿ ಏನು ಹೇಳಿದೆ ನೋಡಿ
ಯಾವುದೇ ಪ್ರಾಣ ಹಾನಿ ವರದಿ ಆಗಿಲ್ಲ
ಸೋಮವಾರ ರಾತ್ರಿ 10 ಗಂಟೆ 7 ನಿಮಿಷ ಸುಮಾರಿಗೆ 3.1 ತೀವ್ರತೆಯ ಕಂಪನವು ದಾಖಲಾಗಿದ್ದು, ದಕ್ಷಿಣ ಗುಜರಾತ್‌ನ ಕೆವಾಡಿಯಾದಿಂದ ಪೂರ್ವ-ಆಗ್ನೇಯಕ್ಕೆ 12 ಕಿಮೀ ದೂರದಲ್ಲಿ 12.7 ಕಿ.ಮೀ ಆಳದಲ್ಲಿ ಕಂಪನದ ಕೇಂದ್ರಬಿಂದು ದಾಖಲಾಗಿದೆ ಎಂದು ಐಎಸ್‌ಆರ್ ತಿಳಿಸಿದೆ. ಕಂಪನದಿಂದಾಗಿ ಈ ಪ್ರದೇಶದಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ವರದಿಯಾಗಿಲ್ಲ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಭೂಕಂಪನದ ಸುದ್ದಿ ತಿಳಿದು ಪ್ರವಾಸಿಗರು ಆತಂಕಕ್ಕೆ ಒಳಗಾಗಿದ್ದಾರೆ.
ಅಂಡಮಾನ್ ನಿಕೋಬಾರ್ ಬಳಿಯೂ ಭೂ ಕಂಪನದ ಅನುಭವ
ಅತ್ತ ಅಂಡೋಮಾನ್ ಮತ್ತು ನಿಕೋಬಾರ್ ದ್ವೀಪದ ಬಳಿಯೂ ಭೂ ಕಂಪನದ ಅನುಭವ ಆಗಿದೆ ಎನ್ನಲಾಗಿದೆ. ಇಂದು ಮುಂಜಾನೆ 7.15ರ ಸುಮಾರಿಗೆ ಭೂ ಕಂಪನ ಸಂಭವಿಸಿದೆ ಅಂತ ವರದಿಯಾಗಿದೆ. ರಿಕ್ಟರ್ ಮಾಪಕದಲ್ಲಿ 4.3ರಷ್ಟು ತೀವ್ರತೆ ದಾಖಲಾಗಿದೆ ಅಂತ ಭೂಕಂಪನದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.
ಯಾವುದೇ ಪ್ರಾಣಹಾನಿ ಸಂಭವಿಸಿರೋ ಬಗ್ಗೆ ವರದಿಯಾಗಿಲ್ಲ
ಭೂಕಂಪದಿಂದಾಗಿ ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎನ್ನಲಾಗಿದೆ. ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ (NCS) ದೇಶದಲ್ಲಿ ಭೂಕಂಪದ ಚಟುವಟಿಕೆಯ ಮೇಲ್ವಿಚಾರಣೆಗಾಗಿ ಭಾರತ ಸರ್ಕಾರದ ನೋಡಲ್ ಏಜೆನ್ಸಿಯಾಗಿದೆ. ಈ ಸಂಸ್ಥೆ ಈ ಬಗ್ಗೆ ಮಾಹಿತಿ ನೀಡಿದೆ.
ಭೂ ಕಂಪದ ಕೇಂದ್ರ ಬಿಂದು ಎಲ್ಲಿದೆ?
ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಉತ್ತರ-ವಾಯವ್ಯಕ್ಕೆ 276 ಕಿಮೀ ದೂರದಲ್ಲಿರುವ ದಿಗ್ಲಿಪುರ ಬಳಿ ಕಂಪನದ ಅನುಭವವಾಗಿದೆ. ಭೂಕಂಪದ ಕೇಂದ್ರಬಿಂದು 15.66 ಅಕ್ಷಾಂಶ ಮತ್ತು 92.30 ರೇಖಾಂಶದಲ್ಲಿ 39 ಕಿ.ಮೀ ಆಳದಲ್ಲಿದೆ.
ಇದನ್ನೂ ಓದಿ: MIT v/s IISc Bengaluru: ವಿಶ್ವದ ಅತ್ಯುತ್ತಮ ಶಿಕ್ಷಣ ಸಂಸ್ಥೆಗಳ ನಡುವಿನ ವ್ಯತ್ಯಾಸ ಏನು? ಇಲ್ಲಿದೆ ವಿವರ
ಭೂಕಂಪದಿಂದಾಗಿ ಇದುವರೆಗೆ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಮಾರ್ಚ್ 13 ರಂದು, ಭಾನುವಾರ ದ್ವೀಪಗಳಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಕಂಪದ ಕೇಂದ್ರಬಿಂದು ದಿಗ್ಲಿಪುರದ 25 ಕಿಮೀ ದೂರದಲ್ಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ