ಯುದ್ಧಭೀತಿಯಲ್ಲಿನ ಇರಾನ್​ನಲ್ಲಿ ಕಂಪಿಸಿದ ಭೂಮಿ

ಈ ಭೂಕಂಪನ ನಿಸರ್ಗದ ಸಹಜ ಪ್ರಕ್ರಿಯೆಯಾಗಿದೆ. ಇದರ ಹಿಂದೆ ಅಮೆರಿಕ ಕ್ಷಿಪಣಿ ದಾಳಿಯ ಪ್ರಭಾವ ಇಲ್ಲ. ಇದೇ ರೀತಿಯ ಭೂ ಕಂಪನ ಕಳೆದ ಡಿಸೆಂಬರ್​ನಲ್ಲಿ ಆಗಿತ್ತು ಎಂದು ಸ್ಟಾರ್ಟಜಿಕ್​ ಸೆಂಟಿನೆಲ್​ ಟ್ವೀಟ್​ ಮಾಡಿದೆ. 

Seema.R | news18-kannada
Updated:January 8, 2020, 1:10 PM IST
ಯುದ್ಧಭೀತಿಯಲ್ಲಿನ ಇರಾನ್​ನಲ್ಲಿ ಕಂಪಿಸಿದ ಭೂಮಿ
ಸಾಂದರ್ಭಿಕ ಚಿತ್ರ
  • Share this:
ಯುದ್ಧಭೀತಿಯಲ್ಲಿರುವ ಇರಾನ್​ನಲ್ಲಿ ಭೂಕಂಪನ ಉಂಟಾಗಿದ್ದು, ರಿಕ್ಟರ್​ ಮಾಪಕದಲ್ಲಿ ಭೂಮಿ 4.9ರಷ್ಟು ತೀವ್ರತೆಯಲ್ಲಿ ಕಂಪಿಸಿದೆ.

ಇಲ್ಲಿನ ಬುಶೆಹರ್​ ಅಣುಸ್ಥಾವರದ ಬಳಿ ಭೂಮಿ ಕಂಪಿಸಿದೆ. ಇರಾನ್​ನ ಬೋರ್ಜನ್​ ಆಗ್ನೇಯದಲ್ಲಿ 10 ಕಿಮೀ ದೂರ ಈ ಭೂ ಕಂಪನದ ಅನುಭವವಾಗಿದೆ. ಈ ಬೋರ್ಜನ್​ ಬುಶೆಹರ್​ನಿಂದ 70 ಕಿ.ಮೀ ದೂರ ಇದೆ ಎಂದು ಯುನೈಟೆಡ್​ ಸ್ಟೇಟ್​ ಜಿಯೋಲಾಜಿಕಲ್​ ಸರ್ವೆ ತಿಳಿಸಿದೆ.

ಈ ಭೂಕಂಪನ ನಿಸರ್ಗದ ಸಹಜ ಪ್ರಕ್ರಿಯೆಯಾಗಿದೆ. ಇದರ ಹಿಂದೆ ಅಮೆರಿಕ ಕ್ಷಿಪಣಿ ದಾಳಿಯ ಪ್ರಭಾವ ಇಲ್ಲ. ಇದೇ ರೀತಿಯ ಭೂ ಕಂಪನ ಕಳೆದ ಡಿಸೆಂಬರ್​ನಲ್ಲಿ ಆಗಿತ್ತು ಎಂದು ಸ್ಟಾರ್ಟಜಿಕ್​ ಸೆಂಟಿನೆಲ್​ ಟ್ವೀಟ್​ ಮಾಡಿದೆ.

ಇರಾಕ್​ನಲ್ಲಿನ ಅಮೆರಿಕ ವಾಯುನೆಲೆಗಳ ಮೇಲೆ ಇರಾನ್​ ಕ್ಷಿಪಣಿ ದಾಳಿ ಸುದ್ದಿಯ ನಡುವೆಯೇ ಇರಾನ್​ ಜನರಿಗೆ ಇಂದು ಈ ಭೂ ಕಂಪನ ಸುದ್ದಿ ಕೂಡ ಆಘಾತ ನೀಡಿದೆ.

ಇದನ್ನು ಓದಿ: ಇರಾಕ್​ನಲ್ಲಿ 25 ಸಾವಿರ ಭಾರತೀಯರು ಸದ್ಯಕ್ಕೆ ಸುರಕ್ಷಿತ; ಯುದ್ಧ ಶುರುವಾಗುವ ಆತಂಕದಲ್ಲಿ ಜನ

ನಿನ್ನೆ ಸಂಜೆ 5.30ರ ಸುಮಾರಿಗೆ (ಸ್ಥಳೀಯ ಕಾಲಮಾನ) ಇರಾನ್​ 12ಕ್ಕೂ ಹೆಚ್ಚು ಮಿಸೈಲ್​ಗಳನ್ನು ಹಾರಿಸಿದೆ. ಇರಾಕ್​ನಲ್ಲಿರುವ ಅಮೆರಿಕ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ.
Published by: Seema R
First published: January 8, 2020, 11:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading