• Home
 • »
 • News
 • »
 • national-international
 • »
 • Earthquake: ದೆಹಲಿಯಲ್ಲಿ 4.2 ತೀವ್ರತೆಯ ಭೂಕಂಪ; ಹಲವು ನಿಮಿಷಗಳ ಕಾಲ ಕಂಪಿಸಿದ ಭೂಮಿ, ಬೆಚ್ಚಿಬಿದ್ದ ಜನ

Earthquake: ದೆಹಲಿಯಲ್ಲಿ 4.2 ತೀವ್ರತೆಯ ಭೂಕಂಪ; ಹಲವು ನಿಮಿಷಗಳ ಕಾಲ ಕಂಪಿಸಿದ ಭೂಮಿ, ಬೆಚ್ಚಿಬಿದ್ದ ಜನ

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

ಪ್ರಸ್ತುತ ದೆಹಲಿಯು ಭೂಕಂಪನ ವಲಯ IV ರಲ್ಲಿದ್ದು, ಇದನ್ನು ಅತ್ಯಂತ ಅಪಾಯಕಾರಿ ವಲಯ ಎಂದು ಗುರುತಿಸಲಾಗಿದೆ. ಅಕಸ್ಮಾತ್​ ದೆಹಲಿಯಲ್ಲಿ 6 ಕ್ಕಿಂತ ಹೆಚ್ಚು ತೀವ್ರತೆಯ ಭೂಕಂಪ ಸಂಭವಿಸಿದಲ್ಲಿ, ಅಪಾರ ಪ್ರಮಾಣದ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಮತ್ತೊಮ್ಮೆ ಎಚ್ಚರಿಸಿದ್ದಾರೆ.

ಮುಂದೆ ಓದಿ ...
 • Share this:

  ದೆಹಲಿ; ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗರುವಾರ ಮಧ್ಯರಾತ್ರಿ ಸುಮಾರು 11.46ಕ್ಕೆ ಸರಿಯಾಗಿ 4.2 ತೀವ್ರತೆಯಲ್ಲಿ ಭೂಮಿಯ 7.5 ಕಿಮೀ ಆಳಕ್ಕೆ ಭೂಕಂಪ ಸಂಭವಿಸಿದ್ದು, ಹಲವು ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದೆ. ಭೂಕಂಪನಕ್ಕೆ ಜನ ಬೆಚ್ಚಿಬಿದ್ದಿದ್ದು, ಭಯದಿಂದ ಕೂಡಲೇ ಮನೆಯಿಂದ ಹೊರಗೆ ಓಡಿಬಂದಿದ್ದಾರೆ. ಭೂಕಂಪದ ಕೇಂದ್ರಬಿಂದು ಹರಿಯಾಣದ ಗುರಗಾಂವ್‌ನಿಂದ ನೈರುತ್ಯಕ್ಕೆ 48 ಕಿ.ಮೀ ದೂರದಲ್ಲಿ ದಾಖಲಾಗಿದೆ ಎಂದು ಭಾರತದ ಭೂಕಂಪ ಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ. ಅದೃಷ್ಟವಶಾತ್​ ಈ ಭೂಕಂಪದಿಂದಾಗಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿಪಾಸ್ತಿ ನಷ್ಟ ಉಂಟಾಗಿಲ್ಲ ಎಂದು ವರದಿಯಾಗಿದೆ.

  ನಿನ್ನೆ ರಾತ್ರಿ ಭೂಕಂಪ ಸಂಭವಿಸುತ್ತಿದ್ದಂತೆ ಜನ ಸಾಮಾಜಿಕ ಜಾಲತಾಣದಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಪರಿಣಾಮ ತಕ್ಷಣವೇ #Earthquake ಹ್ಯಾಷ್​ಟ್ಯಾಗ್​ ಟ್ರೆಂಡಿಂಗ್ ಆಗಿದೆ. ದೋಷಪೂರಿತ ರೇಖೆಯ ಸಮೀಪದಲ್ಲಿರುವ ದೆಹಲಿಯು ದೊಡ್ಡ ಭೂಕಂಪಗಳಿಗೆ ತುತ್ತಾಗುತ್ತದೆ ಎಂದು ಭೂವಿಜ್ಞಾನಿಗಳು ಈ ಹಿಂದೆಯೇ ಎಚ್ಚರಿಕೆ ನೀಡಿದ್ದರು. ಏಪ್ರಿಲ್ 12 ರಿಂದ ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಈವರೆಗೆ ಸುಮಾರು 20 ಭೂಕಂಪಗಳನ್ನು ದಾಖಲಾಗಿವೆ.

  ಪ್ರಸ್ತುತ ದೆಹಲಿಯು ಭೂಕಂಪನ ವಲಯ IV ರಲ್ಲಿದ್ದು, ಇದನ್ನು ಅತ್ಯಂತ ಅಪಾಯಕಾರಿ ವಲಯ ಎಂದು ಗುರುತಿಸಲಾಗಿದೆ. ಅಕಸ್ಮಾತ್​ ದೆಹಲಿಯಲ್ಲಿ 6 ಕ್ಕಿಂತ ಹೆಚ್ಚು ತೀವ್ರತೆಯ ಭೂಕಂಪ ಸಂಭವಿಸಿದಲ್ಲಿ, ಅಪಾರ ಪ್ರಮಾಣದ ಪ್ರಾಣಹಾನಿ ಮತ್ತು ಆಸ್ತಿಪಾಸ್ತಿ ನಷ್ಟ ಉಂಟಾಗುವ ಸಾಧ್ಯತೆ ಇದೆ ಎಂದು ತಜ್ಞರು ಮತ್ತೊಮ್ಮೆ ಎಚ್ಚರಿಸಿದ್ದಾರೆ.

  Published by:MAshok Kumar
  First published: