ಭೂಕಂಪನವಾಗಿ ಭೂಮಿ ಕಂಪಿಸಿದರೂ ಜಪ್ಪಯ್ಯ ಎನ್ನದ ರಾಹುಲ್ ಗಾಂಧಿ…! ವಿಡಿಯೋ ನೋಡಿ

ರಾಹುಲ್ ಗಾಂಧಿ ಉತ್ತರಿಸುತ್ತಿದ್ದ ವೇಳೆ ಭೂಕಂಪನದ ಅನುಭವವಾಗಿದೆ. ಒಂದು ಸೆಕೆಂಡ್ ಮೌನವಾದ ರಾಹುಲ್ ಗಾಂಧಿ ಭೂಕಂಪನ ಸಂಭವಿಸುತ್ತಿದೆ ಎಂದು ಎಲ್ಲರಿಗೂ ಮಾಹಿತಿ ನೀಡುತ್ತಾರೆ. ಯಾವುದೇ ರೀತಿ ಭಯಪಡದೆ ಮುಗುಳ್ನಕ್ಕು ತಮ್ಮ ಮಾತುಗಳನ್ನು ಮುಂದುವರೆಸುತ್ತಾರೆ.

ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸುತ್ತಿರುವ ರಾಹುಲ್ ಗಾಂಧಿ

ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸುತ್ತಿರುವ ರಾಹುಲ್ ಗಾಂಧಿ

 • Share this:
  ನವದೆಹಲಿ(ಫೆ.13): ಉತ್ತರ ಭಾರತದಾದ್ಯಂತ ಅನೇಕ ಪ್ರದೇಶಗಳಲ್ಲಿ ಭೂಮಿ ನಡುಗಿದ ಅನುಭವವಾಗಿದೆ. ಅನೇಕ ಜನರು ತರಾತುರಿಯಲ್ಲಿ ತಮ್ಮ ಮನೆಗಳನ್ನು ಬಿಟ್ಟು ಓಡಿ ಹೋದರು. ರಾಷ್ಟ್ರರಾಜಧಾನಿ ದೆಹಲಿ, ಶ್ರೀನಗರ, ಉತ್ತರಾಖಂಡ್, ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಉತ್ತರಪ್ರದೇಶದ ಹಲವೆಡೆ ಭೂಮಿ ಕಂಪಿಸಿದೆ. ಭೂಕಂಪನದ ಪರಿಣಾಮ ಕಟ್ಟಡಗಳು ನಡುಗಿದ್ದು, ಮನೆಯೊಳಗಿನ ವಸ್ತುಗಳು ಅಲುಗಾಡಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಇಷ್ಟೆಲ್ಲಾ ಆದರೂ ಕೂಡ ಒಬ್ಬ ವ್ಯಕ್ತಿ ಮಾತ್ರ ತುಂಬಾ ಕೂಲಾಗಿ, ಶಾಂತವಾಗಿ ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಅವರ್ಯಾರು ಅಂತೀರಾ..? ಅವರೇ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ…

  ಹೌದು, ರಾಹುಲ್ ಗಾಂಧಿ ಅವರು ಇತಿಹಾಸಕಾರ ದೀಪೇಶ್ ಚಕ್ರವರ್ತಿ, ಸ್ಯಾಮ್ ಪಿಟ್ರೊಡಾ ಮತ್ತು ಚಿಕಾಗೊ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರ ವಿದ್ಯಾರ್ಥಿಗಳೊಂದಿಗೆ ನೇರ ವರ್ಚುವಲ್ ಸಂವಾದದ ವೇಳೆ ರಾಜಸ್ಥಾನ ಸೇರಿ ಉತ್ತರ ಭಾರತದ ವಿವಿಧೆಡೆ ಭೂಮಿ ಕಂಪಸಿ ತೀವ್ರ ನಡುಕವನ್ನುಂಟುಮಾಡಿದೆ. ಆದರೆ ರಾಹುಲ್ ಗಾಂಧಿ ಮಾತ್ರ ಭೂಕಂಪವೇ ಆಗಿಲ್ಲವೆಂಬಂತೆ ಕೂಲಾಗಿದ್ದರು.

  ಫೆ. 15 ರಂದು 2ನೇ ಬಾರಿಗೆ ವಿಜಯಪುರ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ಮಾಡಲಿರುವ ಸಿಎಂ ಯಡಿಯೂರಪ್ಪ

  ಸಂವಾದ ನಡೆಯುತ್ತಿದ್ದ ವೇಳೆ ವಿದ್ಯಾರ್ಥಿಯೊಬ್ಬರು ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ, ಸೋಷಿಯಲ್ ಮೀಡಿಯಾದಲ್ಲಿ ಟ್ರೋಲಿಂಗ್ ಮತ್ತು ಮಾಧ್ಯಮ ಸೆನ್ಸಾರ್ಶಿಪ್ ಬಗ್ಗೆ ಪ್ರಶ್ನೆ ಕೇಳುತ್ತಾರೆ. ಇದಕ್ಕೆ ರಾಹುಲ್ ಗಾಂಧಿ ಉತ್ತರಿಸುತ್ತಿದ್ದ ವೇಳೆ ಭೂಕಂಪನದ ಅನುಭವವಾಗಿದೆ. ಒಂದು ಸೆಕೆಂಡ್ ಮೌನವಾದ ರಾಹುಲ್ ಗಾಂಧಿ ಭೂಕಂಪನ ಸಂಭವಿಸುತ್ತಿದೆ ಎಂದು ಎಲ್ಲರಿಗೂ ಮಾಹಿತಿ ನೀಡುತ್ತಾರೆ. ಯಾವುದೇ ರೀತಿ ಭಯಪಡದೆ ಮುಗುಳ್ನಕ್ಕು ತಮ್ಮ ಮಾತುಗಳನ್ನು ಮುಂದುವರೆಸುತ್ತಾರೆ.

  ‘ಅಂದಹಾಗೆ, ಹೊರಗಡೆ ಭೂಕಂಪನ ಸಂಭವಿಸುತ್ತಿದೆ, ನನ್ನ ಇಡೀ ಕೋಣೆ ನಡುಗುತ್ತಿರುವ ಅನುಭವವಾಗುತ್ತಿದೆ’ ಎಂದು ರಾಹುಲ್ ಗಾಂಧಿ ಹೇಳುವ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಆದರೆ, ಭೂಕಂಪನದ ಅನುಭವವೇ ಆಗಿಲ್ಲವೇನೋ ಎಂಬಂತೆ ರಾಹುಲ್ ಗಾಂಧಿ ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದ ರೀತಿಗೆ ಅನೇಕರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

  ರಾಹುಲ್ ಗಾಂಧಿ ಅವರು ಭೂಕಂಪನದ ವೇಳೆ ಆಡಿದ ಮಾತುಗಳು ನೆಟಿಜನ್ ಗಳನ್ನು ಮನರಂಜಿಸಿದೆ. ಅನೇಕರು ಸೋಷಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಶೇರ್ ಮಾಡುತ್ತಿದ್ದು, ಕಾಮೆಂಟ್ ಮಾಡುತ್ತಿದ್ದಾರೆ. ‘ರಾಹುಲ್ ಗಾಂಧಿ ಅವರು ಆ ಸಂದರ್ಭದಲ್ಲಿ ನಡೆದುಕೊಂಡ ರೀತಿಯನ್ನು ನಾನು ಮೆಚ್ಚುತ್ತೇನೆ. ಭೂಕಂಪನದ ಅನುಭವವಾಗುತ್ತಿದ್ದರೂ ಅವರು ವಿದ್ಯಾರ್ಥಿಗಳೊಂದಿಗೆ ಸಂವಾದವನ್ನು ಮುಂದುವರೆಸಿ ಪ್ರಶ್ನೆಗೆ ಉತ್ತರ ನೀಡುತ್ತಿದ್ದರು’ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

  ‘ಲೋಕಸಭೆಯಲ್ಲಿ ನನಗೆ ಮಾತನಾಡಲು ಅವಕಾಶ ನೀಡಿದರೆ ಭೂಕಂಪವಾಗುತ್ತದೆ’ ಎಂದು ರಾಹುಲ್ ಗಾಂಧಿ ಹಿಂದೆ ಹೇಳಿದ ಮಾತುಗಳನ್ನು ಮತ್ತೊಬ್ಬರು ನೆನಪಿಸಿಕೊಂಡು ಕಾಮೆಂಟ್ ಮಾಡಿದ್ದಾರೆ. ತಜಿಕಿಸ್ತಾನ, ದೆಹಲಿ ಮತ್ತು ಉತ್ತರಭಾರತದ ವಿವಿಧ ಭಾಗಗಳಲ್ಲಿ ಶುಕ್ರವಾರ ರಾತ್ರಿ 6.3 ತೀವ್ರತೆಯ ಪ್ರಬಲ ಭೂಕಂಪವಾಗಿದೆ.
  Published by:Latha CG
  First published: