ಇರಾನ್ನಲ್ಲಿ ಭೂಕಂಪನ: ಇಬ್ಬರ ಸಾವು, 241 ಮಂದಿಗೆ ಗಾಯ
news18 Updated:August 26, 2018, 1:02 PM IST

ಸಾಂದರ್ಭಿಕ ಚಿತ್ರ
- Advertorial
- Last Updated: August 26, 2018, 1:02 PM IST
ನ್ಯೂಸ್ 18
ಪಶ್ಚಿಮ ಇರಾನಿನಲ್ಲಿ ಭೂ ಕಂಪನ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ರಿಕ್ಟರ್ ಮಾಪಕದಲ್ಲಿ ಶೇ. 6.0ಯಷ್ಟು ಭೂಮಿ ಕಂಪಿಸಿದ್ದು, 241 ಮಂದಿ ಗಾಯಗೊಂಡಿದ್ದಾರೆ.
ಮೂರುಕಡೆ ಭೂಮಿ ಕಂಪಿಸಿದ್ದು ಎರಡು ಕಡೆ 4.4ರಷ್ಟು ಹಾಗೂ 4.2ರಷ್ಟು ತೀವ್ರತೆಯಲ್ಲಿ ಕಂಪನ ದಾಖಲಾಗಿದೆ ಎಂದು ಅಮೆರಿಕ ಭೂ ವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಪಶ್ಚಿಮ ಇರಾನಿನ ಕೆರ್ಮನಶಾ ಪ್ರಾಂತ್ಯದ ಜಾವನ್ ರುಡ್ನಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ.ಭೂ ಕಂಪನದ ವೇಳೆ 70ವರ್ಷದ ವೃದ್ಧರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಐಆರ್ಎನ್ಎ ನ್ಯೂಸ್ ಎಜೆನ್ಸಿ ತಿಳಿಸಿದೆ. ಅಲ್ಲಿನ ಕಾಲಮಾನ ಪ್ರಕಾರ 2.43ಕ್ಕೆ ಭೂ ಕಂಪನ ಸಂಭವಿಸಿದೆ. ಜನರು ಭಯಭೀತಗೊಂಡು ಮನೆಯಿಂದ ಹೊರಬಂದಿದ್ದಾರೆ ಎಂದು ವರದಿಯಾಗಿದೆ.
ಆರು ಜನ ಗಂಭೀರ ಸ್ಥಿತಿಯಲ್ಲಿದ್ದು, ಅವರ ಕೆರ್ಮಾನ್ಶು ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಕಳೆದ ನವೆಂಬರ್ನಲ್ಲಿಯೂ ಇರಾನಿನಲ್ಲಿ ಭೂಕಂಪ ಸಂಭವಿಸಿದ್ದು 530 ಜನ ಪ್ರಾಣ ಕಳೆದುಕೊಂಡು ಸಾವಿರಾರು ಜನ ಗಾಯಾಳುಗಳಾಗಿದ್ದರು.