ಶುಕ್ರವಾರ ಮುಂಜಾನೆ ಮ್ಯಾನ್ಮಾರ್-ಭಾರತದ ಗಡಿ(Myanmar- India Border) ಪ್ರದೇಶದಲ್ಲಿ 6.0 ತೀವ್ರತೆಯ ಪ್ರಬಲ ಮತ್ತು ಆಳವಿಲ್ಲದ ಭೂಕಂಪ(Earth Quake) ಸಂಭವಿಸಿದೆ ಎಂದು ಯುರೋ-ಮೆಡಿಟರೇನಿಯನ್ ಭೂಕಂಪನ ಕೇಂದ್ರ(Euro-Mediterranean Seismological Centre-EMSC) ಮಾಹಿತಿ ನೀಡಿದೆ. ಭೂಕಂಪವು ಬಾಂಗ್ಲಾದೇಶ(Bangladesh)ದ ಚಿತ್ತಗಾಂಗ್ನಿಂದ 174 ಕಿ.ಮೀ ಪೂರ್ವ(East)ಕ್ಕೆ ಅಪ್ಪಳಿಸಿದೆ. ಪೂರ್ವ ಭಾರತದ(Eastern India) ಪಶ್ಚಿಮ ಬಂಗಾಳ(West Bengal), ತ್ರಿಪುರಾ(Tripura) ಮತ್ತು ಅಸ್ಸಾಂ(Assam)ನಲ್ಲಿ ಕಂಪನವು ದೂರದಲ್ಲಿ ಎಂದು ಭೂಕಂಪನ ಕೇಂದ್ರ ತಿಳಿಸಿದೆ.
EMSC ಟ್ವೀಟ್
EMSC ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಮಾಹಿತಿ ಪ್ರಕಾರ, ‘‘ಕೊಲ್ಕತ್ತಾ ಮತ್ತು ಗುವಾಹಟಿಯ ಹೆಚ್ಚಿನ ಭಾಗಗಳಲ್ಲಿ ಭೂಕಂಪನವು ಸುಮಾರು 30 ಸೆಕೆಂಡುಗಳ ಕಾಲ ಸಂಭವಿಸಿತು. ದೀರ್ಘವಾದ ಅಲುಗಾಡುವಿಕೆಯ ಅನುಭವ ಆಗಿತ್ತು. ಜೊತೆಗೆ ಅದರ ಪರಿಣಾಮಗಳನ್ನು ಅನುಭವಿಸಲಾಯಿತು ‘‘ ಎಂದು ಬರೆದುಕೊಂಡಿದೆ.
M6.0 #earthquake (#भूकंप) strikes 174 km E of #Chittagong (#Bangladesh) 9 min ago. Effects reported by eyewitnesses: pic.twitter.com/vkKuCcT5fC
— EMSC (@LastQuake) November 25, 2021
ನೆಟ್ಟಿಗರ ಪ್ರತಿಕ್ರಿಯೆ
EMSC ಮಾಡಿರುವ ಟ್ವೀಟ್ಗೆ ನೆಟ್ಟಿಗರೊಬ್ಬರು ಚಿತ್ತಗಾಂಗ್ನಿಂದ ಪ್ರತಿಕ್ರಿಯೆ ನೀಡಿದ್ದಾರೆ. ಈ ಭೂಕಂಪನವು ಬಹಳ ಪ್ರಬಲವಾಗಿದ್ದು, ಇದು ಭೂಕಂಪನದ ಕೇಂದ್ರ ಬಿಂದುವಿನಿಂದ ಪಶ್ಚಿಮಕ್ಕೆ 184 ಕಿ.ಮೀ. ದೂರ ಇದೆ ಎಂದು ಹೇಳಿದ್ದಾರೆ.
ಭಾರತ ಮತ್ತು ಬಾಂಗ್ಲಾದೇಶದ ಕೆಲವು ಭಾಗಗಳಲ್ಲಿ ಭೂಕಂಪನದ ಪರಿಣಾಮಗಳನ್ನು ಅನುಭವಿಸಿದ ನೆಟ್ಟಿಗರು, ಕಂಪನದ ಅನುಭವವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ.
6.0 ತೀವ್ರತೆಯಿಂದ 5.8 ತೀವ್ರತೆಗೆ ದಾಖಲು
EMSC ಕಂಪನದ ತೀವ್ರತೆಯನ್ನು 6.0 ರ ತೀವ್ರತೆಗೆ ದಾಖಲಿಸಿದ ಬಳಿಕ, 5.8ಕ್ಕೆ ನಿಗದಿಪಡಿಸಿತು. ಈಶಾನ್ಯ ಭಾರತದ ಐಜ್ವಾಲ್ನಿಂದ ಆಗ್ನೇಯಕ್ಕೆ 126 ಕಿ.ಮೀ.ದೂರಲ್ಲಿ ಕೇಂದ್ರಬಿಂದುವಿದೆ ಎಂದು ಹೇಳಿತು.
ಇದನ್ನೂ ಓದಿ: Kim Jong Un: ಸರ್ವಾಧಿಕಾರಿಯ ಮತ್ತೊಂದು ವಿಚಿತ್ರ ಆದೇಶ: ತನ್ನ ಸ್ಟೈಲ್ ಕಾಪಿ ಮಾಡ್ತಾರೆ ಎಂದು ಲೆದರ್ ಜಾಕೆಟ್ ಬ್ಯಾನ್!
ಇಂದು ಮುಂಜಾನೆ ಸಂಭವಿಸಿದ ಭೂಕಂಪನ
ಭೂಕಂಪಶಾಸ್ತ್ರದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಮುಂಜಾನೆ 5:15 ಕ್ಕೆ 6.1 ತೀವ್ರತೆಯ ಭೂಕಂಪ ಸಂಭವಿಸಿದೆ. ದೇಶದಲ್ಲಿ ಭೂಕಂಪದ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾಡುವ ಕೇಂದ್ರೀಯ ನೋಡಲ್ ಏಜೆನ್ಸಿ, ಅದರ ಕೇಂದ್ರಬಿಂದುವು ಮಿಜೋರಾಂನ ಥೆನ್ಜಾಲ್ನ ಆಗ್ನೇಯಕ್ಕೆ 12 ಕಿ.ಮೀ ಮತ್ತು 73 ಕಿ.ಮೀ ಆಳದಲ್ಲಿದೆ ಎಂದು ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ