ಉತ್ತರ ಭಾರತದ ಹಲವೆಡೆ ಪ್ರಬಲ ಭೂಕಂಪನ: ಬೆಚ್ಚಿ ಬಿದ್ದು ಹೊರಗೆ ಓಡಿಬಂದ ಜನ
Updated:January 31, 2018, 2:03 PM IST

ಉತ್ತರ ಭಾರತದಲ್ಲಿ ಪ್ರಬಲ ಭೂಕಂಪನ
- News18 Kannada
- Last Updated: January 31, 2018, 2:03 PM IST
ನವದೆಹಲಿ(ಜ.31): ಚಂದ್ರಗ್ರಹಣದ ದಿನವೇ ಉತ್ತರ ಭಾರತದಲ್ಲಿ ಪ್ರಬಲ ಭೂಕಂಪನ ಸಂಭವಿಸಿದೆ. ದೆಹಲಿ-ಎನ್ಸಿಆರ್, ಚಂಢೀಗಡ, ಜಮ್ಮು, ಶ್ರೀನಗರದ ಹಲವೆಡೆ ಕಂಪನದ ಅನುಭವವಾಗಿದೆ. ನೆರೆಯ ಪಂಜಾಬ್, ಹರ್ಯಾಣದಲ್ಲೂ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6.2ರಷ್ಟು ದಾಖಲಾಗಿದೆ.
ಆಫ್ಗಾನಿಸ್ತಾನ ಮತ್ತು ತಜಕಿಸ್ತಾನದ ಗಡಿಯ ಹಿಂದೂ ಕುಶ್ ಶ್ರೇನಿ ಕಂಪನದ ಕೇಂದ್ರ ಬಿಂದುವಾಗಿದ್ದು, ಪಶ್ಚಾತ್ ಕಂಪನಗಳು ಮುಂದುವರೆದಿದೆ. ಭೂಮಿ ನಡುಗಿದ ಹಿನ್ನೆಲೆಯಲ್ಲಿ ದೆಹಲಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಜನರು ಮನೆ, ಕಚೇರಿಗಳನ್ನ ಬಿಟ್ಟು ಹೊರಗೆ ಓಡಿ ಬಂದಿದ್ದಾರೆ.
ಪಾಕಿಸ್ತಾನದಲ್ಲೂ ಭೂಕಂಪನದ ಅನುಭವವಾಗಿದ್ದು, ಮನೆ ಛಾವಣಿ ಕುಸಿದು ಒಂದು ಮಗು ಮೃತಪಟ್ಟಿರುವ ವರದಿಯಾಗಿದೆ. ಆದರೆ, ಭಾರತದಲ್ಲಿ ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಿಲ್ಲ.2015ರಲ್ಲಿ ಆಫ್ಘಾನಿಸ್ತಾನದ ಹಿಂದೂಕುಶ್ ಪರ್ವತ ಶ್ರೇಣಿಯ ಸಮೀಪದ ಜೆರ್ನ್ ಪ್ರದೇಶದಲ್ಲಿ ಸಂಭವಿಸಿದ್ದ 7.5 ತೀವ್ರತೆಯ ಭೂಕಂಪನದಲ್ಲಿ 380 ಮಂದಿ ಸಾವಿಗೀಡಾಗಿದ್ದರು.