ಕಿವಿಗೆ ಇಯರ್​ಫೋನ್ ಹಾಕಿಕೊಂಡೀರಿ ಜೋಕೆ; ರೈಲು ಡಿಕ್ಕಿ ಹೊಡೆದು ಯುವತಿ ದಾರುಣ ಸಾವು

ಯುವತಿ ರೈಲ್ವೆ ಹಳಿಯ ಮೇಲೆ ನಡೆದುಕೊಂಡು  ಹೋಗುತ್ತಿದ್ದಳು. ಸಾಂಗಲ್ವಾಡಿ ಬಳಿಯ ಕಲ್ಯಾಣ ರೈಲ್ವೆ ನಿಲ್ದಾಣದದಲ್ಲಿ ವೇಗವಾಗಿ ಬರುತ್ತಿದ್ದ ರೈಲು ಯುವತಿಗೆ ಡಿಕ್ಕಿ ಹೊಡೆದಿದೆ. ಪಕ್ಕಕ್ಕೆ ಯುವತಿ ಬಿದ್ದಿದ್ದಾಳೆ.

G Hareeshkumar | news18-kannada
Updated:January 9, 2020, 7:01 PM IST
ಕಿವಿಗೆ ಇಯರ್​ಫೋನ್ ಹಾಕಿಕೊಂಡೀರಿ ಜೋಕೆ; ರೈಲು ಡಿಕ್ಕಿ ಹೊಡೆದು ಯುವತಿ ದಾರುಣ ಸಾವು
ಸಾಂರ್ಭಿಕ ಚಿತ್ರ
  • Share this:
ಥಾಣೆ(ಜ.09): ವೇಗವಾಗಿ ಚಲಿಸುತ್ತಿದ್ದ ರೈಲು ಡಿಕ್ಕಿ ಹೊಡೆದು ಪರಿಣಾಮ  ಸ್ಥಳದಲ್ಲಿ ಯುವತಿಯೊಬ್ಬಳು ಸಾವವನ್ನಪ್ಪಿರುವ ಘಟನೆ ಇಂದು ಥಾಣೆಯ ಸಮೀಪದ ಕಲ್ಯಾಣ ನಗರ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ.

ಮೃತ ಯುವತಿಯನ್ನು ಅಂತುದೇವಿ ದುಬೆ ಎಂದು ಗುರುತಿಸಲಾಗಿದೆ.  ಈಕೆ ಮಹಾರಾಷ್ಟ್ರದ ಕಲ್ಯಾಣ ಟೌನಶಿಪ್​​​​ನ ಲೋಕ ಉದಯಾನ್​​ ಕಾಂಪ್ಲೆಕ್ಸ್ ನಿವಾಸಿಯಾಗಿದ್ದಾರೆ ಎನ್ನಲಾಗಿದೆ. ಈಕೆ ಬುಧವಾರ ಕಾಲೇಜಿಗೆ ತೆರಳುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಯುವತಿ ರೈಲ್ವೆ ಹಳಿಯ ಮೇಲೆ ನಡೆದುಕೊಂಡು  ಹೋಗುತ್ತಿದ್ದಳು. ಸಾಂಗಲ್ವಾಡಿ ಬಳಿಯ ಕಲ್ಯಾಣ ರೈಲ್ವೆ ನಿಲ್ದಾಣದದಲ್ಲಿ ವೇಗವಾಗಿ ಬರುತ್ತಿದ್ದ ರೈಲು ಯುವತಿಗೆ ಡಿಕ್ಕಿ ಹೊಡೆದಿದೆ. ಪಕ್ಕಕ್ಕೆ ಯುವತಿ ಬಿದ್ದಿದ್ದಾಳೆ. ಕಿವಿಗೆ ಇಯರ್​ ಪೋನ್​​​ ಹಾಕಿಕೊಂಡು ಹೋಗುತ್ತಿದ್ದಳು ಎಂದು ರೈಲ್ವೆ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ : ಲಿಂಗಾಯತ ಮೀಸಲಾತಿ; ಸಾಧಕ-ಬಾಧಕ ಚರ್ಚಿಸಿ ತೀರ್ಮಾನ: ಸಿಎಂ ಬಿಎಸ್​ ಯಡಿಯೂರಪ್ಪ

ಯುವತಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಸ್ಥಳೀಯ ಸರ್ಕಾರ ಆಸ್ಪತ್ರೆಗೆ ಕಳುಹಿಸಲಾಗಿದೆ.
First published:January 9, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ