• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • E-Waste: ಜೀವನ ನಡೆಸಲು ಎಲೆಕ್ಟ್ರಾನಿಕ್ ತ್ಯಾಜ್ಯ ಮರುಬಳಕೆ ಕೆಲಸ- ಅಪಾಯದಲ್ಲಿದೆ ಮಕ್ಕಳ ಆರೋಗ್ಯ & ಭವಿಷ್ಯ

E-Waste: ಜೀವನ ನಡೆಸಲು ಎಲೆಕ್ಟ್ರಾನಿಕ್ ತ್ಯಾಜ್ಯ ಮರುಬಳಕೆ ಕೆಲಸ- ಅಪಾಯದಲ್ಲಿದೆ ಮಕ್ಕಳ ಆರೋಗ್ಯ & ಭವಿಷ್ಯ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಪರಿಸರ ಎನ್‌ಜಿಒ ಟಾಕ್ಸಿಕ್ಸ್ ಲಿಂಕ್ ಈ ಬಗ್ಗೆ ಹೆಚ್ಚು ಕಠಿಣ ಕಾನೂನುಗಳನ್ನು ಜಾರಿಗೆ ತರುವಂತೆ ಒತ್ತಾಯಿಸುತ್ತಿದೆ. ಈ ಅಪಾಯಕಾರಿ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವ ಮಕ್ಕಳ ಪರಿಸ್ಥಿತಿಯ ಬಗ್ಗೆ ಎನ್‌ಜಿಒ ಕಳವಳ ವ್ಯಕ್ತಪಡಿಸಿದೆ.

  • Trending Desk
  • 2-MIN READ
  • Last Updated :
  • New Delhi, India
  • Share this:

ನವದೆಹಲಿ (ಫೆ.11): ನವದೆಹಲಿಯ(New Delhi) ಹೊರವಲಯದಲ್ಲಿರುವ ಸೀಲಂಪುರ್, ಭಾರತದ ಅತಿದೊಡ್ಡ ಎಲೆಕ್ಟ್ರಾನಿಕ್ ತ್ಯಾಜ್ಯ (ಇ-ತ್ಯಾಜ್ಯ) ಪ್ರದೇಶವಾಗಿದೆ. ಈ ಬೃಹತ್‌ ತ್ಯಾಜ್ಯದ ಪ್ರದೇಶದಲ್ಲಿ ಸುಮಾರು 50,000 ಜನರು ಲೋಹಗಳನ್ನು ಹೊರತೆಗೆದು  ಮರುಬಳಕೆ ಮಾಡುವ ಮೂಲಕ ಜೀವನ ನಡೆಸುತ್ತಿದ್ದಾರೆ. ಹೀಗೆ ಇ-ತ್ಯಾಜ್ಯ(Electronic Waste) ಮರುಬಳಕೆಯಿಂದ ಆದಾಯ ಗಳಿಸುತ್ತಿರುವಂಥವರಲ್ಲಿ ಹದಿಮೂರು ವರ್ಷದ ಅರ್ಬಾಜ್ ಅಹ್ಮದ್ ಮತ್ತು ಅವನ ಸ್ನೇಹಿತ(Friend) ಸಲ್ಮಾನ್ ಕೂಡ ಸೇರಿದ್ದಾರೆ.


ಇವರು ಸರ್ಕ್ಯೂಟ್ ಬೋರ್ಡ್‌ಗಳು ಮುಂತಾದವುಗಳನ್ನು ಕೈಗಳಿಂದ ಒಡೆಯುತ್ತಾರೆ. ಲೋಹಗಳನ್ನು ಹೊರತೆಗೆಯಲು ರಸ್ತೆಬದಿಯಲ್ಲಿ ವಸ್ತುಗಳನ್ನು ಸುಡುತ್ತಾರೆ. ನಂತರ ಸಿಗುವ ಬೆಲೆಬಾಳುವ ಲೋಹವನ್ನು ಮಾರಾಟ ಮಾಡಿ ಹಣ ಗಳಿಸುತ್ತಾರೆ. ಅವರು ಯಾವುದೇ ರಕ್ಷಣಾತ್ಮಕ ಸಾಧನ ಧರಿಸದೇ ಇಂಥ ಕೆಲಸಗಳನ್ನು ಬರಿಗೈಯಲ್ಲೇ ಮಾಡುತ್ತಾರೆ.


ಜೀವನೋಪಾಯಕ್ಕಾಗಿ ಅಪಾಯಕಾರಿ ಕೆಲಸ


ಅಂದಹಾಗೆ ಅಹ್ಮದ್‌ ಕುಟುಂಬವು ಐದು ವರ್ಷಗಳ ಹಿಂದೆ ಉತ್ತರ ಪ್ರದೇಶದಿಂದ ದೆಹಲಿಗೆ ಸ್ಥಳಾಂತರಗೊಂಡಿತು. ಆರು ಸದಸ್ಯರಿರುವ ಈ ಕುಟುಂಬವನ್ನು ನೋಡಿಕೊಳ್ಳಳು ಅಹ್ಮದ್‌ ತಂದೆ ಇ - ತ್ಯಾಜ್ಯ ಮಾರುಕಟ್ಟೆಯಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಮಗನನ್ನೂ ಅಲ್ಲಿಯೇ ಕೆಲಸಕ್ಕೆ ಸೇರಿಸಲು ನಿರ್ಧರಿಸಿದ್ದರು.


ಹಾಗಾಗಿ ಪಾದರಸ, ಸೀಸ ಮತ್ತು ಆರ್ಸೆನಿಕ್ ಸೇರಿದಂತೆ ವಿಷಕಾರಿ ಲೋಹಗಳನ್ನು ಬೀದಿಯಲ್ಲಿ ಸುಡುವ ಸಾವಿರಾರು ಮಕ್ಕಳಲ್ಲಿ ಅಹ್ಮದ್‌ ಕೂಡ ಒಬ್ಬನಾಗಿದ್ದಾನೆ.


"ನಾವು 10 ಗಂಟೆಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಿ ಹೆಚ್ಚು ಹಣವನ್ನು ಗಳಿಸುವ ದಿನಗಳೂ ಇವೆ. ನಾನು ಎಷ್ಡು ಬೇಗ ಡಂಪಿಂಗ್ ಗ್ರೌಂಡ್ ತಲುಪುತ್ತೇನೆ ಹಾಗೂ ನನ್ನ ಕೈಗೆ ಏನು ಸಿಗುತ್ತದೆ ಎಂಬುದರ ಮೇಲೆ ಅದು ಅವಲಂಬಿತವಾಗಿರುತ್ತದೆ. ನನಗೆ ತುಂಬಾ ಬೆಲೆಬಾಳುವ ಲೋಹಗಳು ಸಿಕ್ಕಂತಹ ದಿನಗಳೂ ಇವೆ ಎಂಬುದಾಗಿ ಅಹ್ಮದ್ ಹೇಳುತ್ತಾನೆ.


ಭಾರತದ ಇ-ತ್ಯಾಜ್ಯ ಸಮಸ್ಯೆ


ಗ್ಲೋಬಲ್ ಇ-ವೇಸ್ಟ್ ಮಾನಿಟರ್ 2020 ರ ಪ್ರಕಾರ, 2019 ರಲ್ಲಿ ಪ್ರಪಂಚವು 53.6 ಮಿಲಿಯನ್ ಮೆಟ್ರಿಕ್ ಟನ್ ಇ-ತ್ಯಾಜ್ಯವನ್ನು ಹೊರಹಾಕಿದೆ. ಅದರಲ್ಲಿ ಭಾರತವು 3.2 ಮಿಲಿಯನ್ ಮೆಟ್ರಿಕ್ ಟನ್ ಇ-ತ್ಯಾಜ್ಯವನ್ನು ಉತ್ಪಾದಿಸಿದೆ. ಅದರಲ್ಲಿ ಹೆಚ್ಚಿನದನ್ನು ಸೀಲಾಂಪುರದಲ್ಲಿ ಯಾವುದೇ ನಿಯಮಗಳಿಲ್ಲದೆ ಎಸೆಯಲಾಗುತ್ತದೆ ಹಾಗೂ ಅದನ್ನು ಮರುಬಳಕೆ ಮಾಡಲಾಗುತ್ತಿದೆ.


ಇದನ್ನೂ ಓದಿ: Alaska: ಅಲಸ್ಕಾ ಪ್ರಾಂತ್ಯದಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಮತ್ತೊಂದು ವಸ್ತುವನ್ನು ಹೊಡೆದರುಳಿಸಿದ ಅಮೆರಿಕಾ!


ಕಂಪ್ಯೂಟರ್‌ಗಳು, ಡೆಸ್ಕ್‌ಟಾಪ್‌ಗಳು, ಸ್ಕ್ರೀನ್‌, ಮೊಬೈಲ್ ಫೋನ್‌ಗಳು ಮತ್ತು ಏರ್ ಕಂಡಿಷನರ್‌ಗಳನ್ನು ಹೊತ್ತ ಟ್ರಕ್‌ಗಳು ಪ್ರತಿದಿನ ಬಂದು ಇಲ್ಲಿ ತ್ಯಾಜ್ಯವನ್ನು ಚೆಲ್ಲುತ್ತವೆ.


ಇಲ್ಲಿನ ಜನರು ಅದನ್ನು ಹೆಕ್ಕಿ ಸರ್ಕ್ಯೂಟ್ ಬೋರ್ಡ್‌ಗಳು, ಬ್ಯಾಟರಿಗಳು ಮತ್ತು ಕೆಪಾಸಿಟರ್‌ಗಳನ್ನು ವಿಂಗಡಿಸುತ್ತಾರೆ. ನಂತರ ಅದರಲ್ಲಿ ಕೆಲವನ್ನು ರಾಸಾಯನಿಕ ದ್ರಾವಣಗಳಲ್ಲಿ ಮುಳುಗಿಸಲಾಗುತ್ತದೆ.


ಪರಿಣಾಮಕಾರಿಯಾಗಿ ಜಾರಿಯಾಗಿಲ್ಲ ಕಾನೂನು


ಸರ್ಕಾರವು ಈ ಅನಿಯಂತ್ರಿತ ಉದ್ಯಮವನ್ನು ನಿಭಾಯಿಸಲು ಪ್ರಯತ್ನಿಸುತ್ತಿದೆ. 2011 ಮತ್ತು 2016 ರಲ್ಲಿ ಎಲ್ಲಾ ಇ-ತ್ಯಾಜ್ಯ ಮರುಬಳಕೆ ಸೌಲಭ್ಯಗಳ ದೃಢೀಕರಣ ಮತ್ತು ನೋಂದಣಿಯನ್ನು ಕಡ್ಡಾಯಗೊಳಿದೆ.


ಜೊತೆಗೆ ತ್ಯಾಜ್ಯವನ್ನು ಕಿತ್ತುಹಾಕುವಾಗ ರಕ್ಷಣಾ ಸಾಧನಗಳನ್ನು ಬಳಸಲು ಕಾರ್ಮಿಕರಿಗೆ ನಿರ್ದೇಶನಗಳನ್ನು ನೀಡಿದೆ. ಆದಾಗ್ಯೂ, ಈ ಕಾನೂನುಗಳನ್ನು ಬಲವಾಗಿ ಜಾರಿಗೊಳಿಸಲಾಗಿಲ್ಲ.


ಪರಿಸರ ಎನ್‌ಜಿಒ ಟಾಕ್ಸಿಕ್ಸ್ ಲಿಂಕ್ ಈ ಬಗ್ಗೆ ಹೆಚ್ಚು ಕಠಿಣ ಕಾನೂನುಗಳನ್ನು ಜಾರಿಗೆ ತರುವಂತೆ ಒತ್ತಾಯಿಸುತ್ತಿದೆ. ಈ ಅಪಾಯಕಾರಿ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವ ಮಕ್ಕಳ ಪರಿಸ್ಥಿತಿಯ ಬಗ್ಗೆ ಎನ್‌ಜಿಒ ಕಳವಳ ವ್ಯಕ್ತಪಡಿಸಿದೆ.


ಇದನ್ನೂ ಓದಿ: Mahmood Madani: ಇಸ್ಲಾಂ ಹೊರಗಿನಿಂದ ಬಂದ ಧರ್ಮ ಎಂದು ಹೇಳುವುದು ಸಂಪೂರ್ಣ ತಪ್ಪು: ಮಹಮೂದ್‌ ಮದನಿ


ಬಾಲ ಕಾರ್ಮಿಕರಿಗೆ ಗಂಭೀರ ಆರೋಗ್ಯ ಸಮಸ್ಯೆ


ಟಾಕ್ಸಿಕ್ಸ್ ಲಿಂಕ್‌ನ ಸಹಾಯಕ ನಿರ್ದೇಶಕ ಸತೀಶ್ ಸಿನ್ಹಾ ಅವರು ಸೀಲಾಂಪುರ ಸೈಟ್‌ಗೆ ನಿಯಮಿತವಾಗಿ ಭೇಟಿ ನೀಡುತ್ತಾರೆ. ಈ ಭೇಟಿಗಳ ಸಂದರ್ಭದಲ್ಲಿ, ಹೆಚ್ಚುವರಿ ಆದಾಯಕ್ಕಾಗಿ ಇ-ತ್ಯಾಜ್ಯವನ್ನು ಹೊರತೆಗೆಯಲು ಕುಟುಂಬಗಳನ್ನು ಮಕ್ಕಳನ್ನು ಹೇಗೆ ಪ್ರೇರೇಪಿಸುತ್ತದೆ ಎಂಬುದನ್ನು ಗಮನಿಸಿದ್ದಾರೆ.


ಇನ್ನು, ಸೀಲಂಪುರ್ ಪ್ರದೇಶದ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರಾದ ಪರ್ವೇಜ್ ಮಿಯಾನ್, ಇ-ತ್ಯಾಜ್ಯವನ್ನು ಆರಿಸುವ ಮಕ್ಕಳ ಆರೋಗ್ಯದ ಅಪಾಯಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.



ಲೋಹಗಳಲ್ಲಿ ಕಂಡುಬರುವ ರಾಸಾಯನಿಕಯುಕ್ತ ವಿಷಗಳಿಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಗಂಭೀರ ಚರ್ಮ ರೋಗಗಳು ಮತ್ತು ದೀರ್ಘಕಾಲದ ಶ್ವಾಸಕೋಶದ ಸೋಂಕಿನ ಅಪಾಯವಿದೆ. ಇಂಥ ಅನೇಕ ಮಕ್ಕಳು ಚಿಕಿತ್ಸೆಗಾಗಿ ಬರುತ್ತಾರೆ ಎಂಬುದಾಗಿ ಅವರು ಹೇಳುತ್ತಾರೆ.


"ಪ್ರತಿ ವರ್ಷ ರೋಗಿಗಳ ಸಂಖ್ಯೆ ಹೆಚ್ಚಾದಂತೆ ಆರೋಗ್ಯ ಪರಿಸ್ಥಿತಿಯು ಹದಗೆಡುತ್ತದೆ. ಅಪಾಯಕಾರಿ ರಾಸಾಯನಿಕಗಳೊಂದಿಗೆ ಕೆಲಸ ಮಾಡುವ ಜನರಲ್ಲಿ ಸ್ಪಷ್ಟವಾದ ಅರಿವಿನ ಕೊರತೆಯಿದೆ. ಇದು ಮಕ್ಕಳ ಸಂಖ್ಯೆಯು ದೀರ್ಘಕಾಲದ ಅನಾರೋಗ್ಯಕ್ಕೆ ಒಳಗಾಗಲು ಕಾರಣವಾಗಿದೆ" ಎಂದು ಡಾ. ಮಿಯಾನ್ ಕಳವಳ ವ್ಯಕ್ತಪಡಿಸುತ್ತಾರೆ.

Published by:Latha CG
First published: