E-Passport: 2021ಕ್ಕೆ ಭಾರತದಲ್ಲಿ ಇ-ಪಾಸ್​ಪೋರ್ಟ್ ಜಾರಿ; ಇದರ ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ

E-Passport: ಚಿಪ್ ಇರುವ ಇ-ಪಾಸ್​ಪೋರ್ಟ್​ ಅನ್ನು ನಕಲು ಮಾಡುವುದು ಸುಲಭವಲ್ಲ. ಒಮ್ಮೆ ಚಿಪ್​ಗೆ ದಾಖಲಾದ ಮಾಹಿತಿಯನ್ನು ಡಿಲೀಟ್ ಮಾಡುವುದು ಸುಲಭವಲ್ಲ. ಹೀಗಾಗಿ, ಈ ಯೋಜನೆಯ ಅಳವಡಿಕೆಗೆ ಸರ್ಕಾರ ನಿರ್ಧರಿಸಿದೆ. 36 ಪಾಸ್​ಪೋರ್ಟ್​ ಆಫೀಸ್​ಗಳಲ್ಲಿ ಇ-ಪಾಸ್​ಪೋರ್ಟ್​ ವಿತರಿಸಲಾಗುತ್ತದೆ.

Sushma Chakre | news18-kannada
Updated:August 13, 2020, 1:28 PM IST
E-Passport: 2021ಕ್ಕೆ ಭಾರತದಲ್ಲಿ ಇ-ಪಾಸ್​ಪೋರ್ಟ್ ಜಾರಿ; ಇದರ ವಿಶೇಷತೆ ಬಗ್ಗೆ ಇಲ್ಲಿದೆ ಮಾಹಿತಿ
ಪಾಸ್​ಪೋರ್ಟ್​
  • Share this:
ನವದೆಹಲಿ (ಆ. 13): ಜಗತ್ತಿನ ಬಹುತೇಕ ದೇಶಗಳಲ್ಲಿ ಇ-ಪಾಸ್​ಪೋರ್ಟ್​ ಜಾರಿಯಲ್ಲಿದೆ. ಈ ಯೋಜನೆಯನ್ನು ಭಾರತದಲ್ಲೂ ಅಳವಡಿಸಲು ಸರ್ಕಾರ ಮುಂದಾಗಿದ್ದು, 2021ರೊಳಗೆ ಭಾರತೀಯರಿಗೆ ಇ- ಪಾಸ್​ಪೋರ್ಟ್​ ಲಭ್ಯವಾಗಲಿದೆ. ಪಾಸ್​ಪೋರ್ಟ್​ ನಕಲು ಮತ್ತು ದುರ್ಬಳಕೆ ತಡೆಯಲು ಇ-ಪಾಸ್​ಪೋರ್ಟ್​ ಸಹಾಯಕಾರಿಯಾಗಿದೆ.

ಚಿಪ್ ಇರುವ ಎಲೆಕ್ಟ್ರಾನಿಕ್ ಪಾಸ್​ಪೋರ್ಟ್ ಮುಂದಿನ ವರ್ಷ ಭಾರತೀಯರ ಕೈ ಸೇರಲಿದೆ. ಎಲೆಕ್ಟ್ರಾನಿಕ್ ಪಾಸ್​ಪೋರ್ಟ್​ ಸಿದ್ಧಪಡಿಸಲು ಅಗತ್ಯ ಇರುವ ವಸ್ತುಗಳ ಖರೀದಿಗೆ ಪ್ರಕ್ರಿಯೆ ನಡೆಯುತ್ತಿದೆ. ಪ್ರತಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲೂ ಪೋಸ್ಟ್​ ಆಫೀಸ್ ಪಾಸ್​ಪೋರ್ಟ್​ ಸೇವಾ ಕೇಂದ್ರವನ್ನು ತೆರೆಯಲು ಕೇಂದ್ರ ಸರ್ಕಾರ ಯೋಜನೆ ಹಮ್ಮಿಕೊಂಡಿದೆ. ಸದ್ಯಕ್ಕೆ ಪುಸ್ತಕದಲ್ಲಿ ಪಾಸ್​ಪೋರ್ಟ್​ ಪ್ರಿಂಟ್ ಹಾಕಿ ನೀಡಲಾಗುತ್ತದೆ.

ಇದನ್ನೂ ಓದಿ: H-1B Visa Rules: ಎಚ್-1ಬಿ ವೀಸಾ ನಿಷೇಧದ ನಿಯಮ ಸಡಿಲಿಕೆ; ಹಳೇ ಉದ್ಯೋಗಕ್ಕೆ ಮರಳಲು ಅಮೆರಿಕ ಅನುಮತಿ

ಪ್ರಾಯೋಗಿಕವಾಗಿ ಎಲೆಕ್ಟ್ರಾನಿಕ್ ಮೈಕ್ರೋಪ್ರೋಸೆಸರ್ ಇಪ್ ಇರುವ 20 ಸಾವಿರ ಇ-ಪಾಸ್​ಪೋರ್ಟ್​ಗಳನ್ನು ಭಾರತೀಯರಿಗೆ ವಿತರಿಸಲಾಗಿದೆ. ಇದರಿಂದ ಪಾಸ್​ಪೋರ್ಟ್​ಗಳನ್ನು ನಕಲು ಮಾಡುವುದನ್ನು ನಿಯಂತ್ರಿಸಬಹುದು ಎಂಬುದು ಸರ್ಕಾರ ಉದ್ದೇಶ. ಇ- ಪಾಸ್​ಪೋರ್ಟ್​ನಲ್ಲಿರುವ ಚಿಪ್​ನಲ್ಲಿ ಪಾಸ್​ಪೋರ್ಟ್​ನ ಡೇಟಾ ಪೇಜ್​ನಲ್ಲಿ ಮುದ್ರಣವಾಗಿರುವ ಮಾಹಿತಿ ಇರುತ್ತದೆ. ಪ್ರಯಾಣಿಕರ ಬಯೋಮೆಟ್ರಿಕ್ ಮಾಹಿತಿ ಕೂಡ ಚಿಪ್​ನಲ್ಲಿಯೇ ಸಂಗ್ರಹವಾಗಿರುತ್ತದೆ. ಇದರಿಂದಾಗಿ ಇಮಿಗ್ರೇಷನ್​ ಕೌಂಟರ್​ನಲ್ಲಿ ನಿಂತು ಕಾಯುವ ಅಗತ್ಯ ಇರುವುದಿಲ್ಲ. ಇ-ಪಾಸ್​ಪೋರ್ಟ್​ ಮೂಲಕ ಬೇಗ ಸ್ಕ್ಯಾನ್ ಮಾಡಬಹುದು.

ಜಗತ್ತಿನ 120 ದೇಶಗಳಲ್ಲಿ ಇ-ಪಾಸ್​ಪೋರ್ಟ್​ ವ್ಯವಸ್ಥೆ ಇದೆ. ಈ ಚಿಪ್ ಇರುವ ಪಾಸ್​ಪೋರ್ಟ್​ ಅನ್ನು ನಕಲು ಮಾಡುವುದು ಸುಲಭವಲ್ಲ. ಒಮ್ಮೆ ಚಿಪ್​ಗೆ ದಾಖಲಾದ ಮಾಹಿತಿಯನ್ನು ಡಿಲೀಟ್ ಮಾಡುವುದು ಸುಲಭವಲ್ಲ. ಹೀಗಾಗಿ, ಈ ಯೋಜನೆಯ ಅಳವಡಿಕೆಗೆ ಸರ್ಕಾರ ನಿರ್ಧರಿಸಿದೆ. ಭಾರತದ ಎಲ್ಲ 36 ಪಾಸ್​ಪೋರ್ಟ್​ ಆಫೀಸ್​ಗಳಲ್ಲಿ ಇ-ಪಾಸ್​ಪೋರ್ಟ್​ ವಿತರಿಸಲಾಗುತ್ತದೆ.
Published by: Sushma Chakre
First published: August 13, 2020, 1:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading