E-Highways: ಭಾರತದಲ್ಲೂ ಇನ್ನು ಎಲೆಕ್ಟ್ರಿಕ್ ಹೆದ್ದಾರಿ; ಯೋಜನೆ ಬಗ್ಗೆ ತಿಳಿಸಿದ ಕೇಂದ್ರ ಸಚಿವ ಗಡ್ಕರಿ

ಸೌರಶಕ್ತಿಯಿಂದ ಚಾಲಿತವಾಗುವ ಎಲೆಕ್ಟ್ರಿಕ್ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲು ಸರ್ಕಾರ ಭರದಿಂದ ಕಾರ್ಯ ನಿರ್ವಹಿಸುತ್ತಿದೆ. ಇದು ಹೆವಿ ಡ್ಯೂಟಿ ಟ್ರಕ್‌ಗಳು ಮತ್ತು ಬಸ್‌ಗಳ ಚಾರ್ಜ್‌ಗೆ ಅನುಕೂಲವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. 

ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ

ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ

  • Share this:
ಇತ್ತೀಚೆಗೆ ಹಲವಾರು ಹೆದ್ದಾರಿಗಳ (Highways) ಕಾಮಗಾರಿ ಭರದಿಂದ ಸಾಗುತ್ತಿದೆ. ಈ ನಡುವೆ ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ, ವಿಭಿನ್ನ ಪ್ರಯೋಗವೊಂದರ ಕುರಿತು ಹೇಳಿಕೊಂಡಿದ್ದಾರೆ. ಸೌರಶಕ್ತಿಯಿಂದ ಚಾಲಿತವಾಗುವ ಎಲೆಕ್ಟ್ರಿಕ್ ಹೆದ್ದಾರಿಗಳನ್ನು (Electric Highway) ಅಭಿವೃದ್ಧಿಪಡಿಸಲು ಸರ್ಕಾರ ಭರದಿಂದ ಕಾರ್ಯ ನಿರ್ವಹಿಸುತ್ತಿದೆ. ಇದು ಹೆವಿ ಡ್ಯೂಟಿ ಟ್ರಕ್‌ಗಳು ಮತ್ತು ಬಸ್‌ಗಳ ಚಾರ್ಜ್‌ಗೆ ಅನುಕೂಲವಾಗಲಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ. ಎಲೆಕ್ಟ್ರಿಕ್‌ ಹೈವೇ ಎಂದರೆ, ಸಾಮಾನ್ಯವಾಗಿ ರಸ್ತೆಯಲ್ಲಿ ಚಲಿಸುವ ವಾಹನಗಳಿಗೆ ರಸ್ತೆ ಮೇಲೆ ಇರುವ ವಿದ್ಯುತ್ ಮಾರ್ಗಗಳ ಮೂಲಕ ವಿದ್ಯುತ್ ಸರಬರಾಜು ಆಗುತ್ತದೆ. ಆ ಮೂಲಕ ವಾಹನಗಳು (Vehicle) ಚಾರ್ಜ್ ಪಡೆದು ಮುಂದೆ ಸಾಗಬಹುದು. ಇದರಿಂದ ಪೆಟ್ರೊಲ್‌ ಮತ್ತು ಡಿಸೇಲ್‌ ಉಳಿತಾಯ ಆಗುತ್ತದೆ.

ಇಂಡೋ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್ (ಐಎಸಿಸಿ) ಆಯೋಜಿಸಿದ್ದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಗಡ್ಕರಿ, ವಿದ್ಯುತ್‌ನಲ್ಲಿ ಭಾರತದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ಸರ್ಕಾರ ಕ್ರಮವನ್ನು ಕೈಗೊಳ್ಳುತ್ತಿದೆ ಎಂದು ನಿತಿನ್‌ ಗಡ್ಕರಿ ಮತ್ತೆ ಮತ್ತೆ ಪುನರುಚ್ಚರಿಸಿದರು.

ಎಲೆಕ್ಟ್ರಿಕ್ ಹೆದ್ದಾರಿಯ ಪ್ರಯೋಜನವೇನು?
"ವಿದ್ಯುತ್ ಚಲನಶೀಲತೆಗಾಗಿ ಸೌರ ಮತ್ತು ಪವನ ಶಕ್ತಿ ಆಧಾರಿತ ಚಾರ್ಜಿಂಗ್ ಕಾರ್ಯವಿಧಾನಗಳನ್ನು ಸರ್ಕಾರವು ಬಲವಾಗಿ ಪ್ರೋತ್ಸಾಹಿಸುತ್ತಿದೆ. ನಾವು ವಿದ್ಯುತ್ ಹೆದ್ದಾರಿಗಳನ್ನು ಅಭಿವೃದ್ಧಿಪಡಿಸಲು ಕಾರ್ಯ ನಿರ್ವಹಿಸುತ್ತಿದ್ದೆವೆ. ಹೆದ್ದಾರಿ ರಸ್ತೆಗಳು ಸೌರ ಶಕ್ತಿಯಿಂದ ಚಾಲಿತವಾಗಲಿವೆ. ಈ ರಸ್ತೆಯಲ್ಲಿ ಚಾಲನೆಯಲ್ಲಿರುವಾಗ ಭಾರೀ ಟ್ರಕ್‌ಗಳು ಮತ್ತು ಬಸ್‌ಗಳನ್ನು ಚಾರ್ಜ್ ಮಾಡಲು ಇದು ಬಹಳ ಅನುಕೂಲವಾಗುತ್ತದೆ" ಎಂದು ಅವರು ಹೇಳಿದರು.

ಎಲೆಕ್ಟ್ರಿಕ್ ಹೆದ್ದಾರಿಯು ಸಾಮಾನ್ಯವಾಗಿ ರಸ್ತೆಯನ್ನು ಸೂಚಿಸುತ್ತದೆ. ಇದು ಓವರ್‌ಹೆಡ್ ಪವರ್ ಲೈನ್‌ಗಳನ್ನು ಒಳಗೊಂಡಂತೆ ಅದರ ಮೇಲೆ ಪ್ರಯಾಣಿಸುವ ವಾಹನಗಳಿಗೆ ವಿದ್ಯುತ್ ಸರಬರಾಜು ಮಾಡುತ್ತದೆ. ಟೋಲ್ ಪ್ಲಾಜಾಗಳನ್ನು ಸೌರಶಕ್ತಿಯಿಂದ ಚಾಲಿತಗೊಳಿಸಲು ಸರ್ಕಾರವು ಪ್ರೋತ್ಸಾಹಿಸುತ್ತಿದೆ. ರಸ್ತೆ ಸಚಿವಾಲಯವು ಪ್ರಮುಖ ಕಾರಿಡಾರ್‌ಗಳಲ್ಲಿ ಮಾರ್ಗ ಆಪ್ಟಿಮೈಸೇಶನ್ ನಿಯಮಗಳನ್ನು ಕಾರ್ಯಚರಣೆ ನಡೆಸಲಾಗುತ್ತಿದೆ ಮತ್ತು ಹೊಸ ಜೋಡಣೆಯನ್ನು ವಿನ್ಯಾಸಗೊಳಿಸಲಾಗುತ್ತಿದೆ ಎಂದು ಸಚಿವರು ಹೇಳಿದರು.

ಇದನ್ನೂ ಓದಿ: Mukul Rohatgi: ಮತ್ತೆ ಭಾರತದ ಅಟಾರ್ನಿ ಜನರಲ್ ಆಗಿ ಮರಳಲಿದ್ದಾರೆ ಮುಕುಂದ್ ರೋಹಟಗಿ

ಹೆದ್ದಾರಿ ಯೋಜನೆಗಳ ಅಡಿಯಲ್ಲಿ ಹೂಡಿಕೆ ಮಾಡುವಂತೆ ಯುಎಸ್ ಹೂಡಿಕೆದಾರರಲ್ಲಿ ಒತ್ತಾಯ
ದೇಶದಲ್ಲಿ ಉತ್ತಮವಾಗಿ ಅಭಿವೃದ್ಧಿ ಹೊಂದಿದ ಮೂಲಸೌಕರ್ಯವು ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸುತ್ತದೆ. ಹೊಸ ವ್ಯವಹಾರಗಳನ್ನು ಸೃಷ್ಟಿಸುತ್ತದೆ ಮತ್ತು ಉದ್ಯೋಗ ಸೃಷ್ಟಿಯನ್ನು ಉತ್ತೇಜಿಸುತ್ತದೆ.  "ನಾವು 26 ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸುತ್ತಿದ್ದೇವೆ. ಪ್ರಧಾನಮಂತ್ರಿ ಗತಿ ಶಕ್ತಿ ಮಾಸ್ಟರ್ ಪ್ಲಾನ್ ಅನ್ನು ಪ್ರಾರಂಭಿಸುವುದರೊಂದಿಗೆ, ಈ ಯೋಜನೆಗಳು ಸಹ ವೇಗವಾಗಿ ಅನುಮತಿ ಪಡೆಯುತ್ತವೆ ಮತ್ತು ಇದು ಲಾಜಿಸ್ಟಿಕ್ ವೆಚ್ಚವನ್ನು ಕಡಿತಗೊಳಿಸುತ್ತದೆ ಎಂದು ಹೇಳಿದರು.

ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಹೂಡಿಕೆದಾರರಿಗೆ ಚಿನ್ನದ ಗಣಿಯಾಗಿರುವ ಭಾರತ ದೇಶದಲ್ಲಿ ರಸ್ತೆಗಳು ಮತ್ತು ಹೆದ್ದಾರಿ ಯೋಜನೆಗಳ ಅಡಿಯಲ್ಲಿ ಹೂಡಿಕೆ ಮಾಡುವಂತೆ ಯುಎಸ್ ಹೂಡಿಕೆದಾರರನ್ನು ಒತ್ತಾಯಿಸಿದ್ದಾರೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ವೆಬ್‌ಸೈಟ್‌ನ ಹೇಳಿಕೆಯಲ್ಲಿ ತಿಳಿಸಿದೆ.

ಮುಂದಿನ 25 ವರ್ಷಗಳ ಹೊಸ ಅಜೆಂಡಾ
ಸಚಿವಾಲಯದ ಪ್ರಕಾರ, “ಭಾರತ ಮತ್ತು ಯುಎಸ್ ನೈಸರ್ಗಿಕ ವಸ್ತುಗಳ ಅಮದು ಮತ್ತು ರಫ್ತಿನ ವಿಷಯದಲ್ಲಿ ಪಾಲುದಾರರಾಗಿದ್ದು, ಪರಸ್ಪರ ಬೆಳವಣಿಗೆಗೆ ಸಾಕಷ್ಟು ಕೊಡುಗೆಯನ್ನು ಹೊಂದಿವೆ” ಎಂದು ಗಡ್ಕರಿ ಹೇಳಿದರು.

ಇದನ್ನೂ ಓದಿ: Modi Gift Auction: ಮೋದಿಗೆ ಬಂದಿರುವ ಉಡುಗೊರೆಗಳನ್ನು ನಿಮ್ಮದಾಗಿಸಿಕೊಳ್ಳಬೇಕಾ? ಇಲ್ಲಿದೆ ನೋಡಿ ಸುವರ್ಣಾವಕಾಶ!

“ಈ ಎರಡೂ ದೇಶಗಳು ಯಾವಾಗಲೂ ಸಾಮಾಜಿಕ, ಆರ್ಥಿಕ ಮತ್ತು ಕಾರ್ಯತಂತ್ರದ ಮುಂಭಾಗದಲ್ಲಿ ಪರಸ್ಪರ ನಂಬಿಕೆ, ಗೌರವ ಮತ್ತು ಸಹಕಾರವನ್ನು ತೋರಿಸಿವೆ. ಈ ವರ್ಷದ ಥೀಮ್ 'ಮುಂದಿನ 25 ವರ್ಷಗಳ ಹೊಸ ಅಜೆಂಡಾ' ಈ ಸಂಬಂಧವನ್ನು ಬಲಪಡಿಸುವ ಮಾರ್ಗಸೂಚಿಯನ್ನು ಹೊಂದಿದೆ” ಎಂದು ಅವರು ಹೇಳಿದರು
Published by:Ashwini Prabhu
First published: