ಡೆಲ್ಲಿ ಯೂನಿರ್ವಸಿಟಿ ವಿದ್ಯಾರ್ಥಿ ಚುನಾವಣೆ: ಎಬಿವಿಪಿ ಮತ್ತೆ ಜಯಭೇರಿ

ಭಾರೀ ಜಿದ್ದಾಜಿದ್ದಿ ಕಾಣುವ ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಚುನಾವಣೆಯಲ್ಲಿ ಎಬಿವಿಪಿ ತನ್ನ ಪಾರಮ್ಯ ಮುಂದುವರಿಸಿದೆ. ಅಧ್ಯಕ್ಷ, ಉಪಾಧ್ಯಕ್ಷ ಮತ್ತು ಜಂಟಿ ಕಾರ್ಯದರ್ಶಿ ಸ್ಥಾನಗಳು ಎಬಿವಿಪಿ ಪಾಲಾಗಿವೆ.

Vijayasarthy SN | news18
Updated:September 13, 2019, 5:42 PM IST
ಡೆಲ್ಲಿ ಯೂನಿರ್ವಸಿಟಿ ವಿದ್ಯಾರ್ಥಿ ಚುನಾವಣೆ: ಎಬಿವಿಪಿ ಮತ್ತೆ ಜಯಭೇರಿ
ಡೆಲ್ಲಿ ವಿವಿ ಆವರಣದ ಒಂದು ಚಿತ್ರ
  • News18
  • Last Updated: September 13, 2019, 5:42 PM IST
  • Share this:
ನವದೆಹಲಿ(ಸೆ. 13): ದೆಹಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಚುನಾವಣೆಯಲ್ಲಿ ಆರೆಸ್ಸೆಸ್​ನ ವಿದ್ಯಾರ್ಥಿ ಅಂಗವಾದ ಎಬಿವಿಪಿ ಮತ್ತೊಮ್ಮೆ ಜಯಭೇರಿ ಭಾರಿಸಿದೆ. ಚುನಾವಣೆ ನಡೆದಿದ್ದ ನಾಲ್ಕು ಸ್ಥಾನಗಳ ಪೈಕಿ ಅಧ್ಯಕ್ಷ ಸ್ಥಾನ ಸೇರಿ ಮೂರನ್ನು ಎಬಿವಿಪಿ ಗೆದ್ದುಕೊಂಡಿದೆ. ಕಾಂಗ್ರೆಸ್​ನ ವಿದ್ಯಾರ್ಥಿ ಘಟಕವಾದ ಎನ್​ಎಸ್​ಯುಐಗೆ ಕಾರ್ಯದರ್ಶಿ ಸ್ಥಾನ ಮಾತ್ರ ದಕ್ಕಿದೆ. ಎಬಿವಿಪಿಯ ಅಶ್ವಿತ್ ದಾಹಿಯಾ ಅವರು ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ.

ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಜಂಟಿ ಕಾರ್ಯದರ್ಶಿ ಸ್ಥಾನಗಳು ಎಬಿವಿಪಿ ಪಾಲಾಗಿವೆ. ಜಂಟಿ ಕಾರ್ಯದರ್ಶಿ ಸ್ಥಾನಕ್ಕೂ ಎಬಿವಿಪಿ ಅಭ್ಯರ್ಥಿ ಪ್ರಬಲ ಪೈಪೋಟಿ ನೀಡಿತಾದರೂ 2,053 ಮತಗಳ ಅಂತರದಿಂದ ಸೋತಿದ್ದಾರೆ.

ಇದನ್ನೂ ಓದಿ: ಆರ್ಥಿಕ ಕುಸಿತ ಹಾಗೂ ಕೇಂದ್ರ ಸಚಿವರ ಓಲಾ ಊಬರ್​ ಐನ್​ಸ್ಟೀನ್​ ಹೇಳಿಕೆ; ಟ್ವೀಟರ್​ನಲ್ಲಿ ಗೇಲಿ ಮಾಡಿದ ಪ್ರಿಯಾಂಕ ಗಾಂಧಿ

ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಶ್ವಿತ್ ದಾಹಿಯಾ ಅವರು ಎನ್​ಎಸ್​ಯುಐ ಅಭ್ಯರ್ಥಿ ಚೇತನಾ ತ್ಯಾಗಿ ಅವರನ್ನು 19 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದ್ದಾರೆ. ಪ್ರದೀಪ್ ತನ್ವರ್ ಮತ್ತು ಶಿವಾಂಗಿ ಖರ್ವಾಲ್ ಅವರು ಉಪಾಧ್ಯಕ್ಷ ಹಾಗೂ ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸುಲಭ ಗೆಲುವು ಪಡೆದಿದ್ದಾರೆ.

ಕಳೆದ ವರ್ಷದ ಚುನಾವಣೆಯಲ್ಲೂ ಎಬಿವಿಪಿ ಮೂರು ಸ್ಥಾನಗಳನ್ನು ಗೆದ್ದರೆ, ಎನ್​ಎಸ್​ಯುಐ ಕೂಡ ಒಂದೇ ಸ್ಥಾನ ಪಡೆದಿತ್ತು. ಕಳೆದ ವರ್ಷ ಶೇ. 44ರಷ್ಟು ಮತದಾನವಾಗಿದ್ದರೆ, ಈ ವರ್ಷದ ಚುನಾವಣೆಯಲ್ಲಿ ಮತದಾನದ ಪ್ರಮಾಣ ಶೇ. 39.90ಕ್ಕೆ ಇಳಿದಿದೆ.

ಇದನ್ನೂ ಓದಿ: ಸರ್ಕಾರಿ ದೇವಾಲಯಗಳಲ್ಲಿ ಮೀಸಲಾತಿ ವ್ಯವಸ್ಥೆ ಜಾರಿ; ಆಂಧ್ರಪ್ರದೇಶದ ಸಿಎಂ ಜಗನ್​​ ಮೋಹನ್​​ ರೆಡ್ಡಿ ಐತಿಹಾಸಿಕ ನಿರ್ಧಾರ

ನಾಲ್ಕು ಸ್ಥಾನಗಳಿಗೆ ನಾಲ್ವರು ಮಹಿಳೆಯರು ಸೇರಿ ಒಟ್ಟು 16 ಅಭ್ಯರ್ಥಿಗಳು ಕಣದಲ್ಲಿದ್ದರು. ಗುರುವಾರ ನಡೆದ ಮತದಾನದ ವೇಳೆ ಯೂನಿವರ್ಸಿಟಿಯಲ್ಲಿರುವ 1.3 ಲಕ್ಷ ವಿದ್ಯಾರ್ಥಿಗಳ ಪೈಕಿ ಸುಮಾರು 51 ಸಾವಿರದಷ್ಟು ಮಂದಿ ಮತ ಚಲಾಯಿಸಿದ್ದರು. ಹಗಲಿನ ಕಾಲೇಜುಗಳಲ್ಲಿ ಮತದಾನ ಬೆಳಗ್ಗೆ 9:30ರಿಂದ ಮಧ್ಯಾಹ್ನ 1ರವರೆಗೆ ಮತದಾನ ನಡೆದರೆ, ಸಂಜೆ ಕಾಲೇಜುಗಳಲ್ಲಿ ಮಧ್ಯಾಹ್ನ 3ರಿಂದ ಸಂಜೆ 7:30ರವರೆಗೆ ವೋಟಿಂಗ್ ನಡೆದಿತ್ತು.ದೆಹಲಿಯಲ್ಲಿರುವ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ನಂತರ ಅತೀ ಹೆಚ್ಚು ಜಿದ್ದಾಜಿದ್ದಿ ವಿದ್ಯಾರ್ಥಿ ಚುನಾವಣೆ ನಡೆಯುವುದು ದೆಹಲಿ ವಿವಿಯಲ್ಲೇ. ಈ ಹಿನ್ನೆಲೆಯಲ್ಲಿ ಈ ವಿವಿಯ ವಿದ್ಯಾರ್ಥಿ ಒಕ್ಕೂಟದ ಚುನಾವಣೆ ಸಾಕಷ್ಟು ಕುತೂಹಲ ಮೂಡಿಸಿತ್ತು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:September 13, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading