Indian Railways: ಕೊರೋನಾ ಹೆಚ್ಚುತ್ತಿರುವ ಹಿನ್ನೆಲೆ; ದೇಶಾದ್ಯಂತ ಎಲ್ಲಾ ರೈಲು ಸಂಚಾರವೂ ರದ್ದು

Corona Virus: ವಲಸೆ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ಸೇರಿಸಲು "ಶ್ರಮಿಕ್ ರೈಲು" ಮತ್ತು ಸಾಮಾನ್ಯ ಜನರ ಓಡಾಟಕ್ಕಾಗಿ 15 ಜೋಡಿ "ವಿಶೇಷ ರೈಲು"ಗಳನ್ನು ಭಾರತೀಯ ರೈಲ್ವೆ ಕಳೆದ ಒಂದು ತಿಂಗಳಿನಿಂದ ಕಾರ್ಯ ನಿರ್ವಹಣೆಗೆ ಅವಕಾಶ ಮಾಡಿಕೊಡಲಾಗಿತ್ತು.

ಭಾರತೀಯ ರೈಲ್ವೆ (ಸಾಂದರ್ಭಿಕ ಚಿತ್ರ.)

ಭಾರತೀಯ ರೈಲ್ವೆ (ಸಾಂದರ್ಭಿಕ ಚಿತ್ರ.)

  • Share this:
ನವ ದೆಹಲಿ (ಜೂನ್‌ 25); ದೇಶದಾದ್ಯಂತ ಕೊರೋನಾ ವೈರಸ್‌ ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ರೈಲು ಸಂಚಾರಗಳನ್ನೂ ರದ್ದು ಮಾಡಲಾಗಿದೆ ಎಂದು ಭಾರತೀಯ ರೈಲ್ವೆ ಇಂದು ಆದೇಶಿಸಿದೆ.

ವಲಸೆ ಕಾರ್ಮಿಕರನ್ನು ಅವರ ತವರು ರಾಜ್ಯಗಳಿಗೆ ಸೇರಿಸಲು "ಶ್ರಮಿಕ್ ರೈಲು" ಮತ್ತು ಸಾಮಾನ್ಯ ಜನರ ಓಡಾಟಕ್ಕಾಗಿ 15 ಜೋಡಿ "ವಿಶೇಷ ರೈಲು"ಗಳನ್ನು ಭಾರತೀಯ ರೈಲ್ವೆ ಕಳೆದ ಒಂದು ತಿಂಗಳಿನಿಂದ ಕಾರ್ಯ ನಿರ್ವಹಣೆಗೆ ಅವಕಾಶ ಮಾಡಿಕೊಡಲಾಗಿತ್ತು.

ಭಾರತೀಯ ರೈಲ್ವೆ ಆದೇಶ ಪ್ರತಿ.


ಆದರೆ, ದೇಶದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಭೀತಿ ಹೆಚ್ಚುತ್ತಲೇ ಇದೆ. ಅಲ್ಲದೆ, ಸಾಂಕ್ರಾಮಿಕ ವೈರಸ್‌ ಸಾಮೂದಾಯಿಕವಾಗಿಯೂ ಹರಡುವ ಭೀತಿ ಎದುರಾಗಿದೆ. ಹೀಗಾಗಿ ಭಾರತೀಯ ರೈಲ್ವೆ ಇಂದು ದೇಶದ ಎಲ್ಲಾ ರೈಲು ಸಂಚಾರವನ್ನೂ ಆಗಸ್ಟ್ 12ರವರೆಗೆ ರದ್ದು ಮಾಡಿ ಆದೇಶಿಸಿದೆ. ಅಲ್ಲದೆ, ಜುಲೈ 1 ರಿಂದ ಆಗಸ್ಟ್ 12 ರವರೆಗೆ ಸಾಮಾನ್ಯ ರೈಲುಗಳಿಗೆ ಟಿಕೆಟ್ ಕಾಯ್ದಿರಿಸಿದವರಿಗೆ ಹಣವನ್ನು ಪೂರ್ಣ ಮರುಪಾವತಿ ಮಾಡಲು ಮುಂದಾಗಿದೆ.
First published: