England: ಲೈಂಗಿಕ ಚಟುವಟಿಕೆಗೆ ಬೆಂಬಲ ನೀಡುವ ಕೋರ್ಸ್ ಆರಂಭಿಸಿದ ದುರ್‌ಹಮ್ ವಿಶ್ವವಿದ್ಯಾನಿಲಯ

ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟವು ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಈ ತರಬೇತಿಯ ಕುರಿತು ಮೇಲ್ ಅನ್ನು ಕಳುಹಿಸಿತ್ತು. ಈ ಕೋರ್ಸ್ ಅನ್ನು ವಿಶೇಷವಾಗಿ ದುರ್‌ಹಮ್‌ನ ವಿದ್ಯಾರ್ಥಿ ಸಂಘವು ಆಯೋಜಿಸಿದೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಇಂಗ್ಲೆಂಡ್‌(England)ನಲ್ಲಿರುವ ದುರ್‌ಹಮ್ ವಿಶ್ವವಿದ್ಯಾನಿಲಯ(Durham University)ವು ಲೈಂಗಿಕ ಚಟುವಟಿಕೆ(Sex Activities)ಗಳಲ್ಲಿ ಕಾರ್ಯನಿರ್ವಹಿಸುವ ವಿದ್ಯಾರ್ಥಿಗಳನ್ನು(Students) ಬೆಂಬಲಿಸುವ ನಿಟ್ಟಿನಲ್ಲಿ ತರಬೇತಿಯನ್ನು ಒದಗಿಸುತ್ತಿದೆ. ವ್ಯಭಿಚಾರ ವೃತ್ತಿ(Prostitute)ಯನ್ನು ನಿಭಾಯಿಸುವಾಗ ಸುರಕ್ಷಿತರಾಗಿ ಹೇಗಿರಬೇಕು ಎಂಬ ಆನ್‌ಲೈನ್(Online Course) ಕೋರ್ಸ್‌ಗಳನ್ನು ತನ್ನ ವಿದ್ಯಾರ್ಥಿಗಳಿಗೆ ಸಂಸ್ಥೆ ಒದಗಿಸುತ್ತಿದೆ. ಲೈಂಗಿಕ ಸಂಸ್ಥೆಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಹೆಚ್ಚಳವಾಗುತ್ತಿದೆ ಎಂಬುದನ್ನು ವಿಶ್ವವಿದ್ಯಾಲಯ(University) ಕಂಡುಕೊಂಡಿದೆ ಎಂದು ತಿಳಿಸಿದೆ.

ಕೋರ್ಸ್​ ಆರಂಭಿಸಿದ್ದರ ಉದ್ದೇಶವೇನು?

ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟವು ಎಲ್ಲಾ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳಿಗೆ ಈ ತರಬೇತಿಯ ಕುರಿತು ಮೇಲ್ ಅನ್ನು ಕಳುಹಿಸಿತ್ತು. ಈ ಕೋರ್ಸ್ ಅನ್ನು ವಿಶೇಷವಾಗಿ ದುರ್‌ಹಮ್‌ನ ವಿದ್ಯಾರ್ಥಿ ಸಂಘವು ಆಯೋಜಿಸಿದೆ. ದುರ್‌ಹಮ್‌ನ ಪದವಿ ವಿದ್ಯಾರ್ಥಿಗಳು ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದುದು ಹಾಗೂ ಆನ್‌ಲೈನ್‌ನಲ್ಲಿ ಇಂತಹುದೇ ವಿಷಯಗಳಲ್ಲಿ ಭಾಗವಹಿಸುತ್ತಿರುವುದು ಅವ್ಯಾಹತವಾಗಿ ನಡೆಯುತ್ತಿತ್ತು. ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿರುವ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳಿಗೆ ಬೆಂಬಲ ಹಾಗೂ ಮಾರ್ಗದರ್ಶನವನ್ನು ಒದಗಿಸುವ ನಿಟ್ಟಿನಲ್ಲಿ ಪಾಠಗಳನ್ನು ವಿನ್ಯಾಸಗೊಳಿಸಲಾಗಿದೆ. ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಸುರಕ್ಷಿತರಾಗಿರುವುದು ಮತ್ತು ಮಾಹಿತಿ ಇರುವ ಆಯ್ಕೆಗಳನ್ನು ಮಾಡಬೇಕು ಎಂಬ ಕಾರಣಕ್ಕಾಗಿ ತರಬೇತಿಯನ್ನು ನೀಡಲಾಗುತ್ತಿದೆ. ಅದೇ ರೀತಿ ಇಂತಹ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುತ್ತಿರುವುದು ಇದೀಗ ಪ್ರವರ್ಧಮಾನಕ್ಕೆ ಬರುತ್ತಿರುವ ಪದ್ಧತಿಯಾಗಿ ರೂಪುಗೊಂಡಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ: Afghanistan: ವರದಕ್ಷಿಣೆ ಹೊರೆ, ಕಿತ್ತು ತಿನ್ನುವ ಬಡತನ; 20 ದಿನದ ಹೆಣ್ಣು ಮಗುವಿಗೆ ಮದುವೆ ಮಾಡುತ್ತಿದ್ದಾರೆ ಇಲ್ಲಿ

ಟೀಕೆಗಳ ಸುರಿಮಳೆ

ಇಂಗ್ಲೆಂಡ್‌ನ ಸ್ಟೇಟ್ ಫಾರ್ ಯುನಿವರ್ಸಿಟಿಗಳ ಮಂತ್ರಿಯಾಗಿರುವ ಮಿಶೆಲ್ ಡೋನ್ಲೆನ್ ವಿಶ್ವವಿದ್ಯಾಲಯದ ಈ ನಡೆಯನ್ನು ಟೀಕಿಸಿದ್ದು ಅಪಾಯಕಾರಿ ಉದ್ಯಮಕ್ಕೆ ಸಂಸ್ಥೆಯು ಪ್ರೋತ್ಸಾಹವನ್ನು ನೀಡುತ್ತಿದ್ದು, ಇಂತಹ ಕಾರ್ಯಗಳಿಂದ ವಿದ್ಯಾರ್ಥಿಗಳನ್ನು ರಕ್ಷಿಸುವ ಬದಲಿಗೆ ಪ್ರೋತ್ಸಾಹ ನೀಡುತ್ತಿದೆ ಎಂದು ಜರಿದಿದ್ದಾರೆ. ಇಂತಹ ಚಟುವಟಿಕೆಗಳಿಗೆ ಬೆಂಬಲ ನೀಡುವ ಯಾವುದೇ ಶಿಕ್ಷಣ ಸಂಸ್ಥೆಗಳು ತನ್ನ ವಿದ್ಯಾರ್ಥಿಗಳನ್ನು ಉತ್ತಮವಾದ ನೀತಿ ಮಾರ್ಗದಲ್ಲಿ ಕೊಂಡೊಯ್ಯುವ ಕ್ರಮದಲ್ಲಿ ಹಿಂದೆ ಬೀಳುತ್ತದೆ ಹಾಗೂ ತನ್ನ ಕರ್ತವ್ಯದಲ್ಲಿ ಗಂಭೀರವಾಗಿ ವಿಫಲವಾಗಿದೆ ಎಂದು ಹೇಳಿಕೆ ನೀಡಿದ್ದಾರೆ. ಶೋಷಣೆಗೆ ಒಳಗಾಗುವ ಮಹಿಳೆಯರಿಗೆ ಬೆಂಬಲ ನೀಡುವುದು ಸರಿಯಾದ ಕ್ರಮವೆಂದು ಎಂದು ತಿಳಿಸಿದ ಮಿಶೆಲ್ ಈ ಕೋರ್ಸ್ ಲೈಂಗಿಕತೆಯ ಚಟುವಟಿಕೆಗಳಿಗೆ ಮುಕ್ತ ಅವಕಾಶವನ್ನು ನೀಡುವಂತಿದೆ ಹಾಗೂ ಈ ಚಟುವಟಿಕೆಯನ್ನು ಸಾಮಾನ್ಯವಾಗಿ ಪ್ರತಿಬಿಂಬಿಸುತ್ತಿದೆ. ಇಂತಹ ಕೋರ್ಸ್‌ಗಳಿಗೆ ನಮ್ಮ ವಿಶ್ವವಿದ್ಯಾಲಯಗಳಲ್ಲಿ ಯಾವುದೇ ಸ್ಥಾನವಿಲ್ಲ ಎಂದು ನೇರವಾಗಿ ಆಕೆ ತಿಳಿಸಿದ್ದಾರೆ.

ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಬೇಕು

ಯುವತಿಯರು ಹಾಗೂ ವಿದ್ಯಾರ್ಥಿಗಳನ್ನು ಈ ಜಾಲದಲ್ಲಿ ಬೀಳಿಸುವ ಪ್ರಮುಖ ತಂತ್ರಗಾರಿಕೆಯನ್ನು ಕೋರ್ಸ್ ಹೆಸರಿನಲ್ಲಿ ವಿಶ್ವವಿದ್ಯಾಲಯ ಮಾಡುತ್ತಿದೆ ಎಂದು ತಿಳಿಸಿದ ಅವರು “ವಿಶ್ವವಿದ್ಯಾನಿಲಯಗಳು ಇದರ ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಮಹಿಳೆಯರನ್ನು ಬೆಂಬಲಿಸಲು ಗಮನಹರಿಸಬೇಕು ಎಂದು ಹೇಳಿದ್ದಾರೆ.

ಇದನ್ನೂ ಓದಿ: Crime News : 6 ತಿಂಗಳಲ್ಲಿ 400 ಮಂದಿಯಿಂದ ಅಪ್ರಾಪ್ತೆಯ ಮೇಲೆ ಅತ್ಯಾಚಾರ!

"ಲೈಂಗಿಕ ಕೆಲಸಗಾರರು ಎದುರಿಸಬಹುದಾದ ಸವಾಲುಗಳನ್ನು ಅನ್ವೇಷಿಸುವ ಸಂವಾದಾತ್ಮಕ ಕೋರ್ಸ್” ಎಂಬ ಸೆಶನ್ ಅನ್ನು ಪ್ರಚಾರಪಡಿಸಲಾಗಿದ್ದು ಇದು ಸಂಪೂರ್ಣವಾಗಿ ಬುಕ್ ಆಗಿದೆ ಎಂಬ ಮಾಹಿತಿ ದೊರೆತಿದೆ. ದುರ್‌ಹಮ್ ವಿಶ್ವವಿದ್ಯಾಲಯ ಹಾಗೂ ವಿದ್ಯಾರ್ಥಿಗಳ ಒಕ್ಕೂಟವು ವಿದ್ಯಾರ್ಥಿಗಳಿಂದ ಹಲವಾರು ದೂರುಗಳನ್ನು ಸ್ವೀಕರಿಸಿದೆ ಎಂದು ವರದಿಯಾಗಿದೆ, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಕೋರ್ಸ್‌ಗಳ ಪ್ರಚಾರವು ಕ್ಯಾಂಪಸ್‌ನಲ್ಲಿ ವೇಶ್ಯಾವಾಟಿಕೆ ಲಭ್ಯವಿದೆ ಎಂಬ ಅಂಶದ ಬಗ್ಗೆ ಗಮನ ಸೆಳೆಯುತ್ತಿದೆ ಎಂದು ಮಿಶೆಲ್ ತಿಳಿಸಿದ್ದಾರೆ.
Published by:Latha CG
First published: