ರಸ್ತೆ ಅಪಘಾತದಲ್ಲಿ ಮೃತಪಟ್ಟ ಗೆಳೆಯನಿಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಅರ್ಪಿಸಿದ ಸ್ನೇಹಿತರು!


Updated:January 8, 2018, 5:23 PM IST
ರಸ್ತೆ ಅಪಘಾತದಲ್ಲಿ ಮೃತಪಟ್ಟ ಗೆಳೆಯನಿಗೆ ವಿಭಿನ್ನವಾಗಿ ಶ್ರದ್ಧಾಂಜಲಿ ಅರ್ಪಿಸಿದ ಸ್ನೇಹಿತರು!

Updated: January 8, 2018, 5:23 PM IST
-ನ್ಯೂಸ್ 18 ಕನ್ನಡ

ರಸ್ತೆ ಅಪಘಾತವೊಂದರಲ್ಲಿ ಮೃತಪಟ್ಟ ವ್ಯಕ್ತಿಯೊಬ್ಬನಿಗೆ ಶ್ರದ್ಧಾಂಜಲಿ ಅರ್ಪಿಸಲು ವಿಭಿನ್ನ ಮಾರ್ಗವನ್ನು ಈ ಸ್ನೇಹಿತರು ಕಂಡುಕೊಂಡಿದ್ದಾರೆ. ಹಾಗಾದ್ರೆ ಆ ಸ್ನೇಹಿತರು ಮಾಡಿದ್ದೇನು? ಅರ್ಥಪೂರ್ಣ ಶ್ರದ್ಧಾಂಜಲಿ ಹೇಗಾಯ್ತು? ಇಲ್ಲಿದೆ ವಿವರ

2017ರ ಡಿಸೆಂಬರ್ 29 ರಂದು ತಮ್ಮ ಗೆಳೆಯನನ್ನು ರಸ್ತೆ ಅಪಘಾತದಲ್ಲಿ ಕಳೆದುಕೊಂಡ ಸ್ನೇಹಿತರು, ಮೊದಲಿಗೆ ಎಲ್ಲರಿಂದಲೂ ಹಣ ಸಂಗ್ರಹಿಸಿದ್ದಾರೆ. ಬಳಿಕ ಈ ಹಣದಿಂದ ಹೆಲ್ಮೆಟ್ ಖರೀದಿಸಿ, ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುತ್ತಿದ್ದ ಸವಾರರಿಗೆ ಹಂಚಿದ್ದಾರೆ. ಇದರೊಂದಿಗೆ ಟ್ರಾಫಿಕ್ ನಿಯಮಗಳನ್ನು ಪಾಲಿಸುವಂತೆ ಸಲಹೆ ನೀಡಿದ್ದಾರೆ.

ಅರ್ನೆಸ್ಟ್ ಎಂಬಾತ ರಸ್ತೆ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಿದ್ದು, ಆತನ ಗೆಳೆಯರಿಗೆ ಈ ವಿಚರಅ ಬಹಳ ನೋವು ನೀಡಿತ್ತು. ಆದರೆ ತಮ್ಮ ಮಡಿದ ಗೆಳೆಯನಿಗೆ ವಿಶೇಷವಅಗಿ ಶ್ರದ್ಧಅಂಜಿಲಿ ನೀಡಲು ನಿರ್ಧರಿಸಿದ್ದಾರೆ. ತಮ್ಮ ಗೆಳೆಯನಂತೆ ಬೇರೆಯವರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಬಾರದೆಂದು ಹೆಲ್ಮೆಟ್ ಹಂಚುವುದರೊಂದಿಗೆ, ನಿಯಮಗಳನ್ನು ಪಾಲಿಸುವಂತೆ ಕೇಳಿಕೊಂಡಿದ್ದಾರೆ. ಇದಕ್ಕೂ ಉತ್ತಮ ಶ್ರದ್ಧಾಂಜಿಲಿ ಯಾರಾದ್ರೂ ನೀಡಲು ಸಾಧ್ಯವಾ?
First published:January 8, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ