Make in India: 'ಸ್ವದೇಶಿ' ನೀತಿಯಿಂದ ಸೇನೆಯಲ್ಲೀಗ ಶಸ್ತ್ರಾಸ್ತ್ರಗಳ ಕೊರತೆ! ಚೀನಾ, ಪಾಕ್‌ನಿಂದ ಬೆದರಿಕೆ

ಭಾರತದಲ್ಲಿ ಉದ್ಯಮಗಳನ್ನು ಸೃಷ್ಟಿಸಲು ಹಾಗೂ ವಿದೇಶಿ ವಿನಿಮಯದ ಹೊರಹರಿವುಗಳನ್ನು ತಡೆಯಲು ಮೊಬೈಲ್ ಫೋನ್‌ಗಳಿಂದ ಹಿಡಿದು ಫೈಟರ್ ಜೆಟ್‌ವರೆಗೆ ಪ್ರತಿಯೊಂದನ್ನು ಭಾರತದಲ್ಲಿ ನಿರ್ಮಿಸಲು ಮೇಕ್ ಇನ್ ಇಂಡಿಯಾ ನೀತಿಯನ್ನು ಪ್ರಾಧಾನಿ ನರೇಂದ್ರ ಮೋದಿಯವರು ಅನಾವರಣಗೊಳಿಸಿದರು. ಆದರೆ ರಕ್ಷಣಾ ವ್ಯವಸ್ಥೆಗಳ ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಪ್ರಧಾನಿ ಮೋದಿಯವರ ಒತ್ತಡವು ಭಾರತಕ್ಕೆ ಚೀನಾ ಹಾಗೂ ಪಾಕಿಸ್ತಾನದ ನಿರಂತರ ಬೆದರಿಕೆಗಳಿಗೆ ಗುರಿಯಾಗುವಂತೆ ಮಾಡುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮೇಕ್ ಇನ್ ಇಂಡಿಯಾ ನೀತಿ

ಮೇಕ್ ಇನ್ ಇಂಡಿಯಾ ನೀತಿ

  • Share this:
ರಕ್ಷಣಾ ವ್ಯವಸ್ಥೆಗಳ (Defense systems) ದೇಶೀಯ ಉತ್ಪಾದನೆಯನ್ನು ಉತ್ತೇಜಿಸಲು ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಡವು ಭಾರತಕ್ಕೆ (India) ಚೀನಾ (China) ಹಾಗೂ ಪಾಕಿಸ್ತಾನದ (Pakistan) ನಿರಂತರ ಬೆದರಿಕೆಗಳಿಗೆ ಗುರಿಯಾಗುವಂತೆ ಮಾಡುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಭಾರತದ ವಾಯುಪಡೆ, ನೌಕಾಪಡೆ (Navy) ಹಾಗೂ ಸೇನೆಯು ಇನ್ನು ಮುಂದೆ ಹಳೆಯ ಶಸ್ತ್ರಾಸ್ತ್ರಗಳ ಬದಲಿಗೆ ಕೆಲವು ಮಹತ್ವದ ನಿರ್ಣಾಯಕ ಶಸ್ತ್ರಾಸ್ತ್ರಗಳನ್ನು (Critical weapons) ಆಮದು ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದಾಗಿ 2026 ರ ವೇಳೆಗೆ ಭಾರತಕ್ಕೆ ಹೆಲಿಕಾಪ್ಟರ್‌ಗಳ ಕೊರತೆ ತಲೆದೋರಲಿದ್ದು 2030 ರ ವೇಳೆಗೆ ದೇಶವು ಫೈಟರ್ ಜೆಟ್‌ಗಳ (Fighter Jet) ಸಮಸ್ಯೆಯಿಂದ ಬಳಲಿದೆ ಎಂದು ಎಚ್ಚರಿಸಿದ್ದಾರೆ.

ಮೇಕ್ ಇನ್ ಇಂಡಿಯಾ ನೀತಿ
2014 ರಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿಯವರು, ಭಾರತದಲ್ಲಿ ಉದ್ಯಮಗಳನ್ನು ಸೃಷ್ಟಿಸಲು ಹಾಗೂ ವಿದೇಶಿ ವಿನಿಮಯದ ಹೊರಹರಿವುಗಳನ್ನು ತಡೆಯಲು ಮೊಬೈಲ್ ಫೋನ್‌ಗಳಿಂದ ಹಿಡಿದು ಫೈಟರ್ ಜೆಟ್‌ವರೆಗೆ ಪ್ರತಿಯೊಂದನ್ನು ಭಾರತದಲ್ಲಿ ನಿರ್ಮಿಸಲು ಮೇಕ್ ಇನ್ ಇಂಡಿಯಾ ನೀತಿಯನ್ನು ಅನಾವರಣಗೊಳಿಸಿದರು. ಆದರೆ, ಎಂಟು ವರ್ಷಗಳ ನಂತರ ಮಿಲಿಟರಿ ಹಾರ್ಡ್‌ವೇರ್‌ನ ವಿಶ್ವದ ಅತಿದೊಡ್ಡ ಆಮದುದಾರನೆಂದಿನಿಸಿರುವ ಭಾರತ ಇದುವರೆಗೆ ಅಗತ್ಯಗಳನ್ನು ಪೂರೈಸಲು ಸಾಕಷ್ಟು ಆಯುಧಗಳನ್ನು ಸ್ಥಳೀಯವಾಗಿ ಉತ್ಪಾದಿಸಿಲ್ಲ ಮತ್ತು ಸರಕಾರದ ನೀತಿಗಳು ಆಮದುಗಳನ್ನು ನಿರ್ಬಂಧಿಸುತ್ತಿವೆ.

ಪ್ರಧಾನಿಯವರ ಮೇಕ್ ಇನ್ ಇಂಡಿಯಾ ನೀತಿಯ ಪ್ರಕಾರ, ಮಿಲಿಟರಿ ಖರೀದಿಯ ಸ್ವರೂಪ ಅಥವಾ ಅದನ್ನು ಎಲ್ಲಿಂದ ಖರೀದಿಸಲಾಗಿದೆ ಎಂಬುದರ ಆಧಾರದ ಮೇಲೆ 30% ರಿಂದ 60% ರಷ್ಟು ಭಾರತದಲ್ಲಿ ತಯಾರಿಸಿದ ಘಟಕಗಳನ್ನು ಕಡ್ಡಾಯಗೊಳಿಸುತ್ತದೆ. ಈ ಹಿಂದೆ ಇಂತಹ ಯಾವುದೇ ನಿರ್ಬಂಧಗಳಿರಲಿಲ್ಲ ಹಾಗೂ ಭಾರತವು ಖರೀದಿಯ ವೆಚ್ಚದ ನಿರ್ದಿಷ್ಟ ಶೇಕಡಾವಾರು ಪ್ರಮಾಣವನ್ನು ದೇಶೀಯ ಉತ್ಪಾದನೆಗೆ ಹಿಂತಿರುಗಿಸುವ ವ್ಯವಸ್ಥೆಯನ್ನು ಬಳಸಿಕೊಂಡಿತ್ತು.

ಹದಗೆಡುತ್ತಿರುವ ಭಾರತದ ಮಿಲಿಟರಿ ವ್ಯವಸ್ಥೆ
ವರದಿಗಳ ಪ್ರಕಾರ, 2020 ರಲ್ಲಿ ಮಾರಣಾಂತಿಕ ಘರ್ಷಣೆಯ ನಂತರ ಹಿಮಾಲಯದ ಗಡಿಯಲ್ಲಿ ಭಾರತದ ಸೈನಿಕರ ವಿರುದ್ಧ ಪೂರ್ಣ ಪ್ರಮಾಣದಲ್ಲಿ ಸೈನಿಕರನ್ನು ನಿಯೋಜಿಸಿರುವ ಪಾಕಿಸ್ತಾನ ಮತ್ತು ಚೀನಾದಿಂದ ಹೆಚ್ಚಿನ ಅಪಾಯಗಳನ್ನು ಎದುರಿಸುತ್ತಿರುವಂತೆಯೇ ಭಾರತದ ಮಿಲಿಟರಿ ವ್ಯವಸ್ಥೆಯು ಇನ್ನಷ್ಟು ಹದಗೆಡುತ್ತಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಚೀನಾದ ಗಡಿಯಲ್ಲಿ ಆಕ್ರಮಣವನ್ನು ತಡೆಯಲು ಭಾರತಕ್ಕೆ ಎರಡು ಪಟ್ಟು ಸೈನಿಕರ ಅಗತ್ಯವಿದೆ ಎಂಬುದು ಮೂಲಗಳಿಂದ ತಿಳಿದು ಬಂದಿದೆ.

ಇದನ್ನೂ ಓದಿ: Dr. Bimal Patel: ಸೆಂಟ್ರಲ್ ವಿಸ್ಟಾ ಅವೆನ್ಯೂ ವಿನ್ಯಾಸಕಾರ ಡಾ. ಬಿಮಲ್‌ ಪಟೇಲ್‌ ಬಗ್ಗೆ ನಿಮಗೆ ತಿಳಿಯದ ವಿಚಾರಗಳಿವು!

ಭಾರತದ ಸೇನೆಯು ಕೆಲವು ರಕ್ಷಣಾ ವಸ್ತುಗಳ ಸ್ಥಳೀಯ ಖರೀದಿಗಳನ್ನು ಹೆಚ್ಚಿಸಿದೆ, ದೇಶವು ಇನ್ನೂ ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆಗಳು ಮತ್ತು ಅವಳಿ-ಎಂಜಿನ್ ಫೈಟರ್‌ಗಳಂತಹ ಸಂಕೀರ್ಣ ಉಪಕರಣಗಳನ್ನು ಉತ್ಪಾದಿಸಿಲ್ಲ. ವಾಯುಪಡೆಯು ಸ್ವದೇಶಿ ನಿರ್ಮಿತ ಏಕ-ಎಂಜಿನ್ ಯುದ್ಧವಿಮಾನಗಳನ್ನು ಆಯ್ಕೆ ಮಾಡಬೇಕೆಂದು ಸರಕಾರವು ಬಯಸುವುದರಿಂದ ವಿದೇಶಿ ತಯಾರಕರಿಂದ ಯುದ್ಧವಿಮಾನಗಳನ್ನು ಖರೀದಿಸುವ ಯೋಜನೆಗಳನ್ನು ಸ್ಥಗಿತಗೊಳಿಸಲಾಯಿತು, ಅವುಗಳ ಪೂರೈಕೆ ಕೂಡ ಕಡಿಮೆ ಪ್ರಮಾಣದಲ್ಲಿವೆ ಜೊತೆಗೆ ದೇಶವು ಇನ್ನೂ ಉತ್ಪಾದನೆಗೆ ತೊಡಗದೇ ಇರುವ ಅವಳಿ-ಎಂಜಿನ್ ಯುದ್ಧ ವಿಮಾನಗಳನ್ನು ಉತ್ಪಾದನೆ ಇನ್ನೂ ನೆನೆಗುದಿಯಲ್ಲಿದೆ.

ಇದರ ನಡುವೆಯೇ 16 ರಿಂದ 18 ಫೈಟರ್ ಜೆಟ್‌ಗಳನ್ನೊಳಗೊಂಡಂತೆ ಅರ್ಧ ಡಜನ್‌ನಷ್ಟು ಸ್ಕಾಡ್ರನ್‌ಗಳನ್ನು ನಿಷೇಧಿಸುವಂತೆ ವಾಯುಪಡೆಗೆ ಸೂಚಿಸಲಾಗುತ್ತಿದೆ. ಇದು ಅವರ ಹಾರಾಟ ಜೀವನವನ್ನು ಕೊನೆಗೊಳಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಗಳೂರು ಮೂಲದ ಸರ್ಕಾರಿ ಸ್ವಾಮ್ಯದ ರಕ್ಷಣಾ ತಯಾರಕ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ಪ್ರತಿ ವರ್ಷ ಎಂಟು ಸ್ಥಳೀಯ ತೇಜಸ್ ಯುದ್ಧವಿಮಾನಗಳನ್ನು ಮಾತ್ರ ಉತ್ಪಾದಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಅಥವಾ ಸರಿಸುಮಾರು ಅರ್ಧ ಸ್ಕ್ವಾಡ್ರನ್‌ಗಳನ್ನು ಉತ್ಪಾದಿಸುತ್ತಿದೆ.

ಉದ್ವಿಗ್ನ ಗಡಿ
ಹೆಲಿಕಾಪ್ಟರ್ ಮತ್ತೊಂದು ಸಮಸ್ಯೆಯಾಗಿದೆ. ವಾಯುಪಡೆ, ಸೈನ್ಯ ಮತ್ತು ನೌಕಾಪಡೆಯು ಇನ್ನೂ ಅರ್ಧ ಶತಮಾನದ ಹಿಂದೆ ಫ್ರಾನ್ಸ್‌ನಲ್ಲಿ ವಿನ್ಯಾಸಗೊಳಿಸಿದ ಮತ್ತು ಅಭಿವೃದ್ಧಿಪಡಿಸಿದ ಮತ್ತು 1970 ರ ದಶಕದಲ್ಲಿ ಸೇರ್ಪಡೆಗೊಂಡ ಲಘು ಹೆಲಿಕಾಪ್ಟರ್‌ಗಳ ಮೇಲೆ ಅವಲಂಬಿತವಾಗಿದೆ.

ಇದನ್ನೂ ಓದಿ:  F-16 Fighter Jet: ಪಾಕ್​ಗೆ ಅಮೆರಿಕಾ ನೆರವು; F-16 ಫೈಟರ್ ಜೆಟ್ ದುರಸ್ಥಿಗೆ 450 ಮಿಲಿಯನ್ ಡಾಲರ್ ಅನುಮೋದನೆ

ಭಾರತದ ಸುಮಾರು 80% ಹೆಲಿಕಾಪ್ಟರ್‌ಗಳು ಈಗಾಗಲೇ 30 ವರ್ಷಗಳಷ್ಟು ಹಳೆಯದಾಗಿವೆ ಎಂದು ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಹಳೆಯ ಹೆಲಿಕಾಪ್ಟರ್‌ಗಳನ್ನು ಬಳಸುವುದರಿಂದ ಅದೆಷ್ಟೋ ಸೈನಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಕಳೆದ ಡಿಸೆಂಬರ್‌ವರೆಗಿನ ಸಂಸತ್ತಿನ ದಾಖಲೆಗಳ ಪ್ರಕಾರ, 2017 ರಿಂದ ಮಿಲಿಟರಿ ಹೆಲಿಕಾಪ್ಟರ್‌ಗಳ ಅಪಘಾತಗಳಲ್ಲಿ 31 ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 19 ಮಂದಿ ಗಾಯಗೊಂಡಿದ್ದಾರೆ.
Published by:Ashwini Prabhu
First published: