ಮಲ್ಯರನ್ನು ಕಾಡುತ್ತಿದೆ ಆಸ್ತಿ ಕಳೆದುಕೊಳ್ಳುವ ಭಯ!: ಭಾರತಕ್ಕೆ ಹಿಂತಿರುಗಲು ಪ್ರಯತ್ನಿಸುತ್ತಿದ್ದಾರೆ ಮದ್ಯದೊರೆ


Updated:August 28, 2018, 11:00 AM IST
ಮಲ್ಯರನ್ನು ಕಾಡುತ್ತಿದೆ ಆಸ್ತಿ ಕಳೆದುಕೊಳ್ಳುವ ಭಯ!: ಭಾರತಕ್ಕೆ ಹಿಂತಿರುಗಲು ಪ್ರಯತ್ನಿಸುತ್ತಿದ್ದಾರೆ ಮದ್ಯದೊರೆ

Updated: August 28, 2018, 11:00 AM IST
ನ್ಯೂಸ್​ 18 ಕನ್ನಡ

ನವದೆಹಲಿ(ಆ.28): ಭಾರತೀಯ ಬ್ಯಾಂಕ್​ಗಳಿಂದ ಕೋಟ್ಯಾಂತರ ರೂಪಾಯಿ ಸಾಲ ಪಡೆದು ಬ್ರಿಟನ್​ಗೆ ಓಡಿ ಹೋಗಿದ್ದ ಮದ್ಯ ದೊರೆ ವಿಜಯ್​ ಮಲ್ಯ ಭಾರತಕ್ಕೆ ಹಿಂತಿರುಗಲು ಚಿಂತಿಸಿದ್ದಾರಂತೆ. ಒಂದು ವೇಳೆ ಭಾರತಕ್ಕೆ ತಾನು ಹಿಂತಿರುಗದಿದ್ದರೆ, ಆಸ್ತಿ ಕಳೆದುಕೊಳ್ಳುತ್ತೇನೆಂಬ ಭಯ ಮಲ್ಯರನ್ನು ಕಾಡಲಾರಂಭಿಸಿದೆಯಂತೆ ಹೀಗಾಗಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದಾರೆನ್ನಲಾಗಿದೆ. ವಾಸ್ತವವಾಗಿ ಸಂಸತ್ತಿನಂತೆ ಅನುಮೋದನೆ ಪಡೆದಿರುವ ಹೊಸ ಮಸೂದೆಯನ್ವಯ ಒಂದು ಬಾರಿ ಬ್ಯಾಂಕ್​ಗಳಿಗೆ ನಷ್ಟವುಂಟುಮಾಡಿ ವಿದೇಶಕ್ಕೆ ಪರಾರಿದ ಅಪರಾಧಿಗಳ ಆಸ್ತಿ ಒಂದು ಬಾರಿ ಜಪ್ತಿ ಮಾಡಿದರೆ, ಮತ್ತೆಂದೂ ಅದನ್ನು ಹಿಂಪಡೆಯಲು ಸಾಧ್ಯವಿಲ್ಲ.

ಜಾರಿ ನಿರ್ದೇಶನಾಲಯ ಈವರೆಗೂ ಮಲ್ಯರ 13,500 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ತನಿಖಾ ತಂಡದ ಸಿಬ್ಬಂದಿಯೊಬ್ಬರು ಮಾತನಾಡುತ್ತಾ "ಮಲ್ಯರ ಸರಿ ಸುಮಾರು ಎಲ್ಲಾ ಆಸ್ತಿ ಜಪ್ತಿಯಾಗಿದೆ. ಒಂದು ಬಾರಿ ಈ ಆಸ್ತಿ ಜಪ್ತಿಗೊಳಿಸಿದ ಬಳಿಕ ಮುಂದೆದೂ ಹಿಂಪಡೆಯುವುದು ಅಸಾಧ್ಯ" ಎಂದಿದ್ದಾರೆ.

ವಿಜಯ್​ ಮಲ್ಯ ಈಗಾಗಲೇ ತನ್ನ ಆಸ್ತಿಯನ್ನು ಹಿಂಪಡೆಯಲು ಹೊಸ ಮಾರ್ಗಗಳನ್ನು ಹುಡುಕುತ್ತಿದ್ದಾರೆ. ಅಧಿಕಾರಿಗಳನ್ವಯ ಮಲ್ಯ ಕಳೆದ ಎರಡು ತಿಂಗಳಿನಿಂದ ಭಾರತಕ್ಕೆ ಹಿಂತಿರುಗಲು ಪ್ರಯತ್ನಿಸುತ್ತಿದ್ದಾರೆಂಬ ವಿಚಾರ ತಿಳಿದು ಬಂದಿದೆ.
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ