HOME » NEWS » National-international » DUE TO CORONA VIRUS 500 PEOPLE DIED IN AMERICA ON MONDAY WORLD DEATH TOLL RAISED TO 37K RMD

ಕೊರೋನಾ ವೈರಸ್​ಗೆ ಅಮೆರಿಕದಲ್ಲಿ ಒಂದೇ ದಿನ 500 ಸಾವು; ಇಟಲಿ, ಸ್ಪೇನ್​, ಜರ್ಮನಿ ಸ್ಥಿತಿ ಹೀನಾಯ

ಇಟಲಿಯಲ್ಲಿ ಈವರೆಗೆ 1 ಲಕ್ಷ ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಸತ್ತವರ ಸಂಖ್ಯೆ 12 ಸಾವಿರದ ಗಡಿ ಸಮೀಪಿಸಿದೆ. ಸ್ಪೇನ್​ನಲ್ಲಿ ಕೂಡ ಕೊರೋನಾ ಹಾವಳಿ ಮಿತಿ ಮೀರುತ್ತಿದೆ.

news18-kannada
Updated:March 31, 2020, 9:58 AM IST
ಕೊರೋನಾ ವೈರಸ್​ಗೆ ಅಮೆರಿಕದಲ್ಲಿ ಒಂದೇ ದಿನ 500 ಸಾವು; ಇಟಲಿ, ಸ್ಪೇನ್​, ಜರ್ಮನಿ ಸ್ಥಿತಿ ಹೀನಾಯ
ಸಾಂದರ್ಭಿಕ ಚಿತ್ರ
  • Share this:
ಕೊರೋನಾ ವೈರಸ್​ಗೆ ಇಡೀ ವಿಶ್ವವೇ ಕಂಗಾಲಾಗಿದೆ. ಅಮೆರಿಕದಲ್ಲಿ ನಿನ್ನೆ ಒಂದೇ ದಿನ 19 ಸಾವಿರ ಹೊಸ ಪ್ರಕರಣ ದಾಖಲಾಗಿದ್ದು, ಈ ಮೂಲಕ ಕೊರೋನಾ ಪೀಡಿತರ ಸಂಖ್ಯೆ 1.64 ಲಕ್ಷಕ್ಕೆ ಏರಿಕೆ ಆಗಿದೆ. ಅಮೆರಿಕದಲ್ಲಿ ನಿನ್ನೆ ಒಂದೇ ದಿನ 557 ಮಂದಿ ಮೃತಪಟ್ಟಿದ್ದು, ಈ ಮೂಲಕ ಸಾವಿನ ಸಂಖ್ಯೆ 3,100ಕ್ಕೆ ಏರಿಕೆ ಆಗಿದೆ.

ಅಮೆರಿಕ ಮುಂದುವರೆದ ರಾಷ್ಟ್ರಗಳ ಸಾಲಿನಲ್ಲಿ ಮೊದಲಿಗೆ ನಿಲ್ಲುತ್ತದೆ. ಆದಾಗ್ಯೂ ಅವರ ಬಳಿ ಕೊರೋನಾ ನಿಯಂತ್ರಣ ಅಸಾಧ್ಯವಾಗಿದೆ. ಇನ್ನು, ಅಮೇರಿಕ ಗಾತ್ರದಲ್ಲಿ ತುಂಬಾನೇ ದೊಡ್ಡದಿದೆ. ಹೀಗಾಗಿ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಿದೆ ಎನ್ನಲಾಗಿದೆ. ಕೊರೋನಾ ನಿಯಂತ್ರಣಕ್ಕೆ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಲು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್ ಮುಂದಾಗಿದ್ದಾರೆ.

ಇಟಲಿಯಲ್ಲಿ ಈವರೆಗೆ 1 ಲಕ್ಷ ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದ್ದು, ಸತ್ತವರ ಸಂಖ್ಯೆ 12 ಸಾವಿರದ ಗಡಿ ಸಮೀಪಿಸಿದೆ. ಸ್ಪೇನ್​ನಲ್ಲಿ ಕೂಡ ಕೊರೋನಾ ಹಾವಳಿ ಮಿತಿ ಮೀರುತ್ತಿದೆ. ಈವರೆಗೆ ಕೊರೋಮಾದಿಂದಾಗಿ ಸ್ಪೇನ್​ನಲ್ಲಿ 7,716 ಜನರು ಅಸುನೀಗಿದ್ದಾರೆ.

ಇದನ್ನೂ ಓದಿ: ಸೋಮವಾರ ಒಂದೇ ದಿನ ಭಾರತದಲ್ಲಿ 227 ಹೊಸ ಕೊರೋನಾ ಪ್ರಕರಣ; 32ಕ್ಕೆ ಏರಿದ ಸಾವಿನ ಸಂಖ್ಯೆ

ಕಟ್ಟುನಿಟ್ಟಾಗಿ ಲಾಕ್ ಡೌನ್ ಜಾರಿಗೆ ತಂದರೂ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರುಗತಿಯಲ್ಲೇ ಇದೆ. ದೇಶಾದ್ಯಂತ ಸೋಮವಾರ 227 ಹೊಸ ಪ್ರಕರಣ ದಾಖಲಾಗಿದ್ದು, ಈ ಮೂಲಕ ಕೊರೋನಾ ಸೋಂಕು ತಗುಲಿದವರ ಸಂಖ್ಯೆ 1251ಕ್ಕೆ ಏರಿಕೆ ಆಗಿದೆ. ಸಾವಿನ ಸಂಖ್ಯೆ 33ರ ಗಡಿ ತಲುಪಿದೆ.

ವಿಶ್ವಾದ್ಯಂತ ಕೊರೋನಾ ವೈರಸ್​ ಹರಡಿರುವ ರೀತಿ ತೀವ್ರ ಆತಂಕ ಸೃಷ್ಟಿಸುತ್ತದೆ. ಈವರೆಗೆ ವಿಶ್ವದಲ್ಲಿ 7.85 ಲಕ್ಷ  ಜನರಿಗೆ ಸೋಂಕಿರುವುದು ದೃಢಪಟ್ಟಿದೆ. 37 ಸಾವಿರ ಜನರು ಕೊರೋನಾಗೆ ಬಲಿಯಾಗಿದ್ದಾರೆ. 1.66 ಲಕ್ಷ ಜನರು ಕೊರೋನಾ ವೈರಸ್​ನಿಂದ ಚೇತರಿಕೆ ಕಂಡಿದ್ದಾರೆ.
First published: March 31, 2020, 9:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories