ಮದ್ಯದ ಅಮಲಿನಲ್ಲಿ 16 ಜನರ ಮೇಲೆ ಟ್ರಕ್​ ಚಲಾಯಿಸಿದ ಡ್ರೈವರ್: ಐವರು ಸಾವು!

Precilla Olivia Dias
Updated:August 30, 2018, 3:49 PM IST
ಮದ್ಯದ ಅಮಲಿನಲ್ಲಿ 16 ಜನರ ಮೇಲೆ ಟ್ರಕ್​ ಚಲಾಯಿಸಿದ ಡ್ರೈವರ್: ಐವರು ಸಾವು!
Precilla Olivia Dias
Updated: August 30, 2018, 3:49 PM IST
ನ್ಯೂಸ್​ 18 ಕನ್ನಡ

ಮೀರತ್​(ಆ.30): ಮೀರತ್​ನಲ್ಲಿ ಮದ್ಯದ ನಶೆಯಲ್ಲಿ ವ್ಯಕ್ತಿಯೋರ್ವ ಐವರನ್ನು ಬಲಿ ಪಡೆದಿರುವ ಘಟನೆ ನಡೆದಿದೆ. ನಶೆಯಲ್ಲಿ ಟ್ರಕ್​ ಚಲಾಯಿಸುತ್ತಿದ್ದ ಡ್ರೈವರ್​ ಒಬ್ಬ ತನ್ನ 10 ಟಯರ್​ಗಳ ಟ್ರಕ್​ ಮೇಲಿನ ನಿಯಂತ್ರಣ ಕಳೆದುಕೊಂಡಿದ್ದು, 16 ಜನರ ಮೇಲೆ ಚಲಾಯಿಸಿದ್ದಾನೆ. ಈ ನಡುವೆ ಹಲವಾರು ವಾಹನಗಳಿಗೂ ಈ ಟ್ರಕ್​ ಡಿಕ್ಕಿ ಹೊಡೆದಿದೆ. ಸದ್ಯ ಪೊಲೀಸರು ಟ್ರಕ್​ನ್ನು ವಶಕ್ಕೆ ಪಡೆದಿದ್ದು, ಟ್ರಕ್​ ಡ್ರೈವರ್​ನನ್ನು ಬಂಧಿಸಿದ್ದಾರೆ.

ಮೀರತ್​ನ ಟಿಪಿ ನಗರದ ದೆಹಲಿ ರಸ್ತೆಯಲ್ಲಿ ಈ ದುರ್ಘಟನೆ ನಡೆದಿದ್ದು, 100 ಕಿ. ಮೀಟರ್​ ವೇಗದಲ್ಲಿ ಬರುತ್ತಿದ್ದ ಟ್ರಕ್​ ಒಂದು ಆರಮಭದಲ್ಲಿ ಸ್ಕೂಟಿಗೆ ಡಿಕ್ಕಿ ಹೊಡೆದಿದೆ. ಈ ಸಂದರ್ಭದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಇದಾದ ಬಳಿಕ ಟ್ರಕ್​ ಮಾಂಸವನ್ನೊಯ್ಯುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಟ್ರಕ್​ ಅದೆಷ್ಟು ರಭಸವಾಗಿ ಹೊಡೆದಿದೆ ಎಂದರೆ ವಾಹನದೊಳಗಿದ್ದ ಮಾಂಸವು ರಸ್ತೆಯಲ್ಲೇ ಚೆಲ್ಲಾಪಿಲ್ಲಿಯಾಗಿ ಬಿದ್ದಿದೆ. ಇಲ್ಲಿಂದ 200 ಮೀಟರ್​ ಮುಂದೆ ಚಲಿಸಿದ ಯಮಸ್ವರೂಪಿ ಟ್ರಕ್​ ಆಟೋದಲ್ಲಿ ಚಲಿಸುತ್ತಿದ್ದ ಇಬ್ಬರನ್ನು ಬಲಿ ಪಡೆದಿದೆ.

ಈ ಘಟನೆಯಿಂದ ಆ ಪ್ರದೇಶದಲ್ಲಿ ಕೋಲಾಹಲವೆಬ್ಬಿದ್ದು, ಸಾವಿರಾರು ಮಂದಿ ಸ್ಥಳಕ್ಕಾಗಮಿಸಿ ಗುಂಪುಗೂಡಿದ್ದಾರೆ. ಅಪಘಾತದ ತೀವ್ರತೆ ಎಷ್ಟಿತ್ತೆಂದರೆ ಘಟನೆಯಲ್ಲಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರನ್ನು ಆಸ್ಪತ್ರರೆಗೆ ದಾಖಲಿಸಲಾಗಿದೆ. ಈವರೆಗೂ ಐವರು ಸಾವನ್ನಪ್ಪಿದ್ದಾರೆ. ಘಟನೆಯ ಬಳಿಕ ಸ್ಥಳಕ್ಕಾಗಮಿಸಿದ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇನ್ನು ಕೆಲವರು ಟ್ರಕ್​ಗೆ ಬೆಂಕಿ ಹಚ್ಚಲು ಯತ್ನಿಸಿದರಾದರೂ, ಸ್ಥಳದಲ್ಲಿದ್ದ ಪೊಲೀಸರು ತಡೆದಿದ್ದಾಋಎ. ಅಲ್ಲದೇ ಟ್ರಕ್​ನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...
  • I agree to receive emails from NW18

  • I promise to vote in this year's elections no matter what the odds are.

    Please check above checkbox.

  • SUBMIT

Thank you for
taking the pledge

But the job is not done yet!
vote for the deserving condidate
this year

Click your email to know more

Disclaimer:

Issued in public interest by HDFC Life. HDFC Life Insurance Company Limited (Formerly HDFC Standard Life Insurance Company Limited) (“HDFC Life”). CIN: L65110MH2000PLC128245, IRDAI Reg. No. 101 . The name/letters "HDFC" in the name/logo of the company belongs to Housing Development Finance Corporation Limited ("HDFC Limited") and is used by HDFC Life under an agreement entered into with HDFC Limited. ARN EU/04/19/13618
T&C Apply. ARN EU/04/19/13626