Kiss Of Death: ಪ್ರೇಯಸಿಯ ಒಂದು ಮುತ್ತಿಗೆ ಪ್ರೇಮಿ ಸಾವು, ಜೈಲಿನಲ್ಲಿದ್ದ ಯುವಕನ ಪ್ರಾಣ ಕಸಿದ ಪ್ರೀತಿ!

ಅಮೆರಿಕದ ಟೆನ್ನೆಸ್ಸೀಯಲ್ಲಿ ಬೆಚ್ಚಿಬೀಳಿಸುವ ಘಟನೆಯೊಂದು ಬೆಳಕಿಗೆ ಬಂದಿದೆ.ಬಂಧಿತ ಪ್ರೇಮಿಯನ್ನು ಭೇಟಿಯಾಗಲು ಹೋದ ಗೆಳತಿ ಆತನಿಗೆ ಮುತ್ತು ಕೊಟ್ಟ ಕೂಡಲೇ ಅವನು ಸಾವನ್ನಪ್ಪಿದ್ದಾಳೆ. ಚುಂಬಕ ನೆಪದಲ್ಲಿ ತಾನು ಆತನಿಗೆ ಕೊಡಬೇಕಾಗಿದ್ದ ಡ್ರಗ್ಸ್ ಅನ್ನು ಗೆಳತಿ ಬಾಯಿಗೆ ಹಾಕಿಕೊಂಡಿದ್ದಳು, ಆದರೆ ಪ್ರೇಮಿ ಎಲ್ಲಾ ಮಾದಕ ದ್ರವ್ಯಗಳನ್ನು ಒಟ್ಟಿಗೆ ನುಂಗಿ ಸಾವನ್ನಪ್ಪಿದ್ದಾನೆ.

ಪ್ರೇಯಸಿಯ ಒಂದು ಮುತ್ತಿಗೆ ಪ್ರೇಮಿ ಸಾವು

ಪ್ರೇಯಸಿಯ ಒಂದು ಮುತ್ತಿಗೆ ಪ್ರೇಮಿ ಸಾವು

  • Share this:
ನ್ಯೂಯಾರ್ಕ್(ಆ.19): ಕೆಲವೊಮ್ಮೆ ಆಶ್ಚರ್ಯಕರವಾದ ಕೆಲ ಘಟನೆಗಳು ಸಂಭವಿಸುತ್ತವೆ. ಇದಾದ ಬಳಿಕ ಜನರು ಇದು ಹೇಗೆ ಸಾಧ್ಯ ಎಂದು ಯೋಚಿಸಲು ಆರಂಭಿಸುತ್ತಾರೆ. ಆದರೆ ಇವುಗಳ ಹಿಂದಿನ ಪಿತೂರಿ ಅನಾವರಣವಾದಾಗ ಆಶ್ಚರ್ಯವನ್ನುಂಟು ಮಾಡುತ್ತವೆ. ಸದ್ಯ ಪ್ರಿಯಕರನ ಮೇಲೆ ಪ್ರೀತಿ ತೋರಿಸಲು ಹೋದ ಮಹಿಳೆ ಜೈಲು ಪಾಲಾದ ಪ್ರಕರಣವೂ ಇದನ್ನೇ ಸಾಬೀತುಪಡಿಸಿದೆ. ಮತ್ತೊಂದೆಡೆ, ಪ್ರೇಯಸಿಯ ಮುತ್ತು (Kiss) ಪ್ರೇಮಿಗೆ ಹೆಚ್ಚು ದುಬಾರಿಯಾಗಿದೆ, ಇದನ್ನು ಪಡೆದ ಬೆನ್ನಲ್ಲೇ ಆತ ಸಾವನ್ನಪ್ಪಿದ್ದಾನೆ. ಹೌದು ಅಮೆರಿಕದ ಟೆನ್ನೆಸ್ಸೀಯಲ್ಲಿ ಬೆಳಕಿಗೆ ಬಂದಿರುವ ಪ್ರಕರಣವೊಂದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಜೈಲಿನಲ್ಲಿ ಪ್ರಿಯಕರನನ್ನು ಭೇಟಿಯಾಗಲು ಹೋದ ಗೆಳತಿ ಮುತ್ತು ಕೊಟ್ಟ ತಕ್ಷಣ ಪ್ರೇಮಿ ಸಾವನ್ನಪ್ಪಿದ್ದಾನೆ. ಘಟನೆಯ ನಂತರ ಜೈಲಿನಲ್ಲಿ (Jail) ಸಂಚಲನ ಉಂಟಾಯಿತು. ವಾಸ್ತವವಾಗಿ ಪ್ರಿಯಕರನಿಗಾಗಿ ಗೆಳತಿ ಬಾಯಲ್ಲಿ ಡ್ರಗ್ಸ್ (Drugs) ಸೇವಿಸಿದ್ದಳು. ಅವಳು ಅದನ್ನು ಚುಂಬನದ ನೆಪದಲ್ಲಿ ಅವನಿಗೆ ನೀಡಲು ಬಯಸಿದ್ದಳು, ಆದರೆ ಪ್ರೇಮಿ ಎಲ್ಲಾ ಔಷಧಿಗಳನ್ನು ಒಂದೇ ಬಾರಿಗೆ ನುಂಗಿದ ಕಾರಣ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ: Banashankari Murder Case: ಬೆಂಗಳೂರಿನಲ್ಲಿ ಗೃಹಿಣಿಯ ಬರ್ಬರ ಕೊಲೆ; ಗಂಡನನ್ನು ವಶಕ್ಕೆ ಪಡೆದ ಪೊಲೀಸರು!

ಗೆಳತಿಯ ಮುತ್ತು ಪಡೆದ ಗೆಳೆಯ ಸಾವು

ರಾಚೆಲ್ ಡಾಲಾರ್ಡ್ ಟೆನ್ನೆಸ್ಸೀ ಜೈಲಿನಲ್ಲಿ ಕೈದಿಯಾಗಿದ್ದ ತನ್ನ ಗೆಳೆಯು ಜೋಶುವಾ ಬ್ರೌನ್‌ನನ್ನು ಭೇಟಿಯಾಗಲು ಬಂದಿದ್ದಳು. ಭೇಟಿಯ ಸಂತೋಷದಲ್ಲಿ, ರಾಚೆಲ್ ಬ್ರೌನ್‌ಗೆ ಮುತ್ತಿಟ್ಟರು. ಆದರೆ ಬ್ರೌನ್‌ ಅಷ್ಟರಲ್ಲೇ ಸಾವನ್ನಪ್ಪಿದ್ದಾನೆ. ತನಿಖೆಯಲ್ಲಿ ಹೊರಬಿದ್ದಿರುವ ಮಾಹಿತಿ ಅಚ್ಚರಿ ಮೂಡಿಸಿದೆ. ತನ್ನ ಪ್ರಿಯಕರನನ್ನು ಭೇಟಿಯಾಗಲು ಬಂದಿದ್ದ ರಾಚೆಲ್ ಬಾಯಲ್ಲಿ ಮೆಥಾಂಫೆಟಮೈನ್ ಎಂಬ ಮಾದಕ ವಸ್ತು ಇತ್ತು. ಪ್ರಿಯಕರನಿಗೆ ‘ಕಿಸ್’ ಮಾಡುವಾಗ ಈ ಮದ್ದು ಪ್ರೇಮಿಯ ಬಾಯಿಗೆ ವರ್ಗಾಯಿಸಲು ಮುಂದಾಗಿದ್ದಳು. ತನ್ನ ಯೋಜನೆಯಂತೆ ಆಕೆ ಇದರಲ್ಲಿ ಯಶಸ್ವಿಯಾದಳು, ಆದರೆ ಇದರ ಫಲಿತಾಂಶ ಮಾತ್ರ ಘನಘೋರವಾಗಿತ್ತು. ಬಾಯಿಯ ಮೂಲಕ ಇಡೀ ತಿಂಗಳ ಸ್ಟಾಕ್ ಅನ್ನು ಆಕೆ ತನ್ನ ಪ್ರೇಮಿಗೆ ನೀಡಿದ್ದರಿಂದ ಆತ ಏಕಾಏಕಿ ನುಂಗಿದ ಪರಿಣಾಮ ಸಾವನ್ನಪ್ಪಿದ್ದಾನೆ.

Youth dies due to girlfriend's kiss

ಇದನ್ನೂ ಓದಿ: Mysore Double Murder: ತಂದೆ & ಆತನ ಜೊತೆಗಿದ್ದ ಮಹಿಳೆಯನ್ನು ಕೊಚ್ಚಿ ಕೊಲೆಗೈದ ಮಗ..!

ಎಲ್ಲಾ ಔಷಧಿಯನ್ನು ಒಂದೇ ಬಾರಿಗೆ ನುಂಗಿದ ಪ್ರೇಮಿ, ಮಿತಿಮೀರಿದ ಸೇವನೆಯಿಂದ ಸಾವು

ಡ್ರಗ್ ಓವರ್ ಡೋಸ್ ನಿಂದಾಗಿ ಬ್ರೌನ್ ಮೇತ ಪಟ್ಟಿದ್ದಾರೆ ಎಂದು ಹೇಳಲಾಗಿದೆ. ವಾಸ್ತವವಾಗಿ, ಪ್ರೇಮಿಯ ಬಾಯಿಗೆ ಮಹಿಳೆ ವರ್ಗಾಯಿಸಿದ ಔಷಧದ ತೂಕವು ಸುಮಾರು 14 ಗ್ರಾಂಗಳಷ್ಟಿತ್ತು, ಅದು ಬಹಳ ಹೆಚ್ಚಾಗಿದೆ. ಆದರೆ ಯುವಕ ಏಕಾಏಕಿ ಸಿಕ್ಕ ಡ್ರಗ್ಸ್​ನ್ನು ಒಂದೇ ಬಾರಿಗೆ ಎಲ್ಲ ನುಂಗಿದ್ದಾನೆ. ಅದು ಅವನ ಸಾವಿಗೆ ಕಾರಣವಾಯಿತು. ಕೈದಿಯ ಸಾವಿನ ನಂತರ, ಇದೀಗ ಮಹಿಳೆಯನ್ನು ಕೊಲೆ ಆರೋಪದಡಿ ಬಂಧಿಸಲಾಗಿದೆ. ಜೋಶುವಾ ಬ್ರೌನ್ ಮಾದಕವಸ್ತು ಪ್ರಕರಣದಲ್ಲಿ 11 ವರ್ಷಗಳ ಶಿಕ್ಷೆಯನ್ನು ಅನುಭವಿಸುತ್ತಿದ್ದ. ಅವರ ಮರಣದ ನಂತರ, ಟೆನ್ನೆಸ್ಸೀ ಡಿಪಾರ್ಟ್ಮೆಂಟ್ ಆಫ್ ಕರೆಕ್ಷನ್ನ ಏಜೆಂಟ್ಗಳು, ಅಂದರೆ TDOS, ರಾಚೆಲ್ ಡಾಲಾರ್ಡ್ ಅವರನ್ನು ಕಸ್ಟಡಿಗೆ ತೆಗೆದುಕೊಂಡರು ಮತ್ತು ಆಕೆ ವಿರುದ್ಧ ಮಾದಕವಸ್ತು ಕಳ್ಳಸಾಗಣೆ ಮತ್ತು ಕೊಲೆ ಆರೋಪ ದಾಖಲಿಸಿದ್ದಾರೆ. ಬಂಧನದ ನಂತರ, ಆರೋಪಿ ರಾಚೆಲ್‌ನನ್ನು ಟೆನ್ನೆಸ್ಸೀ ಡಿಪಾರ್ಟ್‌ಮೆಂಟ್ ಆಫ್ ಕರೆಕ್ಷನ್‌ನಿಂದ ಹಿಕ್‌ಮನ್ ಕೌಂಟಿ ಜೈಲಿಗೆ ಕಳುಹಿಸಲಾಯಿತು. ವಿಚಾರಣೆಯ ಸಂದರ್ಭದಲ್ಲಿ, ಫೆಬ್ರವರಿಯಲ್ಲೂ ರಾಚೆಲ್ ಗೆಳೆಯನನ್ನು ಭೇಟಿಯಾಘುವ ನೆಪದಲ್ಲಿ ಬ್ರೌನ್‌ಗೆ ಡ್ರಗ್ಸ್ ನೀಡಿದ್ದಳು ಎಂದು ತಿಳಿದುಬಂದಿದೆ.
Published by:Precilla Olivia Dias
First published: