Droupadi Murmu Oath: ನಾಳೆ ಪ್ರಮಾಣವಚನ ಸ್ವೀಕರಿಸಲಿರುವ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು

ದ್ರೌಪದಿ ಮುರ್ಮು

ದ್ರೌಪದಿ ಮುರ್ಮು

ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಪ್ರಮಾಣವಚನ ಸಮಾರಂಭ ನಡೆಯಲಿದ್ದು, ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎನ್‌.ವಿ.‌ ರಮಣ ಅವರ ಪ್ರಮಾಣವಚನ ಬೋಧಿಸಲಿದ್ದಾರೆ. 

  • Share this:

ನವದೆಹಲಿ, ಜು. 24: ದೇಶದ 15ನೇ ರಾಷ್ಟ್ರಪತಿ (President) ಆಯ್ಕೆಯಾಗಿರುವ ದ್ರೌಪದಿ ಮುರ್ಮು ( Droupadi Murmu) ಅವರು ಸೋಮವಾರ ದೇಶದ ಅತ್ಯುನ್ನತ ಸಾಂವಿಧಾನಿಕ ಹುದ್ದೆ ನಿಭಾಯಿಸುವ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಪ್ರಮಾಣವಚನ ಸಮಾರಂಭ ನಡೆಯಲಿದ್ದು, ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎನ್‌.ವಿ.‌ ರಮಣ (Chief  Justice N.V. Ramana) ಅವರ ಪ್ರಮಾಣವಚನ ಬೋಧಿಸಲಿದ್ದಾರೆ. ನಂತರ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.


ಮೆರವಣಿಗೆ ಮೂಲಕ ಸಂಸತ್ತಿಗೆ ಆಗಮನ
ಸಮಾರಂಭಕ್ಕೂ ಮೊದಲು ನಿರ್ಗಮಿತ ರಾಷ್ಟ್ರಪತಿ ರಮಾನಾಥ್ ಕೋವಿಂದ್ ಮತ್ತು ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಮೆರವಣಿಗೆ ಮೂಲಕ ಸಂಸತ್ತಿಗೆ ಆಗಮಿಸಲಿದ್ದಾರೆ. ಉಪರಾಷ್ಟ್ರಪತಿ ಮತ್ತು ರಾಜ್ಯಸಭೆಯ ಅಧ್ಯಕ್ಷ ಎಂ. ವೆಂಕಯ್ಯ ನಾಯ್ಡು, ಪ್ರಧಾನ ಮಂತ್ರಿ ನರೇಂದ್ರ ಮೋದಿ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ, ಮಂತ್ರಿ ಮಂಡಳಿಯ ಸದಸ್ಯರು, ಎಲ್ಲಾ ರಾಜ್ಯಗಳ ರಾಜ್ಯಪಾಲರು, ಮುಖ್ಯಮಂತ್ರಿಗಳು, ರಾಜತಾಂತ್ರಿಕ ನಿಯೋಗಗಳ ಮುಖ್ಯಸ್ಥರು, ಸಂಸತ್ ಸದಸ್ಯರು ಮತ್ತು ಪ್ರಧಾನ ನಾಗರಿಕ ಮತ್ತು ಮಿಲಿಟರಿ ಅಧಿಕಾರಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.


ಇದನ್ನೂ ಓದಿ: Draupadi Murmu: ಭಾರತದ ರಾಷ್ಟ್ರಪತಿಗಳ ವೇತನ ಎಷ್ಟು ಗೊತ್ತೇ? ದ್ರೌಪದಿ ಮುರ್ಮು ಪಡೆಯುವ ಸಂಬಳವಿದು


ರಾಷ್ಟ್ರಪತಿ ಪದಗ್ರಹಣದ ವೇಳಾಪಟ್ಟಿಯ ವಿವರ ಹೀಗಿದೆ...
ಬೆ. 8.30: ರಾಜ್‌ಘಾಟ್‌ಗೆ ತೆರಳಿ ಮಹಾತ್ಮಾ ಗಾಂಧೀಜಿ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಲಿರುವ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು
ಬೆ. 9.22: ರಾಷ್ಟ್ರಪತಿ ಭವನದ ನಾರ್ತ್ ಕೋರ್ಟ್ ತಲುಪಲಿರುವ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು. ಮೊದಲಿಗೆ ಅಧ್ಯಯನ/ಕಾವೇರಿ (ಸಮಿತಿ ಕೊಠಡಿ)ಗೆ ಭೇಟಿ. ದ್ರೌಪದಿ ಮುರ್ಮು ಅವರನ್ನು ಸ್ವಾಗತಿಸಲಿರುವ ನಿರ್ಗಮಿತ ರಾಷ್ಟ್ರೀಯ ರಮಾನಾಥ್ ಕೋವಿಂದ್.
ಬೆ. 9:42: ಅಧ್ಯಯನ/ಕಾವೇರಿ ಕೊಠಡಿಯಿಂದ ದರ್ಬಾರ್ ಹಾಲ್‌ಗೆ ತೆರಳಲಿರುವ ರಾಷ್ಟ್ರಪತಿ ಕೋವಿಂದ್ ಮತ್ತು ದ್ರೌಪದಿ ಮುರ್ಮು.
ಬೆ. 9.49: ಅಧ್ಯಕ್ಷರ ಅಂಗರಕ್ಷಕರು ಫೋರ್ಕೋರ್ಟ್‌ನಲ್ಲಿರುವ ವಂದನಾ ವೇದಿಕೆಯಲ್ಲಿ ರಾಷ್ಟ್ರೀಯ ಗೌರವ ವಂದನೆ. ಗೌರವ ವಂದನೆ ಸ್ವೀಕರಿಸಲಿರುವ ರಮಾನಾಥ್ ಕೋವಿಂದ್.
ಬೆ.9.50: ಸಂಸತ್ತಿಗೆ ಮೆರವಣಿಗೆಯಲ್ಲಿ ತೆರಳಲಿರುವ ರಾಷ್ಟ್ರಪತಿ ಮತ್ತು ಚುನಾಯಿತ ಅಧ್ಯಕ್ಷರು
ಬೆ.10.03: ಸಂಸತ್ತಿಗೆ ಆಗಮಿಸಲಿರುವ ರಾಷ್ಟ್ರಪತಿ ಮತ್ತು ಚುನಾಯಿತ ಅಧ್ಯಕ್ಷರು
ಬೆ.10.15: ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರಮಾಣ ವಚನ ಸ್ವೀಕಾರ.‌ ನಂತರ 21 ಗನ್ ಸೆಲ್ಯೂಟ್
ಬೆ.10.23: ರಾಷ್ಟ್ರಪತಿ ದ್ರೌಪದಿ ಮುರ್ಮು ಸಂಸತ್ತಿನಲ್ಲಿ ಭಾಷಣ.
ಬೆ.10.33: ಉಪಾಧ್ಯಕ್ಷರಿಂದ ಇಂಗ್ಲಿಷಿಗೆ ಅಧ್ಯಕ್ಷರ ಭಾಷಣದ ತರ್ಜುಮೆ
ಬೆ.10.37: ರಾಷ್ಟ್ರಪತಿಗಳು ಸಂಸತ್ತಿನಿಂದ ನಿರ್ಗಮನ
ಬೆ.10.42: ರಾಷ್ಟ್ರಪತಿಗಳಿಗೆ ಸಂಸತ್ತಿನಲ್ಲಿ ಪಿಬಿಜಿಯಿಂದ ಗೌರವ ವಂದನೆ
ಬೆ.10.57: ರಾಷ್ಟ್ರಪತಿ ಮತ್ತು ಮಾಜಿ ರಾಷ್ಟ್ರಪತಿಗಳು ರಾಷ್ಟ್ರಪತಿ ಭವನಕ್ಕೆ ಆಗಮನ. ರಾಷ್ಟ್ರಪತಿ ಭವನದ ಮುಂಭಾಗದಲ್ಲಿ ರಾಷ್ಟ್ರಪತಿಗಳಿಂದ ಗೌರವ ವಂದನೆ ಸ್ವೀಕಾರ
ಬೆ. 10.59: ರಾಷ್ಟ್ರಪತಿ ಕಚೇರಿಗೆ ಬರಲಿರುವ ರಾಷ್ಟ್ರಪತಿ ಮತ್ತು ಮಾಜಿ ರಾಷ್ಟ್ರಪತಿಗಳು


ರಾಷ್ಟ್ರಪತಿ ಆಯ್ಕೆಯ ಮಾಹಿತಿ 


ಜುಲೈ 18 ರಂದು, ದೇಶಾದ್ಯಂತ ಎಲ್ಲಾ ಚುನಾಯಿತ ಶಾಸಕರು ಮತ್ತು ಸಂಸದರು ರಾಮ್ ನಾಥ್ ಕೋವಿಂದ್ ಅವರ ನಂತರದ ನೂತನ ರಾಷ್ಟ್ರಪತಿ ಆಯ್ಕೆಗಾಗಿ ಬೆಳಗ್ಗೆ 10 ರಿಂದ ಸಂಜೆ 5 ರ ನಡುವೆ ಸಂಸತ್ ಭವನ ಮತ್ತು ರಾಜ್ಯ ವಿಧಾನಸಭೆಗಳ ವ್ಯಾಪ್ತಿಯ 30 ಕೇಂದ್ರಗಳು ಸೇರಿದಂತೆ 31 ಸ್ಥಳಗಳಲ್ಲಿ ಮತ ಚಲಾಯಿಸಿದ್ದರು. ಮೂರನೇ ಸುತ್ತಿಗೆ ದ್ರೌಪದಿ ಮುರ್ಮು 812, ಯಶವಂತ್ ಸಿನ್ಹಾ 521 ಮತಗಳನ್ನು ಪಡೆದರು. ಮುರ್ಮು 10 ರಾಜ್ಯಗಳ ಒಟ್ಟು 1138 ಶಾಸಕರ ಪೈಕಿ 809 ಶಾಸಕರ ಮತಗಳನ್ನು ಪಡೆದರೆ, 1,05,299 ಮತ ಎಣಿಕೆಯೊಂದಿಗೆ, ಸಿನ್ಹಾ ಎರಡನೇ ಸುತ್ತಿನಲ್ಲಿ 44,276 ಮತ ಎಣಿಕೆಯೊಂದಿಗೆ 329 ಶಾಸಕರ ಮತಗಳನ್ನು ಪಡೆದರು. ಈ ಅಧ್ಯಕ್ಷೀಯ ಚುನಾವಣೆಯಲ್ಲಿ ಪ್ರತಿ ಸಂಸದರು 700 ಮತಗಳ ಮೌಲ್ಯವನ್ನು ಹೊಂದಿದ್ದು, ಮುರ್ಮು ಅವರು ಒಟ್ಟು 5,23,600 ಮತಗಳನ್ನು ಹೊಂದಿದ್ದರು, ಇದು ಒಟ್ಟು ಮತ ಚಲಾಯಿಸಿದ ಸಂಸದರ ಒಟ್ಟು ಮಾನ್ಯ ಮತ ಎಣಿಕೆಯ ಶೇಕಡಾ 72.19 ಆಗಿದೆ.

Published by:Kavya V
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು