Drone Attack| ಜಮ್ಮು-ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಮತ್ತೆ ಡ್ರೋನ್ ಪತ್ತೆ; ಗಡಿಯಲ್ಲಿ ಕಟ್ಟೆಚ್ಚರ, ಹೆಚ್ಚುವರಿ ಸೇನೆ ನಿಯೋಜನೆ!

ಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಡ್ರೋನ್ ಪತ್ತೆಯಾಗಿದ್ದು ಈ ಭಾಗದಲ್ಲಿ ಇನ್ನಷ್ಟು ಸೇನೆಯನ್ನು ನಿಯೋಜನೆ ಮಾಡಲಾಗಿದೆ ಎಂದು ಉನ್ನತ ಮೂಲಗಳು ನ್ಯೂಸ್ 18 ಗೆ ತಿಳಿಸಿವೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಜಮ್ಮು-ಕಾಶ್ಮೀರ (ಜುಲೈ 4); ಕಳೆದ ಜೂನ್ 27 ರಂದು ಮುಂಜಾನೆ 1.40ಕ್ಕೆ ಜಮ್ಮು ವಾಯುನೆಲೆಯ ಮೇಲೆ ಭಯೋತ್ಪಾದಕರು ಡ್ರೋನ್​ ದಾಳಿ ನಡೆಸಿದ್ದರು. 6 ನಿಮಿಷಗಳ ಅಂತರದಲ್ಲಿ ಎರಡು ಬಾಂಬ್ ಬ್ಲಾಸ್ಟ್​ ಆಗಿದ್ದು, ಇ್ಬಬರು ಸೈನಿಕರು ಗಾಯಕ್ಕೆ ಒಳಗಾಗಿದ್ದರು. ಈ ಸುದ್ದಿ ರಾಷ್ಟ್ರೀಯ ಮಟ್ಟದಲ್ಲಿ ಸಾಕಷ್ಟು ಸದ್ದು ಮಾಡಿತ್ತು. ಈ ಸ್ಪೋಟ 2016ರ ಪಠಾಣ್ ಕೋಟ್​ ವಾಯನೆಲೆ ದಾಳಿಯ ಮುಂದು ವರಿಕೆಯಾಗಿದ್ದು, ಇದರ ಹಿಂದೆ ಜೈಶ್​-ಎ-ಮೊಹಮ್ಮದ್​ ಉಗ್ರ ಸಂಘಟನೆಯ ಕೈವಾಡ ಇರುವ ಶಂಕೆ ಇದೆ ಎಂದು ಗುಪ್ತಚರ ಇಲಾಖೆ ಉನ್ನತ ಮೂಲಗಳು ಶಂಕೆ ವ್ಯಕ್ತಪಡಿಸಿತ್ತು. ಈ ಪ್ರಕರಣದ ತನಿಖೆಗೆಯನ್ನು ಎನ್ಐಎ (NIA-National Investigation Agency) ಗೆ ವಹಿಸಲಾಗಿದ್ದು, ಎನ್​ಐಎ ಅಧಿಕಾರಿಗಳು ಸಹ ಈ ದಾಳಿಯ ಹಿಂದೆ ಜೈಶ್​-ಎ-ಮೊಹಮ್ಮದ್ ಸಂಘಟನೆಯ ಕೈವಾಡ ಇದೆ ಎಂಬ ನಿಟ್ಟಿನಲ್ಲಿಯೇ ತನಿಖೆಗೆ ಮುಂದಾಗಿದ್ದಾರೆ. ಆದರೆ, ಈ ನಡುವೆ ಇಂದು ಮತ್ತೆ ಜಮ್ಮು ಕಾಶ್ಮೀರದ ಸಾಂಬಾ ಜಿಲ್ಲೆಯಲ್ಲಿ ಡ್ರೋನ್ ಪತ್ತೆಯಾಗಿದ್ದು ಈ ಭಾಗದಲ್ಲಿ ಇನ್ನಷ್ಟು ಸೇನೆಯನ್ನು ನಿಯೋಜನೆ ಮಾಡಲಾಗಿದೆ ಎಂದು ಉನ್ನತ ಮೂಲಗಳು ನ್ಯೂಸ್ 18 ಗೆ ತಿಳಿಸಿವೆ.

  ಜಮ್ಮುವಿನಲ್ಲಿರುವ ಭಾರತದ ವಾಯುಸೇನೆಯ ವಾಯುನೆಲೆಯಲ್ಲಿ ಡ್ರೋನ್ ದಾಳಿಯ ನಡೆದಂದಿನಿಂದಲೇ ಕಣಿವೆ ರಾಜ್ಯದಲ್ಲಿ ಮತ್ತಷ್ಟು ಸೈನ್ಯವನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಿದೆ. ಅಲ್ಲದೆ, ಸಂಭವನೀಯ ದಾಳಿಯನ್ನು ತಡೆಯಲು ರಕ್ಷಣಾ ಇಲಾಖೆ ಮುಂದಾಗಿದೆ ಎನ್ನಲಾಗಿತ್ತು. ಅಷ್ಟರಲ್ಲೇ ಇದೀಗ ಮತ್ತೆ ಸಾಂಬಾ ಜಿಲ್ಲೆಯಲ್ಲಿ ಡ್ರೋನ್ ಕಾಣಿಸಿಕೊಂಡಿರುವುದು ಆತಂಕಕ್ಕೆ ಕಾರಣವಾಗಿದೆ.

  ಭಾರತ-ಪಾಕಿಸ್ತಾನ ಅಂತರರಾಷ್ಟ್ರೀಯ ಗಡಿಯಲ್ಲಿ (ಐಬಿ) ಪ್ರಮುಖವಾಗಿ ಪಂಜಾಬ್ ಮತ್ತು ಜಮ್ಮು ಪ್ರದೇಶಗಳಲ್ಲಿ ಇಂತಹ ಅನೇಕ ಡ್ರೋನ್​ಗಳು ಕಳೆದ ಒಂದು ವರ್ಷದಿಂದ ಪತ್ತೆಯಾಗುತ್ತಲೇ ಇವೆ. ಈ ಎಲ್ಲಾ ಡ್ರೋನ್​ಗಳನ್ನು ಬಿಎಸ್​ಎಫ್ ಪಡೆ ಹೊಡೆದು ಉರುಳಿಸಿದೆ. ಅಲ್ಲದೆ, ಬಿಎಸ್‌ಎಫ್ ಕಳೆದ ವರ್ಷ ಜೂನ್‌ನಲ್ಲಿ ಜಮ್ಮುವಿನಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಹೊತ್ತಿದ್ದ ಡ್ರೋನ್ ಅನ್ನು ಹೊಡೆದುರುಳಿಸಿದ್ದು ದೊಡ್ಡ ಸುದ್ದಿಯಾಗಿತ್ತು.

  ಪಾಕಿಸ್ತಾನದಲ್ಲಿ ಭಾರತೀಯ ರಾಯಭಾರ ಕಚೇರಿಯೊಳಗೆ ಡ್ರೋನ್ ಕಳ್ಳಪ್ರವೇಶ; ಭಾರತ ಆಕ್ಷೇಪ

  ಕಳೆದ ಶನಿವಾರ, ಜುಲೈ 26ರಂದು ಪಾಕಿಸ್ತಾನ ರಾಜಧಾನಿ ಇಸ್ಲಾಮಾಬಾದ್​ನಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಯ ಒಳಭಾಗದಲ್ಲಿ ಒಂದು ಡ್ರೋನ್ ಹಾರಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿತ್ತು. ಕುತೂಹಲ ಮತ್ತು ಆತಂಕದ ವಿಚಾರವೆಂದರೆ ರಾಜತಾಂತ್ರಿಕ ಕಚೇರಿಯೊಳಗೆ ಡ್ರೋನ್ ಪತ್ತೆಯಾದ ಒಂದೆರಡು ಗಂಟೆಯಲ್ಲಿ ಜಮ್ಮುವಿನ ಭಾರತೀಯ ವಾಯುನೆಲೆ ಬಳಿ ಡ್ರೋನ್ ದಾಳಿ ನಡೆದು ಕೆಲ ಅನಾಹುತಗಳನ್ನ ಉಂಟು ಮಾಡಿತ್ತು.

  ಇದನ್ನೂ ಓದಿ: Rafale Deal| ರಫೇಲ್ ಡೀಲ್​ನಲ್ಲಿ ಭ್ರಷ್ಟಾಚಾರದ ವಾಸನೆ, ಒಪ್ಪಂದದ ತನಿಖೆಗೆ ನ್ಯಾಯಾಧೀಶರನ್ನು ನೇಮಿಸಿದ ಫ್ರಾನ್ಸ್‌ ಸರ್ಕಾರ

  ಇಲ್ಲಿ ಜಮ್ಮುವಿನಲ್ಲಿ ಡ್ರೋನ್ ದಾಳಿ ಆಗುವುದು ಹಾಗೂ ಅಲ್ಲಿ ಪಾಕಿಸ್ತಾನದಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಡ್ರೋನ್ ಕಾಣಿಸಿಕೊಳ್ಳುವುದು ಕಾಕತಾಳೀಯವೋ ಅಥವಾ ರಹಸ್ಯ ಕಾರ್ಯಾಚರಣೆಯ ಭಾಗವಾ ಎಂಬುದು ಸ್ಪಷ್ಟವಾಗಬೇಕಿದೆ. ಆದರೆ, ಭಾರತೀಯ ರಾಯಭಾರ ಕಚೇರಿಯೊಳಗೆ ನಡೆಯುತ್ತಿದ್ದ ಕಾರ್ಯಕ್ರಮವೊಂದರ ವಿಡಿಯೋ ರೆಕಾರ್ಡಿಂಗ್ ಡ್ರೋನ್ ಮೂಲಕ ಮಾಡುತ್ತಿದ್ದಿರಬಹುದು ಎಂದು ಶಂಕಿಸಲಾಗಿದೆ.

  "ಶನಿವಾರ ರಾತ್ರಿ 10:15ರಂದು ಭಾರತೀಯ ರಾಯಭಾರ ಕಚೇರಿಯ ಆವರಣದೊಳಗಿರುವ ವಸತಿ ಪ್ರದೇಶದಲ್ಲಿ ಕಾರ್ಯಕ್ರಮವೊಂದು ನಡೆಯುತ್ತಿತ್ತು. ಆಗ ಒಂದು ಡ್ರೋನ್ ಎರಡು ಬಾರಿ ಅಲ್ಲಿ ಸುತ್ತು ಹಾಕಿ ಹೋಗಿತ್ತು" ಎಂದು ಇಂದು ಶುಕ್ರವಾರ ಬೆಳಗ್ಗೆ ಹಿರಿಯ ರಾಜತಾಂತ್ರಿಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

  ಇದನ್ನೂ ಓದಿ: Drone Attack in Jammu| ಜಮ್ಮು ವಾಯುನೆಲೆ ಡ್ರೋನ್ ದಾಳಿ ಹಿಂದಿದೆಯೇ ಜೈಶ್​-ಎ-ಮೊಹಮ್ಮದ್ ಉಗ್ರರ ಕೈವಾಡ?; ಎನ್​ಐಎ ತನಿಖೆ

  "ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಗೆ ಪೂರ್ವಭಾವಿ ಕಾರ್ಯಕ್ರಮಕ್ಕೆಂದು ನಮ್ಮ ಕಚೇರಿ ಬಳಿ ಕಾರ್ಯಕ್ರಮ ನಡೆಯುತ್ತಿತ್ತು. ಆಗ ಡ್ರೋನ್ ಮೂಲಕ ಅದನ್ನು ರೆಕಾರ್ಡಿಂಗ್ ಮಾಡುತ್ತಿದ್ದಿರಬಹುದು. ಆದರೆ, ಡ್ರೋನ್ ಬಂದಿದ್ದರ ಉದ್ದೇಶ ಸ್ಪಷ್ಟವಾಗಿ ಗೊತ್ತಾಗಿಲ್ಲ" ಎಂದು ಈ ಅಧಿಕಾರಿ ಹೇಳಿದ್ಧಾರೆ.

  ಅಂದು, ಶನಿವಾರ ರಾತ್ರಿ ಕಚೇರಿಯೊಳಗೆ ಬಾಲಿವುಡ್ ನೈಟ್ ಎಂಬ ಕಾರ್ಯಕ್ರಮ ನಡೆಯುತ್ತಿತ್ತೆಂಬ ಮಾಹಿತಿ ಮತ್ತೊಂದು ಮೂಲದಿಂದ ನ್ಯೂಸ್18 ಗೆ ಸಿಕ್ಕಿದೆ. ಇದೇನೇ ಇದ್ದರೂ ರಾಜತಾಂತ್ರಿಕ ಕಚೇರಿಯೊಳಗೆ ನಡೆದ ಈ ಘಟನೆ ಜಿನಿವಾ ಒಪ್ಪಂದದ ನಿಯಮದ ಉಲ್ಲಂಘನೆಯಾಗಿದೆ. ಈ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಈ ವಿಚಾರವನ್ನು ಪಾಕಿಸ್ತಾನ ವಿದೇಶಾಂಗ ಸಚಿವಾಲಯಕ್ಕೆ ತಿಳಿಸಿ ಆಕ್ಷೇಪ ವ್ಯಕ್ತಪಡಿಸಿದೆ.
  Published by:MAshok Kumar
  First published: