SankhyaSutra: ಏರೋಸ್ಪೇಸ್‌, ರಕ್ಷಣಾ ವಲಯದ ಭಾರತೀಯ ಸಾಫ್ಟ್‌ವೇರ್‌ ಪ್ರದರ್ಶಿಸಲಿರುವ ಸಂಖ್ಯಾಸೂತ್ರ ಲ್ಯಾಬ್ಸ್‌

Drone Festival 2022: ಸಂಖ್ಯಾಸೂತ್ರ ಸಂಸ್ಥೆ ಅತ್ಯಾಧುನಿಕ ಕಂಪ್ಯುಟೇಶನಲ್‌ ಫ್ಲೂಯಿಡ್‌ ಡೈನಾಮಿಕ್ಸ್‌ ಸಾಫ್ಟ್‌ವೇರ್‌ ಮೂಲಕ  ಆತ್ಮನಿರ್ಭರ ಭಾರತದ ಧ್ಯೇಯನ್ನು ಪ್ರೋತ್ಸಾಹಿಸಲಿದೆ. ಇದರ ಸಾಫ್ಟ್‌ವೇರ್‌ ಪ್ರಾಥಮಿಕವಾಗಿ ವಾಯುಯಾನ ಮತ್ತು ರಕ್ಷಣಾ ಸಲಕರಣೆಗಳಲ್ಲಿ ಬಳಕೆಯಾಗುತ್ತದೆ.

ಸಂಖ್ಯಾಸೂತ್ರ ಸಂಸ್ಥೆ

ಸಂಖ್ಯಾಸೂತ್ರ ಸಂಸ್ಥೆ

 • Share this:
  ನವದೆಹಲಿ, ಮೇ 27, 2022: ಬೆಂಗಳೂರು ಮೂಲದ ಸಂಖ್ಯಾಸೂತ್ರ ಲ್ಯಾಬ್ಸ್‌ (SankhyaSutra labs) ತನ್ನ ಉತ್ಪನ್ನಗಳು ಮತ್ತು ಸೌಲಭ್ಯಗಳನ್ನು ನವದೆಹಲಿಯ (Delhi) ಪ್ರಗತಿ ಮೈದಾನದಲ್ಲಿ (Pragathi Ground) ನಡೆಯುತ್ತಿರುವ ಡ್ರೋನ್‌ ಫೆಸ್ಟಿವಲ್‌ನಲ್ಲಿ (Drone Festival) ಪ್ರದರ್ಶಿಸುತ್ತಿದೆ. ಅಂದಹಾಗೆಯೇ ಸಂಖ್ಯಾಸೂತ್ರ ಲ್ಯಾಬ್ಸ್‌ ಜಿಯೋ ಪ್ಲಾಟ್‌ಫಾರ್ಮ್ಸ್​ ಲಿಮಿಟೆಡ್‌ನ (Jio Platform Limited) ಅಂಗಸಂಸ್ಥೆಯಾಗಿದ್ದು,  ಈ ವರ್ಷ ಅಕ್ಟೋಬರ್‌ನಲ್ಲಿ  ಪ್ರಮುಖ ಉತ್ಪನ್ನ ಬಿಡುಗಡೆ ಕಾರ್ಯಕ್ರಮವನ್ನು ಸಂಸ್ಥೆ ಹಮ್ಮಿಕೊಂಡಿದೆ. ಸಂಖ್ಯಾಸೂತ್ರ ಸಂಸ್ಥೆ ಅತ್ಯಾಧುನಿಕ ಕಂಪ್ಯುಟೇಶನಲ್‌ ಫ್ಲೂಯಿಡ್‌ ಡೈನಾಮಿಕ್ಸ್‌ ಸಾಫ್ಟ್‌ವೇರ್‌ ಮೂಲಕ  ಆತ್ಮನಿರ್ಭರ ಭಾರತದ (atmanirbhar bharat) ಧ್ಯೇಯನ್ನು ಪ್ರೋತ್ಸಾಹಿಸಲಿದೆ. ಇದರ ಸಾಫ್ಟ್‌ವೇರ್‌ ಪ್ರಾಥಮಿಕವಾಗಿ ವಾಯುಯಾನ ಮತ್ತು ರಕ್ಷಣಾ ಸಲಕರಣೆಗಳಲ್ಲಿ ಬಳಕೆಯಾಗುತ್ತದೆ. ಅಲ್ಲದೆ, ವಾಹನ (Vehicle), ಸೆಮಿಕಂಡಕ್ಟರ್ ಉತ್ಪಾದನೆ ಮತ್ತು ಪ್ರಕ್ರಿಯೆ ಉದ್ಯಮಗಳಲ್ಲಿ, ಉತ್ಪನ್ನದ ವಿನ್ಯಾಸ ಮತ್ತು ಕಾರ್ಯನಿರ್ವಹಣೆಯಂತಹ ಹಲವು ಹಂತಗಳಲ್ಲೂ ಬಳಕೆಯಾಗುತ್ತದೆ.

  ಸಂಖ್ಯಾಸೂತ್ರ ಲ್ಯಾಬ್ಸ್‌ನ ಸಿಇಒ ಡಾ. ಸುನೀಲ್‌ ಶೆರ್ಲೇಕರ್ ರಕ್ಷಣಾ ವಲಯದಲ್ಲಿ ಸ್ವಾವಲಂಬನೆ ಕುರಿತು ಮಾತನಾಡುವಾಗ, ‘‘ದೇಶದೊಳಗೇ ವಿವಿಧ ಹಾರ್ಡ್‌ವೇರ್‌ ಉತ್ಪಾದನೆ ಮಾಡುವ ಸಾಮರ್ಥ್ಯದ ಮೇಲೆ ಗಮನ ಹರಿಸುತ್ತೇವೆ. ಅದರೆ, ದೇಶದಲ್ಲೇ ವಿನ್ಯಾಸ ಪರಿಕರಗಳನ್ನು ರೂಪಿಸದಿದ್ದರೆ ಸ್ವಾವಲಂಬನೆ ಸಾಧ್ಯವಿಲ್ಲ. ಸಂಖ್ಯಾಸೂತ್ರದಲ್ಲಿ, ಭಾರತ ಮತ್ತು ವಿಶ್ವಕ್ಕಾಗಿ ಡೀಪ್ ಟೆಕ್ನಾಲಜಿಯನ್ನು ನಾವು ಅಭಿವೃದ್ಧಿಪಡಿಸುತ್ತಿದ್ದೇವೆ’’ ಎಂದು ಹೇಳಿದರು.

  ಇದನ್ನು ಓದಿ: Bharat Drone Mahotsav 2022: ನಾಳೆ ಭಾರತದ ಅತಿದೊಡ್ಡ ಡ್ರೋನ್ ಫೆಸ್ಟಿವಲ್ ಉದ್ಘಾಟನೆ ಮಾಡಲಿರುವ ಪ್ರಧಾನಿ ಮೋದಿ

  ನಂತರ ಮಾತು ಮುಂದುವರಿಸಿದ ಅವರು, ಟರ್ಬ್ಯುಲಂಟ್‌ ಬಗ್ಗೆ ನಿಖರವಾದ ಸಿಮ್ಯುಲೇಶನ್‌ ಅನ್ನು ವಾಯುಯಾನ ಮತ್ತು ರಕ್ಷಣಾ ಉಪಕರಣಗಳಲ್ಲಿ ಸಾಧಿಸುವುದು ಸವಾಲಿನ ಕೆಲಸವಾಗಿದ್ದು, ಹಲವು ಹಂತಗಳಲ್ಲಿ ವಿವಿಧ ಪ್ರಕ್ರಿಯೆಗಳನ್ನು ನಡೆಸಬೇಕಿರುತ್ತದೆ. ಕ್ಲಾಸಿಕಲ್‌ ಸಿಎಫ್‌ಡಿ ಟೂಲ್‌ಗಳನ್ನು ಬಳಸಿಕೊಂಡು ಈ ಸವಾಲನ್ನು ಎದುರಿಸಲಾಗುತ್ತದೆ. ಆದರೆ, ಸಂಖ್ಯಾಸೂತ್ರ ಲ್ಯಾಬ್ಸ್‌ ಇದರ ಬದಲಿಗೆ ಫಿಸಿಕ್ಸ್‌, ಗಣಿತ ಮತ್ತು ಕಂಪ್ಯೂಟರ್ ಸೈನ್ಸ್‌ ಪರಿಕಲ್ಪನೆಗಳನ್ನು ಬಳಸಿಕೊಂಡು, ಸುಧಾರಿತ ಸಿಎಫ್‌ಡಿ ಟೂಲ್‌ಗಳನ್ನು ರೂಪಿಸಿದೆ. ಇದು ಅಂದಾಜು ಟರ್ಬುಲೆನ್ಸ್‌ ಮಾಡೆಲ್‌ಗಳನ್ನು ಬಳಸುವುದಿಲ್ಲ ಬದಲಿಗೆ ನಿಖರ ವಿಧಾನಗಳನ್ನು ಬಳಸುತ್ತದೆ ಎಂದು ಹೇಳಿದರು.

  ಇದನ್ನು ಓದಿ: Leopard Burnt Alive: ಚಿರತೆಯನ್ನು ಜೀವಂತ ಸುಟ್ಟ ಮಂದಿ! 150 ಜನರ ವಿರುದ್ಧ FIR

  ಬಳಿಕ ಸಂಖ್ಯಾಸೂತ್ರ ಲ್ಯಾಬ್ಸ್‌ನ ಉದ್ಯಮ ಅಭಿವೃದ್ಧಿ ವಿಭಾಗದ ಉಪಾಧ್ಯಕ್ಷ ಡಾ. ವಿನಯ್‌ ಕರಿವಾಲಾ ಮಾತನಾಡಿ “ನಿಖರ ಸಿಮ್ಯುಲೇಶನ್‌ಗಳಿಂದಾಗಿ ವೆಚ್ಚದಾಯಕ ಮತ್ತು ಸಮಯ ಬೇಡುವ ಪ್ರಯೋಗಗಳ ಅಗತ್ಯ ಇರುವುದಿಲ್ಲ. ಇದರಿಂದ ವಿಮಾನ ವಿನ್ಯಾಸ ವೇಗವಾಗುತ್ತದೆ ಮತ್ತು ಕಡಿಮೆ ವೆಚ್ಚದಲ್ಲಿ ಸಾಧ್ಯವಾಗುತ್ತದೆ. ಸಾಂಪ್ರದಾಯಿಕವಲ್ಲದ ಮತ್ತು ಸಂಪೂರ್ಣ ಹೊಸ ರೀತಿಯ ವಿನ್ಯಾಸವನ್ನು ಮಾಡಲು ಇದು ಅನುವು ಮಾಡುತ್ತದೆ ಎಂದು  ಹೇಳಿದ್ದಾರೆ.

  ಡ್ರೋನ್​ ಮಹೋತ್ಸವ 2022

  ಪ್ರಧಾನಿ ನರೇಂದ್ರ ಮೋದಿ ಇಂದು ಭಾರತದ ಅತಿದೊಡ್ಡ ಡ್ರೋನ್ ಹಬ್ಬವನ್ನು ಉದ್ಘಾಟನೆ ಮಾಡಿದರು. ಇದರೊಂದಿಗೆ ಡ್ರೋನ್ ಹಾರಾಟವನ್ನೂ ಅವರು ವೀಕ್ಷಿಸಿದರು, ಜೊತೆಗೆ ರೈತ ಡ್ರೋನ್ ಪೈಲಟ್ಗಳ ಜೊತೆಗೆ ಸಂವಾದ ನಡೆಸಿದರು.

  ಈ ಕಾರ್ಯಕ್ರಮದಲ್ಲಿ ಅನೇಕ ರೈತರು ಭಾಗಿಯಾಗಿದ್ದರು. ಮಾತ್ರವಲ್ಲದೆ, ಸರ್ಕಾರಿ ಅಧಿಕಾರಿಗಳು, ವಿದೇಶಿ ಪರಿಣಿತರು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು, ಸಾರ್ವಜನಿಕ ವಲಯದ ಸಂಸ್ಥೆಗಳು, ಖಾಸಗಿ ಕಂಪನಿಗಳು ಮತ್ತು ಡ್ರೋನ್ ಸ್ಟಾರ್ಟ್​ಅಪ್​ಗಳು ಸೇರಿದಂತೆ 1600 ನಿಯೋಗಗಳು ಈ ಹಬ್ಬದಲ್ಲಿ ಭಾಗವಹಿದ್ದರು.

  ಡ್ರೋನ್​ ಮಹೋತ್ಸವದಲ್ಲಿ 70 ಕ್ಕೂ ಹೆಚ್ಚು ಪ್ರದರ್ಶನಕಾರರು ಈ ಪ್ರದರ್ಶನದಲ್ಲಿ ವಿವಿಧ ಬಳಕೆಯ ವಿಧಗಳನ್ನು ಪ್ರದರ್ಶಿಸಿದ್ದರು ಎಂದು ತಿಳಿದುಬಂದಿದೆ.  Published by:Harshith AS
  First published: