ವಾಹನ ಸವಾರರ ಗಮನಕ್ಕೆ: ಅ.1ರಿಂದ ಚಾಲನಾ ಪರವಾನಗಿಯ ಹೊಸ ನಿಯಮಗಳು ಜಾರಿ
ಹೊಸದಾಗಿ ಬರುವ ಡಿಎಲ್ ಮತ್ತು ಆರ್ಸಿಗಳು ಸ್ಮಾರ್ಟ್ ತಂತ್ರಜ್ಞಾನವನ್ನು ಹೊಂದಿವೆ. ಅಂದರೆ ಹೊಸ ಕಾರ್ಡ್ನಲ್ಲಿ ಅತ್ಯಾಧುನಿಕ ಮೈಕ್ರೋ ಚಿಪ್ ಇರಲಿದೆ. ಕ್ಯೂಆರ್ ಕೋಡ್ ಹಾಗೂ ನಿಯರ್ ಫೀಲ್ಡ್ ಕಮ್ಯುನಿಕೇಷನ್(ಎನ್ಎಫ್ಸಿ)ಗಳು ಇರಲಿದೆ. ಈ ಕಾರ್ಡ್ಗಳು ಎಟಿಎಂ ಕಾರ್ಡ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ.
news18-kannada Updated:September 28, 2020, 8:33 AM IST

ಡ್ರೈವಿಂಗ್ ಲೈಸೆನ್ಸ್
- News18 Kannada
- Last Updated: September 28, 2020, 8:33 AM IST
ನವದೆಹಲಿ (ಸೆ.28): ಇದೇ ಅಕ್ಟೋಬರ್ 1ರಿಂದ ಚಾಲನಾ ಪರವಾನಗಿಯ ಹೊಸ ನಿಯಮಗಳು ಜಾರಿಯಾಗಲಿದ್ದು, ವಾಹನ ಸವಾರರು ಈ ಬಗ್ಗೆ ಗಮನ ಹರಿಸಬೇಕಿದೆ. ಮುಂದಿನ ದಿನಗಳಲ್ಲಿ ಜಾರಿಗೆ ಬರಲಿರುವ ಪರವಾನಗಿಯ ಹೊಸ ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳು ಇರಲಿವೆ. ದಿನನಿತ್ಯ ಉಪಯೋಗವಾಗುವ ಈ ನಿಯಮಗಳು ಜನಸಾಮಾನ್ಯರ ಮೇಲೆ ಪರಿಣಾಮ ಬೀರಲಿವೆ. ಕೇಂದ್ರ ಸರ್ಕಾರವು ಇತ್ತೀಚೆಗೆ ವಾಹನ ನೋಂದಣಿ ಕಾರ್ಡ್ ವಿತರಣೆ ಹಾಗೂ ವಾಹನ ಪರವಾನಗಿ(ಡ್ರೈವಿಂಗ್ ಲೈಸೆನ್ಸ್)ಗಳಿಗೆ ಸಂಬಂಧಿಸಿದಂತೆ ಹಲವು ಬದಲಾವಣೆಗಳನ್ನು ಜಾರಿ ಮಾಡಿದೆ. ಅಕ್ಟೋಬರ್ 1ರಿಂದ ದೇಶಾದ್ಯಂತ ಏಕರೂಪದ ವಾಹನ ಚಾಲನಾ ಪರವಾನಗಿ(ಡಿಎಲ್) ಮತ್ತು ನೋಂದಣಿ ಪ್ರಮಾಣ ಪತ್ರಗಳನ್ನು(ಆರ್ಸಿ) ವಿತರಣೆ ಮಾಡಲಾಗುತ್ತದೆ. ಹೀಗಾಗಿ ವಾಹನ ಸವಾರರು ಡಿಎಲ್(ಡ್ರೈವಿಂಗ್ ಲೈಸೆನ್ಸ್) ಹಾಗೂ ಆರ್ಸಿಗಳನ್ನು ಅಪ್ಡೇಟ್ ಮಾಡಿಕೊಳ್ಳಬೇಕಿದೆ. ಹೌದು, ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಏಕರೂಪದ ಡ್ರೈವಿಂಗ್ ಲೈಸೆನ್ಸ್ ಮತ್ತು ರಿಜಿಸ್ಟ್ರೇಷನ್ ಸರ್ಟಿಫಿಕೇಟ್ಗಳ ವಿತರಣೆಗೆ ಮುಂದಾಗಿದೆ. ಹೊಸದಾಗಿ ಬರುವ ಡಿಎಲ್ ಮತ್ತು ಆರ್ಸಿಗಳು ಸ್ಮಾರ್ಟ್ ತಂತ್ರಜ್ಞಾನವನ್ನು ಹೊಂದಿವೆ. ಅಂದರೆ ಹೊಸ ಕಾರ್ಡ್ನಲ್ಲಿ ಅತ್ಯಾಧುನಿಕ ಮೈಕ್ರೋ ಚಿಪ್ ಇರಲಿದೆ. ಕ್ಯೂಆರ್ ಕೋಡ್ ಹಾಗೂ ನಿಯರ್ ಫೀಲ್ಡ್ ಕಮ್ಯುನಿಕೇಷನ್(ಎನ್ಎಫ್ಸಿ)ಗಳು ಇರಲಿದೆ. ಈ ಕಾರ್ಡ್ಗಳು ಎಟಿಎಂ ಕಾರ್ಡ್ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಬದಲಾವಣೆಗಳಿಂದ ಸರ್ಕಾರಕ್ಕೆ ಡಿಎಲ್ ಕಾರ್ಡ್ದಾರರ ದಾಖಲೆ ಹಾಗೂ ದಂಡದ ಮಾಹಿತಿಗಳನ್ನು 10 ವರ್ಷಗಳವರೆಗೆ ಕೇಂದ್ರೀಕೃತ ಆನ್ಲೈನ್ ಡಾಟಾ ಬೇಸ್ನ್ನಿ ನಿರ್ವಹಿಸಲು ಸಾಧ್ಯವಾಗಿಸಲಿದೆ. ಇಷ್ಟು ಮಾತ್ರವಲ್ಲದೇ, ವಿಶೇಷ ಚೇತನ ಚಾಲಕರ ವಿವರಗಳನ್ನು ಒಂದೆಡೆ ಸಂಗ್ರಹಿಸಲು ವಾಹನಗಳಿಗೆ ಮಾಡಿರುವ ಬದಲಾವಣೆ, ಯಾವುದೇ ವ್ಯಕ್ತಿ ಅಂಗದಾನ ಮಾಡಿದ್ದರೆ ಅವುಗಳ ವಿವರಗಳನ್ನು ಪಡೆಯಲು ಸಹಕಾರಿಯಾಗಲಿದೆ.
ಇನ್ನು, ವಾಹನ ಸವಾರರು ಕ್ರೆಡಿಟ್ ಕಾರ್ಡ್ಗಳ ಮೂಲಕ ಪೆಟ್ರೋಲ್ ಬಂಕ್ಗಳಲ್ಲಿ ಇಂಧನ ತುಂಬಿಸಿದ ಪಾವತಿ ಮಾಡಿದರೆ, ಅಕ್ಟೋಬರ್ 1ರಿಂದ ಅದಕ್ಕೆ ರಿಯಾಯಿತಿ ದೊರೆಯುವುದಿಲ್ಲ.
ಸ್ಯಾಂಡಲ್ವುಡ್ ಡ್ರಗ್ಸ್ ಕೇಸ್: ಇಂದು ನಟಿ ರಾಗಿಣಿ, ಸಂಜನಾ ಜಾಮೀನು ಅರ್ಜಿ ವಿಚಾರಣೆ
ಆರ್ಸಿಗಳ ಪ್ರಕ್ರಿಯೆಯನ್ನು ಸಂಪೂರ್ಣ ಪೇಪರ್ ರಹಿತಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಟ್ರಾಫಿಕ್ ಪೊಲೀಸರು ತಮಗೆ ಬೇಕಾದ ಮಾಹಿತಿಯನ್ನು ಈ ಹೊಸ ಡಿಎಲ್ ಮತ್ತು ಆರ್ಸಿ ಕಾರ್ಡ್ಗಳ ಮೂಲಕ ಪಡೆಯಬಹುದಾಗಿದೆ. ಜೊತೆಗೆ ದಾಖಲೆಗಳು ನಕಲಿ ಆಗುವುದನ್ನು ತಡೆಯಬಹುದಾಗಿದೆ.
ಇನ್ನು, ಡಿಎಲ್ ಮತ್ತು ಆರ್ಸಿ ವಿತರಿಸುವ ಸಂಸ್ಥೆಯ ಹೆಸರು, ದೇಶ ಮತ್ತು ರಾಜ್ಯಗಳ ಅಧಿಕೃತ ಚಿಹ್ನೆ, ವಿತರಣೆಯ ದಿನಾಂಕ ಹಾಗೂ ಮುಕ್ತಾಯದ ದಿನಾಂಕ, ವಾಹನ ಸವಾರನ ಹೆಸರು, ಆತನ ರಕ್ತದ ಗುಂಪು, ಅಂಗಾಂಗ ದಾನದ ಮಾಹಿತಿ, ವಾಹನಗಳ ವಿಧ, ತುರ್ತು ಸಂಪರ್ಕದ ಮೊಬೈಲ್ ನಂಬರ್ ಇನ್ನೂ ಮೊದಲಾದ ವಿವರಗಳನ್ನು ಒಳಗೊಂಡಿರುತ್ತವೆ.
ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಬದಲಾವಣೆಗಳಿಂದ ಸರ್ಕಾರಕ್ಕೆ ಡಿಎಲ್ ಕಾರ್ಡ್ದಾರರ ದಾಖಲೆ ಹಾಗೂ ದಂಡದ ಮಾಹಿತಿಗಳನ್ನು 10 ವರ್ಷಗಳವರೆಗೆ ಕೇಂದ್ರೀಕೃತ ಆನ್ಲೈನ್ ಡಾಟಾ ಬೇಸ್ನ್ನಿ ನಿರ್ವಹಿಸಲು ಸಾಧ್ಯವಾಗಿಸಲಿದೆ.