Driving Licence: RTOದಲ್ಲಿ ಪರೀಕ್ಷೆ ನೀಡದೆ ಹೀಗೂ ಚಾಲನಾ ಪರವಾನಗಿ ಪಡೆಯಬಹುದು! ಇನ್ಮುಂದೆ ಸುಲಭವಾಗಿ ಸಿಗತ್ತೆ ಡ್ರೈವಿಂಗ್ ಲೈಸನ್ಸ್!
RTOದಲ್ಲಿ ಚಾಲನಾ ಪರೀಕ್ಷೆಯಿಲ್ಲದೆ ಪರವಾನಗಿ ಪಡೆಯಬಹುದಾಗಿದೆ. ಆದರೆ ಇದಕ್ಕಾಗಿ ರಸ್ತೆ ಸಾರಿಗೆ ಸಚಿವಾಲಯದಿಂದ ಮಾನ್ಯತೆ ಪಡೆದ ಚಾಲನಾ ಪರೀಕ್ಷಾ ಕೇಂದ್ರದಿಂದ ತರಬೇತಿ ಪಡೆಯಬೇಕಾಗುತ್ತದೆ.
ವಯಸ್ಸು 18 ತುಂಬಿದರಾಯ್ತು ಯುವಕರಂತೂ ಮೊದಲು ಮಾಡಿಸುವುದೇ ವಾಹನ ಪರವಾನಗಿ. ಅದಕ್ಕಾಗಿ RTO ಬಳಿ ತೆರಳಿ ಚಾಲನಾ ಪರವಾನಿಗೆ ಪಡೆದುಕೊಳ್ಳಲು ಮುಂದಾಗುತ್ತಾರೆ. ಅದರೀಗ ಅಂತವರಿಗೆ RTOದಲ್ಲಿ ಪರೀಕ್ಷೆ ನೀಡದೆ ಮತ್ತಷ್ಟು ಸುಲಭವಾಗಿ ಡ್ರೈವಿಂಗ್ ಲೈಸನ್ಸ್ ಮಾಡಿಸಬಹುದಾಗಿದೆ. ಅದು ಹೇಗೆ ಗೊತ್ತಾ?.
RTOದಲ್ಲಿ ಚಾಲನಾ ಪರೀಕ್ಷೆಯಿಲ್ಲದೆ ಪರವಾನಗಿ ಪಡೆಯಬಹುದಾಗಿದೆ. ಆದರೆ ಇದಕ್ಕಾಗಿ ರಸ್ತೆ ಸಾರಿಗೆ ಸಚಿವಾಲಯದಿಂದ ಮಾನ್ಯತೆ ಪಡೆದ ಚಾಲನಾ ಪರೀಕ್ಷಾ ಕೇಂದ್ರದಿಂದ ತರಬೇತಿ ಪಡೆಯಬೇಕಾಗುತ್ತದೆ. ಆ ಬಳಿಕ ಕೇಂದ್ರದಿಂದ ಪ್ರಮಾಣಪತ್ರ ಸಿಗುತ್ತದೆ. ಈ ಪತ್ರವನ್ನು ಚಾಲನಾ ಪರವಾನಗಿ ಪಡೆದುಕೊಳ್ಳುವಾಗ ತೋರಿಸಿದರೆ ಪರೀಕ್ಷೆ ನಡೆಸದೆ ಡ್ರೈವಿಂಗ್ ಲೈಸನ್ಸ್ ಸಿಗುತ್ತದೆ.
ಜುಲೈ 1 ರಿಂದ ಪ್ರಾರಂಭ:
ರಸ್ತೆ ಸಾರಿಗೆ ಸಚಿವಾಲಯದಿಂದ ಮಾನ್ಯತೆ ಪಡೆದ ಚಾಲನಾ ಪರೀಕ್ಷಾ ಕೇಂದ್ರಗಳು ಜುಲೈ 1 ರಿಂದ ಪ್ರಾರಂಭವಾಗುತ್ತದೆ. ರಸ್ತೆ ಸಾರಿಗೆ ಸಚಿವಾಲಯ ಈ ಬಗ್ಗೆ ಆದೇಶ ಹೊರಡಿಸಿದ್ದು, ಪ್ರತಿ ವರ್ಷ ದೇಶದಲ್ಲಿ ಸಾಕಷ್ಟು ಅಫಘಾತಗಳು ನಡೆಯುತ್ತಿರುತ್ತದೆ. ಆದರೆ ಇದಕ್ಕೆಲ್ಲ ಕಾರಣ ಚಾಲಕರ ಕೊರತೆ. ಸುಮಾರು 22 ಲಕ್ಷ ಚಾಲಕರ ಕೊರತೆ ಕಾಣುತ್ತಿದ್ದು, ಅದನ್ನು ನಿವಾರಿಸಲು ಮತ್ತು ರಸ್ತೆ ಅಪಘಾತ ಕಡಿಮೆ ಮಾಡಲು ಚಾಲನಾ ಪರೀಕ್ಷಾ ಕೇಂದ್ರ ತೆರೆಯಲು ಅನುಮತಿ ನೀಡಿದೆ.
ಸಚಿವಾಲಯದ ಮಾನದಂಡಕ್ಕೆ ಅನುಗುಣವಾಗಿ ಯಾರು ಬೇಕಾದರು ಪರೀಕ್ಷಾ ಕೇಂದ್ರವನ್ನು ತೆರೆಯಬಹುದಾಗಿದೆ. ಜತೆಗೆ ಜನರಿಗೆ ತರಬೇತಿ ನೀಡಬಹುದಾಗಿದೆ. ನಂತರ ಪರೀಕ್ಷೆ ನಡೆಸಿ ಅದರಲ್ಲಿ ಉತ್ತೀರ್ಣರಾದವರಿಗೆ ಕೇಂದ್ರವು ಪ್ರಮಾಣ ಪತ್ರ ನೀಡುತ್ತದೆ. ಅದರ ಆಧಾರ ಮೇಲೆ ಚಾಲನಾ ಪರವಾನಗಿ ನೀಡಲಾಗುತ್ತದೆ
ಚಾಲನಾ ತರಬೇತಿ ಕೇಂದ್ರ
ಚಾಲನಾ ತರಬೇತಿ ಕೇಂದ್ರ ತೆರೆಯಲು ಷರತ್ತು ವಿಧಿಸಲಾಗಿದೆ. ಎರಡು ಎಕ್ರೆ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಒಂದು ಎಕರೆ ಭೂಮಿ ಬೇಕಾಗುತ್ತದೆ. ಅದರ ಜೊತೆಗೆ ಎಲ್ಎಂವಿ ಮತ್ತು ಎಚ್ಎಂವಿ ವಾಹನಗಳಿಗೆ ಸಿಮ್ಯುಲೇಟರ್ ತರಬೇತಿ ಕಡ್ಡಾಯವಾಗಿಯಿರುತ್ತದೆ.
ಇನ್ನು ತರಬೇತಿ ಸ್ಥಳದಲ್ಲಿ ಇಂಟರ್ನೆಟ್ ಸಂಪರ್ಕ, ಬಯೋಮೆಟ್ರಿಕ್ ಹಾಜರಾತಿ ಅಗತ್ಯವಾಗಿರುತ್ತದೆ. ಪಾರ್ಕಿಂಗ್, ರಿವರ್ಸ್ ಡ್ರೈವಿಂಗ್, ಇಳಿಜಾರಿನಲ್ಲಿ ಚಾಲನೆ ಸೇರಿದಂತೆ ಟ್ರಾಕ್ನಲ್ಲಿ ತರಬೇತಿ ನೀಡಲಾಗುತ್ತದೆ. ಅದರ ಜತೆಗೆ ಮಳೆ, ಮಂಜು, ರಾತ್ರಿ ಸಮಯದಲ್ಲಿ ವಾಹನ ಓಡಿಸಲು ತರಬೇತಿ ನೀಡಲಾಗುತ್ತದೆ.
Published by:Harshith AS
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ