ತನ್ನ ಕಾರಿನ ಡ್ರೈವರನ್ನೇ ಮದುವೆಯಾದ ಪಶ್ಚಿಮ ಬಂಗಾಳ ಬಿಜೆಪಿ ಶಾಸಕಿ ಚಂದನಾ ಬೌರಿ...?

ಚಂದನಾ ರಾಜಕೀಯ ಕುಟುಂಬದಿಂದ ಶ್ರೀಮಂತ ಮನೆತನದವರೇನಲ್ಲ, ಕೂಲಿ ಕಾರ್ಮಿಕನ ಪತ್ನಿ. 30 ವರ್ಷದ ಚಂದನಾ ಈ ಬಾರಿ ಸಾಲ್ಟೋರಾ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಟಿಎಂಸಿ ನಾಯಕ ಸಂತೋಷ್ ಕುಮಾರ್ ಮೊಂಡಲ್ ವಿರುದ್ಧ ಸ್ಪರ್ಧಿಸಿ 4 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದರು.

ಚಂದನ ಬೌರಿ

ಚಂದನ ಬೌರಿ

 • Share this:
  ತನ್ನ ಸರಳತೆಯಿಂದಲೇ ಹೆಸರುವಾಸಿಯಾಗಿದ್ದ ಸಲ್ತೋರಾದ ಬಿಜೆಪಿಯ ಶಾಸಕಿ ಚಂದನಾ ಬೌರಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.  ಈ ಪ್ರಕರಣ  ಏನೆಂದು ಕೇಳಿದರೆ ನಿಜಕ್ಕೂ ಜನ ಬೆಚ್ಚಿಬೀಳುವುದು ಗ್ಯಾರಂಟಿ. ಏಕೆಂದರೆ ಶಾಸಕಿಯ ಕಾರಿನ ಚಾಲಕನ ಪತ್ನಿ ಪೊಲೀಸ್​ ಮೆಟ್ಟಿಲು ಹತ್ತಿದ್ದು ಈ ಬಿಜೆಪಿ ಶಾಸಕಿ ಚಂದನಾ ಬೌರಿ ತನ್ನ ಗಂಡನನ್ನು ಬುಟ್ಟಿಗೆ ಹಾಕಿಕೊಂಡು ಮದುವೆಯಾಗಿದ್ದಾಳೆ ಎಂದು ಪ್ರಕರಣ ದಾಖಲಿಸಿದ್ದಾಳೆ.

  ಸ್ಥಳೀಯರು ಹೇಳುವಂತೆ ಬುಧವಾರ ರಾತ್ರಿ ಸುಮಾರು 3: 30 ಕ್ಕೆ, ಚಂದನ ಬೌರಿ ತನ್ನ ಚಾಲಕ ಕೃಷ್ಣ ಕುಂಡುವಿನೊಂದಿಗೆ ಗಂಗಜಲಘಾಟಿ ಪೊಲೀಸ್ ಠಾಣೆಗೆ ಬಂದಿದ್ದಾಳೆ. ಸ್ಥಳೀಯ ದೇವಸ್ಥಾನದಲ್ಲಿ ಅವರು ನಿನ್ನೆ ರಾತ್ರಿ ಮದುವೆಯಾದರು ಎಂದು ಸ್ಥಳೀಯರು ಹೇಳುತ್ತಾರೆ.

  ಗ್ರಾಮದಲ್ಲಿ ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ, ಚಂದನ ಬೌರಿ ಈ ವಿಷಯದ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ: "ನನ್ನ ಪತಿ ನನ್ನನ್ನು ಹಿಂಸಿಸುತ್ತಿದ್ದ ಕಾರಣ ಹಾಗೂ ಮನೆಯಲ್ಲಿ ಸಮಸ್ಯೆಗಳಿದ್ದವು ಅದಕ್ಕಾಗಿಯೇ ನಾನು ಪೊಲೀಸ್ ಠಾಣೆಗೆ ಬಂದೆ. ಇದು  ಪಿತೂರಿ ಮತ್ತು ನಾನು ನನ್ನ ವಿರೋಧಿಗಳ ಕೆಲಸ ನಾನು ನನ್ನ ಚಾಲಕನನ್ನು ಮದುವೆಯಾಗಿಲ್ಲ ಎಂದು ಹೇಳಿದರು.

  ಕುಡಿದ ಅಮಲಿನಲ್ಲಿ ತನ್ನ ಗಂಡ ತನ್ನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸುತ್ತಾನೆ ಎಂದು ಅವಳು ಹೇಳಿದಳು. ಟಿಎಂಸಿ  ಪ್ರವೇಶ ನೀಡಿರುವ ಕಾರಣ ಈ ಘಟನೆಯು ರಾಜಕೀಯ ತಿರುವನ್ನು ಪಡೆದುಕೊಂಡಿದೆ. ಸ್ಥಳೀಯ ಜನರು ಆಕೆ ಮರುಮದುವೆಯಾದರು ಮತ್ತು ಪೊಲೀಸ್ ಠಾಣೆಗೆ ಬಂದರು ಎಂದು ಹೇಳುತ್ತಿದ್ದಾರೆ.

  ಚಂದನಾ ರಾಜಕೀಯ ಕುಟುಂಬದಿಂದ ಶ್ರೀಮಂತ ಮನೆತನದವರೇನಲ್ಲ, ಕೂಲಿ ಕಾರ್ಮಿಕನ ಪತ್ನಿ. 30 ವರ್ಷದ ಚಂದನಾ ಈ ಬಾರಿ ಸಾಲ್ಟೋರಾ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಟಿಎಂಸಿ ನಾಯಕ ಸಂತೋಷ್ ಕುಮಾರ್ ಮೊಂಡಲ್ ವಿರುದ್ಧ ಸ್ಪರ್ಧಿಸಿ 4 ಸಾವಿರಕ್ಕೂ ಅಧಿಕ ಮತಗಳ ಅಂತರದಿಂದ ಜಯಗಳಿಸಿದ್ದರು.

  ಇದನ್ನೂ ಓದಿ: ತಾಲಿಬಾನ್​ ರೀತಿ ಟಿಎಂಸಿ ನಾಯಕರನ್ನು ಹೊಡೆದುಹಾಕಿ ಎಂದ ತ್ರಿಪುರಾ ಬಿಜೆಪಿ ಶಾಸಕ

  ಚುನಾವಣೆಗೆ ಮುನ್ನ ಚುನಾವಣಾ ಆಯೋಗಕ್ಕೆ ನಾಮಪತ್ರ ಸಲ್ಲಿಸಿದ್ದ ವೇಳೆ ಅಫಿಡವಿಟ್ಟಿನಲ್ಲಿ ಚಂದನಾ, ತಮ್ಮ ಒಟ್ಟು ಆಸ್ತಿ ಮೊತ್ತ 31 ಸಾವಿರದ 985 ರೂಪಾಯಿ ಹಾಗೂ ತಮ್ಮ ಪತಿಯ ಆಸ್ತಿಯ ಮೊತ್ತ 30 ಸಾವಿರದ 311 ರೂಪಾಯಿ ಎಂದು ನಮೂದಿಸಿದ್ದರು. ಚಂದನಾರ ಪತಿ ಕಲ್ಲು ಹೊಡೆಯುವ ಕೆಲಸ ಮಾಡುವ ದಿನಗೂಲಿ ನೌಕರ, ಚಂದನ ಮೂರು ಮಕ್ಕಳ ತಾಯಿ, ಪತಿ ಮತ್ತು ಪತ್ನಿ ಕಷ್ಟಪಟ್ಟು ಹಸು ಮತ್ತು ಆಡುಗಳನ್ನು ಕೂಡ ಸಾಕುತ್ತಿದ್ದಾರೆ ಎಂಬುದು ಸಾಕಷ್ಟು ಸುದ್ದಿಯಾಗಿತ್ತು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: