ಉಗ್ರರಿಂದ ಯಾತ್ರಾರ್ಥಿಗಳ ಪಾರು ಮಾಡಿದ್ದ ಬಸ್​ ಚಾಲಕ: ನ್ಯೂಸ್​ 18 ಗೆ ಹೇಳಿದ್ದೇನು?


Updated:July 3, 2018, 6:24 PM IST
ಉಗ್ರರಿಂದ ಯಾತ್ರಾರ್ಥಿಗಳ ಪಾರು ಮಾಡಿದ್ದ ಬಸ್​ ಚಾಲಕ: ನ್ಯೂಸ್​ 18 ಗೆ ಹೇಳಿದ್ದೇನು?

Updated: July 3, 2018, 6:24 PM IST
ನ್ಯೂಸ್​-18 ಕನ್ನಡ

ನವದೆಹಲಿ(ಜುಲೈ.03): 2017 ರಲ್ಲಿ ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ವಲಯದ ಬಟಿಂಗು ಸಮೀಪ ಅಮರನಾಥ್ ಯಾತ್ರಾರ್ಥಿಗಳು ಪ್ರಯಾಣಿಸುತ್ತಿದ್ದ ಬಸ್ ಮೇಲೆ ಉಗ್ರರ ಗುಂಪೊಂದು ಗುಂಡಿನ ದಾಳಿ ನಡೆಸಿದ್ದು, 8 ಜನ ಯಾತ್ರಾರ್ಥಿಗಳು ಸಾವನ್ನಪ್ಪಿದ್ದು, 13ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಭಾರೀ ಭದ್ರತೆಯ ನಡುವೆಯೂ ಭಯೋತ್ಪಾದಕರು ದಾಳಿ ನಡೆಸಿದ್ದರು. ಇನ್ನು ಗುಜರಾತ್ ಮೂಲದ ಯಾತ್ರಾರ್ಥಿಗಳನ್ನು ಕರೆದೊಯ್ಯುತ್ತಿದ್ದ ಬಸ್ಸಿನ ಮೇಲೆಯೂ ಮನಬಂದಂತೆ ಉಗ್ರರು ಫೈರಿಂಗ್​ ನಡೆಸಲು ಯತ್ನಿಸಿದ್ದರು. ಈ ವೇಳೆ ಬಸ್​ ಚಾಲಕ ಸಲೀಮ್​ ಶೇಖ್​ ಎಂಬಾತ ಉಗ್ರರಿಂದ ತಮ್ಮ ಬಸ್​ನಲ್ಲಿದ್ದ ಯಾತ್ರಾರ್ಥಿಗಳನ್ನು ಪ್ರಾಣಾಪಾಯದಿಂದ  ಪಾರು ಮಾಡಿದ್ದು, ಆತನಿಗೆ ಕೇಂದ್ರ ಸರ್ಕಾರದಿಂದ ಉತ್ತಮ ಜೀವನ ರಕ್ಷಕ​ ಪದಕ ಪ್ರಶಸ್ತಿ ನೀಡಿ ಗೌರವಿಸಲಾಯ್ತು.

ನಿನ್ನೆ ಮಾನಸ ಸರೋವರ ಯಾತ್ರೆಗೆ ತೆರಳಿದ್ದ ಕನ್ನಡಿಗರು ಸೇರಿದಂತೆ ಒಟ್ಟೂ 1575 ಭಾರತೀಯರು ಸಂಕಷ್ಟದಲ್ಲಿದ್ದರು. ಈ ಬೆನ್ನಲ್ಲೇ 2017ರಲ್ಲಿ ಯಾತ್ರಾರ್ಥಿಗಳನ್ನು ಅಪಾಯದಿಂದ ಪಾರು ಮಾಡಿದ್ದ ಚಾಲಕ ಶೇಕ್​ ಅವರು ನ್ಯೂಸ್​ 18 ಜೊತೆಗೆ ಮಾತಾಡಿದ್ದಾರೆ. ನಾನು ಈ ಬಾರಿಯೂ ಯಾತ್ರಾರ್ಥಿಗಳನ್ನು ಕರೆದುಕೊಂಡು ಹೋಗಲು ನಿರ್ಧರಿಸಿದ್ದೆ. ಆದರೆ ಅನಿವಾರ್ಯ ಕಾರಣಾಂತರಗಳಿಂದ ಆಗಲಿಲ್ಲ ಎಂದು ಹೇಳಿದ್ದಾರೆ.

ನಾನು ಈ ಬಾರಿಯೂ ಯಾತ್ರಾರ್ಥಿಗಳನ್ನು ಕರೆದೊಯ್ಯಲು ಎಲ್ಲರನ್ನು ಸಂಪರ್ಕಿಸಿದೆ. ಆದರೆ ಯಾರು ನಮ್ಮೊಂದಿಗೆ ಬರಲು ಸಿದ್ದರಾಗಿರಲಿಲ್ಲ. ಅವರು ಜಮ್ಮು-ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ಹೆದರಿರಬಹುದು ಎಂದು ತಿಳಿಸಿದರು.

ಅಲ್ಲದೇ ನಮ್ಮ ಜಿಲ್ಲೆಯಿಂದ ಪ್ರತಿವರ್ಷದಂತೆ ಈ ಬಾರಿಯೂ ನಾಲ್ಕು ಬಸ್​ಗಳಲ್ಲಿ ಅಮರ್​ನಾಥ್​ ಯಾತ್ರೆಗೆ ತೆರಳಿದ್ದಾರೆ. ಆದರೆ ಅವರಿಗೆ ತೆರಳುವ ಮುನ್ನ ತಮ್ಮ ಭದ್ರೆತೆಗ ಸಹಜವಾಗಿ ಹೆದರಿಕೆಯಿದೆ. ನಾವು ಆರು ವರ್ಷಗಳಿಂದ ಯಾತ್ರೆಗೆ ಹೋಗುತ್ತಿದ್ದೇವೆ. ಪ್ರತಿ ಬಾರಿಯೂ ಯಾತ್ರಾರ್ಥಿಗಳು ತಮ್ಮ ಭದ್ರತೆ ಬಗ್ಗೆ ಚಿಂತೆಯಿರುತ್ತದೆ ಎಂದರು.

ಇನ್ನು ಯಾತ್ರಾರ್ಥಿಗಳಿಗೆ ಯಾವ ಸಂದೇಶ ನೀಡುತ್ತೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಇವರು, ನಾವು ನಮ್ಮ ದೇಶದ ಯೋದರನ್ನು ನಂಬಿ ಹೋಗಬೇಕು. ನಮ್ಮ ಸುರಕ್ಷತೆಯಲ್ಲಿ ನಾವು ಇರಬೇಕು. ದೇವರ ಮೇಲೆ ಬಾರ ಹಾಕಿ ನಮ್ಮ ಪ್ರಯಾಣವನ್ನು ಮುಂದುವರಿಸಬೇಕು ಎಂದು ನ್ಯೂಸ್​-18 ಮೂಲಕ ತಿಳಿಸಿದರು.
First published:July 3, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...