ಮುಂದುವರೆದ ಗೂಳಿ ಓಟ; ಎರಡು ತಿಂಗಳ ಬಳಿಕ 39 ಸಾವಿರಕ್ಕೆ ಸೆನ್ಸೆಕ್ಸ್​ ಜಿಗಿತ

ಸೆನ್ಸೆಕ್ಸ್​ 1,075 ಅಂಶ ಅಥವಾ ಶೇ.2.83 ನಲ್ಲಿ ಹೆಚ್ಚಾಗುವ ಮೂಲಕ 39,090 ಸೆನ್ಸೆಕ್ಸ್​ಗೆ ತಲುಪಿ ದಿನದ ವಹಿವಾಟು ಅಂತ್ಯಗೊಂಡಿತು. ನಿಫ್ಟಿ 50 ಇಂಡೆಕ್ಸ್​ ರೋಸ್​ 329 ಅಂಶ ಅಥವಾ ಶೇ.2.92 ಹೆಚ್ಚಾಗುವ ಮೂಲಕ ದಿನದ ವಹಿವಾಟು ಅಂತ್ಯಕ್ಕೆ ನಿಫ್ಟಿ 11,603 ತಲುಪಿತು.

HR Ramesh | news18-kannada
Updated:September 23, 2019, 6:03 PM IST
ಮುಂದುವರೆದ ಗೂಳಿ ಓಟ; ಎರಡು ತಿಂಗಳ ಬಳಿಕ 39 ಸಾವಿರಕ್ಕೆ ಸೆನ್ಸೆಕ್ಸ್​ ಜಿಗಿತ
ಪ್ರಾತಿನಿಧಿಕ ಚಿತ್ರ
  • Share this:
ಮುಂಬೈ: ಕುಸಿಯುತ್ತಿರುವ ಆರ್ಥಿಕತೆ ಉತ್ತೇಜನಕ್ಕೆ ಕಳೆದ ಶುಕ್ರವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಾರ್ಪೊರೆಟ್​ ತೆರಿಗೆಯನ್ನು ಕಡಿತಗೊಳಿಸಿದ ಬಳಿಕ ಮುಂಬೈ ಷೇರುಪೇಟೆಯಲ್ಲಿ ಗೂಳಿ ಓಟ ಮುಂದುವರೆದಿದೆ. 

ಇಂದಿನ ಷೇರು ವಾಹಿವಾಟಿನಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್​ಇ) 1,426 ಅಂಶಗಳು ಜಿಗಿಯುವ ಮೂಲಕ ಸೆನ್ಸೆಕ್ಸ್​ 39,000ಕ್ಕೆ ಜಿಗಿದಿದೆ. ಈ ಮೂಲಕ ಎರಡು ತಿಂಗಳ ಬಳಿಕ ಇದೇ ಮೊದಲ ಬಾರಿಗೆ (ಜುಲೈ 17ರ ಬಳಿಕ) ಸೆನ್ಸೆಕ್ಸ್​ ಜಿಗಿತ ಸಾಧಿಸಿದೆ. ಮತ್ತು ನಿಫ್ಟಿ ಕೂಡ 11,700 ಅಂಶ ಮುಟ್ಟಿದೆ.

ಎಚ್​ಡಿಎಫ್​ಸಿ, ಐಸಿಐಸಿಐ ಬ್ಯಾಂಕ್​, ಲಾರ್ಸೆನ್​ ಮತ್ತು ಟೂಬ್ರೊ, ಐಟಿಸಿ ಮತ್ತು ಕೋಟಕ್​ ಮಹೇಂದ್ರಾ ಬ್ಯಾಂಕ್​ ಇಂದು ಹೆಚ್ಚಿನ ಸೆನ್ಸೆಕ್ಸ್​ ದಾಖಲಿಸುವಲ್ಲಿ ಯಶಸ್ವಿಯಾದವು. ಇಂದಿನ ಸೆನ್ಸೆಕ್ಸ್​ ಹೆಚ್ಚಿಗೆಯಲ್ಲಿ ಇವುಗಳ ಕೊಡುಗೆಯೇ 800 ಅಂಶಗಳಿವೆ.

ಇದನ್ನು ಓದಿ: ನಗೆಬೀರಿದ ಷೇರು ಮಾರುಕಟ್ಟೆ; ಕಾರ್ಪೊರೇಟ್ ಟ್ಯಾಕ್ಸ್ ಕಡಿತಗೊಂಡ ಬೆನ್ನಲ್ಲೇ ಸೆನ್ಸೆಕ್ಸ್ ಸೂಪರ್ ಜಿಗಿತ; ಒಂದೇ ದಿನ 5 ಲಕ್ಷ ಕೋಟಿ ಲಾಭ

ಸೆನ್ಸೆಕ್ಸ್​ 1,075 ಅಂಶ ಅಥವಾ ಶೇ.2.83 ನಲ್ಲಿ ಹೆಚ್ಚಾಗುವ ಮೂಲಕ 39,090 ಸೆನ್ಸೆಕ್ಸ್​ಗೆ ತಲುಪಿ ದಿನದ ವಹಿವಾಟು ಅಂತ್ಯಗೊಂಡಿತು. ನಿಫ್ಟಿ 50 ಇಂಡೆಕ್ಸ್​ ರೋಸ್​ 329 ಅಂಶ ಅಥವಾ ಶೇ.2.92 ಹೆಚ್ಚಾಗುವ ಮೂಲಕ ದಿನದ ವಹಿವಾಟು ಅಂತ್ಯಕ್ಕೆ ನಿಫ್ಟಿ 11,603 ತಲುಪಿತು. ಕಾರ್ಪೊರೆಟ್​ ತೆರಿಗೆಯನ್ನು ಶುಕ್ರವಾರ ಕಡಿತಗೊಳಿಸಿದ ಬಳಿಕ ಸೆನ್ಸೆಕ್ಸ್​ ಮತ್ತು ನಿಫ್ಟಿ ಈ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ.

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕಳೆದ ವಾರದ ಕಾರ್ಪೊರೇಟ್ ತೆರಿಗೆಯನ್ನು ಶೇ. 30ರಿಂದ ಶೇ. 22ಕ್ಕೆ ಇಳಿಸಿದ್ದರು. ಹೊಸ ತಯಾರಿಕಾ ಸಂಸ್ಥೆಗಳಿಗೆ ವಿಧಿಸಲಾಗುತ್ತಿದ್ದ ಕಾರ್ಪೊರೇಟ್ ತೆರಿಗೆಯನ್ನೂ ಕೂಡ ಶೇ. 25ರಿಂದ ಶೇ. 15ಕ್ಕೆ ಇಳಿಕೆ ಮಾಡಿದ್ದರು. ಇದರ ಪರಿಣಾಮಆರ್ಥಿಕ ಹಿಂಜರಿತದಲ್ಲಿ ನಲುಗಿ ಹೋಗುತ್ತಿದ್ದ ಷೇರು ವಹಿವಾಟು ಬಲ ಪಡೆದುಕೊಂಡಿದೆ. ಶುಕ್ರವಾರದ ಬೆಳಗ್ಗಿನ ವಹಿವಾಟಿನಲ್ಲಿ ಷೇರುಗಳ ಮೌಲ್ಯ ಸರಾಸರಿಯಾಗಿ ಶೇ. 2ಕ್ಕಿಂತ ಹೆಚ್ಚು ವೃದ್ಧಿಯಾಯಿತು. ಮಧ್ಯಾಹ್ನದ ವೇಳೆ ಸೆನ್ಸೆಕ್ಸ್ 1300ಕ್ಕೂ ಹೆಚ್ಚು ಪಾಯಿಂಟ್​ ಹೆಚ್ಚಳ ಮಾಡಿಕೊಂಡಿತು. ಒಂದು ಹಂತದಲ್ಲಿ ಸೆನ್ಸೆಕ್ಸ್ 1,800 ಅಂಕಗಳಷ್ಟು ಏರಿಕೆಗೊಂಡು ಮಿಂಚುತ್ತಿತ್ತು. ನಿಫ್ಟಿ ಸೂಚ್ಯಂಕ ಕೂಡ ಸುಮಾರು 350 ಅಂಕಗಳಷ್ಟು ಹೆಚ್ಚಳಗೊಂಡು 11 ಸಾವಿರ ಗಡಿ ದಾಟಿತ್ತು. ನಿರ್ಮಲಾ ಸೀತಾರಾಮನ್ ಸುದ್ದಿಗೋಷ್ಠಿಯಾಗಿ ಕೆಲವೇ ಹೊತ್ತಲ್ಲಿ ಷೇರು ಮಾರುಕಟ್ಟೆ ಬರೋಬ್ಬರಿ 5 ಲಕ್ಷ ಕೋಟಿ ರೂ ಲಾಭ ಮಾಡಿಕೊಂಡಿತ್ತು. ಆದಾದ ಬಳಿಕ ಇಂದು ಷೇರುಪೇಟೆ ಗೂಳಿ ಓಟ ಮುಂದುವರೆದಿದೆ.

 
First published:September 23, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading