ಕಾಶಿ ವಿಶ್ವನಾಥನ ಭಕ್ತರಿಗೆ ಡ್ರೆಸ್​ಕೋಡ್; ಪ್ಯಾಂಟ್​ ಧರಿಸಿ ಬಂದರೆ ದೇವರ ದರ್ಶನವಿಲ್ಲ

ಕಾಶಿ ವಿಶ್ವನಾಥನ ದರ್ಶನಕ್ಕೆ ಬರುವ ಪುರುಷರು ಭಾರತೀಯ ಸಾಂಪ್ರದಾಯಿಕ ಉಡುಗೆಯಾದ ಧೋತಿ- ಕುರ್ತಾ ಧರಿಸುವುದು ಕಡ್ಡಾಯ. ಮಹಿಳಾ ಭಕ್ತರು ಸೀರೆ ಧರಿಸಿದರೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು.

Sushma Chakre | news18-kannada
Updated:January 13, 2020, 10:07 AM IST
ಕಾಶಿ ವಿಶ್ವನಾಥನ ಭಕ್ತರಿಗೆ ಡ್ರೆಸ್​ಕೋಡ್; ಪ್ಯಾಂಟ್​ ಧರಿಸಿ ಬಂದರೆ ದೇವರ ದರ್ಶನವಿಲ್ಲ
ಕಾಶಿ ವಿಶ್ವನಾಥ ದೇವಾಲಯ
  • Share this:
ವಾರಾಣಸಿ (ಜ. 13): ಉತ್ತರ ಪ್ರದೇಶದ ಪ್ರಸಿದ್ಧ ಹಿಂದು ದೇವಾಲಯವಾದ ಕಾಶಿ ವಿಶ್ವನಾಥನ ದರ್ಶನಕ್ಕೆ ತೆರಳುವ ಭಕ್ತರಿಗೆ ಡ್ರೆಸ್​ಕೋಡ್ ಜಾರಿಗೆ ತರಲಾಗಿದೆ. ಇನ್ನುಮುಂದೆ ಜೀನ್ಸ್​ ಧರಿಸಿ ಹೋಗುವ ಭಕ್ತರಿಗೆ ದೇವಸ್ಥಾನದೊಳಗೆ ಪ್ರವೇಶ ನೀಡುವುದಿಲ್ಲ. ಮಹಿಳೆ ಮತ್ತು ಪುರುಷರಿಬ್ಬರಿಗೂ ಈ ನಿಯಮ ಅನ್ವಯವಾಗಲಿದೆ.

ಕಾಶಿ ವಿಶ್ವನಾಥನ ದರ್ಶನಕ್ಕೆ ಬರುವ ಪುರುಷರು ಭಾರತೀಯ ಸಾಂಪ್ರದಾಯಿಕ ಉಡುಗೆಯಾದ ಧೋತಿ- ಕುರ್ತಾ ಧರಿಸುವುದು ಕಡ್ಡಾಯ. ಮಹಿಳಾ ಭಕ್ತರು ಸೀರೆ ಧರಿಸಿದರೆ ಮಾತ್ರ ದೇವರ ದರ್ಶನಕ್ಕೆ ಅವಕಾಶ ನೀಡಲಾಗುವುದು. ಕಾಶಿ ವಿದ್ವತ್ ಪರಿಷತ್​ನಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ದೇವಾಲಯದೊಳಗೆ ಪ್ರವೇಶ ಮಾಡುವ ಭಕ್ತರು ಈ ಡ್ರೆಸ್​ಕೋಡ್ ಅನುಸರಿಸುವುದು ಕಡ್ಡಾಯ.

ದೇವರ ದರ್ಶನಕ್ಕೆ ಬರುವಾಗ ಪ್ಯಾಂಟ್, ಶರ್ಟ್​, ಜೀನ್ಸ್​, ಸ್ಕರ್ಟ್​ ಹಾಕಿಕೊಂಡು ಬರುವವರು ದೇವರಿಂದ ದೂರವೇ ಉಳಿಯುತ್ತಾರೆ ಎಂದಿರುವ ಕಾಶಿ ವಿದ್ವತ್ ಪರಿಷತ್ ಅಂಥವರಿಗೆ ದೇಗುಲದೊಳಗೆ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದೆ ಎಂದು ಡಿಎನ್​ಎ ವರದಿ ಮಾಡಿದೆ. ಈ ಹೊಸ ನಿಯಮ ಯಾವಾಗಿನಿಂದ ಜಾರಿಯಾಗಲಿದೆ ಎಂಬ ಬಗ್ಗೆ ಇನ್ನೂ ಘೋಷಿಸಿಲ್ಲ. ದೇಗುಲದ ಆಡಳಿತ ಮಂಡಳಿಯ ಮೂಲಗಳ ಪ್ರಕಾರ ಅತಿ ಶೀಘ್ರದಲ್ಲೇ ಈ ನಿಯಮವನ್ನು ಅಧಿಕೃತವಾಗಿ ಜಾರಿಗೆ ತರಲಾಗುವುದು.

ಇದನ್ನೂ ಓದಿ: ವಿಮಾನದಲ್ಲಿದ್ದ ಯುವತಿಯಿಂದ ಬಾಂಬ್ ಸ್ಫೋಟದ ಬೆದರಿಕೆ; ಏರ್​ಪೋರ್ಟ್​ಗೆ ಹಿಂತಿರುಗಿದ ಪೈಲಟ್​ಗೆ ಕಾದಿತ್ತು ಶಾಕ್!

ಈಗಾಗಲೇ ಆಂಧ್ರಪ್ರದೇಶದ ಇಂದ್ರಕೀಲಾದ್ರಿ ದೇವಸ್ಥಾನದಲ್ಲಿ ವಸ್ತ್ರಸಂಹಿತೆ ಜಾರಿಯಾಗಿದ್ದು, ಈ ದೇಗುಲಕ್ಕೆ ಬರುವ ಪ್ರತಿಯೊಬ್ಬ ಮಹಿಳೆಯೂ ಸೀರೆ ಅಥವಾ ಲೆಹಂಗ ಧರಿಸಬೇಕು. ಸೀರೆಯಿಲ್ಲದೆ ಬಂದ ಭಕ್ತರಿಗೆ ದೇವಸ್ಥಾನದಿಂದಲೇ 100 ರೂ.ಗೆ ಸೀರೆಯನ್ನು ನೀಡಲಾಗುತ್ತದೆ. ದೇವಸ್ಥಾನದ ಬಳಿ ಇರುವ ರೂಂನಲ್ಲಿ ಉಡುಪು ಬದಲಾಯಿಸಿಕೊಂಡು ಭಕ್ತರು ದೇವರ ದರ್ಶನ ಪಡೆಯಬಹುದು. ಮಹಾಬಲೇಶ್ವರ ದೇವಸ್ಥಾನದಲ್ಲಿ ಪುರುಷರು ಜೀನ್ಸ್, ಬರ್ಮುಡಾ ಧರಿಸಿ ದೇವಾಲಯದೊಳಗೆ ಬರುವಂತಿಲ್ಲ ಎಂಬ ನಿಯಮ ಜಾರಿಗೆ ತಂದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ