ತ್ರಿಪುರ ಸರ್ಕಾರ ಆದೇಶ: ಇನ್ಮುಂದೆ ಅಧಿಕಾರಿಗಳು ಸಭೆ-ಸಮಾರಂಭಗಳಿಗೆ ಜೀನ್ಸ್​-ಕಾರ್ಗೋ ಧರಿಸುವಂತಿಲ್ಲ..!


Updated:August 28, 2018, 12:54 PM IST
ತ್ರಿಪುರ ಸರ್ಕಾರ ಆದೇಶ: ಇನ್ಮುಂದೆ ಅಧಿಕಾರಿಗಳು ಸಭೆ-ಸಮಾರಂಭಗಳಿಗೆ ಜೀನ್ಸ್​-ಕಾರ್ಗೋ ಧರಿಸುವಂತಿಲ್ಲ..!

Updated: August 28, 2018, 12:54 PM IST
ನ್ಯೂಸ್​-18 ಕನ್ನಡ

ತ್ರಿಪುರ(ಆಗಸ್ಟ್​28): ಮಧ್ಯ ಪ್ರದೇಶ ಸರ್ಕಾರದ ಬೆನ್ನಲ್ಲೇ ತ್ರಿಪುರಾ ಸರ್ಕಾರವೂ ಅಧಿಕೃತ ಸಭೆ ಸಮಾರಂಭಗಳಿಗೆ ಅಧಿಕಾರಿಗಳು ಜೀನ್ಸ್​ ಮತ್ತು ಕಾರ್ಗೋ ಪ್ಯಾಂಟ್​ ಧರಿಸುವಂತಿಲ್ಲ ಎಂದು ಸುತ್ತೋಲೆ ಹೊರಡಿಸಿದೆ. ಅಲ್ಲದೇ ಸಾಂಪ್ರದಾಯಿಕ ಉಡುಗೊರೆ ತೊಡಬೇಕು ಎಂದು ಆದೇಶ ನೀಡಿದೆ.

ರಾಜ್ಯದ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸುಶೀಲ್ ಕುಮಾರ್ ಅವರು ಆಗಸ್ಟ್ 20ರಂದು ಸುತ್ತೋಲೆ ಹೊರಡಿಸಿದ್ಧಾರೆ. ಸಿಎಂ ಸೇರಿದಂತೆ ಸಚಿವರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ನಡೆಸುವ ಉನ್ನತ ಮಟ್ಟದ ಸಭೆಗಳಲ್ಲಿ ಭಾಗವಹಿಸುವ ಅಧಿಕಾರಿಗಳು ವಸ್ತ್ರ ಸಂಹಿತೆ ಪಾಲಿಸುವಂತೆ ಸರ್ಕಾರ ಸೂಚನೆ ನೀಡಿದೆ.

ಜೀನ್ಸ್, ಕಾರ್ಗೋ ಪ್ಯಾಂಟ್ ಧರಿಸದಂತೆ ಎಲ್ಲಾ ಜಿಲ್ಲಾ ಮ್ಯಾಜಿಸ್ಟ್ರೇಟರು ನೋಡಿಕೊಳ್ಳಬೇಕು. ಅಧಿಕಾರಿಗಳು ಸಭೆಯಲ್ಲಿ ಶಿಸ್ತು ಪಾಲಿಸದೆ ಫೋನುಗಳಲ್ಲಿ ಮೆಸೇಜ್ ಓದುತ್ತಾ ಕೂರುತ್ತಾರೆ. ಸರ್ಕಾರದ ಶಿಸ್ತಿಗೆ ಅಗೌರವ ತೋರಿದಂತೆ. ಹೀಗಾಗಿ, ಎಲ್ಲರೂ ಕಡ್ಡಾಯವಾಗಿ ಶಿಸ್ತು ಪಾಲಿಸಬೇಕು ಎಂದು ತಿಳಿಸಲಾಗಿದೆ.

ಬಿಪ್ಲಬ್ ಕುಮಾರ್ ದೇಬ್ ನೇತೃತ್ವದ ಬಿಜೆಪಿ ಸರ್ಕಾರ ತನ್ನ ಅಧಿಕಾರಿಗಳಿಗೆ ಡ್ರೆಸ್ ಕೋಡ್ ಜಾರಿಗೆ ತರಲು ಮುಂದಾಗಿದೆ.  ಸರ್ಕಾರ ಕಾರ್ಯಕ್ರಮದಲ್ಲಿಯೂ ಜೀನ್ಸ್, ಕೂಲಿಂಗ್ ಗ್ಲಾಸ್ ಹಾಗೂ ಡೆನಿಮ್ ಬಟ್ಟೆಗಳನ್ನು ಧರಿಸದಂತೆ ಸೂಚಿಸಿದ್ದಾರೆ. ಈ ಆದೇಶ ಬೆನ್ನಲ್ಲೇ ವಿರೋಧ ಪಕ್ಷಗಳು ಟೀಕಿಸಿವೆ.

ಕಾಂಗ್ರೆಸ್, ವಸ್ತ್ರ ಸಂಹಿತೆ ಜಾರಿಗೆ ತರಲು ಹೊರಟಿರುವ ಸರ್ಕಾರದ ಈ ಆದೇಶವನ್ನು ವಿರೋಧಿಸಿದೆ. ಈ ಆದೇಶ ಸರ್ಕಾರಿ ಅಧಿಕಾರಿಗಳ ಹಕ್ಕುಗಳ ಮೇಲೆ ಅತಿಕ್ರಮಣ ಮಾಡಿದಂತಿದೆ. ನಮ್ಮ ಸಮಾಜದಲ್ಲಿ ಹಿಂದೆ ಇದ್ದ ಊಳಿಗಮಾನ್ಯ ಪದ್ಧತಿಯನ್ನು ಪ್ರತಿಬಿಂಬಿಸುವಂತಿದೆ ಎಂದು ಕಿಡಿಕಾರಿದ್ದಾರೆ ವಿಪಕ್ಷದ ನಾಯಕರು
First published:August 28, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ