ದೆಹಲಿಯನ್ನು (Delhi) ವಿಶ್ವ ಶಿಕ್ಷಣದ ಕೇಂದ್ರವನ್ನಾಗಿ ಮಾಡುವುದು ನನ್ನ ಕನಸು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ದೆಹಲಿಯಲ್ಲಿ ನಡೆದ ಎಕ್ಸಲೆನ್ಸ್ ಇನ್ ಎಜುಕೇಶನ್ ಅವಾರ್ಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ನೀಡುವಾಗ, ಅವರ ಮುಖದಲ್ಲಿ ಆತ್ಮವಿಶ್ವಾಸವನ್ನು ನೋಡಿದ್ದೇನೆ. ಅಲ್ಲದೇ ಈ ವರ್ಷ ಪ್ರಶಸ್ತಿ ಪಡೆಯದೇ ಹೋದವರು ಮುಂದಿನ ವರ್ಷ ಈ ಗೌರವಕ್ಕೆ ಭಾಜನರಾಗುತ್ತಾರೆ ಎಂಬ ಭರವಸೆ ಇದೆ”ಎಂದು ಹೇಳಿದರು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಎಕ್ಸಲೆನ್ಸ್ ಇನ್ ಎಜುಕೇಶನ್ ಅವಾರ್ಡ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೆಹಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು (Students) ಅಭಿನಂದಿಸಿದರು. ಈ ವೇಳೆ ದೆಹಲಿಯನ್ನು ಇಡೀ ವಿಶ್ವಕ್ಕೆ ಶಿಕ್ಷಣದ ಕೇಂದ್ರವನ್ನಾಗಿ ಮಾಡುವ ತಮ್ಮ ಕನಸಿನ ಬಗ್ಗೆ ಮಾತನಾಡಿದರು.
“ಎಕ್ಸಲೆನ್ಸ್ ಅವಾರ್ಡ್ ಒಂದು ದೊಡ್ಡ ಗೌರವ"
ಸಮಾರಂಭದಲ್ಲಿ ಮಾತನಾಡಿದ ಸಿಎಂ ಕೇಜ್ರಿವಾಲ್, “ಕೆಲವು ದಿನಗಳ ಹಿಂದೆ ವಿಮಾನದಲ್ಲಿ ಮಹಿಳೆಯೊಬ್ಬರನ್ನು ಭೇಟಿಯಾಗಿದ್ದೆ. ಕಳೆದ ವರ್ಷ ತನಗೂ ಶಾಲೆಯೊಂದರಿಂದ ಎಕ್ಸಲೆನ್ಸ್ ಅವಾರ್ಡ್ ಸಿಕ್ಕಿದೆ ಎಂದು ಹೇಳಿದ್ದರು.
ಆ ಬಗ್ಗೆ ಆಕೆಗೆ ಹೆಮ್ಮೆಯಿತ್ತು. ಅದನ್ನು ನೋಡಿ ನನಗೂ ಖುಷಿಯೆನಿಸಿತು ಎಂದು ಹೇಳಿದರು. 2015 ರಿಂದ ಈ ಪ್ರಶಸ್ತಿಯನ್ನು ಮಕ್ಕಳ ಶಿಕ್ಷಕರಿಗೆ ನೀಡಲಾಗುತ್ತಿದೆ. ಜನರು ಈ ಪ್ರಶಸ್ತಿಯನ್ನು ದೊಡ್ಡ ಗೌರವವೆಂದು ಪರಿಗಣಿಸುತ್ತಾರೆ" ಎಂಬುದಾಗಿ ಸಿಎಂ ಹೇಳಿದರು.
"ಅಲ್ಲದೇ ವಿದ್ಯಾರ್ಥಿಗಳಿಗೆ ಈ ಪ್ರಶಸ್ತಿಗಳನ್ನು ನೀಡುವಾಗ, ಅವರ ಮುಖದಲ್ಲಿ ಒಂದು ಆತ್ಮವಿಶ್ವಾಸವಿರುತ್ತದೆ. ಜೊತೆಗೆ ಸಾಧಿಸಿದ ಸಂತೋಷವೂ ಇರುವುದನ್ನು ನಾನು ನೋಡಿದ್ದೇನೆ.
ಇದನ್ನೂ ಓದಿ: 2 ದಿನದಲ್ಲಿ ಒಂದೇ ತಾಯಿಯ ಇಬ್ಬರು ಮಕ್ಕಳು ಬೀದಿನಾಯಿ ದಾಳಿಗೆ ಸಾವು! ಕರುಳು ಹಿಂಡುವ ಭಯಾನಕ ಘಟನೆ!
ಒಂದು ವೇಳೆ ಈ ವರ್ಷ ಪ್ರಶಸ್ತಿ ಸಿಗದೇ ಹೋದಲ್ಲಿ ಛಲ ಬಿಡದೇ ಸಾಧನೆ ಮಾಡಿದರೆ ಮುಂದಿನ ವರ್ಷ ಈ ಗೌರವವನ್ನು ಪಡೆಯಬಹುದು ಎಂದೂ ಕೇಜ್ರಿವಾಲ್ ಹೇಳಿದರು.
“ಸರ್ಕಾರಿ ಹಾಗೂ ಖಾಸಗಿ ಶಾಲೆಗಳ ನಡುವೆ ತಾರತಮ್ಯವಿಲ್ಲ”
ಇನ್ನು, ಕಳೆದ ಏಳೆಂಟು ವರ್ಷಗಳಲ್ಲಿ ಖಾಸಗಿ ಮತ್ತು ಸರ್ಕಾರಿ ಶಾಲೆಗಳ ನಡುವಿನ ಶಿಕ್ಷಣದ ಅಂತರ ಕೊನೆಗೊಂಡಿದೆ ಎಂದ ದೆಹಲಿ ಸಿಎಂ, ಎಕ್ಸಲೆನ್ಸ್ ಅವಾರ್ಡ್ ಎರಡೂ ಶಿಕ್ಷಣ ವ್ಯವಸ್ಥೆಗಳ ಸಂಗಮವಾಗಿದೆ. ಈಗ ಸರ್ಕಾರಿ ಮತ್ತು ಖಾಸಗಿ ಶಾಲೆಗಳ ನಡುವೆ ಯಾವುದೇ ತಾರತಮ್ಯವಿಲ್ಲ ಎಂದು ಕೇಜ್ರಿವಾಲ್ ಹೇಳಿದ್ದಾರೆ.
"ಸುಮಾರು 1800 ಮುನ್ಸಿಪಲ್ ಕಾರ್ಪೊರೇಷನ್ ಆಫ್ ದೆಹಲಿ ಸ್ಕೂಲ್‌ಗಳಿವೆ. ಅವುಗಳ ಪರಿಸ್ಥಿತಿಗಳು ಉತ್ತಮವಾಗಿಲ್ಲ. ಆದರೆ ನಾವು ಶೀಘ್ರದಲ್ಲೇ ಅವುಗಳನ್ನು ಸರಿಪಡಿಸಲು ಪ್ರಯತ್ನಿಸುತ್ತೇವೆ.
ರಾಷ್ಟ್ರ ರಾಜಧಾನಿಯಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸಲು ಖಾಸಗಿ ಮತ್ತು ಸರ್ಕಾರಿ ಶಾಲೆಗಳ ಶಿಕ್ಷಕರು ಮತ್ತು ಪ್ರಾಂಶುಪಾಲರು ಶ್ರಮಿಸಿದ್ದಾರೆ.
ಇಲ್ಲಿಯವರೆಗಿನ ಫಲಿತಾಂಶಗಳು ಉತ್ತಮವಾಗಿದ್ದು, ನಾವು ಖಂಡಿತವಾಗಿಯೂ ಯಶಸ್ವಿಯಾಗುತ್ತೇವೆ” ಎಂಬುದಾಗಿ ಸಿಎಂ ಕೇಜ್ರಿವಾಲ್ ಭರವಸೆ ನೀಡಿದರು.
ಈ ಮಧ್ಯೆ, ಫೆಬ್ರವರಿ 28 ರಂದು ದೆಹಲಿ ಸಚಿವ ಮನೀಶ್ ಸಿಸೋಡಿಯಾ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಶಿಕ್ಷಣ ಸೇರಿದಂತೆ 18 ಇಲಾಖೆಗಳನ್ನು ಮನೀಶ್ ಸಿಸೋಡಿಯಾ ನಿರ್ವಹಿಸುತ್ತಿದ್ದರು.
ಇದನ್ನೂ ಓದಿ: ಸಲಿಂಗ ವಿವಾಹಕ್ಕೆ ಬೇಡ ಒಪ್ಪಿ'ಗೇ'! ಸುಪ್ರೀಂನಲ್ಲಿ ಕೇಂದ್ರ ಸರ್ಕಾರದ ತಕರಾರು
ದೆಹಲಿಯ ಉಪಮುಖ್ಯಮಂತ್ರಿ ಸಿಸೋಡಿಯಾ ಅವರನ್ನು ಫೆಬ್ರವರಿ 26 ರಂದು ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದ ನಂತರ ಈ ಬೆಳವಣಿಗೆ ನಡೆದಿದೆ.
ಇಷ್ಟಲ್ಲದೇ ಫೆಬ್ರವರಿ 28 ರಂದು ತನ್ನ ಬಂಧನವನ್ನು ಪ್ರಶ್ನಿಸಿ ಮನೀಶ್ ಸಿಸೋಡಿಯಾ ಸಲ್ಲಿಸಿದ್ದ ಮನವಿಯನ್ನು ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.
ಅಲ್ಲದೇ ದೆಹಲಿ ಹೈಕೋರ್ಟ್‌ಗೆ ಹೋಗುವಂತೆ ಸಿಸೋಡಿಯಾ ಅವರಿಗೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು ಈ ಹಂತದಲ್ಲಿ ಸಿಸೋಡಿಯಾ ಅರ್ಜಿಯನ್ನು ಪುರಸ್ಕರಿಸಲು ನ್ಯಾಯಾಲಯವು ಒಲವು ಹೊಂದಿಲ್ಲ ಎಂಬುದಾಗಿ ಹೇಳಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ