RAC recruitment 2019: ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಆಹ್ವಾನ: ತಿಂಗಳ ವೇತನ 56 ಸಾವಿರ ರೂ.

zahir | news18-kannada
Updated:August 7, 2019, 4:05 PM IST
RAC recruitment 2019: ಸರ್ಕಾರಿ ಉದ್ಯೋಗಕ್ಕೆ ಅರ್ಜಿ ಆಹ್ವಾನ: ತಿಂಗಳ ವೇತನ 56 ಸಾವಿರ ರೂ.
ಸಾಂದರ್ಭಿಕ ಚಿತ್ರ
zahir | news18-kannada
Updated: August 7, 2019, 4:05 PM IST
'ರಿಕ್ರೂಟ್‌ಮೆಂಟ್‌ ಆ್ಯಂಡ್‌ ಅಸೆಸ್‌ಮೆಂಟ್‌ ಸೆಂಟರ್‌' (ಆರ್‌ಎಸಿ) ಸೈಂಟಿಸ್ಟ್‌/ಎಂಜಿನಿಯರ್‌ ಹುದ್ದೆಗಳ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆಗಸ್ಟ್ 10 ರಿಂದ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಇಲ್ಲಿ ಒಟ್ಟು 290 ಹುದ್ದೆಗಳು ಖಾಲಿಯಿದ್ದು, ಆರ್​ಎಸಿಯ ಅಧಿಕೃತ ವೆಬ್​ಸೈಟ್ rac.gov.in ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

RAC recruitment 2019 ಹುದ್ದೆಗಳ ವಿವರ ಈ ರೀತಿಯಿದೆ.

ಒಟ್ಟು ಹುದ್ದೆಗಳ ಸಂಖ್ಯೆ - 290

DRDOನಲ್ಲಿ ವಿಜ್ಞಾನಿ 'ಬಿ': 270 ಹುದ್ದೆಗಳು

DSTಯಲ್ಲಿ ವಿಜ್ಞಾನಿ 'ಬಿ': 6 ಹುದ್ದೆಗಳು

ADA ನಲ್ಲಿ ವಿಜ್ಞಾನಿ / ಎಂಜಿನಿಯರ್ 'ಬಿ': 10 ಹುದ್ದೆಗಳು

GATEC ನಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್: 4 ಹುದ್ದೆಗಳು
Loading...

ವಿದ್ಯಾರ್ಹತೆ:
ವಿಜ್ಞಾನಿ 'ಬಿ' ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 50% ಅಂಕಗಳೊಂದಿಗೆ ರಸಾಯನಶಾಸ್ತ್ರ, ಭೌತಶಾಸ್ತ್ರ, ಗಣಿತ, ಮೆಟಲರ್ಜಿ, ಮೆಟೀರಿಯಲ್ ಸೈನ್ಸ್, ಭೂವಿಜ್ಞಾನ ಮತ್ತು ಆಹಾರ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಹೊಂದಿರಬೇಕು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಅಥವಾ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಎನ್‌ಐಟಿ) ಯಿಂದ 80% ಅಂಕಗಳೊಂದಿಗೆ ಬಿಟೆಕ್ ಪದವಿ ಪೂರೈಸಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಶೈಕ್ಷಣಿಕ ಅರ್ಹತೆಗೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗಾಗಿ, ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಬಹುದು.

ವಯೋಮಿತಿ:
ಅರ್ಜಿದಾರರ ವಯಸ್ಸು 28 ವರ್ಷಕ್ಕಿಂತ ಹೆಚ್ಚಿರಬಾರದು. ಇನ್ನು ಒಬಿಸಿ ಅಭ್ಯರ್ಥಿಗಳಿಗೆ 31 ವರ್ಷ ಮತ್ತು ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 33 ವರ್ಷಗಳವರೆಗೆ ಸಡಿಲಿಕೆ ನೀಡಲಾಗಿದೆ.

ವೇತನ:
ಆಯ್ಕೆಯಾದ ಅಭ್ಯರ್ಥಿಗಳಿಗೆ ತಿಂಗಳಿಗೆ 56,100 ಸಂಬಳ ಸಿಗಲಿದೆ.

ಅರ್ಜಿ ಸಲ್ಲಿಕೆ ಹೇಗೆ:
ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ rac.gov.in ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಕೆ ಆರಂಭ ; ಆಗಸ್ಟ್​ 10
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ; ಆಗಸ್ಟ್​ 27
First published:August 7, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...