• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Budget Session 2023: ಜಗತ್ತು ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು

Budget Session 2023: ಜಗತ್ತು ಭಾರತವನ್ನು ನೋಡುವ ದೃಷ್ಟಿಕೋನ ಬದಲಾಗಿದೆ: ರಾಷ್ಟ್ರಪತಿ ದ್ರೌಪದಿ ಮುರ್ಮು

ರಾಷ್ಟ್ರಪತಿ ದ್ರೌಪದಿ ಮುರ್ಮು

ರಾಷ್ಟ್ರಪತಿ ದ್ರೌಪದಿ ಮುರ್ಮು

ಕೋವಿಡ್ ಅವಧಿಯಲ್ಲಿ ಪ್ರಪಂಚದಾದ್ಯಂತ ಬಡವರು ಜೀವಿಸಲು ಎಷ್ಟು ಕಷ್ಟಪಟ್ಟರು ಎಂಬುದನ್ನು ನಾವು ನೋಡಿದ್ದೇವೆ. ಆದರೆ ಭಾರತ ದೇಶದಲ್ಲಿ ಬಡವರ ಜೀವ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದ ಪರಿಣಾಮ ದೇಶದಲ್ಲಿ ಯಾವುದೇ ಬಡವರು ಖಾಲಿ ಹೊಟ್ಟೆಯಲ್ಲಿ ಮಲಗದಂತೆ ನೋಡಿಕೊಳ್ಳಲು ಪ್ರಯತ್ನಿಸಲಾಯಿತು ಎಂದು ಸಂಸತ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದರು.

ಮುಂದೆ ಓದಿ ...
  • News18 Kannada
  • 5-MIN READ
  • Last Updated :
  • New Delhi, India
  • Share this:

ನವದೆಹಲಿ: ಸಂಸತ್‌ನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂಸತ್ ಭವನದಲ್ಲಿ ತಮ್ಮ ಚೊಚ್ಚಲ ಭಾಷಣವನ್ನು ಮಾಡಿದ್ದಾರೆ. ಮಂಗಳವಾರದಿಂದ ಸಂಸತ್ ಬಜೆಟ್ ಕಲಾಪ (Central Budget 2023) ಆರಂಭವಾಗಲಿದ್ದು, ಕೇಂದ್ರ ಹಣಕಾಸು ಸಚಿವೆ (Union Finance Minsiter) ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಬುಧವಾರ 2023-24ನೇ ಸಾಲಿನ ಬಜೆಟ್ (Budget 2023) ಮಂಡನೆ ಮಾಡಲಿದ್ದಾರೆ. ಈ ಹಿನ್ನೆಲೆ ಇಂದು ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದರು.


'ದೇಶದಲ್ಲಿ ಸ್ಥಿರ ಮತ್ತು ನಿರ್ಭೀತ ಸರಕಾರವಿದೆ'


ತಮ್ಮ ಭಾಷಣದಲ್ಲಿ ಬಸವಣ್ಣನವರ (Basavanna) ತತ್ವವನ್ನು ಉಲ್ಲೇಖಿಸಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಕಾಯಕವೇ ಕೈಲಾಸ ಎಂಬಂತೆ ತನ್ನ ಕೆಲಸ ಕಾರ್ಯದಲ್ಲಿ ಸರ್ಕಾರ ನಿರತವಾಗಿದೆ. ಇಂದು ಭಾರತದ ಆತ್ಮಸ್ಥೈರ್ಯ ಅತ್ಯುನ್ನತ ಮಟ್ಟದಲ್ಲಿದ್ದು, ಜಗತ್ತು ನಮ್ಮ ಭಾರತ ದೇಶವನ್ನು ನೋಡುವ ದೃಷ್ಠಿಕೋನ ಬದಲಾಗಿದೆ. ಭಾರತವು ಜಗತ್ತಿಗೆ ಪರಿಹಾರಗಳನ್ನು ನೀಡುತ್ತಿದೆ. ಇಂದು ದೇಶದಲ್ಲಿ ಸ್ಥಿರ ಮತ್ತು ನಿರ್ಭೀತ ಸರಕಾರವಿದೆ. ಹೀಗಾಗಿ ದೊಡ್ಡ ದೊಡ್ಡ ಕನಸುಗಳನ್ನು ನನಸಾಗಿಸಲು ಸರ್ಕಾರ ಕೆಲಸ ಮಾಡುತ್ತಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೊಂಡಾಡಿದರು.


ಇದನ್ನೂ ಓದಿ: Tiger Population: ವಿಶ್ವದಲ್ಲಿರುವ ಶೇಕಡಾ 70ರಷ್ಟು ಹುಲಿಗಳು ಭಾರತದಲ್ಲೇ ಇವೆ! ಕೇಂದ್ರ ಸರ್ಕಾರ


ಆತ್ಮನಿರ್ಭರ್ ಮತ್ತು ಅದರ ಮಾನವೀಯ ಕರ್ತವ್ಯಗಳನ್ನು ಪೂರೈಸಲು ಸಮರ್ಥವಾಗಿರುವ ಭಾರತವನ್ನು ನಿರ್ಮಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟ ರಾಷ್ಟ್ರಪತಿಗಳು, ಜಮ್ಮು ಮತ್ತು ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸುವುದರಿಂದ ಹಿಡಿದು ತ್ರಿವಳಿ ತಲಾಖ್ ರದ್ದುಗೊಳಿಸುವವರೆಗೆ ಕೇಂದ್ರ ಸರ್ಕಾರವು ಅನೇಕ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಂಡಿದೆ. 2047ರ ವೇಳೆಗೆ ನಾವು ಗತಕಾಲದ ಹೆಮ್ಮೆಯೊಂದಿಗೆ ಸಂಪರ್ಕ ಹೊಂದುವ ಮತ್ತು ಆಧುನಿಕತೆಯ ಎಲ್ಲಾ ಸುವರ್ಣ ಅಧ್ಯಾಯಗಳನ್ನು ಹೊಂದಿರುವ ರಾಷ್ಟ್ರವನ್ನು ನಿರ್ಮಿಸಬೇಕಾಗಿದೆ ಎಂದು ಹೇಳಿದರು.


'ಭ್ರಷ್ಟಾಚಾರ ಸಾಮಾಜಿಕ ನ್ಯಾಯದ ದೊಡ್ಡ ಶತ್ರು'


ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯದ ದೊಡ್ಡ ಶತ್ರು ಎಂದರೆ ಭ್ರಷ್ಟಾಚಾರ ಎಂಬುವುದು ನನ್ನ ಸರ್ಕಾರದ ಸ್ಪಷ್ಟ ಅಭಿಪ್ರಾಯ. ಸಾವಿರಾರು ಕೋಟಿ ವಂಚನೆ ಮಾಡಿ ಪರಾರಿಯಾಗಿರುವ ಉದ್ಯಮಿಗಳ ಆಸ್ತಿಯನ್ನು ವಶಪಡಿಸಿಕೊಳ್ಳಲು ನನ್ನ ಸರ್ಕಾರವು ಪ್ರಬಲ ಕಾಯ್ದೆಯನ್ನು ಜಾರಿಗೆ ತಂದಿದೆ. ನನ್ನ ಸರ್ಕಾರವು ಪರಿಶಿಷ್ಠ ಜಾತಿ ಮತ್ತು ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಕನಸುಗಳನ್ನು ಜಾಗೃತಗೊಳಿಸಿದೆ. ಅಂತಹ ಜನರಿಗೆ ಈಗ ಮೂಲ ಸೌಕರ್ಯಗಳು ತಲುಪುತ್ತಿರುವುದರಿಂದ ಹೊಸ ಕನಸುಗಳನ್ನು ಕಾಣಲು ಸಾಧ್ಯವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಇದನ್ನೂ ಓದಿ: Nirmala Sitharaman: ಬಜೆಟ್ ಮಂಡನೆಗೆ ಸಜ್ಜಾಗ್ತಿದ್ದಾರೆ ನಿರ್ಮಲಾ ಸೀತಾರಾಮನ್, ಸಂಪ್ರದಾಯದಂತೆ ಹಲ್ವಾ ತಯಾರಿಸಿ ಹಂಚಿದ ಸಚಿವೆ


ಕೋವಿಡ್ ಅವಧಿಯಲ್ಲಿ ಪ್ರಪಂಚದಾದ್ಯಂತ ಬಡವರು ಜೀವಿಸಲು ಎಷ್ಟು ಕಷ್ಟಪಟ್ಟರು ಎಂಬುದನ್ನು ನಾವು ನೋಡಿದ್ದೇವೆ. ಆದರೆ ಭಾರತ ದೇಶದಲ್ಲಿ ಬಡವರ ಜೀವ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದ ಪರಿಣಾಮ ದೇಶದಲ್ಲಿ ಯಾವುದೇ ಬಡವರು ಖಾಲಿ ಹೊಟ್ಟೆಯಲ್ಲಿ ಮಲಗದಂತೆ ನೋಡಿಕೊಳ್ಳಲು ಪ್ರಯತ್ನಿಸಲಾಯಿತು. ಇನ್ನು ಕೋವಿಡ್ ಕಷ್ಟಕಾಲದಲ್ಲಿ ಸಂಪೂರ್ಣ ಪಾರದರ್ಶಕತೆಯೊಂದಿಗೆ ಸುಮಾರು 27 ಲಕ್ಷ ಕೋಟಿ ಮೌಲ್ಯದ ಯೋಜನೆಗಳು ಭಾರತದ ಬಡಜನರನ್ನು ತಲುಪಿ ಅವರನ್ನು ಬಡತನ ರೇಖೆಗಿಂತ ಕೆಳಗಿಳಿಯದಂತೆ ಮಾಡಲು ಸಾಧ್ಯವಾಯಿತು ಎಂದು ವಿಶ್ವಬ್ಯಾಂಕ್ ಹೇಳುತ್ತದೆ ಎಂದರು.




ಇಂದು ಗರೀಬಿ ಹಠಾವೋ ಅನ್ನೋದು ಕೇವಲ ಘೋಷಣೆಯಾಗಿ ಉಳಿದಿಲ್ಲ. ಬಡವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಮತ್ತು ಅವರನ್ನು ಸಬಲೀಕರಣಗೊಳಿಸಲು ನನ್ನ ಸರ್ಕಾರ ಶ್ರಮಿಸುತ್ತಿದೆ ಎಂದು ರಾಷ್ಟ್ರಪತಿ ಅಭಿಪ್ರಾಯಪಟ್ಟರು.

Published by:Avinash K
First published: