Draupadi Murmu: ದೇವಾಲಯದ ಕಸ ಗುಡಿಸಿದ NDA ರಾಷ್ಟ್ರಪತಿ ಅಭ್ಯರ್ಥಿ!

ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ರೈರಂಗ್‌ಪುರ ಟೌನ್‌ನಲ್ಲಿರುವ ಪೂರ್ಣಂದೇಶ್ವರ ಶಿವ ದೇವಾಲಯದಲ್ಲಿ ಮುರ್ಮು ಪ್ರಾರ್ಥನೆ ಸಲ್ಲಿಸುವ ಮೊದಲು ನೆಲವನ್ನು ಗುಡಿಸಿ ಸ್ವಚ್ಛ ಮಾಡಿದ್ದಾರೆ.

ದ್ರೌಪತಿ ಮುರ್ಮು

ದ್ರೌಪತಿ ಮುರ್ಮು

  • Share this:
ರಾಯರಂಗ್‌ಪುರ (ಒಡಿಶಾ)(ಜೂ.22): ಮುಂಬರುವ ರಾಷ್ಟ್ರಪತಿ ಚುನಾವಣೆಗೆ (Presidential Election) ಬಿಜೆಪಿ (BJP) ನೇತೃತ್ವದ ಎನ್‌ಡಿಎ (NDA) ಅಭ್ಯರ್ಥಿಯಾಗಿರುವ ದ್ರೌಪದಿ ಮುರ್ಮು (Draupadi Murmu) ಅವರು ದೇವಾಲಯದ ಕಸ ಗುಡಿಸಿ ಸುದ್ದಿಯಾಗಿದ್ದಾರೆ. ಅವರನ್ನು ಅಭ್ಯರ್ಥಿಯನ್ನಾಗಿ (Candidate) ಆಯ್ಕೆ ಮಾಡಿದ ಒಂದು ದಿನದ ನಂತರ, ಮಹಿಳಾ ಬುಡಕಟ್ಟು ನಾಯಕಿ (Tribal Leader) ಒಡಿಶಾದ (Osidha) ಮಯೂರ್‌ಭಂಜ್ ಜಿಲ್ಲೆಯ ರಾಯರಂಗಪುರದ ಹಲವು ದೇವಾಲಯಗಳಿಗೆ (Temple) ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ದ್ರೌಪದಿ ಮುರ್ಮು ರಾಯರಂಗ್‌ಪುರ ಪಟ್ಟಣದ ಜಗನ್ನಾಥ, ಹನುಮಾನ್ ಮತ್ತು ಶಿವ ದೇವಾಲಯಗಳಿಗೆ ಭೇಟಿ ನೀಡಿ ಇಂದು ಬೆಳಗ್ಗೆ ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ವರದಿಯಾಗಿದೆ.

ಮುರ್ಮು ಅವರು ಪ್ರಾರ್ಥನೆ ಸಲ್ಲಿಸುವ ಮೊದಲು ಪಟ್ಟಣದ ಪೂರ್ಣಂದೇಶ್ವರ ಶಿವ ದೇವಾಲಯದಲ್ಲಿ ನೆಲವನ್ನು ಗುಡಿಸುತ್ತಿರುವುದು ಕಂಡುಬಂದಿದೆ. ನಂತರ ಪ್ರಜಾಪಿತಾ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು ಎಂದು ವರದಿಗಳು ತಿಳಿಸಿವೆ.

ರಾಷ್ಟ್ರಪತಿ ಅಭ್ಯರ್ಥಿಗೆ Z+ ಭದ್ರತೆ

ಇಂದು ಮುಂಜಾನೆ, ಕೇಂದ್ರವು ಎನ್‌ಡಿಎ ಅಧ್ಯಕ್ಷೀಯ ಅಭ್ಯರ್ಥಿಗೆ ಶಸ್ತ್ರಸಜ್ಜಿತ ಸಿಆರ್‌ಪಿಎಫ್ ಸಿಬ್ಬಂದಿಯಿಂದ Z+ ಭದ್ರತೆಯನ್ನು ಒದಗಿಸಿದೆ. ಸಿಆರ್‌ಪಿಎಫ್ ಕಮಾಂಡೋಗಳು ಮುರ್ಮು ಅವರ ಭದ್ರತೆಯನ್ನು ಇಂದು ಮುಂಜಾನೆ ವಹಿಸಿಕೊಂಡರು ಎಂದು ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.

ಸಂಸದೀಯ ಮಂಡಳಿಯ ಸಭೆಯ ನಂತರ ನಿರ್ಧಾರ

ಒಡಿಶಾದ ಪಕ್ಷದ ಬುಡಕಟ್ಟು ನಾಯಕಿ ಮುರ್ಮು ಮುಂಬರುವ ರಾಷ್ಟ್ರಪತಿ ಚುನಾವಣೆಗೆ ಆಡಳಿತಾರೂಢ ಎನ್‌ಡಿಎ ಅಭ್ಯರ್ಥಿಯಾಗಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮಂಗಳವಾರ ಘೋಷಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಹಿರಿಯ ನಾಯಕರನ್ನು ಒಳಗೊಂಡ ಪಕ್ಷದ ಸಂಸದೀಯ ಮಂಡಳಿಯ ಸಭೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.

ಇದನ್ನೂ ಓದಿ: Draupadi Murmu: ದ್ರೌಪದಿ ಮುರ್ಮು, ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ; ಮಹಿಳೆಗೆ ಮಣೆ ಹಾಕಿದ ಬಿಜೆಪಿ

ಮುರ್ಮು ಅಪಾರ ರಾಜಕೀಯ ಅನುಭವ ಹೊಂದಿರುವವರು. ಅವರು ದೀರ್ಘಕಾಲ ಶಾಸಕಿ ಮತ್ತು ಸಚಿವರಾಗಿದ್ದರು. 2007 ರಲ್ಲಿ ಶಾಸಕರಾಗಿ ನೀಲಕಂಠ ಪ್ರಶಸ್ತಿಯನ್ನು ಪಡೆದರು.

ಸಂತಾಲ್ ಬುಡಕಟ್ಟು ಸಮುದಾಯದ ಮುರ್ಮು

ಮುರ್ಮು ಪೂರ್ಣಾವಧಿಗೆ ಜಾರ್ಖಂಡ್‌ನ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದಾರೆ. 1958 ರಲ್ಲಿ ಜನಿಸಿದ ಅವರು ಭುವನೇಶ್ವರದ ರಮಾದೇವಿ ಮಹಿಳಾ ಕಾಲೇಜಿನಲ್ಲಿ ಬಿಎ ಮುಗಿಸಿದರು.
ಅವರು ಸಂತಾಲ್ ಬುಡಕಟ್ಟು ಸಮುದಾಯದಿಂದ ಬಂದವರು.

ಇದನ್ನೂ ಓದಿ: President Poll: ಯಶವಂತ್ ಸಿನ್ಹಾ ವಿರೋಧ ಪಕ್ಷಗಳ ರಾಷ್ಟ್ರಪತಿ ಅಭ್ಯರ್ಥಿ; ಒಗ್ಗಟ್ಟಿನಲ್ಲಿ ಬಲವಿದೆ ಎಂದ ವಿಪಕ್ಷಗಳು

ಅವರು ಅಧ್ಯಕ್ಷೀಯ ಸ್ಪರ್ಧೆಯಲ್ಲಿ ಗೆದ್ದರೆ, ಮುರ್ಮು ದಲಿತ ಮತ್ತು ಮುಸ್ಲಿಂ ಅಧ್ಯಕ್ಷರ ನಂತರ ಭಾರತದ ಮೊದಲ ಬುಡಕಟ್ಟು ಮಹಿಳಾ ಅಧ್ಯಕ್ಷರಾಗುತ್ತಾರೆ. 2002 ರಲ್ಲಿ, ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರವು ವಿಜ್ಞಾನಿ ಎಪಿಜೆ ಅಬ್ದುಲ್ ಕಲಾಂ ಅವರನ್ನು ಎನ್‌ಡಿಎ ನಾಮನಿರ್ದೇಶನ ಎಂದು ಹೆಸರಿಸಿತು. ಮುಸ್ಲಿಂ ರಾಷ್ಟ್ರಪತಿಯಾಗಿ ಮೂಡಿಬರಲು ಮಾಡಲು ಎನ್​ಡಿಎ ಸಹಾಯ ಮಾಡಿತು.

ದ್ರೌಪದಿ ಮುರ್ಮು ಜೀವನದಲ್ಲಿ ನಡೆದಿತ್ತು ಕಹಿ ಘಟನೆ

ದ್ರೌಪದಿ ಮುರ್ಮು ಶ್ಯಾಮ್ ಚರಣ್ ಮುರ್ಮು ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಪುತ್ರರು ಮತ್ತು ಒಬ್ಬ ಪುತ್ರಿ ಇದ್ದರು. ಆದರೆ ದ್ರೌಪದಿ ಮುರ್ಮು ಅವರ ಜೀವನದಲ್ಲಿ ನಡೆದ ಕೆಲವು ದುರಂತಗಳಿಂದ ಅವರ ಪತಿ ಮತ್ತು ಇಬ್ಬರು ಪುತ್ರರು ವಿಧಿವಶರಾಗಿದ್ದಾರೆ.

ಹಾಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ (President Ramnath Kovind) ಅವರ ಅವಧಿ ಜುಲೈ 24ರಂದು ಮುಕ್ತಾಯವಾಗಲಿದೆ. ಜುಲೈ 18ರಂದು ಹೊಸ ರಾಷ್ಟ್ರಪತಿ ಚುನಾವಣೆ ನಡೆಯಲಿದೆ.
Published by:Divya D
First published: