• Home
 • »
 • News
 • »
 • national-international
 • »
 • Kamalam: ಡ್ರಾಗನ್ ಹಣ್ಣಿಗೆ 'ಕಮಲಂ' ಎಂದು ಮರುನಾಮಕರಣ ಮಾಡಿದ ಗುಜರಾತ್​ ಸರ್ಕಾರ; ಸಾಮಾಜಿಕ ಜಾಲತಾಣದಲ್ಲಿ ಮೆಮ್ಸ್​ಗಳ ಸುರಿಮಳೆ​

Kamalam: ಡ್ರಾಗನ್ ಹಣ್ಣಿಗೆ 'ಕಮಲಂ' ಎಂದು ಮರುನಾಮಕರಣ ಮಾಡಿದ ಗುಜರಾತ್​ ಸರ್ಕಾರ; ಸಾಮಾಜಿಕ ಜಾಲತಾಣದಲ್ಲಿ ಮೆಮ್ಸ್​ಗಳ ಸುರಿಮಳೆ​

ಡ್ರಾಗನ್​​ ಹಣ್ಣು

ಡ್ರಾಗನ್​​ ಹಣ್ಣು

Dragon Fruit : 'ಕಮಲಂ' ಎಂಬುದು ತಾವರೆಯ ಸಂಸ್ಕೃತ ಹೆಸರಾಗಿದೆ. ಅಲ್ಲದೇ ಬಿಜೆಪಿ ಪಕ್ಷದ ಚಿನ್ಹೆಯನ್ನು ಇದು ಪ್ರತಿನಿಧಿಸುತ್ತದೆ. ಗುಜರಾತ್​ ಬಿಜೆಪಿ ಕಚೇರಿಯ ಹೆಸರು ಕೂಡ ಕಮಲಂ ಆಗಿದೆ

 • Share this:

  ಡ್ರಾಗನ್​ ಹಣ್ಣಿನ ಹೆಸರನ್ನು ಗುಜರಾತ್​ ಸಿಎಂ ವಿಜಯ್​ ರೂಪಾನಿ 'ಕಮಲಂ' ಎಂದು ಮರು ನಾಮಕರಣ ಮಾಡಿದ್ದಾರೆ. ಸಿಎಂ ಅವರ ಈ ಹೇಳಿಕೆ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಜೋಕ್ಸ್​ ಹಾಗೂ ಮೆಮ್ಸ್​ಗಳ ಸುರಿಮಳೆಯಾಗಿದೆ. ಗುಜರಾತ್​ನ ಕಛ್​, ನವ್ಸರಿ ಮತ್ತು ಸೌರಾಷ್ಟ್ರದ ಕೆಲ ಪ್ರದೇಶಗಳಲ್ಲಿ ಈ ಡ್ರಾಗನ್​ ಹಣ್ಣನ್ನು ಬೆಳೆಯಲಾಗುತ್ತದೆ. ಈ ಹಣ್ಣಿಗೆ ಡ್ರಾಗನ್​ ಎಂಬುದು ಸೂಕ್ತ ಹೆಸರಲ್ಲ. ಈ ಹೆಸರು ಕೇಳಿದಾಕ್ಷಣ ಚೀನಾ ನೆನಪಾಗುತ್ತದೆ. ಈ ಹಿನ್ನಲೆ ಇದರ ಹೆಸರನ್ನು 'ಕಮಲಂ' ಎಂಬುದಾಗಿ ಮರು ನಾಮಕರಣ ಮಾಡಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಈ ಹಣ್ಣು ಕಮಲದ ಬಣ್ಣ ಹೊಂದಿದ್ದು, ನೋಡಿದಾಕ್ಷಣ ಕಮಲವನ್ನೇ ನೆನಪಿಸುತ್ತದೆ. ಈ ಹಿನ್ನಲೆ ಈ ಹಣ್ಣಿಗೆ 'ಕಮಲಂ' ಎಂಬ ಹೆಸರು ಸೂಕ್ತವಾಗಿದೆ ಎಂದು ವಿಜಯ್​ ರೂಪಾನಿ ತಿಳಿಸಿದ್ದರು.


  'ಕಮಲಂ' ಎಂಬುದು ತಾವರೆಯ ಸಂಸ್ಕೃತ ಹೆಸರಾಗಿದೆ. ಅಲ್ಲದೇ ಬಿಜೆಪಿ ಪಕ್ಷದ ಚಿನ್ಹೆಯನ್ನು ಇದು ಪ್ರತಿನಿಧಿಸುತ್ತದೆ. ಗುಜರಾತ್​ ಬಿಜೆಪಿ ಕಚೇರಿಯ ಹೆಸರು ಕೂಡ ಕಮಲಂ ಆಗಿದೆ ಎಂದಿದ್ದಾರೆ.


  ಗುಜರಾತ್​ ಸರ್ಕಾರದ ಈ ಘೋಷಣೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಅನೇಕ ಜೋಕ್​ ಹಾಗೂ ಮೆಮ್ಸ್​ಗಳು ಹರಿದಾಡುತ್ತಿವೆ.


  ಕಾಂಗ್ರೆಸ್​ ಸಂಸದ ಕಾರ್ತಿ ಚಿದಂಬರಂ ಡ್ರಾಗನ್​ ಅನ್ನು ಕೊಲ್ಲಲಾಗಿದೆ ಎಂದು ಟೀಕಿಸಿದ್ದಾರೆ.  ಕಳೆದ ಜುಲೈನಲ್ಲಿ  ಪ್ರಧಾನಿ ನರೇಂದ್ರ ಮೋದಿ ಅವರ ಮನ್​ ಕೀ ಬಾತ್​ ಕಾರ್ಯಕ್ರಮದಲ್ಲಿ ಕೂಡ  ಈ ಹಣ್ಣಿನ ಹೆಸರನ್ನು ಪ್ರಸ್ತಾಪಿಸಿದ್ದರು. ಅಲ್ಲದೇ ಈ ಹಣ್ಣಿನಲ್ಲಿರುವ ಪೋಷಕಾಂಶ ಹಾಗೂ ಖನಿಜಾಂಶಗಳು ಕುರಿತು ಕೂಡ ತಿಳಿಸಿದ್ದರು.

  Published by:Seema R
  First published: