• Home
  • »
  • News
  • »
  • national-international
  • »
  • Mahaparinirvan Diwas 2022: ಅಂಬೇಡ್ಕರ್ 66ನೇ ಪುಣ್ಯತಿಥಿ: ಸಂವಿಧಾನ ಶಿಲ್ಪಿಯ ಬಗ್ಗೆ ನೀವು ತಿಳಿಯಬೇಕಾದ 10 ಸಂಗತಿಗಳಿವು

Mahaparinirvan Diwas 2022: ಅಂಬೇಡ್ಕರ್ 66ನೇ ಪುಣ್ಯತಿಥಿ: ಸಂವಿಧಾನ ಶಿಲ್ಪಿಯ ಬಗ್ಗೆ ನೀವು ತಿಳಿಯಬೇಕಾದ 10 ಸಂಗತಿಗಳಿವು

ಡಾ. ಬಿ. ಆರ್. ಅಂಬೇಡ್ಕರ್

ಡಾ. ಬಿ. ಆರ್. ಅಂಬೇಡ್ಕರ್

ಅಂಬೇಡ್ಕರ್ ಒಬ್ಬ ಮೇಧಾವಿ, ಅಪಾರ ಪಾಂಡಿತ್ಯ ಹೊಂದಿದ್ದರು. ಇವರು 9 ಭಾಷೆಗಳಲ್ಲಿ ಪಾರಂಗತರಾಗಿದ್ದರು.

  • Share this:

ಭಾರತದ ಸಂವಿಧಾನದ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್‌ ಅವರ 66ನೇ ಪುಣ್ಯತಿಥಿ (Dr.BR Ambedkar Death Anniversary) ಇಂದು. ಪ್ರತಿವರ್ಷ ಡಿಸೆಂಬರ್ 6, ಅಂದರೆ ಇಂದು ದೇಶದಾದ್ಯಂತ ಬಾಬಾ ಸಾಹೇಬರು ದೇಹತ್ಯಾಗ ಮಾಡಿದ ದಿನವನ್ನು ‘ಮಹಾಪರಿನಿರ್ವಾಣ ದಿನ’ವನ್ನಾಗಿ (Mahaparinirvan Diwas 2022) ಎಲ್ಲೆಡೆ ಸಂಭ್ರಮದಿಂದ ಆಚರಿಸುವ ಮೂಲಕ ಧೀಮಂತ ನಾಯಕನಿಗೆ ಗೌರವ ಸಲ್ಲಿಸಲಾಗುತ್ತದೆ. ಭಾರತ ರತ್ನ (Bharat Ratna) ಡಾ.ಭೀಮ್ ರಾವ್ ಅಂಬೇಡ್ಕರ್ ಅವರು ಭಾರತದ ಸಂವಿಧಾನಶಿಲ್ಪಿ ಮಾತ್ರವಲ್ಲದೇ, ನ್ಯಾಯ ಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಸಮಾಜ ಸುಧಾರಕರಾಗಿ, ಮಹಿಳೆಯರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ, ಅಸ್ಪೃಶ್ಯತೆ, ಅಸಮಾನತೆಯ ವಿರುದ್ಧ ದಿಟ್ಟತನದಿಂದ ಹೋರಾಡಿ ನಾಯಕ ಅಂಬೇಡ್ಕರ್ (Ambedkar) ಅವರ ಹೋರಾಟದ ಫಲವಾಗಿ ಇಂದು ದೇಶಾದ್ಯಂತ ಜನ ನೆಮ್ಮದಿಯ ನಿಟ್ಟುಸಿರು ಬಿಡುತ್ತಿದ್ದಾರೆ ಎಂದರೆ ಖಂಡಿತ ಅತಿಶಯೋಕ್ತಿ ಅಲ್ಲ.


ಆಧುನಿಕ ಭಾರತವನ್ನು ರೂಪಿಸುವಲ್ಲಿ ಭೀಮರಾವ್ ರಾಮ್‌ಜಿ ಅಂಬೇಡ್ಕರ್ ಅವರು ಮಹತ್ತರ ಪಾತ್ರ ವಹಿಸಿದ್ದಾರೆ. ಬಿ.ಆರ್.ಅಂಬೇಡ್ಕರ್ ಅವರು ತಮ್ಮ ಜೀವನದುದ್ದಕ್ಕೂ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಡಿದರು.


ತಾರತಮ್ಯದ ವಿರುದ್ಧ ಹೋರಾಟ
1891ರ ಏಪ್ರಿಲ್ 14ರಂದು ಜನಿಸಿದ ಬಾಬಾ ಸಾಹೇಬರು ತಾವು ಅನುಭವಿಸಿದ ತಾರತಮ್ಯವನ್ನು ಮುಂದಿನ ಪೀಳಿಗೆ ಅನುಭವಿಸಬಾರದು ಎಂದು ಅದರ ವಿರುದ್ಧ ತೊಡೆ ತಟ್ಟಿ ನಿಂತಿದ್ದರು. ಇದೇ ದೃಷ್ಟಿಯಿಂದ ನಿರಂತರವಾಗಿ ಅಸ್ಪೃಶ್ಯತೆ, ಅಸಮಾನತೆ, ತಾರತಮ್ಯದ ವಿರುದ್ಧ ಹೋರಾಡಿ, ಪ್ರತಿಯೊಬ್ಬರ ಹಕ್ಕುಗಳಿಗಾಗಿ ಹೋರಾಡಿದರು.


ಭಾರತದ ಮೊದಲ ಕಾನೂನು ಮತ್ತು ನ್ಯಾಯಮಂತ್ರಿಯಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರು ವಿಶ್ವದ ಅತಿ ಉದ್ದದ, ಲಿಖಿತ ಮತ್ತು ಶ್ರೇಷ್ಠ ಸಂವಿಧಾನವನ್ನು ದೇಶಕ್ಕೆ ನೀಡಿದರು. ಜೀವನಪರ್ಯಂತ ಸಮಾಜದ ಅಭ್ಯುದಯಕ್ಕಾಗಿ ಚಿಂತಿಸಿದ ಬಾಬಾ ಸಾಹೇಬರು ಡಿಸೆಂಬರ್ 6, 1956ರಂದು ದೇಹತ್ಯಾಗ ಮಾಡಿದರು.


ಅಂಬೇಡ್ಕರ್ ಅವರ ಬಗ್ಗೆ ಕುತೂಹಲಕರ ಸಂಗತಿಗಳು ಇಲ್ಲಿವೆ
* ಮೊದಲನೆಯದಾಗಿ ಅಂಬೇಡ್ಕರ್ ಅವರು ಮಧ್ಯಪ್ರದೇಶದ ಮೋವ್‌ನ ಮಿಲಿಟರಿ ಕಂಟೋನ್ಮೆಂಟ್‌ನಲ್ಲಿ ಜನಿಸಿದರು, ಅವರ ತಂದೆ ರಾಮ್‌ಜಿ ಸಕ್ಪಾಲ್ ಅವರು ಬ್ರಿಟಿಷ್ ಸೈನ್ಯದಲ್ಲಿ ಸುಬೇದಾರ್ ಆಗಿದ್ದರು.


ರಾಮ್‌ಜಿ ಸಕ್ಪಾಲ್ ಅವರ ನಿವೃತ್ತಿಯ ಎರಡು ವರ್ಷಗಳ ನಂತರ ಪೂರ್ವಜರು ಮಹಾರಾಷ್ಟ್ರದಲ್ಲಿ ಇದ್ದ ಕಾರಣ ಕುಟುಂಬವು ಮಹಾರಾಷ್ಟ್ರದ ಸತಾರಾ ಜಿಲ್ಲೆಗೆ ಸ್ಥಳಾಂತರಗೊಂಡಿತು.


1956ರಲ್ಲಿ ಬೌದ್ಧ ಧರ್ಮಕ್ಕೆ ಮತಾಂತರ
* ಮಹಾರಾಷ್ಟ್ರದ ಮಹಾರ್ ಜಾತಿಗೆ ಸೇರಿದ ಹಿಂದೂ ಕುಟುಂಬದಲ್ಲಿ ಜನಿಸಿದ ಬಾಬಾ ಸಾಹೇಬರು 1956ರಲ್ಲಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.


* ಮೂಲತಃ, ಇವರ ಉಪನಾಮ ಅಂಬಾವಾಡೇಕರ್, ಆದರೆ ಶಾಲೆಯ ದಾಖಲೆಗಳಲ್ಲಿ ಶಿಕ್ಷಕರು "ಅಂಬೇಡ್ಕರ್" ಎಂಬ ಉಪನಾಮವನ್ನು ನೀಡಿದರು.


9 ಭಾಷೆಗಳಲ್ಲಿ ಪಾರಂಗತ
* ಅಂಬೇಡ್ಕರ್ ಒಬ್ಬ ಮೇಧಾವಿ, ಅಪಾರ ಪಾಂಡಿತ್ಯ ಹೊಂದಿದ್ದರು. ಇವರು 9 ಭಾಷೆಗಳಲ್ಲಿ ಪಾರಂಗತರಾಗಿದ್ದರು. ವಿದೇಶದಲ್ಲಿ ಅರ್ಥಶಾಸ್ತ್ರ ಡಾಕ್ಟರೇಟ್ ಪಡೆದ ಅಂಬೇಡ್ಕರ್‌ ವಿದೇಶಿ ವಿಶ್ವವಿದ್ಯಾಲಯದಿಂದ ಈ ವಿಷಯದಲ್ಲಿ ಪಿಎಚ್‌ಡಿ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಯನ್ನೂ ಸಹ ಪಡೆದಿದ್ದರು.


* ಡಾ. ಬಿ.ಆರ್. ಅಂಬೇಡ್ಕರ್ ಬರೆದ ವೀಸಾಗಾಗಿ ವೇಟಿಂಗ್ ಎಂಬ 20 ಪುಟಗಳ ಆತ್ಮಚರಿತ್ರೆಯ ಟಿಪ್ಪಣಿಯನ್ನು ಪಠ್ಯಪುಸ್ತಕವಾಗಿ ಕೊಲಂಬಿಯಾ ವಿಶ್ವವಿದ್ಯಾನಿಲಯದಲ್ಲಿ ಬಳಸಲಾಗುತ್ತದೆ.


ಲಂಡನ್​ನಲ್ಲೂ ಪ್ರತಿಮೆ
* ಲಂಡನ್ ಮ್ಯೂಸಿಯಂನಲ್ಲಿ ಕಾರ್ಲ್ ಮಾರ್ಕ್ಸ್ ಜೊತೆಗೆ ಭಾರತದ ಹೆಮ್ಮೆಯ ಪುತ್ರ ಡಾ. ಅಂಬೇಡ್ಕರ್ ಅವರ ಪ್ರತಿಮೆಯನ್ನು ಸಹ ಸ್ಥಾಪಿಸಲಾಗಿದೆ.


* ಲಂಡನ್‌ನ ಐಷಾರಾಮಿ ಪ್ರಿಮ್ರೋಸ್ ಹಿಲ್ ಪ್ರದೇಶದಲ್ಲಿ ನೆಲೆಗೊಂಡಿರುವ ಅಂಬೇಡ್ಕರ್ ಹೌಸ್ ಅನ್ನು ಮಹಾರಾಷ್ಟ್ರ ಸರ್ಕಾರವು ಖರೀದಿಸಿ ಮ್ಯೂಸಿಯಂ ಆಗಿ ಪರಿವರ್ತಿಸಿದೆ.


1921-22ರ ಅವಧಿಯಲ್ಲಿ ಡಾ ಅಂಬೇಡ್ಕರ್ ಅವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಲ್ಲಿ ಉನ್ನತ ಶಿಕ್ಷಣವನ್ನು ಪಡೆಯುವಾಗ ಇಲ್ಲಿಯೇ ವಾಸಿಸುತ್ತಿದ್ದರು. ಇದೇ ಕಾರಣಕ್ಕೆ ಈ ಮನೆಗೆ ಮಹಾರಾಷ್ಟ್ರ ಸರ್ಕಾರ ಪುನರ್ಜೀವ ನೀಡಿದೆ.


ನಡೆದಾಡುವ ಗ್ರಂಥಾಲಯ
* ಅಂಬೇಡ್ಕರ್ ಒಂದು ರೀತಿಯ ನಡೆದಾಡುವ ಗ್ರಂಥಾಲಯವಾಗಿದ್ದರು ಎನ್ನಬಹುದು. ಇದಕ್ಕೆ ಪೂರಕ ಎನ್ನುವಂತೆ ಅಂಬೇಡ್ಕರ್ ರಾಜಗೃಹದಲ್ಲಿ 50,000 ಪುಸ್ತಕಗಳ ದೊಡ್ಡ ಸಂಗ್ರಹವನ್ನು ಹೊಂದಿದ್ದರು.


ಇದನ್ನೂ ಓದಿ: Supreme Court: ಆಸ್ತಿ ವ್ಯವಹಾರಗಳಲ್ಲಿನ ತೆರಿಗೆ ವಂಚನೆಗೆ ಅಂತ್ಯ ಹಾಡಿದ ಸುಪ್ರೀಂ ಕೋರ್ಟ್!


* ಭಾರತೀಯ ರಿಸರ್ವ್ ಬ್ಯಾಂಕ್ ರಚನೆಯಲ್ಲಿ ಡಾ. ಬಿಆರ್ ಅಂಬೇಡ್ಕರ್ ಪ್ರಮುಖ ಪಾತ್ರ ವಹಿಸಿದ್ದರು. ಹಿಲ್ಟನ್ ಯಂಗ್ ಆಯೋಗದ ಶಿಫಾರಸುಗಳ ಮೇರೆಗೆ 1935 ರಲ್ಲಿ ಆರ್‌ಬಿಐ ಅನ್ನು ಸ್ಥಾಪಿಸಲಾಯಿತು.


ಈ ಶಿಫಾರಸುಗಳಲ್ಲಿ ಹೆಚ್ಚಿನವುಗಳನ್ನು ಡಾ. ಅಂಬೇಡ್ಕರ್ ಅವರು ತಮ್ಮ ಪುಸ್ತಕ, ದಿ ಪ್ರಾಬ್ಲಮ್ ಆಫ್ ದಿ ರುಪಾಯಿ ಅದರ ಮೂಲ ಮತ್ತು ಅದರ ಪರಿಹಾರವನ್ನು ಆಧರಿಸಿ ಸ್ಥಾಪಿಸಲಾಗಿದೆ.


ಇದನ್ನೂ ಓದಿ: Special Trains: ಕೊಂಕಣ ರೈಲ್ವೆಯಿಂದ ವಿಶೇಷ ರೈಲುಗಳ ಘೋಷಣೆ, ಇಲ್ಲಿದೆ ವಿವರ


* 1990 ರಲ್ಲಿ, ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ಮರಣೋತ್ತರವಾಗಿ ಅಂಬೇಡ್ಕರ್ ಅವರಿಗೆ ನೀಡಿ ಗೌರವಿಸಲಾಯಿತು.

Published by:ಗುರುಗಣೇಶ ಡಬ್ಗುಳಿ
First published: