ಆಹಾರದ ಅಭಾವ, ಸಾಕು ನಾಯಿಗಳನ್ನು ಹೋಟೆಲ್​ಗಳಿಗೆ ನೀಡಿ ಎಂದು ಉತ್ತರ ಕೊರಿಯಾ ಸರ್ವಾಧಿಕಾರಿ ಆದೇಶ

ಉತ್ತರ ಕೊರಿಯಾದಲ್ಲಿ ಯಾರ ಮನೆಯಲ್ಲಿ ನಾಯಿಗಳನ್ನು ಸಾಕಲಾಗಿದೆ ಎಂಬುದನ್ನು ಗುರುತಿಸಲಾಗಿದೆ. ಮತ್ತು ಬಲವಂತವಾಗಿ ನಾಯಿಗಳನ್ನು ಮುಟ್ಟುಗೋಲು ಹಾಕಿಕೊಂಡು, ಅವುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್

 • Share this:
  ನವದೆಹಲಿ; ಜಗತ್ತಿನಾದ್ಯಂತ ಸಾಕು ನಾಯಿಗಳನ್ನು ಕುಟುಂಬದ ಸದಸ್ಯರು ಎಂಬಂತೆ ಕಾಣುತ್ತಾರೆ. ಆದರೆ, ಉತ್ತರ ಕೊರಿಯಾದ ವಿವಾದಾತ್ಮಕ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರು ಮಾತ್ರ ಸಾಕು ನಾಯಿಗಳನ್ನು ಆಹಾರದ ರೂಪದಲ್ಲಿ ಕಂಡಿದ್ದಾರೆ.

  ಸದಾ ವಿವಾದಾತ್ಮಕ ಆದೇಶಗಳ ಮೂಲಕ ಜಗತ್ತಿನಾದ್ಯಂತ ಖ್ಯಾತಿ ಹಾಗೂ ಕುಖ್ಯಾತಿ ಪಡೆದಿರುವ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಂಮ್ ಜಾಂಗ್ ಉನ್​ ಇದೀಗ ಮತ್ತೊಂದು ವಿವಾದಾತ್ಮಕ ಆದೇಶದ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ.  ಸಾಮಾನ್ಯವಾಗಿ ಉತ್ತರ ಕೊರಿಯಾ ಎಂದು ಕರೆಯಲ್ಪಡುವ ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಆಫ್ ಕೊರಿಯಾ (ಡಿಪಿಆರ್​ಕೆ) ಇತ್ತೀಚೆಗೆ ಉತ್ತರ ಕೊರಿಯಾದಲ್ಲಿ ಸಾಕು ಪ್ರಾಣಿಗಳ ಮಾಲೀಕತ್ವವನ್ನು ಜುಲೈ ಅಂತ್ಯದಲ್ಲಿ ನಿಷೇಧಿಸಿತ್ತು. ಈ ಬಗ್ಗೆ ಆ ದೇಶದ ಪ್ರಮುಖ ಸುದ್ದಿಸಂಸ್ಥೆ ವರದಿ ಮಾಡಿತ್ತು.

  ಮಾಧ್ಯಮ ವರದಿಗಳ ಪ್ರಕಾರ, ಏಕಾಏಕಿ ಹಬ್ಬಿದ ಕೊರೋನಾ ವೈರಸ್ ಸಾಂಕ್ರಾಮಿಕ ಹಾಗೂ ಅದನ್ನು ನಿಯಂತ್ರಿಸಲು ಘೋಷಿಸಲಾದ ಲಾಕ್​ಡೌನ್​ನಿಂದಾಗಿ ಆ ದೇಶದಲ್ಲಿ ಆಹಾರದ ಆಭಾವ ಉಂಟಾಗಿದೆ. ಹೀಗಾಗಿ ಅಲ್ಲಿನ ಜನರು ಸಾಕಿರುವ ತಮ್ಮ ನಾಯಿಗಳನ್ನು ಮಾಂಸಕ್ಕಾಗಿ ರೆಸ್ಟೋರೆಂಟ್​ಗಳಿಗೆ ನೀಡುವಂತೆ ಕಿಮ್ ಜಾಂಗ್ ಉನ್ ಆದೇಶ ಹೊರಡಿಸಿದ್ದಾರೆ.

  ಡಿಪಿಆರ್‌ಕೆ ನಾಯಕ ಕಿಮ್ ಜಾಂಗ್ ಉನ್ ಅವರ ಈ ಕ್ರಮವು ಉತ್ತರ ಕೊರಿಯಾದಲ್ಲಿ ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿ ಮತ್ತು ಆಹಾರದ ಕೊರತೆಯಿಂದಾಗಿ ಸಾರ್ವಜನಿಕರಲ್ಲಿ ಹೆಚ್ಚುತ್ತಿರುವ ಅಸಮಾಧಾನವನ್ನು ಮರೆಮಾಚಲು ಈ ಆದೇಶ ಹೊರಡಿಸಲಾಗಿದೆ ಎನ್ನಲಾಗಿದೆ.

  ಉತ್ತರ ಕೊರಿಯಾದಲ್ಲಿ ಸಾಮಾನ್ಯವಾಗಿ ಸಾಕು ನಾಯಿಗಳನ್ನು ಇಲ್ಲಿನ ಗಣ್ಯರು ಮತ್ತು ಶ್ರೀಮಂತರು ಮಾತ್ರ ಸಾಕುತ್ತಾರೆ. ಮತ್ತು ಇದನ್ನು ಬಂಡವಾಳಶಾಹಿ ಅವನತಿಯ ಸಂಕೇತವಾಗಿ ನೋಡಲಾಗುತ್ತದೆ. ಉತ್ತರ ಕೊರಿಯಾದ ಬಡ ವರ್ಗದ ಜನರು ಹಂದಿ ಮತ್ತು ಜಾನುವಾರುಗಳನ್ನು ಸಾಕುತ್ತಾರೆ.

  ಇದನ್ನು ಓದಿ: HAL - ಹೆಚ್ಎಎಲ್​ನ ಇನ್ನಷ್ಟು ಪಾಲು ಮಾರಲು ಕೇಂದ್ರ ಸರ್ಕಾರ ಆಲೋಚನೆ

  ಉತ್ತರ ಕೊರಿಯಾದಲ್ಲಿ ಯಾರ ಮನೆಯಲ್ಲಿ ನಾಯಿಗಳನ್ನು ಸಾಕಲಾಗಿದೆ ಎಂಬುದನ್ನು ಗುರುತಿಸಲಾಗಿದೆ. ಮತ್ತು ಬಲವಂತವಾಗಿ ನಾಯಿಗಳನ್ನು ಮುಟ್ಟುಗೋಲು ಹಾಕಿಕೊಂಡು, ಅವುಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಮಾಧ್ಯಮ ವರದಿಗಳು ಹೇಳಿವೆ.

  ಮಾಲೀಕರಿಂದ ಬಲವಂತವಾಗಿ ಕಿತ್ತುಕೊಂಡು ಬಂದ ಸಾಕುನಾಯಿಗಳನ್ನುಸರ್ಕಾರಿ ಪ್ರಾಣಿ ಸಂಗ್ರಹಾಲಯದಲ್ಲಿ ಇಡಲಾಗುತ್ತಿದೆ. ಉಳಿದವುಗಳನ್ನು ಮಾಂಸಕ್ಕಾಗಿ ರೆಸ್ಟೋರೆಂಟ್​ಗಳಿಗೆ ಮಾರಲಾಗುತ್ತಿದೆ.
  Published by:HR Ramesh
  First published: