Dowry Harassment: ಹೆಚ್ಚಿನ ವರದಕ್ಷಿಣೆ ತರದಿದ್ದಕ್ಕೆ ಸೊಸೆಯಿಂದ ಮಗನ ಕಾಲು ನೆಕ್ಕಿಸಿದ ಪಾಪಿ ಅತ್ತೆ!

ಹೆಣ್ಣು ಮಗುವನ್ನು ಹೆತ್ತಿದ್ದಕ್ಕೆ, ಹೆಚ್ಚಿಗೆ ವರದಕ್ಷಿಣೆ ತರದಿದ್ದಕ್ಕೆ ಸೊಸೆಯಿಂದ ಮಗನ ಕಾಲನ್ನು ನೆಕ್ಕಿಸಿದ್ದಾಳೆ. ಪಾಪಿ ಅತ್ತೆಯ ದುಷ್ಕೃತ್ಯ ಬಯಲಾಗಿದೆ. ಇದೀಗ ಮಹಿಳೆ ಹಾಗೂ ಮಗುವನ್ನು ಮನೆಯಲ್ಲಿ ಇರಿಸಿಕೊಳ್ಳಲು 15 ಲಕ್ಷ ಮೌಲ್ಯದ ಕಾರಿಗೆ ಅತ್ತೆ-ಗಂಡ ಬೇಡಿಕೆ ಇಟ್ಟಿದ್ದಾರಂತೆ. ಮದುವೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಪಾಣಿಪತ್ : ಹರಿಯಾಣದ ಪಾಣಿಪತ್ ಜಿಲ್ಲೆಯ ಮಹಿಳೆಗೆ (Panipat’s daughter) ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿರುವ ಅತ್ತೆಯ ಮನೆಯಲ್ಲಿ ವರದಕ್ಷಿಣೆಗಾಗಿ ಚಿತ್ರಹಿಂಸೆ (Dowry Harassment) ನೀಡಿದ್ದಾರೆ. ಹೆಣ್ಣು ಮಗುವನ್ನು (Girl Baby) ಹೆತ್ತಿದ್ದಕ್ಕೆ, ಹೆಚ್ಚಿಗೆ ವರದಕ್ಷಿಣೆ ತರದಿದ್ದಕ್ಕೆ ಸೊಸೆಯಿಂದ ಮಗನ ಕಾಲನ್ನು ನೆಕ್ಕಿಸಿದ್ದಾಳೆ. ಪಾಪಿ ಅತ್ತೆಯ ದುಷ್ಕೃತ್ಯ ಬಯಲಾಗಿದೆ. ಇದೀಗ ಮಹಿಳೆ ಹಾಗೂ ಮಗುವನ್ನು ಮನೆಯಲ್ಲಿ ಇರಿಸಿಕೊಳ್ಳಲು 15 ಲಕ್ಷ ಮೌಲ್ಯದ ಕಾರಿಗೆ ಅತ್ತೆ-ಗಂಡ ಬೇಡಿಕೆ ಇಟ್ಟಿದ್ದಾರಂತೆ. ಮದುವೆ ವೇಳೆ 50 ಲಕ್ಷ ರೂಪಾಯಿ ವರದಕ್ಷಿಣೆ ನೀಡಿದ್ದೆವು ಎನ್ನುತ್ತಾರೆ ಕುಟುಂಬಸ್ಥರು. ಈಗ ಮತ್ತಷ್ಟು ಹಣ ಎಲ್ಲಿಂದ ತರಲಿ ಎಂದು ನೊಂದ ಸೊಸೆ ಕಣ್ಣೀರಿಡುತ್ತಿದ್ದಾರೆ.

ಶೀಲ ಶಂಕಿಸುತ್ತಿದ್ದ ಗಂಡ

50 ಲಕ್ಷ ರೂ. ವರದಕ್ಷಿಣೆ ಅತ್ತೆ-ಮಾವನಿಗೆ ಸಾಕಾಗಿರಲಿಲ್ಲವಂತೆ. ಮದುವೆಯಾದ ಸುಮಾರು 20 ದಿನಗಳ ನಂತರ ಅತ್ತೆ ವರದಕ್ಷಿಣೆ ಕಿರುಕುಳ ನೀಡಲಾರಂಭಿಸಿದರು. ಅವರು ಮಾನಸಿಕವಾಗಿ ಮತ್ತು ದೈಹಿಕವಾಗಿ ಚಿತ್ರಹಿಂಸೆ ನೀಡಿದರು. ಪತಿ ತನ್ನ ಸ್ವಭಾವವನ್ನು ಅನುಮಾನಿಸುತ್ತಿದ್ದನು ಮತ್ತು ಪ್ರತಿದಿನ ತನ್ನ ಫೋನ್ ಅನ್ನು ಪರಿಶೀಲಿಸುತ್ತಿದ್ದನು. ಪೋಷಕರ ಒತ್ತಡಕ್ಕೆ ಮಣಿದು ಮದುವೆಯಾದ ನೀನು ನನ್ನ ಆಯ್ಕೆಯಲ್ಲ ಎಂದು ಪದೇ ಪದೇ ಹಿಯಾಳಿಸುತ್ತಿದ್ದ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ.

ಮಗನಿಗೆ ಸಮಸ್ಯೆ ಇದ್ದರೂ, ಸೊಸೆಯನ್ನೇ ಬಂಜೆ ಎಂದಿದ್ದರು

ಮದುವೆಯಾದ ಒಂದು ತಿಂಗಳ ನಂತರ, ಆಕೆಯ ಪತಿ, ಅತ್ತೆಯರು ಆಕೆಯ ಇಚ್ಛೆಗೆ ವಿರುದ್ಧವಾಗಿ ಆಕೆಯನ್ನು ಬಲವಂತವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು, ಅವರು ಗರ್ಭಿಣಿಯಾಗದಿದ್ದರೂ ಸಹ ಆಕೆಯ ಸ್ವಭಾವವನ್ನು ಅನುಮಾನಿಸಿದರು. ವೈದ್ಯಕೀಯ ಪರೀಕ್ಷೆಯ ನಂತರ ಆಕೆಯ ಪತಿಗೆ ಸಮಸ್ಯೆ ಇದೆ ಎಂದು ಕಂಡು ಬಂತು. ಆದರೂ ಅತ್ತೆ ಆಕೆಯನ್ನೇ ಬಂಜೆ ಎಂದು ಆರೋಪಿಸಿದರು. ಪತಿಗೆ ಚಿಕಿತ್ಸೆ ನೀಡಿದ ಬಳಿಕ ಆಕೆ ಗರ್ಭಿಣಿಯಾದಳು. ಇದಾದ ಬಳಿಕ ಆರೋಪಿಗಳು ಭ್ರೂಣಲಿಂಗ ಪರೀಕ್ಷೆ ಮಾಡುವಂತೆ ಒತ್ತಡ ಹೇರಿದ್ದರು. ಮಾವ ಯಾವುದೇ ಸಮಯದಲ್ಲಿ ಅವಳ ಕೋಣೆಗೆ ಪ್ರವೇಶಿಸುತ್ತಿದ್ದರು. ಮಾವ ಸೊಸೆಯೊಂದಿಗೆ ಅನುಚಿತವಾಗಿ ನಡೆದುಕೊಳ್ಳುತ್ತಿದ್ದರಂತೆ.

ಇದನ್ನೂ ಓದಿ: SSC Scam: ಸಚಿವರ ಆಪ್ತೆ ಅರ್ಪಿತಾ ಮನೆಯಲ್ಲಿ ಸಿಕ್ತು ಲೈಂಗಿಕ ಆಟಿಕೆಗಳು!

15 ಲಕ್ಷ ಮೌಲ್ಯದ ಕಾರಿಗೆ ಡಿಮ್ಯಾಂಡ್​

14 ಆಗಸ್ಟ್ 2020 ರಂದು, ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಇದಾದ ನಂತರವೂ ಆಕೆಯ ಅತ್ತೆ-ಮಾನನ ಕಿರುಕುಳ ಇನ್ನೂ ಹೆಚ್ಚಾಗಿತ್ತು. ಪತಿಯ ಕಾಲು ನೆಕ್ಕದಿದ್ದರೆ ಮಗಳೊಂದಿಗೆ ತಾಯಿಯ ಮನೆಗೆ ಹೋಗುಬೇಕಾಗುತ್ತೆ ಎಂದು ಸೊಸೆಗೆ ಬೆದರಿಕೆ ಹಾಕಿದ್ದಾರೆ. ಹೆಣ್ಣು ಹೆತ್ತ ತಪ್ಪಿಗೆ ಕಾಲು ನೆಕ್ಕಲೇಬೇಕು ಎಂದು ಒತ್ತಾಯಿಸಿ ಚಿತ್ರಹಿಂಸೆ ಕೊಟ್ಟಿದ್ದರಂತೆ. ಇನ್ನು ಸೊಸೆಯನ್ನು, ಮೊಮ್ಮಗಳನ್ನು ತಮ್ಮ ಮನೆಯಲ್ಲಿ ಇರಿಸಿಕೊಳ್ಳಬೇಕು ಎಂದರೆ 15 ಲಕ್ಷ ಮೌಲ್ಯದ ಕಾರನ್ನು ನೀಡಬೇಕು ಎಂದು ಅತ್ತೆ-ಮಾನ ಡಿಮ್ಯಾಂಡ್​ ಮಾಡಿದ್ದರಂತೆ. ಇಷ್ಟೆಲ್ಲಾ ಕಿರುಕುಳ ಬಳಿಕ ನೊಂದ ಮಹಿಳೆಯ ಕುಟುಂಬ ಆಕೆಯ ಗಂಡನ ಮನೆಯವರ ವಿರುದ್ಧ ಠಾಣೆ ಮೆಟ್ಟಿಲೇರಿದ್ದಾರೆ.

ಗಂಡನ ಮನೆಯವರ ವಿರುದ್ಧ ಪ್ರಕರಣ ದಾಖಲು

ಗಂಡನ ಕಾಲು ನೆಕ್ಕಿಸಿದಕ್ಕಾಗಿ ಪತ್ನಿ ತವರು ಮನೆಯವರು ಠಾಣೆ ಮೆಟ್ಟಿಲೇರಿದ್ದರು. ದೂರಿನ ಆಧಾರದ ಮೇಲೆ ಪೊಲೀಸರು ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 323, 354 ಎ, 406 498 ಎ, 506 ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಚಾಂದಿನಿಬಾಗ್ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ, ಸೆಕ್ಟರ್ -12 ರ ನಿವಾಸಿ ಮಹಿಳೆಯೊಬ್ಬರು ತನ್ನ ಪತಿ, ಮಾವ, ಅತ್ತೆ ವಿರುದ್ಧ ವರದಕ್ಷಿಣೆ ಕಿರುಕುಳದ ಪ್ರಕರಣವನ್ನು ದಾಖಲಿಸಿದ್ದಾರೆ. ಡಿಸೆಂಬರ್ 7, 2017 ರಂದು ಗಾಜಿಯಾಬಾದ್‌ನ ಯುವಕನನ್ನು ಮದುವೆಯಾಗಿದ್ದಾಗಿ, ತಂದೆ 50 ಲಕ್ಷ ವರದಕ್ಷಿಣೆ ನೀಡಿದ್ದರು ಎಂದು ಮಹಿಳೆ ತಿಳಿಸಿದ್ದಾಳೆ.
Published by:Kavya V
First published: