• Home
  • »
  • News
  • »
  • national-international
  • »
  • Unilever: ಡವ್‌, ಟ್ರೆಸೆಮೆ ಶ್ಯಾಂಪೂವಿನಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ, US ನಲ್ಲಿ ಶ್ಯಾಂಪೂಗಳನ್ನು ಹಿಂಪಡೆದ ಯುನಿಲಿವರ್‌

Unilever: ಡವ್‌, ಟ್ರೆಸೆಮೆ ಶ್ಯಾಂಪೂವಿನಲ್ಲಿ ಕ್ಯಾನ್ಸರ್‌ ಕಾರಕ ಅಂಶ ಪತ್ತೆ, US ನಲ್ಲಿ ಶ್ಯಾಂಪೂಗಳನ್ನು ಹಿಂಪಡೆದ ಯುನಿಲಿವರ್‌

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಯುನಿಲಿವರ್‌ನ  ಪಾಪ್ಯುಲರ್‌ ಬ್ರಾಂಡ್‌ ಶ್ಯಾಂಪೂಗಳು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಆದರೆ ಅವುಗಳನ್ನು ಬಳಸುವವರಿಗೊಂದು ಕೆಟ್ಟ ಸುದ್ದಿ ಇದೆ!

  • Share this:

ಈಗಿನ ಕಾಲದಲ್ಲಿ ಶ್ಯಾಂಪೂ (Shampoo)  ಬಳಸದೇ ಇರೋದು  ಯಾರು ಅಂತ ಕೇಳಿದ್ರೆ ಬಹುಶಃ ಬೆರಳೆಣಿಕೆಯಷ್ಟು ಜನ ಸಿಗ್ಬೋದು. ಮಾರುಕಟ್ಟೆಯಲ್ಲಿ ನೂರಾರು ಬಗೆಯ ಬ್ರಾಂಡ್‌ ನ ಶಾಂಪೂಗಳು ಕಣ್ಣಿಗೆ ಬೀಳುತ್ತವೆ. ಯಾವುದನ್ನು ತೊಗೋಬೇಕು. ಯಾವುದನ್ನು ಬಿಡಬೇಕು ಅನ್ನೋದು ಗೊತ್ತಾಗದೇ ಇರೋವಷ್ಟು ಕನ್ಫ್ಯೂಸ್‌ ಆಗೋದು ಸಹಜ. ಆದ್ರೆ ಸಾಮಾನ್ಯವಾಗಿ ಜನರು ಪಾಪ್ಯುಲರ್‌ ಬ್ರಾಂಡ್‌  (Popular Brand) ಗಳನ್ನು ಬಳಸಲು ಇಷ್ಪಡುತ್ತಾರೆ. ಜಾಹೀರಾತುಗಳಿಗೆ ಮಾರುಹೋಗಿಯೋ ಅಥವಾ ಅದನ್ನ ಸ್ಟೇಟಸ್ (Status)‌ ಅಂದುಕೊಂಡೋ ಗೊತ್ತಿಲ್ಲ, ಆದ್ರೆ ಬ್ರಾಂಡ್‌ ಗೆ ಜೋತು ಬೀಳುತ್ತಾರೆ. ಆದ್ರೆ ಕೆಲವೊಂದು ಟಾಪ್‌ ಬ್ರಾಂಡ್‌ ಗಳಲ್ಲೇ ದೋಷಗಳಿರೋದು ಆಗಾಗ ಕಂಡುಬರುತ್ತಿರುತ್ತೆ.ಅಂದಹಾಗೆ ಯುನಿಲಿವರ್‌ನ (Unilever) ಪಾಪ್ಯುಲರ್‌ ಬ್ರಾಂಡ್‌ ಶ್ಯಾಂಪೂಗಳು ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಸಾಕಷ್ಟು ಜನಪ್ರಿಯವಾಗಿವೆ. ಆದರೆ ಅವುಗಳನ್ನು ಬಳಸುವವರಿಗೊಂದು ಕೆಟ್ಟ ಸುದ್ದಿ ಇದೆ!


ಯುನಿಲಿವರ್‌ ಬ್ರಾಂಡ್‌ ನ ಶಾಂಪೂಗಳಲ್ಲಿ ಕ್ಯಾನ್ಸರ್‌ ಕಾರಕ ಅಂಶ!


ಡವ್ ಮತ್ತು ಟ್ರೆಸೆಮೆ ಸೇರಿದಂತೆ ಯೂನಿಲಿವರ್‌ನ ಏರೋಸಾಲ್ ಡ್ರೈ ಶ್ಯಾಂಪೂಗಳಲ್ಲಿ ಕ್ಯಾನ್ಸರ್‌ ಗೆ ಕಾರಣವಾಗುವ ಅಂಶಗಳಿವೆ ಎಂಬುದು ಬೆಳಕಿಗೆ ಬಂದಿದೆ. ಈ ಶಾಂಪೂಗಳು ಬೆಂಜೀನ್‌ ಎಂಬ ರಾಸಾಯನಿಕ ಹೊಂದಿದೆ ಎಂಬುದು ಬೆಳಕಿಗೆ ಬರುತ್ತಿದ್ದಂತೆಯೇ ಯುನೈಟೆಡ್ ಸ್ಟೇಟ್ಸ್‌ನ ಯೂನಿಲಿವರ್ ಪಿಎಲ್‌ಸಿ ಹಿಂಪಡೆದಿದೆ. ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್‌ನ ಅವಲೋಕನದ ನಂತರ ಈ ಕಂಪನಿ ತನ್ನ ಬ್ರಾಂಡ್‌ ಶಾಂಪೂಗಳನ್ನು ಹಿಂಪಡೆದಿರುವುದಾಗಿ ತಿಳಿಸಿದೆ.


19 ಡ್ರೈ ಶಾಂಪೂ ಉತ್ಪನ್ನಗಳನ್ನು ಹಿಂಪಡೆದ ಕಂಪನಿ!


ಗ್ರಾಹಕ ಸರಕುಗಳ ಕಂಪನಿಯು ಹಿಂಪಡೆದಿರುವ ಬ್ರ್ಯಾಂಡ್‌ಗಳ ಪಟ್ಟಿಯು Nexxus, Suave, Tresemmé ಮತ್ತು Rockaholic ಮತ್ತು Bed head ಡ್ರೈ ಶಾಂಪೂ ತಯಾರಕ Tigi ನಂತಹ ಹೆಸರುಗಳನ್ನು ಒಳಗೊಂಡಿದೆ ಎಂದು ಆಹಾರ ಮತ್ತು ಔಷಧ ಆಡಳಿತದ ವೆಬ್‌ಸೈಟ್‌ನಲ್ಲಿನ ಅಧಿಕೃತ ಪೋಸ್ಟ್‌ ನಲ್ಲಿ ಹೇಳಲಾಗಿದೆ. ಯೂನಿಲಿವರ್ ಪಿಎಲ್‌ಸಿ ಅಮೆರಿಕದಲ್ಲಿ ಮಾರಾಟವಾಗುತ್ತಿರುವ 19 ಜನಪ್ರಿಯ ಡ್ರೈ ಶಾಂಪೂ ಏರೋಸಾಲ್ ಉತ್ಪನ್ನಗಳನ್ನು ಸ್ವಯಂಪ್ರೇರಿತವಾಗಿ ಹಿಂಪಡೆಯುವುದಾಗಿ ಘೋಷಿಸಿದೆ.


ಇದನ್ನೂ ಓದಿ: ರಾಣಿ ಎಲಿಜಬೆತ್​ರವರ​ 12 ಕುದುರೆಗಳನ್ನು ಹರಾಜು ಹಾಕಲು ನಿರ್ಧರಿಸಿದ ಕಿಂಗ್ ಚಾರ್ಲ್ಸ್!


ಡ್ರೈ ಶಾಂಪೂಗಳಲ್ಲಿ ಬೆಂಜೀನ್‌ ಪತ್ತೆ!


ಯುನಿಲಿವರ್‌ ಕಂಪನಿ ಹೇಳೋ ಪ್ರಕಾರ, ಏರೋಸಾಲ್‌ಗಳ ಸಮಸ್ಯೆಯು ಹೆಚ್ಚಾಗಿ ಕ್ಯಾನ್‌ಗಳಿಂದ ಉತ್ಪನ್ನಗಳನ್ನು ಸಿಂಪಡಿಸಲು ಬಳಸುವ ಪ್ರೊಪೆಲ್ಲಂಟ್‌ಗಳಿಂದ ಕಾಣಿಸಿಕೊಂಡಿದೆ. ಕಂಪನಿಯ ಪ್ರಕಾರ, ಅದರ ಡ್ರೈ ಶಾಂಪೂ ಹಿಂಪಡೆಯುವಿಕೆಯ ಸಂದರ್ಭದಲ್ಲಿ ಇದು ಸಂಭವಿಸಿದೆ. ಉತ್ಪನ್ನಗಳಲ್ಲಿ ಕಂಡುಬಂದಿರುವ ಬೆಂಜೀನ್ ಅಂಶದ ಪ್ರಮಾಣವನ್ನು ಕಂಪನಿಯು ಬಿಡುಗಡೆ ಮಾಡಿಲ್ಲ. ಜೊತೆಗೆ ಅವುಗಳನ್ನು ಬಹಳ ಎಚ್ಚರಿಕೆಯಿಂದ ಹಿಂಪಡೆದಿದೆ ಎನ್ನಲಾಗಿದೆ.


ಇನ್ನು ವರದಿಯ ಪ್ರಕಾರ, ಡ್ರೈ ಶ್ಯಾಂಪೂಗಳು ಸಮಸ್ಯೆಯಾಗಿ ಗಮನಸೆಳೆದಿರುವುದು ಇದೇ ಮೊದಲಲ್ಲ. P&G ಕಳೆದ ವರ್ಷ ಡಿಸೆಂಬರ್‌ನಲ್ಲಿ ಬೆಂಜೀನ್ ಮಾಲಿನ್ಯವನ್ನು ಉಲ್ಲೇಖಿಸಿ ತನ್ನ ಪ್ಯಾಂಟೀನ್‌ ಮತ್ತು ಹರ್ಬಲ್ ಎಸೆನ್ಸ್ ಡ್ರೈ ಶಾಂಪೂಗಳನ್ನು ಹಿಂಪಡೆದಿತ್ತು ಎನ್ನಲಾಗಿದೆ.


ವ್ಯಾಲಿಸೂರ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡೇವಿಡ್ ಲೈಟ್ ಅವರು, ದುರದೃಷ್ಟವಶಾತ್, ಏರೋಸಾಲ್ ಡ್ರೈ ಶಾಂಪೂಗಳಂತಹ ಇತರ ಗ್ರಾಹಕ-ಉತ್ಪನ್ನ ವಿಭಾಗಗಳು ಬೆಂಜೀನ್ ಮಾಲಿನ್ಯದಿಂದ ಹೆಚ್ಚು ಪರಿಣಾಮ ಬೀರಬಹುದು ಎಂದು ಹೇಳಿದ್ದರು.


ಇದನ್ನೂ ಓದಿ: ಏರ್​ಪೋರ್ಟ್​ನಲ್ಲಿ ಇಂಡಿಗೋ ವಿಮಾನದ ಎಂಜಿನ್‌ನಲ್ಲಿ ಬೆಂಕಿ: ಡಿಜಿಸಿಎ ತನಿಖೆಗೆ ಸರ್ಕಾರದ ಆದೇಶ


ಇನ್ನು, ಹಿಂಪಡೆಯಲಾದ ಉತ್ಪನ್ನಗಳಲ್ಲಿ ಬೆಂಜೀನ್‌ಗೆ ಪ್ರತಿದಿನ ಒಡ್ಡಿಕೊಳ್ಳುವುದರಿಂದ ಪ್ರತಿಕೂಲ ಆರೋಗ್ಯ ಪರಿಣಾಮಗಳನ್ನು ಉಂಟುಮಾಡುವ ನಿರೀಕ್ಷೆಯಿದೆ ಎಂದು ಆಹಾರ ಮತ್ತು ಔಷಧ ಆಡಳಿತ ಹೇಳಿದೆ. "ಬೆಂಜೀನ್‌ಗೆ ಒಡ್ಡಿಕೊಳ್ಳುವುದು ಲ್ಯುಕೇಮಿಯಾ ಮತ್ತು ಇತರ ರಕ್ತ ಕ್ಯಾನ್ಸರ್‌ಗಳಿಗೆ ಕಾರಣವಾಗಬಹುದು" ಎಂದು ವರದಿಯಲ್ಲಿ ಹೇಳಲಾಗಿದೆ.


ಒಟ್ಟಾರೆಯಾಗಿ ದೊಡ್ಡ ದೊಡ್ಡ ಕಂಪನಿಗಳ ಇಂಥ ತಪ್ಪುಗಳಿಂದ ಜನ ಸಾಮಾನ್ಯರು ಕಷ್ಟಪಡಬೇಕಾಗುತ್ತದೆ. ಇನ್ನು ಅಮೆರಿಕದಲ್ಲಿ ಮಾತ್ರ ತಮ್ಮ ಶಾಂಪೂ ಉತ್ಪನ್ನಗಳನ್ನು ಹಿಂಪಡೆದಿರುವ ಕಂಪನಿ ತಮ್ಮ ಮಾರುಕಟ್ಟೆ ಹೊಂದಿರುವ ಇತರ ದೇಶಗಳಲ್ಲಿ ಯಾವ ಕ್ರಮ ಕೈಗೊಳ್ಳುತ್ತದೋ ಅನ್ನೋದನ್ನು ಕಾದು ನೋಡಬೇಕಾಗಿದೆ.

First published: