ಚೀನಾ ವಿರುದ್ಧ ಸಂಘರ್ಷ ಉಂಟಾದರೆ ಟ್ರಂಪ್ ಭಾರತದ ಬೆನ್ನಿಗೆ ನಿಲ್ಲುವುದು ಅನುಮಾನ; ಹೀಗೆ ಹೇಳಿದವರು ಯಾರು ಗೊತ್ತಾ?

ಟ್ರಂಪ್‌ಗೆ ಇತಿಹಾಸದ ಬಗ್ಗೆ ನಿಜವಾಗಿಯೂ ಯಾವುದೇ ಮಾಹಿತಿ ಇಲ್ಲ. ಭಾರತ-ಚೀನಾ ನಡುವೆ ನಡೆಯುತ್ತಿರುವ ದಶಕಗಳ ಘರ್ಷಣೆಗಳ ಇತಿಹಾಸದ ಬಗ್ಗೆ ಟ್ರಂಪ್‌ಗೆ ಏನೂ ತಿಳಿದಿಲ್ಲ. ಹೀಗಾಗಿ ಸಂಘರ್ಷದ ಇತಿಹಾಸ ತಿಳಿಯದವರಿಂದ ನಿಖರವಾದ ನಡೆಯನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ ಎಂದು ಅಮೆರಿಕದ ಮಾಜಿ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್ ಅಭಿಪ್ರಾಯಪಟ್ಟಿದ್ದಾರೆ.

MAshok Kumar | news18-kannada
Updated:July 11, 2020, 9:10 PM IST
ಚೀನಾ ವಿರುದ್ಧ ಸಂಘರ್ಷ ಉಂಟಾದರೆ ಟ್ರಂಪ್ ಭಾರತದ ಬೆನ್ನಿಗೆ ನಿಲ್ಲುವುದು ಅನುಮಾನ; ಹೀಗೆ ಹೇಳಿದವರು ಯಾರು ಗೊತ್ತಾ?
ಡೊನಾಲ್ಡ್ ಟ್ರಂಪ್ ಮತ್ತು ನರೇಂದ್ರ ಮೋದಿ
  • Share this:
ನವ ದೆಹಲಿ (ಜುಲೈ 11); ಕಳೆದ ಜೂನ್‌.15 ರಂದು ಭಾರತ-ಚೀನಾ ಗಡಿ ಭಾಗವಾದ ಲಡಾಖ್‌ನ ಗಾಲ್ವಾನ್‌ ಕಣಿಯಲ್ಲಿ ಎರಡೂ ದೇಶಗಳ ಸೈನಿಕರ ನಡುವೆ ಸಂಘರ್ಷ ಏರ್ಪಟ್ಟ ನಂತರ ಇದೀಗ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಇದೇ ಸಂದರ್ಭದಲ್ಲಿ ಆಘಾತಕಾರಿ ಮಾಹಿತಿಯೊಂದನ್ನು ಹೊರಹಾಕಿರುವ ಅಮೆರಿಕದ ಮಾಜಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಬೋಲ್ಟನ್, “ಚೀನಾ-ಭಾರತದ ಗಡಿ ಉದ್ವಿಗ್ನತೆ ಹೆಚ್ಚಾದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಚೀನಾ ವಿರುದ್ಧವಾಗಿ ಭಾರತವನ್ನು ಬೆಂಬಲಿಸುತ್ತಾರೆ ಎಂಬ ಖಾತರಿ ಇಲ್ಲ” ಎಂದು ಹೇಳುವ ಮೂಲಕ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.

"ಗಾಲ್ವಾನ್‌ ಸಂಘರ್ಷದ ನಂತರ ಚೀನಾ ತನ್ನ ಸೇನೆಯನ್ನು ಹಿಂತೆಗೆದುಕೊಂಡಿದೆ ಎಂದು ವರದಿಯಾದರೂ ಸಹ ಡ್ಯ್ರಾಗನ್ ರಾಷ್ಟ್ರದ ಸೇನೆ ಗಡಿಯ ಸುತ್ತಲೂ ಯುದ್ಧದ ಹಪಾಹಪಿಯಲ್ಲಿರುವಂತೆ ವರ್ತಿಸುತ್ತಿದೆ. ಖಂಡಿತವಾಗಿಯೂ ಪೂರ್ವ ಮತ್ತು ದಕ್ಷಿಣ ಚೀನಾ ಸಮುದ್ರದಲ್ಲಿ ಜಪಾನ್, ಭಾರತ ಮತ್ತು ಇತರರೊಂದಿಗಿನ ಚೀನಾದ ಸಂಬಂಧಗಳು ಕ್ಷೀಣಿಸಿವೆ" ಎಂದು ಬೋಲ್ಟನ್ ಅಲ್ಲಿನ ಸ್ಥಳೀಯ WION TV ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

"ಡೊನಾಲ್ಡ್‌ ಟ್ರಂಪ್ ಚೀನಾ ದೇಶದ ವಿರುದ್ಧವಾಗಿ ಮತ್ತು ಭಾರತದ ಪರವಾಗಿ ಎಷ್ಟು ದೂರದವರೆಗೆ ಕ್ರಮಿಸಲು ಸಿದ್ಧರಿದ್ದಾರೆ? ಅವರು ಯಾವ ಮಾರ್ಗದಲ್ಲಿ ಹೋಗುತ್ತಾರೆಂಬುದು ನನಗೆ ಮಾತ್ರವಲ್ಲ ಸ್ವತಃ ಅವರಿಗೂ ತಿಳಿದಿಲ್ಲ. ಏಕೆಂದರೆ ಅವರು ಚೀನಾದೊಂದಿಗಿನ ವ್ಯಾಪಾರದ ಮೂಲಕ ಭೂ ಕಾರ್ಯತಂತ್ರದ ಸಂಬಂಧವನ್ನು ಎದುರು ನೋಡುತ್ತಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು ಜಾನ್ ಬೋಲ್ಟನ್ ಸ್ಪಷ್ಟಪಡಿಸಿದ್ದಾರೆ.

"ನವೆಂಬರ್‌ನಲ್ಲಿ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ಈ ನಂತರ ಟ್ರಂಪ್ ಏನು ಮಾಡುತ್ತಾರೆಂದು ನನಗೆ ತಿಳಿದಿಲ್ಲ. ಈಗಾಗಲೇ ಅವರು ಚೀನಾದೊಂದಿಗೆ ದೊಡ್ಡ ವ್ಯಾಪಾರ ಒಪ್ಪಂದ ಮಾಡಿಕೊಳ್ಳುವ ಉಮೇದಿನಲ್ಲಿದ್ದಾರೆ. ಈ ನಡುವೆ ಭಾರತ ಮತ್ತು ಚೀನಾ ನಡುವೆ ನಿರ್ಣಾಯಕ ವಿಷಯಗಳು ನಡೆಯುತ್ತಿರಬೇಕಾದರೆ, ಅವರು ಎಲ್ಲಿರುತ್ತಾರೆ? ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ? ಎಂದು ನನಗೆ ಖಚಿತವಿಲ್ಲ.

ಇದನ್ನೂ ಓದಿ : ರಾಜಸ್ಥಾನದಲ್ಲೂ ಆಪರೇಷನ್ ಕಮಲ, ಶಾಸಕರಿಗೆ 15 ಕೋಟಿ ಆಮಿಷ; ಅಶೋಕ್‌ ಗೆಹ್ಲೋಟ್‌ ಆರೋಪಅಲ್ಲದೆ, “ಟ್ರಂಪ್‌ಗೆ ಇತಿಹಾಸದ ಬಗ್ಗೆ ನಿಜವಾಗಿಯೂ ಯಾವುದೇ ಮಾಹಿತಿ ಇಲ್ಲ. ಭಾರತ-ಚೀನಾ ನಡುವೆ ನಡೆಯುತ್ತಿರುವ ದಶಕಗಳ ಘರ್ಷಣೆಗಳ ಇತಿಹಾಸದ ಬಗ್ಗೆ ಟ್ರಂಪ್‌ಗೆ ಏನೂ ತಿಳಿದಿಲ್ಲ. ಹೀಗಾಗಿ ಸಂಘರ್ಷದ ಇತಿಹಾಸ ತಿಳಿಯದವರಿಂದ ನಿಖರವಾದ ನಡೆಯನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ” ಎಂದು ಬೋಲ್ಟನ್ ಅಭಿಪ್ರಾಯಪಟ್ಟಿದ್ದಾರೆ.ಜಾನ್ ಬೋಲ್ಟನ್ ಟ್ರಂಪ್ ಆಡಳಿತದಲ್ಲಿ ಏಪ್ರಿಲ್ 2018 ರಿಂದ ಸೆಪ್ಟೆಂಬರ್ 2019 ರವರೆಗೆ ಅಮೆರಿಕಾದ ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಕಾರ್ಯನಿರ್ವಹಿಸಿದ್ದರು.
Published by: MAshok Kumar
First published: July 11, 2020, 9:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading