ಏಕಕಾಲಕ್ಕೆ ನಡೆಯಲಿದೆಯೇ ಪಂಜಾಬ್​ ಮತ್ತು ಉತ್ತರಾಖಂಡ ಚುನಾವಣೆ? ಇಕ್ಕಟ್ಟಿನಲ್ಲಿ ಕಾಂಗ್ರೆಸ್​ ಉಸ್ತುವಾರಿ ಹರೀಶ್​ ರಾವತ್​

ಪಕ್ಷದ ಹೈಕಮಾಂಡ್​ ಏನಾದರೂ ನೀವೆ ಪಂಜಾಬ್​ ಚುನಾವಣಾ ಉಸ್ತುವಾರಿ ಸ್ಥಾನದಲ್ಲಿ ಮುಂದುವರೆಯಿರಿ ಎಂದು ಹೇಳಿದರೆ ನಾನು ಸಂತೋಷದಿಂದಲೇ ಮುಂದುವರೆಯುತ್ತೇನೆ. ಪಂಜಾಬ್​ನಲ್ಲೂ ಸಹ ಮತ್ತೊಮ್ಮೆ ನಾವು ಅಧಿಕಾರಕ್ಕೆ ಏರಲೇ ಬೇಕು, ಇದರ ಮಧ್ಯೆಯೂ ನನ್ನ ಉತ್ತರಾಖಂಡ ರಾಜ್ಯದಲ್ಲಿಯೂ ಸಹ ಬಿಜೆಪಿಯನ್ನು ಸೋಲಿಸಿ ಮತ್ತೆ ಅಧಿಕಾರಕ್ಕೆ ಬರಲೇ ಬೇಕಿರುವ ಗುರಿ ನನ್ನ ಮುಂದಿದೆ ರಾವತ್​ ಎಂದರು.

ಹರೀಶ್​ ರಾವತ್​

ಹರೀಶ್​ ರಾವತ್​

 • Share this:
  ಎರಡು ರಾಜ್ಯಗಳಲ್ಲಿ ಎದುರಾಗಲಿರುವ  ಚುನಾವಣಾ ಒತ್ತಡಕ್ಕೆ ಒಳಗಾಗಿರುವ, ಪಂಜಾಬ್ ಕಾಂಗ್ರೆಸ್ ಉಸ್ತುವಾರಿ ಹಾಗೂ ಉತ್ತರಾಖಂಡದ ಮಾಜಿ ಸಿಎಂ ಹರೀಶ್ ರಾವತ್ ಶನಿವಾರ ನವದೆಹಲಿಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದರು. ರಾವತ್ ಈಗಾಗಲೇ ಪಂಜಾಬ್‌ನಲ್ಲಿ ಒಳಜಗಳವನ್ನು ಸರಿಪಡಿಸಿರುವ ಇವರು, ತಮ್ಮ ತವರು ರಾಜ್ಯ ಉತ್ತರಾಖಂಡದಲ್ಲಿ ಮುಂಬರುವ ಚುನಾವಣೆಗೆ ತಯಾರಿ ಮಾಡಿಕೊಳ್ಳುವುದು ಹೊಸ ಸವಾಲಾಗಿ ಪರಿಣಮಿಸಿದೆ.

  ಶುಕ್ರವಾರ ಕಾಂಗ್ರೆಸ್​ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿದ ಹರೀಶ್​ ರಾವತ್​, ’’ನನಗೆ ಸ್ವಲ್ಪ ಕಾಲಾವಕಾಶ ಬೇಕು, ಪಕ್ಷದ ಹೈಕಮಾಂಡ್ ನನಗೆ ನೀಡುವ ಯಾವುದೇ ಜವಾಬ್ದಾರಿಯನ್ನು ನಾನು ನಿರ್ವಹಿಸುತ್ತೇನೆ "ಎಂದು ಹೇಳಿದರು.  ಉತ್ತರಾಖಂಡದಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಉಲ್ಲೇಖಿಸಿ ಮಾತನಾಡಿದ ಅವರು ಉಸ್ತುವಾರಿ ಸ್ಥಾನದಿಂದ ಕೊಂಚ ದೂರಸರಿಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಲಾಗಿದೆ.

  ಪಕ್ಷದ ಮೂಲಗಳ ಪ್ರಕಾರ, ಉತ್ತರಾಖಂಡದಲ್ಲಿ ಮಾಜಿ ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷಗಿರಿ ಜವಾಬ್ದಾರಿ ಹೊತ್ತಿರುವ ರಾವತ್ ಅವರು ಗುಡ್ಡಗಾಡು ರಾಜ್ಯದಲ್ಲಿ ಮುಂಬರುವ ಚುನಾವಣೆಯ ಕಡೆಗೆ ಗಮನಹರಿಸಲು ಬಯಸುವುದಾಗಿ ಪಕ್ಷದ ಮುಖ್ಯಸ್ಥರಿಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.

  ಪಂಜಾಬ್​ ಹಾಗೂ ಉತ್ತರಾಖಂಡ ರಾಜ್ಯಗಳ ವಿಧಾನಸಭಾ ಚುನಾವಣೆ ಒಂದೇ ಸಮಯಕ್ಕೆ ಎದುರಾಗುವ ಕಾರಣ ರಾವತ್​ ಪಂಜಾಬ್​ ಕಾಂಗ್ರೆಸ್​ ಉಸ್ತುವಾರಿಯಿಂದ ದೂರ ಸರಿಯುವುದಾಗಿ ಹಾಗೂ ಆ ಜವಾಬ್ದಾರಿಯನ್ನು ಮತ್ತೊಬ್ಬರ ಹೆಗಲಿಗೆ ಹೊರಿಸಿವುದಾಗಿ ಹೇಳುತ್ತಿದ್ದಾರೆ. ಈ ಜವಾಬ್ದಾರಿಯಿಂದ ಕೊಂಚ ದೂರ ಸರಿದು ತನ್ನ ತವರು ರಾಜ್ಯದಲ್ಲಿ ನಡೆಯುವ ಚುನಾವಣೆಯ ಕಡೆಗೆ ಗಮನ ಹರಿಸುವುದು ಅವರಿಗೆ ಈಗ ಮುಖ್ಯವಾಗಿ ಕಾಣುತ್ತಿದೆ. ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ ಅಷ್ಟೊಂದು ಸಮರ್ಪಕ ಉತ್ತರ ರಾವತ್​ ಕಡೆಯಿಂದ ಬರಲಿಲ್ಲ ಎಂದು ವರದಿಯಾಗಿದೆ.

  ಪಕ್ಷದ ಹೈಕಮಾಂಡ್​ ಏನಾದರೂ ನೀವೆ ಪಂಜಾಬ್​ ಚುನಾವಣಾ ಉಸ್ತುವಾರಿ ಸ್ಥಾನದಲ್ಲಿ ಮುಂದುವರೆಯಿರಿ ಎಂದು ಹೇಳಿದರೆ ನಾನು ಸಂತೋಷದಿಂದಲೇ ಮುಂದುವರೆಯುತ್ತೇನೆ. ಪಂಜಾಬ್​ನಲ್ಲೂ ಸಹ ಮತ್ತೊಮ್ಮೆ ನಾವು ಅಧಿಕಾರಕ್ಕೆ ಏರಲೇ ಬೇಕು, ಇದರ ಮಧ್ಯೆಯೂ ನನ್ನ ಉತ್ತರಾಖಂಡ ರಾಜ್ಯದಲ್ಲಿಯೂ ಸಹ ಬಿಜೆಪಿಯನ್ನು ಸೋಲಿಸಿ ಮತ್ತೆ ಅಧಿಕಾರಕ್ಕೆ ಬರಲೇ ಬೇಕಿರುವ ಗುರಿ ನನ್ನ ಮುಂದಿದೆ ರಾವತ್​ ಎಂದರು. ಆದರೆ ಪ್ರಸ್ತುತ ಪಂಜಾಬಿನಲ್ಲಿ ಕಾಂಗ್ರೆಸ್​ ಪಕ್ಷದ ಮುಸುಕಿನ ಗುದ್ದಾಟ ತಾರಕಕ್ಕೆ ಏರಿದೆ, ಸಿಎಂ ಕ್ಯಾಪ್ಟನ್​ ಅಮರೀಂದರ್​ ಸಿಂಗ್​ ಮತ್ತು ರಾಜ್ಯ ಕಾಂಗ್ರೆಸ್​ ಅಧ್ಯಕ್ಷ ನವಜೋತ್ ಸಿಂಗ್​ ಸಿಧು ಅವರ ನಡುವಿನ ಕಿತ್ತಾಟವನ್ನು ಹರೀಶ್​ ರಾವತ್​ ಕೊಂಚ ಮಟ್ಟಿಗೆ ಶಮನಗೊಳಿಸಿದ್ದರು.

  ಇದನ್ನೂ ಓದಿ: Mysuru Gang Rape Case: ಮೈಸೂರು ಗ್ಯಾಂಗ್​ ರೇಪ್​ ಪ್ರಕರಣ; ಐವರು ಆರೋಪಿಗಳು ಅರೆಸ್ಟ್, ಮಾಹಿತಿ ಬಿಚ್ಚಿಟ್ಟ ಡಿಜಿಪಿ

  ಪ್ರಸ್ತುತ ಕಾಂಗ್ರೆಸ್​ ಪಕ್ಷದ ಹಿರಿಯ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ಬಂದಿರುವ ರಾವತ್, ಇತ್ತೀಚೆಗೆ ಪಂಜಾಬ್ ವಿಧಾನಸಭಾ ಚುನಾವಣೆಯು ಅಮರೀಂದರ್ ಸಿಂಗ್ ನೇತೃತ್ವದಲ್ಲಿಯೇ ನಾವು ಎದುರಿಸಲಿದ್ದೇವೆ, ಅವರೇ ಈಗಲೂ ಪಂಜಾಬಿನ ನಾಯಕರು ಎಂದು ಹೇಳಿದ್ದರು, ಮುಖ್ಯಮಂತ್ರಿ ಸ್ಥಾನದಿಂದ ಅವರನ್ನು ಇಳಿಸುತ್ತೇವೆ ಎಂದು ಹೇಳುತ್ತಿದ್ದ ಒಂದಷ್ಟು ನಾಯಕರಿಗೆ ರಾವತ್​ ಅವರ ಈ ಮಾತು ಅಷ್ಟಾಗಿ ಹಿಡಿಸಿರಲಿಲ್ಲ. ಪಂಜಾಬ್‌ನಲ್ಲಿ ಅಮರೀಂದರ್ ಸಿಂಗ್ ನೇತೃತ್ವದ ಸರ್ಕಾರಕ್ಕೆ ಯಾವುದೇ ಬೆದರಿಕೆ ಇಲ್ಲ ಎಂದೂ ಅವರು ಹೇಳಿದ್ದರು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
  Published by:HR Ramesh
  First published: