ನೆಹರೂ ಸ್ಮಾರಕಕ್ಕೆ ಧಕ್ಕೆಯುಂಟು ಮಾಡಬೇಡಿ: ಮೋದಿಗೆ ಪತ್ರ ಬರೆದ ಮನಮೋಹನ್​ ಸಿಂಗ್​


Updated:August 27, 2018, 10:26 AM IST
ನೆಹರೂ ಸ್ಮಾರಕಕ್ಕೆ ಧಕ್ಕೆಯುಂಟು ಮಾಡಬೇಡಿ: ಮೋದಿಗೆ ಪತ್ರ ಬರೆದ ಮನಮೋಹನ್​ ಸಿಂಗ್​

Updated: August 27, 2018, 10:26 AM IST
ನ್ಯೂಸ್​ 18 ಕನ್ನಡ

ನವದೆಹಲಿ(ಆ.27): ದೇಶದ ಮೊದಲ ಪ್ರಧಾನಿ ಜವಹರಲಾಲ್​ ನೆಹರೂರವರ ನಿವಾಸವಾಗಿದ್ದ ತ್ರಿಮೂರ್ತಿ ಭವನದಲ್ಲಿ ಮಾಡಲಾಗುವ ಬದಲಾವಣೆಗಳಿಗೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಮನಮೋಹನ್​ ಸಿಂಗ್​, ಪ್ರಧಾನಿ ನರೇಂದ್ರ ಮೋದಿಗೆ ಪತ್ರವೊಂದನ್ನು ಬರೆದಿದ್ದಾರೆ. ಕಾಂಗ್ರೆಸ್​ ಈ ಹಿಂದಿನಿಂದಲೂ ಬಿಜೆಪಿ ನೆಹರೂರವರ ನೆನಪುಗಳನ್ನು ಅಳಿಸಿ ಹಾಕುವ ಪ್ರಯತ್ನ ಮಾಡುತ್ತಿದೆ ಎಂದು ಅರೋಪಿಸುತ್ತಾ ಬಂದಿದೆ. ಸದ್ಯ ಐತಿಹಾಸಿಕ ತ್ರಿಮೂರ್ತಿ ಭವನಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿಗೆ, ಮನಮೋಹನ್​ ಸಿಂಗ್​ರವರು ಬರೆದಿರುವ ಪತ್ರದಲ್ಲಿ ಸರ್ಕಾರವು ನೆಹರೂರವರ ಕೊಡುಗೆಯನ್ನು ಅಳಿಸಿ ಹಅಕುವ ಯತ್ನ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

ಆಂಗ್ಲ ಪತ್ರಿಕೆ 'ದ ಇಂಡಿಯನ್​ ಎಕ್ಸ್​ಪ್ರೆಸ್​'ನಲ್ಲಿ ಪ್ರಕಟವಾದ ವರದಿಯನ್ವಯ ಮನಮೋಹನ್​ ಸಿಂಗ್​ ಪ್ರಧಾನಿ ಮೋದಿಗೆ ಬರೆದಿರುವ ಪತ್ರದಲ್ಲಿ ನೆಹರೂ ಕೇವಲ ಕಾಂಗ್ರೆಸ್​ ಪಕ್ಷದವರಲ್ಲ, ಬದಲಾಗಿ ಇಡೀ ದೇಶದವರು. ಹೀಗಿರುವಾಗ ತ್ರಿಮೂರ್ತಿ ಭವನಕ್ಕೆ ಯಾವುದೇ ರೀತಿಯ ಹಾನಿಯುಂಟು ಮಾಡಬೇಡಿ ಎಂದು ಬರೆದಿರುವುದಅಗಿ ತಿಳಿದು ಬಂದಿದೆ.

ತ್ರಿಮೂರ್ತಿ ಭವನ ಪರಿಸರದಲ್ಲಿ ಎಲ್ಲಾ ಪ್ರಧಾನ ಮಂತ್ರಿಗಳ ಸಂಗ್ರಾಹಾಲಯ(ಎನ್​ಎಮ್​ಎಮ್​ಎಲ್​) ಸ್ಥಾಪಿಸುವ ಕುರಿತಾಗಿ ಸರ್ಕಾರ ಪ್ರಸ್ತಾಪಿಸಿದಾಗ ಕಾಂಗ್ರೆಸ್​ ವಿರೋಧಿಸಿತ್ತು. ಅಂದಿನಿಂದ ನೆಹರೂ ಸ್ಮಾರಕ ಹಾಗೂ ಸಂಗ್ರಹಾಲಯ ಹಾಗೂ ಗ್ರಂಥಾಲಯವು ಸುದ್ದಿಯಾಗುತ್ತಲೇ ಇದೆ. ಹೀಗೆ ಮಾಡುವುದರಿಂದ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನೆಹರೂರವರನ್ನು ನೆನಪಿಸುವ ಸ್ಮಾರಕಕ್ಕೆ ಧಕ್ಕೆಯಾಗುತ್ತದೆ ಎಂಬುವುದು ಕಾಂಗ್ರೆಸ್​ ಅಭಿಪ್ರಾಯವಾಗಿದೆ.
ಕಳೆದ ವಾರ ಕಳುಹಿಸಿದ್ದ ಪತ್ರದಲ್ಲಿ ಮನಮೋಹನ್​ ಸಿಂಗ್​ರವರು ದಿವಂಗತ ಪ್ರಧಾನಿ ವಾಜಪೇಯಿಯವರ ಕುರಿತಾಗಿ ಬರೆದಿದ್ದರು. "ವಾಜಪೇಯಿಯವರು ಪ್ರಧಾನ ಮಂತ್ರಿಯಾಗಿ 6 ವರ್ಷಗಳ ಆಡಳಿತ ನಡೆಸಿದ್ದರು. ಈ ಸಂದರ್ಭದಲ್ಲಿ ಅವರು ಎನ್​ಎಮ್​ಎಮ್​ಎಲ್​ ಹಾಗೂ ತ್ರಿಮೂರ್ತಿ ಭವನ ಪರಿಸರದಲ್ಲಿ ಹಾಗೂ ಚರಿತ್ರೆಯನ್ನು ಬದಲಾಯಿಸುವ ಪ್ರಯತ್ನ ಮಾಡಿರಲಿಲ್ಲ. ಆದರೆ ಈಗ ಬದಲಾವಣೆ ತರುವುದು ಭಾರತ ಸರ್ಕಾರದ ಅಜೆಂಡಾ ಆಗಿರುವು ಖೇದಕರ ಸಂಗತಿ" ಎಂದು ಮನಮೋಹನ್​ ಸಿಂಗ್​ ಬರೆದುಕೊಂಡಿದ್ದರು.

ಈ ಪತ್ರದಲ್ಲಿ ಮಾಜಿ ಪ್ರಧಾನಿ ವಾಜಪೇಯಿಯವರು ಸಂಸತ್ತಿನಲ್ಲಿ ಮಾಡಿದ್ದ ಭಾಷಣವನ್ನು ಉಲ್ಲೇಖಿಸಿದ್ದ ಸಿಂಗ್​ "ಇಂತಹ ನಿವಾಸಿಗಳು ಮುಂದೆದೂ ತ್ರಿಮೂರ್ತಿ ಭವನದ ಸೌಂದರ್ಯವನ್ನು ಹೆಚ್ಚಿಸುವುದಿಲ್ಲ. ಅವರು ಜೀವಂತ ವ್ಯಕ್ತಿತ್ವ ಹೊಂದಿದ್ದರು. ವಿಪಕ್ಷಗಳನ್ನು ಒಗ್ಗೂಡಿಸಿ ಮುಂದೆ ನಡೆಯುವ ದೃಷ್ಟಿಕೋನ, ಸಜ್ಜನತೆ ಹೊಂದಿದ್ದರು. ಇಂತಹ ಮಹಾನ್​ ವ್ಯಕ್ತಿಯನ್ನು ಭವಿಷ್ಯದಲ್ಲಿ ಇನ್ನೆಂದೂ ನೋಡಲು ಸಾಧ್ಯವಿಲ್ಲ. ವಿಚಾರಗಳ ಅಂತರವಿದ್ದರೂ ಅವರ ಮಹಾನ್​ ಆದರ್ಶಗಳು, ಪ್ರಾಮಾಣಿಕತೆ, ದೇಶದ ಮೇಲೆ ಅವರಿಗಿದ್ದ ಪ್ರೀತಿ ಹಾಗೂ ಅಸಾಮಾನ್ಯ ಸಾಹಸದ ಕುರಿತಾಗಿ ನಮಗೆ ಗೌರವವಿದೆ" ಎಂದಿದ್ದಾರೆ.
Loading...

"ಎನ್​ಎಮ್​ಎಮ್​ಎಲ್​ ಭಾರತದ ಮೊದಲ ಪ್ರಧಾನ ಮಂತ್ರಿ ಹಾಗೂ ಹಾಗೂ ಭಾರತೀಯ ರಾಷ್ಟ್ರ-ರಾಜ್ಯಗಳ ಹರಿಕಾರರಿಗೆ ಸಮರ್ಪಿಸಿದ್ದಾಗಿದೆ. ಅವರು ನಮ್ಮ ದೇಶ ಹಾಗೂ ಜಗತ್ತಿನಲ್ಲಕಿ ತಮ್ಮದೇ ಆದ ಛಅಪು ಮೂಡಿಸಿದ್ದರು. ಅವರ ವಿಶೇಷತೆ ಹಾಗೂ ಮಹಾನತೆಯನ್ನು ಅವರ ರಾಜಕೀಯ ಶತ್ರುಗಳು ಹಾಗೂ ಸ್ಪರ್ಧಿಗಳೂ ಒಪ್ಪಿಕೊಂಡಿದ್ದರು" ಎಂದು ಮನಮೋಹನ್​ ಸಿಂಗ್​ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
First published:August 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...