HOME » NEWS » National-international » DONT WANT TO INFLUENCE DELHI ELECTIONS SC TO HEAR ON MONDAY PLEA FOR REMOVAL OF SHAHEEN BAGH PROTESTERS SNVS

ಶಾಹೀನ್ ಬಾಗ್ ಪ್ರತಿಭಟನಾಕಾರರನ್ನು ತೆರವುಗೊಳಿಸುವ ವಿಚಾರ: ಚುನಾವಣೆ ನಂತರ ಫೆ. 10ಕ್ಕೆ ಸುಪ್ರೀಂ ವಿಚಾರಣೆ

ಡಿಸೆಂಬರ್ ಮೂರನೇ ವಾರದಿಂದಲೂ ದೆಹಲಿ ನಗರ ವ್ಯಾಪ್ತಿಯಲ್ಲಿರುವ ಶಾಹೀನ್ ಬಾಗ್​ನಲ್ಲಿ ಸಿಎಎ ವಿರುದ್ಧ ನಿರಂತರ ಪ್ರತಿಭಟನೆಗಳು ನಡೆಯುತ್ತಿವೆ. ಇಲ್ಲಿನ ರಸ್ತೆಗಳಲ್ಲೇ ಪ್ರತಿಭಟನಾಕಾರರು ತುಂಬಿಹೋಗಿದ್ದು ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ನೋಯಿಡಾಗೆ ಹೋಗಬೇಕಾದ ಜನರು ಸುತ್ತಿಬಳಸಿ ಹೋಗಬೇಕಾದ ಅನಿವಾರ್ಯತೆ ಇದೆ.

news18
Updated:February 7, 2020, 12:22 PM IST
ಶಾಹೀನ್ ಬಾಗ್ ಪ್ರತಿಭಟನಾಕಾರರನ್ನು ತೆರವುಗೊಳಿಸುವ ವಿಚಾರ: ಚುನಾವಣೆ ನಂತರ ಫೆ. 10ಕ್ಕೆ ಸುಪ್ರೀಂ ವಿಚಾರಣೆ
ಶಾಹೀನ್ ಬಾಗ್​ನಲ್ಲಿ ನಡೆದ ಪ್ರತಿಭಟನೆ
  • News18
  • Last Updated: February 7, 2020, 12:22 PM IST
  • Share this:
ನವದೆಹಲಿ(ಫೆ. 07): ಸಿಎಎ, ಎನ್​ಆರ್​ಸಿ ವಿರುದ್ಧ ಶಾಹೀನ್ ಬಾಗ್​ನಲ್ಲಿ ದಿನಕ್ಕೆ 24 ಗಂಟೆ ನಡೆಯುತ್ತಿರುವ ಪ್ರತಿಭಟನೆಗಳಿಂದ ದೆಹಲಿಯ ಜನ ಜೀವನಕ್ಕೆ ತೊಂದರೆಯಾಗುತ್ತಿದೆ. ಪ್ರತಿಭಟನಾಕಾರರನ್ನು ಸ್ಥಳದಿಂದ ತೆರವುಗೊಳಿಸಿ ಎಂದು ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ದೆಹಲಿ ಚುನಾವಣೆಯ ನಂತರ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ. ಚುನಾವಣೆ ಇರುವುದರಿಂದ ಈಗ ಇದರ ಬಗ್ಗೆ ಯಾವುದೇ ತೀರ್ಪು ತೆಗೆದುಕೊಂಡರೂ ಮತದಾರರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇರುವುದರಿಂದ ಫೆ. 10ರಂದು ವಿಚಾರಣೆ ನಡೆಸುವುದಾಗಿ ಸರ್ವೋಚ್ಚ ನ್ಯಾಯಪೀಠ ಹೇಳಿದೆ.

“ಇಲ್ಲಿ ಸಮಸ್ಯೆ ಇದೆ ಎಂಬುದು ನಮಗೆ ಅರ್ಥವಾಗುತ್ತದೆ. ಇದನ್ನು ಹೇಗೆ ಪರಿಹರಿಸಬೇಕು ಎಂದು ಯೋಚಿಸೋಣ. ಸೋಮವಾರ ಇದರ ವಿಚಾರಣೆ ನಡೆಸುವುದು ಸೂಕ್ತವೆನಿಸುತ್ತದೆ” ಎಂದು ನ್ಯಾ| ಎಸ್.ಕೆ. ಕೌಲ್ ಮತ್ತು ನ್ಯಾ| ಕೆ.ಎಂ. ಜೋಸೆಫ್ ಅವರಿರುವ ನ್ಯಾಯಪೀಠವು ಇವತ್ತಿನ ವಿಚಾರಣೆಯ ವೇಳೆ ತಿಳಿಸಿತು.

ಇದನ್ನೂ ಓದಿ: ಕಾಶ್ಮೀರದ ಕಗ್ಗಂಟು: ಒಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮೇಲೆ ಸಾರ್ವಜನಿಕ ಸುರಕ್ಷತಾ ಕಾಯ್ದೆ ಹೇರಿಕೆ

ಈ ಸಂದರ್ಭದಲ್ಲಿ ಅರ್ಜಿದಾರರೊಬ್ಬರ ಪರ ವಕೀಲರು ಫೆ. 8ರಂದು ದೆಹಲಿ ಚುನಾವಣೆ ಇರುವುದನ್ನು ನೆನಪಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, “ಅದಕ್ಕೆ ನಾವು ಹೇಳಿದ್ದು ಸೋಮವಾರ ಇದರ ವಿಚಾರಣೆ ನಡೆಸೋಣವೆಂದು. ನಾವು ಯಾಕೆ ಪ್ರಭಾವ ಬೀರಬೇಕು?” ಎಂದು ಕೇಳಿತು.

ಹಾಗೆಯೇ, ದೆಹಲಿ ಹೈಕೋರ್ಟ್ ಬಿಟ್ಟು ಸುಪ್ರೀಂ ಕೋರ್ಟ್​ನಲ್ಲೇ ಈ ಪ್ರಕರಣದ ವಿಚಾರಣೆ ನಡೆಯಬೇಕು ಎಂಬುದಕ್ಕೆ ಸಕಾರಣಗಳನ್ನು ನೀಡಬೇಕು. ಸೋಮವಾರ ಇದರ ಪರಿಶೀಲನೆ ನಡೆಸೋಣ ಎಂದು ನ್ಯಾಯಮೂರ್ತಿಗಳು ಸೂಚಿಸಿದರು.

 ಇದನ್ನೂ ಓದಿ: ಅಮೆರಿಕ ಪಡೆ ದಾಳಿಯಲ್ಲಿ ಯೆಮೆನ್ ದೇಶದ ಅಲ್-ಖೈದಾ ಮುಖ್ಯಸ್ಥನ ಹತ್ಯೆ

ಡಿಸೆಂಬರ್ ಮೂರನೇ ವಾರದಿಂದಲೂ ದೆಹಲಿ ನಗರ ವ್ಯಾಪ್ತಿಯಲ್ಲಿರುವ ಶಾಹೀನ್ ಬಾಗ್​ನಲ್ಲಿ ಸಿಎಎ ವಿರುದ್ಧ ನಿರಂತರ ಪ್ರತಿಭಟನೆಗಳು ನಡೆಯುತ್ತಿವೆ. ಇಲ್ಲಿನ ರಸ್ತೆಗಳಲ್ಲೇ ಪ್ರತಿಭಟನಾಕಾರರು ತುಂಬಿಹೋಗಿದ್ದು ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ. ನೋಯಿಡಾಗೆ ಹೋಗಬೇಕಾದ ಜನರು ಸುತ್ತಿಬಳಸಿ ಹೋಗಬೇಕಾದ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜನರಿಗೆ ತೊಂದರೆ ಆಗುತ್ತಿದೆ ಎಂದು ಆರೋಪಿಸಿ ಕೆಲ ಜನರು ಮತ್ತು ಸಂಘಟನೆಗಳು ಶಾಹೀನ್ ಬಾಗ್ ಪ್ರದೇಶದಿಂದ ಪ್ರತಿಭಟನಾಕಾರರನ್ನು ತೆರವುಗೊಳಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್​ನಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದಾರೆ.ಇದೇ ವೇಳೆ, ಫೆ. 8, ಅಂದರೆ ನಾಳೆ ದೆಹಲಿಯಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿವೆ. ಫೆ. 11ರಂದು ಫಲಿತಾಂಶ ಪ್ರಕಟವಾಗುತ್ತದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: February 7, 2020, 12:22 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories