Mamata Banerjee: ಬಂಗಾಳಕ್ಕೆ ದುರ್ಯೋಧನ, ದುಶ್ಯಾಶನರ ಅಗತ್ಯವಿಲ್ಲ; ಅಮಿತ್ ಶಾ-ಮೋದಿ ವಿರುದ್ಧ ಮಮತಾ ಕಿಡಿ

ಸುವೆಂದು ಅಧಿಕಾರಿಯನ್ನು ನಾನು ಸಂಪೂರ್ಣವಾಗಿ ನಂಬಿದ್ದೆ. ಆದರೆ, ಆತ ನನಗೆ ದ್ರೋಹ ಎಸಗಿದ್ದಾನೆ. ಇಂತಹ ಮೀರ್​ ಜಾಫರ್​ಗಳನ್ನು ಬಂಗಾಳದ ಜನ ಎಂದಿಗೂ ಕ್ಷಮಿಸುವುದಿಲ್ಲ ಎಂದು ಮಮತಾ ಬ್ಯಾನರ್ಜಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಅಮಿತ್ ಶಾ-ನರೇಂದ್ರ ಮೋದಿ.

ಅಮಿತ್ ಶಾ-ನರೇಂದ್ರ ಮೋದಿ.

 • Share this:
  ಕೋಲ್ಕತ್ತಾ (ಮಾರ್ಚ್​ 19); ಚುನಾವಣಾ ದಿನಾಂಕ ಘೋಷಣೆಯಾದಾಗಿನಿಂದ ಪಶ್ಚಿಮ ಬಂಗಾಳದಲ್ಲಿ ಕಣ ದಿನದಿಂದ ದಿನಕ್ಕೆ ಕಾವೇರುತ್ತಲೇ ಇದೆ. ಈ ನಡುವೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೇಲೆ ದಾಳಿಯಾದ ನಂತರ ಬಂಗಾಳದ ಚುನಾವಣೆ ಬೇರೆಯದೇ ದಿಕ್ಕಿನೆಡೆಗೆ ಮುಖಮಾಡಿದೆ ಎನ್ನಲಾಗುತ್ತಿದೆ. ಈ ನಡುವೆ ವೀಲ್​ಚೇರ್​ನಲ್ಲೇ ಕುಳಿತು ಚುನಾವಣಾ ಪ್ರಚಾರ ನಡೆಸುತ್ತಿರುವ ಮಮತಾ ಬ್ಯಾನರ್ಜಿ ಇಂದೂ ಸಹ ಬಿಜೆಪಿ ನಾಯಕರುಗಳ ವಿರುದ್ಧ ಕಿಡಿಕಾರಿದ್ದಾರೆ, "ಬಂಗಾಳಕ್ಕೆ ದುರ್ಯೋಧನ ಮತ್ತು ದುಶ್ಯಾಸನರ ಅಗತ್ಯ ಇಲ್ಲ" ಎಂದು ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್​ ಶಾ ಅವರನ್ನು ಮಹಾಭಾರತದ ಖಳರಿಗೆ ಹೋಲಿಕೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಇನ್ನೂ ಸುವೆಂಧು ಅಧಿಕಾರಿಯನ್ನು 'ಮೀರ್​ ಜಾಫರ್​'ಗೆ ಹೋಲಿಕೆ ಮಾಡಿದ್ದಾರೆ.

  ಇಂದು ಮಿಡ್ನಾಪೊರ್‌‌ನಲ್ಲಿ ಜರುಗಿದ ಚುನಾವಣಾ ರ್‍ಯಾಲಿಯಲ್ಲಿ ಬಿಜೆಪಿ ನಾಯಕರ ವಿರುದ್ಧ ಹರಿಹಾಯ್ದಿರುವ ಮಮತಾ ಬ್ಯಾನರ್ಜಿ, "ಬಿಜೆಪಿಗೆ ವಿದಾಯ ಹೇಳಿ, ನಮಗೆ ಬಿಜೆಪಿ ಬೇಡ. ಮೋದಿಯವರ ಮುಖವನ್ನು ನೋಡಲು ನಾವು ಬಯಸುವುದಿಲ್ಲ. ಗಲಭೆಗಳು, ಲೂಟಿಕೋರರು, ದುರ್ಯೋಧನ, ದುಶ್ಯಾಶನ… ಮಿರ್ ಜಾಫರ್ ನಮಗೆ ಬೇಡ. ಮಾರ್ಚ್ 27 ರಂದು ‘ಖೇಲಾ ಹೊಬೆ’ (ಆಟ ಚಾಲೂ), ಬಿಜೆಪಿಯನ್ನು ಬೌಲ್ಡ್‌ ಮಾಡಬೇಕಾಗಿದೆ" ಎಂದು ಕಿಡಿಕಾರಿದ್ದಾರೆ.

  ಮಾಜಿ ಸಚಿವ ಸುವೆಂಧು ಅಧಿಕಾರಿಯ ವಿರುದ್ಧ ಹರಿಹಾಯ್ದಿರುವ ಮಮತಾ ಬ್ಯಾನರ್ಜಿ, "ಸುವೆಂದು ಅಧಿಕಾರಿಯನ್ನು ನಾನು ಸಂಪೂರ್ಣವಾಗಿ ನಂಬಿದ್ದೆ. ಆದರೆ, ಆತ ನನಗೆ ದ್ರೋಹ ಎಸಗಿದ್ದಾನೆ. ಇಂತಹ ಮೀರ್​ ಜಾಫರ್​ಗಳನ್ನು ಬಂಗಾಳದ ಜನ ಎಂದಿಗೂ ಕ್ಷಮಿಸುವುದಿಲ್ಲ" ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

  ಇದನ್ನೂ ಓದಿ: ಮಹಾ ರೈತ ಪಂಚಾಯತ್ ಸಮಾವೇಶಕ್ಕೆ ಶಿವಮೊಗ್ಗ ಸಜ್ಜು; ರಾಜ್ಯದ ಅಧಿಕಾರದ ಕೇಂದ್ರದಲ್ಲಿ ಮೊಳಗಲಿದೆ ರೈತರ ಕಹಳೆ!

  ಗುರುವಾರದಂದು ಪುರುಲಿಯಾದಲ್ಲಿ ಪ್ರಚಾರ ಮಾಡಿದ್ದ ಪ್ರಧಾನಿ ವಿರುದ್ದ ದಾಳಿ ಮಾಡಿದ ಮಮತಾ ಬ್ಯಾನರ್ಜಿ, ತನ್ನ ಘೋಷಣೆಯಾದ "ಖೇಲಾ ಹೊಬೆ" ಯನ್ನು ತನ್ನ ವಿರುದ್ದವೆ ಬಳಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿ, ಪ್ರಧಾನಿಯನ್ನು ಕಾಪಿ ಕ್ಯಾಟ್ ಎಂದು ಜರಿದಿದ್ದಾರೆ.

  "ಮೋದಿ ಟೆಲಿಪ್ರೊಂಪ್ಟರ್ ಬಳಸಿ ‘ಕೆಮನ್ ಆಚೊ ಬಾಂಗ್ಲಾ’ (ಹೇಗಿದ್ದಿ ಬಂಗಾಳ) ಎಂದು ಹೇಳುತ್ತಾರೆ, ನಾವು ‘ಬಾಂಗ್ಲಾ ಭಾಲೋ ಆಚೆ’ (ಬಂಗಾಳ ತುಂಬಾ ಚೆನ್ನಾಗಿದೆ) ಎಂದು ಹೇಳುತ್ತೇವೆ. ‘ಪೊರಿಬೋರ್ತನ್’ ನನ್ನ ಘೋಷಣೆಯಾಗಿದೆ. ಕಾಪಿಕ್ಯಾಟ್, ನನ್ನ ಘೋಷಣೆಯನ್ನು ನೀವು ಏಕೆ ಕದಿಯುತ್ತೀರಿ? ಎಂದು ಅವರು ಪ್ರಧಾನಿಯನ್ನು ಪ್ರಶ್ನಿಸಿದ್ದಾರೆ. ಮಾರ್ಚ್ 27 ರಿಂದ ಪಶ್ಚಿಮ ಬಂಗಾಳದಲ್ಲಿ ಎಂಟು ಸುತ್ತಿನ ಮತದಾನ ಪ್ರಾರಂಭವಾಗಲಿದ್ದು, ಮೇ 2 ರಂದು ಫಲಿತಾಂಶ ಪ್ರಕಟವಾಗಲಿದೆ.
  Published by:MAshok Kumar
  First published: