ಐಎನ್​ಎಕ್ಸ್​ ಪ್ರಕರಣದಲ್ಲಿ ಬೇರೆ ಯಾರ ಬಂಧನವಾಗುವುದೂ ಬೇಡ: ಪಿ. ಚಿದಂಬರಂ

ಐಎನ್​ಎಕ್ಸ್ ಮೀಡಿಯಾ ಹಗರಣದಲ್ಲಿ ಪಿ. ಚಿದಂಬರಮ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ. ಆರ್ಥಿಕ ಅಪರಾಧರಿಗೇ ಹೆಚ್ಚಾಗಿ ಮೀಸಲಾಗಿರುವ ತಿಹಾರ್ ಜೈಲಿನ 7ನೇ ನಂಬರ್ ಕೋಣೆಯಲ್ಲಿ ಅವರನ್ನು ಇರಿಸಲಾಗಿದೆ. ಅವರ ಮಗ ಕಾರ್ತಿ ಅವರನ್ನೂ ಇದೇ ಸೆಲ್​ನಲ್ಲಿ ಇರಿಸಲಾಗಿತ್ತು

Seema.R | news18-kannada
Updated:September 9, 2019, 4:00 PM IST
ಐಎನ್​ಎಕ್ಸ್​ ಪ್ರಕರಣದಲ್ಲಿ ಬೇರೆ ಯಾರ ಬಂಧನವಾಗುವುದೂ ಬೇಡ: ಪಿ. ಚಿದಂಬರಂ
ಪಿ ಚಿದಂಬರಂ
Seema.R | news18-kannada
Updated: September 9, 2019, 4:00 PM IST
ನವದೆಹಲಿ(ಸೆ. 09): ಐಎನ್​ಎಕ್ಸ್​ ಹಗರಣ ಸಂಬಂಧ ತಿಹಾರ್​ ಜೈಲಿನಲ್ಲಿ ಕಸ್ಟಡಿಯಲ್ಲಿರುವ ಮಾಜಿ ಕೇಂದ್ರ ಸಚಿವ ಪಿ ಚಿದಂಬರಂ ಅವರು ಪ್ರಕರಣದಲ್ಲಿ ಭಾಗಿಯಾಗಿರುವ ಸರ್ಕಾರಿ ಅಧಿಕಾರಿಗಳನ್ನು ಸಮರ್ಥಿಸಿಕೊಂಡು ಹೇಳಿಕೆ ನೀಡಿದ್ದಾರೆ.

“ಪ್ರಕರಣದಲ್ಲಿ ಭಾಗಿಯಾಗಿರುವ ಹತ್ತಾರು ಅಧಿಕಾರಿಗಳನ್ನ ಬಿಟ್ಟು ನಿಮ್ಮನ್ನು ಯಾಕೆ ಬಂಧಿಸಲಾಗಿದೆ? ನೀವು ದಾಖಲೆಗೆ ಅಂತಿಮವಾಗಿ ಸಹಿ ಹಾಕಿರುವುದೇ ಕಾರಣವಾ? ಎಂದು ಜನರು ನನ್ನನ್ನು ಕೇಳುತ್ತಾರೆ. ಇದಕ್ಕೆ ನನ್ನ ಬಳಿ ಉತ್ತರ ಇಲ್ಲ” ಎಂದು ಚಿದಂಬರಂ ಪರವಾಗಿ ಅವರ ಕುಟುಂಬ ಸದಸ್ಯರು ಟ್ವೀಟ್ ಮಾಡಿದ್ದಾರೆ.ಇದರ ಬೆನ್ನಲ್ಲೇ ಮತ್ತೊಂದು ಟ್ವೀಟ್ ಮಾಡಿದ್ದು, “ಯಾವ ಅಧಿಕಾರಿಯೂ ತಪ್ಪ ಮಾಡಿಲ್ಲ. ಯಾರ ಬಂಧವೂ ಆಗಬೇಕಿಲ್ಲ” ಎಂದು ಹೇಳಿದ್ದಾರೆ.
Loading...

ಐಎನ್​ಎಕ್ಸ್ ಮೀಡಿಯಾ ಹಗರಣದಲ್ಲಿ ಪಿ. ಚಿದಂಬರಮ್ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸಲಾಗಿದೆ. ಆರ್ಥಿಕ ಅಪರಾಧರಿಗೇ ಹೆಚ್ಚಾಗಿ ಮೀಸಲಾಗಿರುವ ತಿಹಾರ್ ಜೈಲಿನ 7ನೇ ನಂಬರ್ ಕೋಣೆಯಲ್ಲಿ ಅವರನ್ನು ಇರಿಸಲಾಗಿದೆ. ಅವರ ಮಗ ಕಾರ್ತಿ ಅವರನ್ನೂ ಇದೇ ಸೆಲ್​ನಲ್ಲಿ ಇರಿಸಲಾಗಿತ್ತು.

ಇದನ್ನು ಓದಿ: ಮಗಳ ಮದುವೆಗೆ ಮೋದಿಗೆ ಆಹ್ವಾನಿಸಿದ ತಂದೆಗೆ ಸಿಕ್ಕಿತು ಅಚ್ಚರಿ ಉತ್ತರ..!

ತನ್ನ ವಿರುದ್ಧದ ಪ್ರಕರಣವನ್ನು ಕೇಂದ್ರ ಸರ್ಕಾರದ ದ್ವೇಷ ರಾಜಕಾರಣದ ಫಲಶೃತಿ ಎಂಬುದು ಚಿದಂಬರಂ ಅವರ ವಾದವಾಗಿದೆ. ಸಿಬಿಐ ವಿಶೇಷ ಕೋರ್ಟ್ ಸೆ. 5ರಂದು 14 ದಿನ ನ್ಯಾಯಾಂಗ ಕಸ್ಟಡಿಗೆ ಒಪ್ಪಿಸುವ ಮುನ್ನ ಚಿದಂಬರಂ ಅವರು ಮಾಧ್ಯಮದವರ ಪ್ರಶ್ನೆಗೆ ಉತ್ತರಿಸುತ್ತಾ ಕೇಂದ್ರವನ್ನು ಮಾರ್ಮಿಕವಾಗಿ ಕುಟುಕಿದ್ದರು. ಜೈಲಿಗೆ ಕಳುಹಿಸಿದ ಬಗ್ಗೆ ಮಾಧ್ಯಮ ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಚಿದಂಬರಂ ಅವರು “ನನಗೆ ನನ್ನ ಬಗ್ಗೆ ಚಿಂತೆ ಇಲ್ಲ. ನಿಮಗೆ ಐದು ಪರ್ಸೆಂಟ್ ಅಂದರೆ ಏನು ಗೊತ್ತಾ?” ಎಂದು ಐದು ಬೆರಳುಗಳನ್ನ ಎತ್ತಿ ತೋರಿಸುತ್ತಾ ಪ್ರಶ್ನೆ ಹಾಕಿದ್ದರು.

ಆಗಷ್ಟೇ ದೇಶದ ಜಿಡಿಪಿ ದರ ಶೇ. 5ಕ್ಕೆ ಇಳಿದಿರುವ ಮಾಹಿತಿ ದೇಶವನ್ನು ತಲ್ಲಣಗೊಳಿಸಿತ್ತು. ಇದೇ 5 ಪರ್ಸೆಂಟ್ ಅನ್ನು ಚಿದಂಬರಂ ಮಾರ್ಮಿಕವಾಗಿ ಉಲ್ಲೇಖಿಸುತ್ತಾ ಕೇಂದ್ರ ಸರ್ಕಾರವನ್ನು ವ್ಯಂಗ್ಯ ಮಾಡಿದ್ದರು.

First published:September 9, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...