Neeraj Chopra| ನಿಮ್ಮ ಅಜೆಂಡಾಗಳಿಗೆ ನನ್ನ ಹೇಳಿಕೆಯನ್ನು ಬಳಸಬೇಡಿ; ಪಾಕ್ ಕ್ರೀಡಾಪಟು ಟೀಕೆಯ ವಿರುದ್ಧ ನೀರಜ್ ಚೋಪ್ರಾ ಕಿಡಿ
ಈ ಹಿಂದೆ ನೀರಜ್ ಚೋಪ್ರ ಒಲಿಂಪಿಕ್ನಲ್ಲಿ ಚಿನ್ನದ ಪದಕವನ್ನು ಗೆದ್ದಾಗ ಪಾಕಿಸ್ತಾನದ ಅಥ್ಲೆಟ್ ಅರ್ಶದ್ ನದೀಮ್ ಸಂತಸ ವ್ಯಕ್ತಪಡಿಸಿದ್ದರು. ಅಲ್ಲದೆ, ನೀರಜ್ ಚೋಪ್ರ ಚಿನ್ನದ ಪದಕ ಗೆದ್ದದ್ದು ಇಡೀ ಏಷ್ಯಾಗೆ ಹೆಮ್ಮೆಯ ವಿಚಾರ ಎಂದು ಪ್ರಶಂಶಿಸಿದ್ದರು ಎಂಬುದು ಉಲ್ಲೇಖಾರ್ಹ.
ನಿಮ್ಮಗಳ ಕೊಳಕು ಅಜೆಂಡಾಗಳಿಗೆ ದಯವಿಟ್ಟು ನನ್ನ ಹೇಳಿಕೆಯನ್ನು ಬಳಸಿಕೊಳ್ಳಬೇಡಿ ಎಂದು ನೀರಜ್ ಚೋಪ್ರಾ (Neeraj Chopra|) ಕಿಡಿಕಾರಿದ್ದಾರೆ. ನೀರಜ್ ಚೋಪ್ರಾ ಶತಮಾನಗಳ ನಂತರ ಭಾರತಕ್ಕೆ ಅಥ್ಲೆಟ್ ವಿಭಾಗದಲ್ಲಿ ಚಿನ್ನದ ಪದಕವನ್ನು ಗೆದ್ದು ತಂದ ಕ್ರೀಡಾಪಟು. ದಶಕಗಳ ನಂತರ ಒಲಿಂಪಿಕ್ (Olympic) ಅಂಗಳದಲ್ಲಿ ಭಾರತದ ರಾಷ್ಟ್ರಗೀತೆ ಮೊಳಗಿತ್ತು. ಇದು ನಿಜಕ್ಕೂ ಹೆಮ್ಮೆಯ ವಿಚಾರ. ಆದರೆ, ನೀರಜ್ ಚೋಪ್ರ ನೀಡಿದ್ದ ಒಂದು ಸಾಮಾನ್ಯ ಹೇಳಿಕೆಯನ್ನು ಹಲವರು ವಿವಾದದ ವಸ್ತುವನ್ನಾಗಿಸಿದ್ದರು. ಆದರೆ, ಈ ಎಲ್ಲಾ ವಿವಾದಗಳಿಗೆ ಕೊನೆಗೂ ಇಂದು ತೆರೆ ಎಳೆದಿರುವ ಚಿನ್ನದ ಹುಡುಗ ನೀರಜ್ ಚೋಪ್ರ, "ದಯವಿಟ್ಟು ನಿಮ್ಮ ಅಸಹ್ಯ ಅಜೆಂಡಾಗಳಿಗೆ ನನ್ನ ಹೇಳಿಕೆಯನ್ನು ಬಳಿಸಿಕೊಳ್ಳಬೇಡಿ" ಎಂದು ಕಡ್ಡಿ ತುಂಡು ಮಾಡಿದಂತಹ ಹೇಳಿಕೆಯನ್ನು ನೀಡಿದ್ದಾರೆ.
ಅಸಲಿಗೆ ಒಲಿಂಪಿಕ್ಸ್‌ನ ಜಾವೆಲಿನ್ ಥ್ರೋ ಫೈನಲ್ ವೇಳೆ ನೀರಜ್ ಅವರು ಎಸೆಯಬೇಕಿದ್ದ ಜಾವೆಲಿನ್ ಪಾಕಿಸ್ತಾನದ ಅಥ್ಲೀಟ್ ಆರ್ಶದ್ ನದೀಮ್ ಬಳಿಯಿತ್ತು, ಅದನ್ನು ಕೇಳಿದಾಗ ಅವರು ವಾಪಸ್ ನೀಡಿದ್ದರು ಎಂದು ಖಾಸಗಿ ಮಾಧ್ಯಮದ ಸಂದರ್ಶನವೊಂದರಲ್ಲಿ ಒಲಿಂಪಿಕ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರ ತಿಳಿಸಿದ್ದರು.
ಆದರೆ, ನೀರಜ್ ಚೋಪ್ರಾರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಮಾಧ್ಯಮಗಳಲ್ಲಿ ಸಾಕಷ್ಟು ಸಂಚಲನ ಮೂಡಿಸಿತ್ತು. ಆರ್ಶದ್ ಅವರ ವಿರುದ್ಧ ಹಲವು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ ಹೀಯಾಳಿಸಿದ್ದರು. ಆದರೆ, ಇಂದು ಇದಕ್ಕೆ ಪ್ರತಿಕ್ರಿಯಿಸಿರುವ ನೀರಜ್, "ಕ್ರೀಡೆಯಲ್ಲಿ ಇದೊಂದು ಅತ್ಯಂತ ಸಹಜ ಪ್ರಕ್ರಿಯೆ. ನಾವೆಲ್ಲರೂ ಪ್ರೀತಿಯಿಂದ ಇರುತ್ತೇವೆ. ನಿಮ್ಮ ಕೊಳಕು ಅಜೆಂಡಾಗಳಿಗೆ ನಮ್ಮ ಹೆಸರು ಮತ್ತು ಹೇಳಿಕೆಯನ್ನು ಬಳಸದಿರಿ" ಎಂದು ಖಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ಟ್ವಿಟರ್‌ನಲ್ಲಿ ವಿಡಿಯೋ ಶೇರ್ ಮಾಡಿರುವ ನೀರಜ್ ಚೋಪ್ರಾ ಅವರ ಹೇಳಿಕೆ ಹೀಗಿದೆ.
मेरी आप सभी से विनती है की मेरे comments को अपने गंदे एजेंडा को आगे बढ़ाने का माध्यम न बनाए। Sports हम सबको एकजूट होकर साथ रहना सिखाता हैं और कमेंट करने से पहले खेल के रूल्स जानना जरूरी होता है 🙏🏽 pic.twitter.com/RLv96FZTd2
"ಎಲ್ಲರಿಗೂ ನಮಸ್ಕಾರ ಮೊದಲಿಗೆ ನನ್ನನ್ನು ಬೆಂಬಲಿಸಿದ, ಪ್ರೀತಿ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದಗಳು. ನೀವೆಲ್ಲರೂ ಪ್ರೋತ್ಸಾಹಿಸಿದ ರೀತಿಗೆ ಖುಷಿಯಾಗುತ್ತಿದೆ. ಅದೇ ರೀತಿ ಈಗ ಒಂದು ವಿವಾದ ಅದೇ ರೀತಿ ನಾನು ಟೋಕಿಯೋ ಒಲಿಂಪಿಕ್ಸ್ ಜಾವಲಿನ್ ಥ್ರೋ ಫೈನಲ್‌ನಲ್ಲಿ ಪಾಕಿಸ್ತಾನದ ಆರ್ಶದ್ ನದೀಮ್ ಅವರ ಬಳಿಯಿದ್ದ ಜಾವೆಲಿನ್ ಪಡೆದು ಎಸೆದೆ. ಇದನ್ನು ದೊಡ್ಡ ವಿವಾದ ಮಾಡುತ್ತಿದ್ದಾರೆ. ಇದೊಂದು ಅತ್ಯಂತ ಸರಳ ಹಾಗೂ ಸಹಜ ಪ್ರಕ್ರಿಯೆ. ಜಾವಲಿನ್ ಪಟು ತಮ್ಮದೇ ಆದ ಜಾವಲಿನ್ ಹೊಂದಿರುತ್ತಾರೆ. ಅದನ್ನು ಬೇರೆಯವರು ಸಹ ಬಳಸುತ್ತಾರೆ. ಅದೇ ರೀತಿ ನನ್ನ ಜಾವೆಲಿನ್ ಹಿಡಿದುಕೊಂಡು ಆರ್ಶದ್ ನದೀಂ ಅಭ್ಯಾಸ ನಡೆಸುತ್ತಿದ್ದರು. ಅದರಲ್ಲಿ ಯಾವುದೇ ತಪ್ಪು ಇಲ್ಲ. ಈಗ ನನ್ನ ಸ್ಪರ್ಧೆಯಿದೆ ಎಂದು ಅವರ ಬಳಿಯಿದ್ದ ನನ್ನ ಜಾವೆಲಿನ್ ಪಡೆದುಕೊಂಡು ನನ್ನ ಸ್ಪರ್ಧೆ ಪೂರ್ತಿಗೊಳಿಸಿದೆ. ಇದು ಅಂತಹ ದೊಡ್ಡ ವಿಷಯ ಕೂಡ ಅಲ್ಲ. ನನಗೆ ದುಖಃವಿದೆ. ನನ್ನ ಮನವಿ ಏನೆಂದರೆ, ಈ ರೀತಿ ಮಾಡಬೇಡಿ. ಕ್ರೀಡೆ ಎಲ್ಲರನ್ನೂ ಒಟ್ಟಾಗಿ ಸಾಗುವುದನ್ನು ಕಲಿಸುತ್ತದೆ. ನಾವೆಲ್ಲ ಜಾವೆಲಿನ್ ಥ್ರೋ ಪಟುಗಳು ಪ್ರೀತಿಯಿಂದ ಇರುತ್ತೇವೆ. ನಿಮ್ಮ ಮಾತುಗಳು ನಮಗೆ ಹಿಂಸೆಯಾಗದಿರಲಿ" ಎಂದಿದ್ದಾರೆ.
ಜೊತೆಗೆ ನಿಮ್ಮ ಪ್ರಚಾರಕ್ಕಾಗಿ ನಮ್ಮ ಭಾವನೆಗಳಿಗೆ ಧಕ್ಕೆಯಾಗುವಂತೆ ಈ ವಿಚಾರವನ್ನು ಬಿಂಬಿಸಬೇಡಿ. ನಿಮ್ಮ ಅಜೆಂಡಾಗಳಿಗೆ ನನ್ನ ಹೆಸರು, ಹೇಳಿಕೆಯನ್ನು ಬಳಸದಿರಿ ಎಂದು ನೀರಜ್ ಟ್ವೀಟ್ ಮೂಲಕ ವಿಡಿಯೋ ಸಂದೇಶ ನೀಡಿದ್ದಾರೆ. ಈ ಹಿಂದೆ ನೀರಜ್ ಚೋಪ್ರ ಒಲಿಂಪಿಕ್ನಲ್ಲಿ ಚಿನ್ನದ ಪದಕವನ್ನು ಗೆದ್ದಾಗ ಪಾಕಿಸ್ತಾನದ ಅಥ್ಲೆಟ್ ಅರ್ಶದ್ ನದೀಮ್ ಸಂತಸ ವ್ಯಕ್ತಪಡಿಸಿದ್ದರು. ಅಲ್ಲದೆ, ನೀರಜ್ ಚೋಪ್ರ ಚಿನ್ನದ ಪದಕ ಗೆದ್ದದ್ದು ಇಡೀ ಏಷ್ಯಾಗೆ ಹೆಮ್ಮೆಯ ವಿಚಾರ ಎಂದು ಪ್ರಶಂಶಿಸಿದ್ದರು ಎಂಬುದು ಉಲ್ಲೇಖಾರ್ಹ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್ಡೌನ್ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:MAshok Kumar
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ